ಆಗ್ನೇಯ ಏಷ್ಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿಯನ್ನು ಸರಿಪಡಿಸಿದೆ.
ಚು v2.04 - fix lint error
೩೪ ನೇ ಸಾಲು:
and [[Languages of Asia|many others]]}}
| label9 = Time Zones
| data9 = {{collapsible list|title= {{nobold|UTC+5:30 to UTC+9}} | [[ಯುಟಿಸಿ+5:30|UTC+5:30]]: Andaman and Nicobar Islands<br>[[UTC+6:30]]: Burma, Cocos (Keeling) Islands<br>[[UTC+7|UTC+7:00]]: Cambodia, Christmas Island, Indonesia, Laos, Thailand, Vietnam<br>[[UTC+8|UTC+8:00]]: Brunei, Indonesia, Malaysia, Philippines, Singapore<br>[[UTC+9|UTC+9:00]]: Indonesia}}
| label10 = Capital cities
| data10 = {{Collapsible list |title={{nbsp}} |{{flagicon|Brunei}} [[Bandar Seri Begawan]] |{{flagicon|Thailand}} [[Bangkok]] |{{flagicon|East Timor}} [[Dili]] |{{flagicon|Vietnam}} [[Hanoi]] |{{flagicon|Indonesia}} [[Jakarta]] |{{flagicon|Malaysia}} [[Kuala Lumpur]] |{{flagicon|Philippines}} [[Manila]] |{{flagicon|Myanmar}} [[Nay Pyi Daw]] |{{flagicon|Cambodia}} [[Phnom Penh]] |{{flagicon|Singapore}} [[Singapore]] |{{flagicon|Laos}} [[Vientiane]]}}
೪೬ ನೇ ಸಾಲು:
[[ಭಾರತ|ಭಾರತದ]] ಪೂರ್ವಕ್ಕೆ ಮತ್ತು [[ಚೀನಾ|ಚೀನಾದ]] ದಕ್ಷಿಣಕ್ಕೆ [[ಏಷ್ಯಾ]] [[ಖಂಡ|ಖಂಡದ]] [[ದಿಕ್ಕುಗಳು|ಆಗ್ನೇಯ]] ಭಾಗದಲ್ಲಿರುವ ದೇಶಗಳು '''ಆಗ್ನೇಯ ಏಷ್ಯಾ'''ದಲ್ಲಿ ಒಳಗೊಳ್ಳುತ್ತವೆ.
==ರಾಜಕೀಯ ವಿಭಾಗಗಳು==
ಆಗ್ನೇಯ ಏಷ್ಯ ಈಸ್ಟ್ ಇಂಡಿಯ ದ್ವೀಪಗಳು, ಏಷ್ಯ ಖಂಡದಲ್ಲಿನ ಇಂಡೋಚೀನ ಪರ್ಯಾಯದ್ವೀಪ-ಇವುಗಳನ್ನೊಳಗೊಂಡ ಭೂಪ್ರದೇಶ.[[ಇಂಡೋನೇಶ್ಯಾ| ಇಂಡೋನೇಷಿಯ]],[[ಫಿಲಿಪ್ಪೀನ್ಸ್| ಫಿಲಿಪ್ಪೈನ ದ್ವೀಪಗಳು]], ಬೋರ್ನಿಯೋದ ಬ್ರಿಟಿಷ್ ಭಾಗಗಳು ಮತ್ತು ಪೋರ್ಚುಗೀಸರ ಟಿಮೋರ್-ಇವು ಮೊದಲ ಭಾಗದ ರಾಜಕೀಯ ವಿಭಾಗಗಳು.[[ಮ್ಯಾನ್ಮಾರ್ಮಯನ್ಮಾರ್| ಬರ್ಮ]],[[ಥೈಲ್ಯಾಂಡ್| ಥಾಯ್‍ಲ್ಯಾಂಡ್]],[[ಕಾಂಬೋಡಿಯ| ಕಾಂಬೋಡಿಯ]],[[ಲಾವೋಸ್|ಲಾವೋಸ್]], [[ವಿಯೆಟ್ನಾಮ್| ವಿಯಟ್ನಾಂ (ಪೂರ್ತ್)]],[[ ಮಲೇಶಿಯ|ಮಲೇಶಿಯಾ]],[[ಸಿಂಗಾಪುರ|ಸಿಂಗಪುರ]],[[ಬ್ರುನೈ]],[[ಪೂರ್ವ ಟೀಮೊರ್]]-ಇವು ಎರಡನೆಯ ಭಾಗದ ರಾಜಕೀಯ ವಿಭಾಗಗಳು.
===ಸ್ವತಂತ್ರ ದೇಶಗಳು===
ಆಗ್ನೇಯ ಏಷ್ಯದ ಸ್ವತಂತ್ರ ದೇಶಗಳು ಮತ್ತು ಅವುಗಳ ವಿವರಗಳು.
೧೧೨ ನೇ ಸಾಲು:
| $13,123<ref>http://www.imf.org/external/pubs/ft/weo/2014/02/weodata/weorept.aspx?sy=2012&ey=2019&scsm=1&ssd=1&sort=country&ds=.&br=1&pr1.x=15&pr1.y=5&c=548&s=NGDPD%2CNGDPDPC%2CPPPGDP%2CPPPPC&grp=0&a=</ref>
| 0.773
| style="text-align:left;" | [[ಕೌಲಾಲಂಪುರ್]]<cite id=Kuala_Lumpur />[[#ಪುತ್ರಜಯ|*]]
|-
! scope="row" style="text-align:left;" | [[ಮಯನ್ಮಾರ್]]
೧೯೭ ನೇ ಸಾಲು:
! scope="col" | ರಾಜಧಾನಿ
|-
! scope="row" style="text-align:left;" | {{flagicon|India}} [[ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು|ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು]]
| 8,250
| 379,944<ref>Population data as per the Indian Census.</ref>
೨೧೨ ನೇ ಸಾಲು:
ಭೌಗೋಳಿಕ ದೃಷ್ಟಿಯಿಂದ ಆಗ್ನೇಯ ಏಷ್ಯ ಅನೇಕ ಸಣ್ಣಸಣ್ಣ ರಾಜ್ಯಗಳನ್ನೂ ದ್ವೀಪಗಳನ್ನೂ ಒಳಗೊಂಡಿದ್ದರೂ ಪ್ರಾಚೀನ ಸಂಸ್ಕ್ರತಿಯ ದೃಷ್ಟಿಯಿಂದ ಒಂದು ದೇಶವೆಂದು ಪರಿಗಣಿಸಬಹುದು. ಇದರಲ್ಲಿ ಮುಖ್ಯವಾಗಿ ಇಂಡೋನೇಷ್ಯ ಮತ್ತು ಇಂಡೋಚೀನ ಎಂಬ ಎರಡು ಭಾಗಗಳಿವೆ. ಇವುಗಳಲ್ಲಿ ಈಗಿನ ಕಾಂಬೋಡಿಯ, ವಿಯಟ್‍ನಾಮ್, ಥಾಯ್‍ಲ್ಯಾಂಡ್, ಲಾವೋಸ್, ಬರ್ಮ, ಜಾವ ಮತ್ತು ಬಾಲಿ ದೇಶಗಳಿವೆ (ನೋಡಿ- ಇಂಡೋನೇಷ್ಯ) ಬಹು ಪ್ರಾಚೀನಕಾಲದಿಂದಲೂ ಆಗ್ನೇಯ ಏಷ್ಯದ ರಾಜ್ಯಗಳು ಭಾರತೀಯ ಸಂಸ್ಕೃತಿಯ ಪ್ರಭಾವಕ್ಕೊಳಗಾದವು. ಇದರಿಂದ ಅಲ್ಲಿ ಬಹುಕಾಲ ಈ ಸಂಸ್ಕೃತಿ ನೆಲೆಸಿ ಭಾರತ ಮತ್ತು ಆಗ್ನೇಯ ಏಷ್ಯಗಳ ಸಾಮೀಪ್ಯವನ್ನು ಹೆಚ್ಚಿಸಿದೆ. ಫ್ರೆಂಚ್ ಮತ್ತು ಡಚ್ ವಿದ್ವಾಂಸರು ಈ ಸಂಸ್ಕೃತಿಯ ಅಧ್ಯಯನಕ್ಕೆ ತಳಹದಿಯನ್ನು ಹಾಕಿದ್ದಾರೆ. ಅದರಲ್ಲೂ ಸೀಡಸ್, ಕ್ರೋಮ್ ಸ್ಟುಟರ್‍ಹೀಮ್, ವಿನ್ಸ್‍ಡೆಟ್. ಪೆಲಿಯಟ್, ಜಿಲುಸ್ಕಿ, ಹಾರ್ವೆ ಮುಂತಾದ ವಿದ್ವಾಂಸರುಗಳ ಕೊಡುಗೆ ಗಮನಾರ್ಹ. ಭಾರತೀಯ ಸಂಸ್ಕೃತಿ ಆಗ್ನೇಯ ಏಷ್ಯದಲ್ಲಿ ಯಾವ ರೀತಿ ಹರಡಿತು ಎಂದು ಹೇಳುವುದು ಕಷ್ಟ. ವಿನ್ಸ್‍ಡೆಟ್ ಹೇಳಿರುವಂತೆ ಹಿಂದೂಗಳು ಆಗ್ನೇಯ ಏಷ್ಯಕ್ಕೆ ಹಠಾತ್ತನೆ ಪ್ರಯಾಣ ಮಾಡಲಿಲ್ಲ; ಅವರ ಪ್ರಯಾಣ ಹಿಂಸಾತ್ಮಕಕೃತ್ಯಗಳಿಂದಲೂ ಕೂಡಿರಲಿಲ್ಲ; ಅದು ಶಾಂತಿಯುತವಾಗಿದ್ದುದಲ್ಲದೆ ಕ್ರಮಬದ್ಧವಾಗಿತ್ತು. ಸಂಬಾರ ಪದಾರ್ಥಗಳನ್ನು ಹೊತ್ತು ತಂದ ಹಡಗೊಂದು ಆಗ್ನೇಯ ಏಷ್ಯದ ರೇವುಪಟ್ಟಣದಲ್ಲಿ ಬೀಡು ಬಿಟ್ಟಿತು. ಈ ಹಡಗಿನಲ್ಲಿದ್ದ ವಸ್ತುಗಳು ಮಾರಾಟವಾಗುವವರೆಗೆ ಭಾರತೀಯ ನಾವಿಕರು ಸ್ಥಳೀಯ ಜನಗಳೊಡನೆ ಬೆರೆತರು. [[ಸಂಸ್ಕೃತ]] ಭಾಷೆಯನ್ನು ಬಲ್ಲ ಭಾರತೀಯರು ಅಲ್ಲಿಯ ಜನಗಳ ಪ್ರೀತಿ ಮತ್ತು ವಿಶ್ವಾಸಗಳನ್ನು ಗಳಿಸಿಕೊಂಡರು; ಮತ್ತೆ ಕೆಲವರು ಆ ದೇಶದ ಸುಂದರ ಯುವತಿಯರನ್ನು ಮದುವೆಯಾದರು; ಮತ್ತೆ ಕೆಲವರು [[ರಾಮಾಯಣ]] ಮತ್ತು [[ಮಹಾಭಾರತ]]ದ ಕಥೆಗಳನ್ನು ಜನಗಳಿಗೆ ಹೇಳಿದರು. ಅಷ್ಟರಲ್ಲಿಯೇ ಮತ್ತೊಂದು ಹಡಗು ಭಾರತದಿಂದ ಬಂದಿತು. ಈ ರೀತಿ ಆಗ್ನೇಯ ಏಷ್ಯ ಭಾರತೀಯ ಸಂಸ್ಕೃತಿಯ ಪ್ರಭಾವಕ್ಕೊಳಗಾಗಿರಬೇಕು. [[ಕೌಂಡಿನ್ಯ]], [[ಅಗಸ್ತ್ಯ]] ಮುಂತಾದ ಋಷಿಗಳೇ ಆಗ್ನೇಯ ಏಷ್ಯದಲ್ಲಿ ಭಾರತೀಯ ಸಂಸ್ಕೃತಿ ಹರಡಲು ಕಾರಣರಾದರೆಂದು [[ಶಾಸನ]]ಗಳಿಂದ ತಿಳಿಯುತ್ತದೆ. ಭಾರತೀಯ ಧಾರ್ಮಿಕ ಗ್ರಂಥಗಳ ಪ್ರಕಾರ ಸಮುದ್ರಯಾನ ನಿಷಿದ್ಧಕಾರ್ಯ. ಹಾಗಾದರೂ ಭಾರತೀಯರು ಆಗ್ನೇಯ ಏಷ್ಯಕ್ಕೆ ಹೋಗಲು ಕಾರಣಗಳೇನು ಎಂದು ನೋಡುವುದು ಆವಶ್ಯಕ. ವ್ಯಾಪಾರವೇ ಅತ್ಯಂತ ಪ್ರಮುಖವಾದ ಮತ್ತು ಪ್ರಬಲವಾದ ಕಾರಣವೆಂದು ತೋರುತ್ತದೆ.[[ಅಲೆಕ್ಸಾಂಡರ್| ಅಲೆಕ್ಸಾಂಡರನ]] ದಂಡೆಯಾತ್ರೆಯಿಂದಲೂ ಪರ್ಷಿಯನ್ನರ ದಾಳಿಗಳಿಂದಲೂ ಭಾರತೀಯರಿಗೆ ಹೊರದೇಶಗಳಲ್ಲಿ ವ್ಯಾಪಾರ ಮಾಡುವ ಕುತೂಹಲ ಹೆಚ್ಚಾಯಿತು. ಪ್ರಾಚೀನ ಭಾರತೀಯರು ರೋಂ ದೇಶದೊಡನೆ ವ್ಯಾಪಾರ ಸಂಪರ್ಕಗಳನ್ನು ಹೊಂದಿದ್ದರು. ಆದರೆ ವೆಸ್‍ಪೆಲಿಸಿಯನ್ ಎಂಬ ಸಾಮ್ರಾಟ ರೋಂ ದೇಶಕ್ಕೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಲು [[ಚಿನ್ನ]]ದ ನಾಣ್ಯಗಳು ಹೊರಕ್ಕೆ ಹೋಗದಂತೆ ತಡೆ ಹಾಕಿದ. ಇದರಿಂದ ಪ್ರಾಚೀನ ಭಾರತೀಯರು, ಚಿನ್ನಕ್ಕೋಸ್ಕರ ಬೇರೆ ದೇಶಗಳೊಡನೆ ಸಂಪರ್ಕ ಬೆಳೆಸಬೇಕಾಯಿತು. ಆಗ್ನೇಯ ಏಷ್ಯದ ಕೆಲವು ಭಾಗಗಳು ಸುವರ್ಣಭೂಮಿಯೆಂದು ಖ್ಯಾತಿ ಪಡೆದಿದ್ದುವು. ಆದ್ದರಿಂದ ಭಾರತೀಯರು ಈ ದೇಶಗಳ ಕಡೆಗೆ ತಮ್ಮ ಗಮನ ಹರಿಸಿದರು.
ಆಗ್ನೇಯ ಏಷ್ಯಕ್ಕೆ ಹೋದ ಭಾರತೀಯರು ಭಾರತದ ಯಾವ ಪ್ರಾಂತ್ಯದವರು ಎನ್ನುವ ವಿಚಾರದಲ್ಲಿ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಇವರು ವಂಗದೇಶದವರೆಂದು ಕೆಲವರು ವಾದಿಸುತ್ತಾರೆ. ಆಗ್ನೇಯ ಏಷ್ಯದ ಶಿಲ್ಪಸಂಪತ್ತನ್ನು ಗಮನಿಸಿದರೆ ಗುಪ್ತರ ಕಾಲದ ಲಕ್ಷಣಗಳು ಅಲ್ಲಿ ವಿಶೇಷವಾಗಿರುವುದು ನಮ್ಮ ಗಮನಕ್ಕೆ ಬರುತ್ತವೆ. ಜಾವ ದ್ವೀಪದ ಶಿಲ್ಪಗಳಲ್ಲಿ ಪಾಲ ಮತ್ತು ಸೇನರ ಕಾಲದ ಶಿಲ್ಪಲಕ್ಷಣಗಳು ವಿಶೇಷವಾಗಿವೆ. ಜಾವದ ಶೈಲೇಂದ್ರರು ಒರಿಸ್ಸದ ಶೈಲೋದ್ಭವರೆಂದೂ ಅವರ ಶಾಸನಗಳ ಲಿಪಿ ನಾಗರೀ ಲಿಪಿಗೆ ಸಮೀಪವಾಗಿರುವುದೆಂದೂ ಅಷ್ಟೇ ಅಲ್ಲದೆ ಬಂಗಾಳ ಆಗ್ನೇಯ ಏಷ್ಯಕ್ಕೆ ಜಲ ಮತ್ತು ಭೂಮಾರ್ಗದಿಂದ ಬಹು ಹತ್ತಿರವಾಗಿರುವುದರಿಂದ ಬಂಗಾಳದವರೇ ಮೊಟ್ಟಮೊದಲು ಆಗ್ನೇಯ ಏಷ್ಯಕ್ಕೆ ಹೋದರೆಂದೂ ಕೆಲವರ ವಾದ. ಜಾವದ ಹೋಲಿಂಗ್ ಎಂಬುದು ಕಳಿಂಗ ಎಂಬುದರ ರೂಪಾಂತರವೆಂದೂ ತಲೈಂಗ್ ಎಂಬುದು ತೆಲುಂಗ ಎಂಬುದರ ರೂಪಾಂತರವೆಂದೂ ವಿಯಟ್‍ನಾಮಿನ ಡಾಂಗ್‍ಡುವಾಂಗ್‍ನಲ್ಲಿ, ಜಾವದ ಜೆಂಬರ್ ಮತ್ತು ಸೆಲಿಬಿಸ್ ದ್ವೀಪದ ಸೆಂಪಗ ಮುಂತಾದ ಕಡೆಗಳಲ್ಲಿ ದೊರಕಿರುವ ಬುದ್ಧನ ವಿಗ್ರಹಗಳು ಅಮರಾವತಿ ಶಿಲ್ಪಶೈಲಿಗೆ ಸೇರಿರುವುದರಿಂದ, [[ಆಂಧ್ರ ಪ್ರದೇಶ]]ದಿಂದ ಭಾರತೀಯರು ಆಗ್ನೇಯ ಏಷ್ಯಕ್ಕೆ ಪ್ರಥಮವಾಗಿ ಹೋದರೆಂದೂ ಕೆಲವರು ವಾದಿಸುತ್ತಾರೆ. ಜಾವ ದ್ವೀಪದ ಕೆಲವು ದೇವಾಲಯಗಳು [[ಚಾಲುಕ್ಯ]] ವಾಸ್ತುಶೈಲಿಯಲ್ಲಿರುವುದರಿಂದ [[ಕರ್ನಾಟಕ]]ದವರೇ ಪ್ರಥಮವಾಗಿ ಆಗ್ನೇಯ ಏಷ್ಯಕ್ಕೆ ಹೋದರೆಂದು ಕೆಲವರ ಅಭಿಪ್ರಾಯ. ಆಗ್ನೇಯ ಏಷ್ಯದ ಅನಾಗರಿಕ ಬುಡಕಟ್ಟಿಗೆ ಸೇರಿದ ಕೆಲವು ಜನಾಂಗಗಳ ಹೆಸರು [[ಚೋಳ ವಂಶ|ಚೋಳ]], ಮಲಯಾಳಿ, [[ಪಾಂಡ್ಯ ರಾಜವಂಶ|ಪಾಂಡ್ಯ]] ಎಂದಿರುವುದರಿಂದಲೂ ಜಾವದ ಶೈಲೇಂದ್ರರು ಮತ್ತು ಪಾಂಡ್ಯರು ಮೀನಲಾಂಛನವನ್ನು ಹೊಂದಿರುವುದರಿಂದಲೂ ಆಗ್ನೇಯ ಏಷ್ಯದ ಪ್ರಾಚೀನ ಶಾಸನಗಳ ಲಿಪಿಗೂ [[ಪಲ್ಲವರು|ಪಲ್ಲವ]] ಲಿಪಿಗೂ ಬಹಳ ಹೋಲಿಕೆಗಳಿರುವುದರಿಂದಲೂ ಜಾವದ ಚಂಡಿಕಲಶನ್ ಚಂದಿಗೋ ಮುಂತಾದ ದೇವಾಲಯಗಳು ಮಹಾಬಲಿಪುರದ ರಥಗಳನ್ನು ಬಹುವಾಗಿ ಹೋಲುವುದರಿಂದಲೂ ತಮಿಳು ದೇಶವೇ ಆಗ್ನೇಯ ಏಷ್ಯಕ್ಕೆ ಹೋದ ವಲಸೆಗಾರರ ಮೂಲನಿವಾಸಸ್ಥಾನವೆಂದೂ ಅನೇಕರು ವಾದಿಸುತ್ತಾರೆ. ಒಟ್ಟಿನಲ್ಲಿ ಬಂಗಾಳದ, ಆಂಧ್ರದ, ಕರ್ನಾಟಕದ ಮತ್ತು ತಮಿಳುನಾಡಿನ ಪ್ರಭಾವಗಳು ಆಗ್ನೇಯ ಏಷ್ಯದ ಪ್ರಾಚೀನ ಸಂಸ್ಕೃತಿಯಲ್ಲಿ ವಿಶೇಷವಾಗಿ ಕಾಣುವುದರಿಂದ, ಭಾರತದ ಎಲ್ಲ ಭಾಗಗಳಿಂದಲೂ ಆಗ್ನೇಯ ಏಷ್ಯಕ್ಕೆ ಜನಗಳು ಹೋಗುತ್ತಿದ್ದರು ಎಂದು ಹೇಳಬಹುದು.
ಆಗ್ನೇಯ ಏಷ್ಯಕ್ಕೂ ಭಾರತಕ್ಕೂ ಸಂಪರ್ಕ ಯಾವಾಗ ಪ್ರಾರಂಭವಾಯಿತು ಎಂದು ನಿರ್ಧರಿಸಲು ಸಾಕಷ್ಟು ಮಾಹಿತಿಗಳು ದೊರಕಿಲ್ಲ. ಅತ್ಯಂತ ಪ್ರಾಚೀನವಾದ ಮಾಹಿತಿ ರಾಮಾಯಣ ಮಹಾಕಾವ್ಯದಲ್ಲಿ ದೊರಕುತ್ತದೆ. ಸೀತೆಯನ್ನು ಹುಡುಕಲು ವಾನರರು ಜಾವ ದ್ವೀಪಕ್ಕೆ, ಸುವರ್ಣ ದ್ವೀಪಗಳಿಗೆ ಹೋಗಬೇಕೆಂದು [[ಸುಗ್ರೀವ]] ಆಜ್ಞೆ ಮಾಡಿದ ಉಲ್ಲೇಖದಿಂದ, ರಾಮಾಯಣ ಕಾಲದಲ್ಲಿಯೇ ಭಾರತೀಯರಿಗೆ ಆಗ್ನೇಯ ಏಷ್ಯದ ಪರಿಚಯವಿತ್ತೆಂದು ಗೊತ್ತಾಗುತ್ತದೆ. ಬೌದ್ಧ ಗ್ರಂಥವಾದ ನಿದ್ದೇಸದಲ್ಲಿಯೂ ಜಾತಕ ಕಥೆಗಳಲ್ಲಿಯೂ ಆಗ್ನೇಯ ಏಷ್ಯ ದ್ವೀಪಗಳ ಉಲ್ಲೇಖ ಬರುತ್ತದೆ. ಟಾಲಮಿಯ [[ಭೂಗೋಳ ಶಾಸ್ತ್ರ|ಭೂಗೋಳ]] ಗ್ರಂಥದಲ್ಲಿ ಜಾವ ದ್ವೀಪವನ್ನೂ ಸುವರ್ಣ ದ್ವೀಪವೆಂದು ವರ್ಣಿಸಿರುವುದು ಗಮನಾರ್ಹ. ಕ್ರಿ.ಶ. 132ರಲ್ಲಿ ಜಾವ ದ್ವೀಪದಲ್ಲಿ ದೇವವರ್ಮನೆಂಬ ರಾಜನಿದ್ದನೆಂದು ತಿಳಿದುಬರುತ್ತದೆ. ಇವುಗಳಿಂದ ಕ್ರಿಸ್ತನ ಕಾಲಕ್ಕಿಂತ ಮುಂಚೆಯೇ ಆಗ್ನೇಯ ಏಷ್ಯಕ್ಕೂ ಭಾರತಕ್ಕೂ ಸಾಂಸ್ಕೃತಿಕ ಸಂಪರ್ಕವಿತ್ತೆಂದು ಗೊತ್ತಾಗುತ್ತದೆ.
ಅಭಿರಾಜ ಎಂಬ ಕಪಿಲವಸ್ತುವಿನ ರಾಜ ಬರ್ಮದೇಶಕ್ಕೆ ಬಂದು ಆಳಲು ಪ್ರಾರಂಭಿಸಿದನೆಂದು [[ಪಾಟಲೀಪುತ್ರ]]ದಲ್ಲಿ ಕ್ರಿ.ಪೂ. 241ರಲ್ಲಿ ನಡೆದ ಮೂರನೆಯ ಬೌದ್ಧ ಸಮ್ಮೇಳನ ಸೋನ ಮತ್ತು ಉತ್ತರ ಎಂಬುವವರನ್ನು ಬರ್ಮಕ್ಕೆ ಕಳುಹಿಸಿದ್ದಿತೆಂದೂ ತಿಳಿಯುತ್ತದೆ. [[ಹುಯೆನ್‍ತ್ಸಾಂಗ್]] ಬರ್ಮದಲ್ಲಿ ದ್ವಾರವತೀ ಎಂಬ ರಾಜ್ಯವನ್ನು ಗುರುತಿಸಿದ್ದಾನೆ. ಇದರ ಪಶ್ಚಿಮಕ್ಕೆ ಶ್ರೀಕ್ಷೇತ್ರ ರಾಜ್ಯವಿತ್ತು. ಇಲ್ಲಿ ಬೌದ್ಧ [[ಸ್ತೂಪ]]ಗಳ ಅವಶೇಷಗಳು ದೊರಕಿವೆ. ಅನಂತರ ಪ್ಯು ರಾಜ್ಯ ಬೆಳೆದು, ಅದರ ನಾಶವಾದ ಅನಂತರ ಅರಿಮರ್ದನಪುರ ಸಾಮ್ರಾಜ್ಯ (ನೋಡಿ- ಅರಿಮರ್ದನಪುರ-ಸಾಮ್ರಾಜ್ಯ) ಸ್ಥಾಪನೆಯಾಯಿತು. ಈ ದೊರೆಗಳಲ್ಲಿ [[ಅನೋರಥ]] (1044-72) ಮತ್ತು ಕ್ಯಾನ್ಜಿತ್ಥ (1086-1112) ಮುಖ್ಯರು. ಇವರ ಕಾಲದಲ್ಲಿ ಬೌದ್ಧಧರ್ಮ ಬರ್ಮದಲ್ಲಿ ಚೆನ್ನಾಗಿ ಬೇರೂರಿತು. ಇವರ ಅನಂತರ ನರಥು, ನರಪೈಸಿಥು, ಜಯಥೇಂದ ಮುಂತಾದವರು ಆಳಿದರು. 1287ರಲ್ಲಿ ಕುಬ್ಲೆಖಾನನ ಮೊಮ್ಮಗನ ನೇತೃತ್ವದಲ್ಲಿ ಮಂಗೋಲ್ ಸೈನ್ಯ ಪಗನ್ ರಾಜ್ಯಕ್ಕೆ ಮುತ್ತಿಗೆ ಹಾಕಿ ಅದನ್ನು ಲೂಟಿಮಾಡಿತು.
ಸಯಾಂ ಅಥವಾ ಥಾಯ್‍ಲ್ಯಾಂಡ್‍ನಲ್ಲಿ 2 ನೆಯ ಶತಮಾನಕ್ಕೆ ಸೇರಿದ ಭಾರತೀಯ ಅವಶೇಷಗಳು ದೊರಕ್ಕಿದ್ದರೂ ಬಲವತ್ತರವಾದ ರಾಜ್ಯ ಸ್ಥಾಪನೆಯಾದುದು 13ನೆಯ ಶತಮಾನದಲ್ಲಿ. ಅದಕ್ಕೆ ಮುಂಚೆ ಇದು ಕಂಬುಜ ಮತ್ತು ಬರ್ಮ ದೇಶಗಳ ಆಳ್ವಿಕೆಗೆ ಒಳಪಟ್ಟಿತ್ತು. ಕಂಬುಜದ ಏಳನೆಯ ಜಯವರ್ಮನ ಮರಣಾನಂತರ ಇಂದ್ರಾದಿತ್ಯ ಸುಖೋಥೈ ಎಂಬ ರಾಜ್ಯಸ್ಥಾಪನೆ ಮಾಡಿದ. ಇದರಲ್ಲಿ ರಾಮಕಮ್ ಹೆಂಗ್ (1280-1318) ಅತ್ಯಂತ ಮುಖ್ಯನಾದವ. ಈತ ಸುಖೋಥಯದ ಜೊತೆಗೆ ಸಜ್ಜನಾಲಯ ಎಂಬ ಇನ್ನೊಂದು ರಾಜಧಾನಿಯನ್ನು ಸ್ಥಾಪಿಸಿದ. ಈ ರಾಜ್ಯದ ಪತನವಾದ ಅನಂತರ ಅಯುಥಿಯ (ಅಯೋಧ್ಯಾ) ಎಂಬ ಇನ್ನೊಂದು ರಾಜ್ಯ ಸ್ಥಾಪನೆಯಾಯಿತು. ಭಾರತೀಯ ಸಂಸ್ಕೃತಿಯ ದೃಷ್ಟಿಯಿಂದ ಇದು ಅಂಥ ಮಹತ್ತರವಾದ ಪಾತ್ರವನ್ನೇನೂ ವಹಿಸಲಿಲ್ಲ.
೨೨೩ ನೇ ಸಾಲು:
==ಇತರ ಸಂಸ್ಕೃತಿಗಳು==
[[File:Around-Kota-Bharu-(19).jpg|thumb|left|[[Kampung Laut Mosque]] in [[Tumpat District|Tumpat]] is one of the oldest mosques in Malaysia, dating to the early 18th century.]]
ಭಾರತೀಯ ಸಂಸ್ಕೃತಿಯ ಪ್ರಭಾವ ಆಗ್ನೇಯ ಏಷ್ಯದಲ್ಲಿ ಕ್ಷೀಣವಾಗುತ್ತಿದ್ದಂತೆಯೇ ಅದರ ಸ್ಥಾನವನ್ನು ಪ್ರಪಂಚದ ಎರಡು ಮುಖ್ಯ ಮತಗಳೆನಿಸಿದ, [[ಇಸ್ಲಾಂ ಧರ್ಮ|ಇಸ್ಲಾಂ]] ಮತ್ತು [[ಕ್ರೈಸ್ತ]] ಮತಗಳು ಆಕ್ರಮಿಸಿದುವು. ಆದರೂ ಭಾರತೀಯ ಸಂಸ್ಕೃತಿಯ ಪ್ರಭಾವದಿಂದ ಉಂಟಾದ ಪರಿಣಾಮಗಳು ಪೂರ್ಣವಾಗಿ ಅಳಿಸಿಹೋಗಲು ಸಾಧ್ಯವಾಗಲಿಲ್ಲ. ಜೊತೆಗೆ [[ಬೌದ್ಧ]]ಮತದ ಪ್ರಾಬಲ್ಯವೂ ಹೆಚ್ಚಾಯಿತು. ಸಾಮಾನ್ಯವಾಗಿ, ಬರ್ಮ, ಥಾಯ್‍ಲ್ಯಾಂಡ್, ಕಾಂಬೋಡಿಯ ಮತ್ತು ವಿಯಟ್ನಾಂಗಳು ಬೌದ್ಧಮತವನ್ನು ಅವಲಂಬಿಸಿದುವು. ಬರ್ಮ ಥಾಯ್‍ಲ್ಯಾಂಡ್‍ಗಳಲ್ಲಿ ಹೀನಯಾನ ಅಥವಾ ಥೇರವಾದ ಪಂಗಡವೂ ಕಾಂಬೋಡಿಯ ಮತ್ತು ವಿಯಟ್ನಾಂಗಳಲ್ಲಿ ಮಹಾಯಾನ ಪಂಗಡವೂ ಪ್ರಮುಖವಾದುವು. ಸುಮಾರು 1400ರಲ್ಲಿ ಮಲಯದೇಶದ ಪಶ್ಚಿಮತೀರದಲ್ಲಿ ಸ್ಥಾಪಿತವಾದ ಮಲಕ್ಕಾ ಎಂಬ ವ್ಯಾಪಾರಕೇಂದ್ರ ಆಗ್ನೇಯ ಏಷ್ಯದಲ್ಲಿ ಯೂರೋಪಿಯನ್ನರು ಬರುವತನಕ ವ್ಯಾಪಾರಕ್ಕಲ್ಲದೆ, ಇಸ್ಲಾಂ ಮತದ ಪ್ರಸಾರಕ್ಕೂ ಕೇಂದ್ರವಾಗಿತ್ತು. ಮಲಕ್ಕಾದಿಂದಲೇ ಇಸ್ಲಾಂ ಧರ್ಮ ಮಲೇಷಿಯ, ಇಂಡೋನೇಷಿಯ ಮತ್ತು ಫಿಲಿಪೈನ್ಸ್‍ನ ದಕ್ಷಿಣದ ಕೆಲವು ದ್ವೀಪಗಳಿಗೆ ಹಬ್ಬಿತು. ಆದರೆ ಕ್ರೈಸ್ತಮತವೇ ಫಿಲಿಪೈನ್ಸ್ ದ್ವೀಪಗಳಲ್ಲಿ ಪ್ರಾಮುಖ್ಯವಾಯಿತು.
==ಇತಿಹಾಸ==
ಯೂರೋಪಿಯನ್ನರು ಆಗ್ನೇಯ ಏಷ್ಯದ ರಾಷ್ಟ್ರಗಳನ್ನು ತಮ್ಮ ವಸಾಹತುಗಳನ್ನಾಗಿ ಮಾಡಿಕೊಳ್ಳುವ ಮುನ್ನ, ಈ ಭಾಗದ ರಾಜಕೀಯ ಇತಿಹಾಸ ಪರಸ್ಪರ ಕದನಗಳಿಂದಲೂ ಆಂತರಿಕ ಒಡಕುಗಳಿಂದಲೂ ತುಂಬಿತ್ತು. ಬರ್ಮೀಯರು, ಬರ್ಮಿಯರಲ್ಲದ ಇತರ ಜನಾಂಗಗಳಾದ ಶಾನ್‍ಕಾಚಿನ್ ಮತ್ತು ಮಾನ್‍ರನ್ನು ಗೆದ್ದು 11 ನೆಯ ಶತಮಾನದ ಹೊತ್ತಿಗೆ ಪ್ಯಾಗನ್ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಆ ಸಾಮ್ರಾಜ್ಯದ ರಾಜಧಾನಿ ಪ್ಯಾಗನ್ ಪಟ್ಟಣವೇ ಆಗಿತ್ತು. ಆ ಸಾಮ್ರಾಜ್ಯದ ಅವಶೇಷಗಳನ್ನು ಇಂದಿಗೂ ಆ ನಗರದಲ್ಲಿ ನೋಡಬಹುದು. 13 ನೆಯ ಶತಮಾನದ ಅನಂತರ ಈ ಸಾಮ್ರಾಜ್ಯ ಅವನತಿಗೊಂಡು, ಮತ್ತೆ 16 ನೆಯ ಶತಮಾನದವರೆಗೂ ಬರ್ಮದೇಶ ಮತ್ತೆ ಒಂದಾಗಲಿಲ್ಲ. 16 ನೆಯ ಶತಮಾನದಲ್ಲಿ ತೂಂಗೂ ರಾಜಮನೆತನದ ನೇತೃತ್ವದಲ್ಲೂ 18 ನೆಯ ಶತಮಾನದಲ್ಲಿ ಅಲಂಗಪಾಂಗು ರಾಜಮನೆತನದ ನೇತೃತ್ವದಲ್ಲೂ ಬರ್ಮ ಸ್ವಲ್ಪಕಾಲ ಉನ್ನತ ಸ್ಥಿತಿಗೆ ಬಂತು. ಈ ಮನೆತನದ ರಾಜರು ಕೊನೆಕೊನೆಗೆ ಅಶಕ್ತರಾಗಿ ಸುಖಲೋಲುಪರಾಗಿ ಮೂರು ಬರ್ಮ ಯುದ್ಧಗಳ ಅನಂತರ (1826,1856,1885), ಬ್ರಿಟಿಷರ ವಸಾಹತು ನೀತಿಗೆ 19 ನೆಯ ಶತಮಾನದ ಆದಿಯಲ್ಲಿ ಒಳಗಾಗಬೇಕಾಯಿತು. ಕೊನೆಗೆ ಬರ್ಮ ಸಂಪೂರ್ಣವಾಗಿ ಬ್ರಿಟಿಷರ ವಶವಾಯಿತು.
೨೩೬ ನೇ ಸಾಲು:
ಆಗ್ನೇಯ ಏಷ್ಯದಲ್ಲಿ ಈ ರೀತಿ ಆರಂಭವಾದ ವಸಾಹತುಗಳಿಂದ ಯೂರೋಪಿಯನ್ನರಿಗೆ ಮತ್ತು ಅಮೆರಿಕನ್ನರಿಗೆ ಎರಡು ರೀತಿಯ ಉಪಯೋಗವಿತ್ತು. ಒಂದು, ಇವು ಯೂರೋಪಿನ ಕೈಗಾರಿಕೆಗಳಿಗೆ, ಕಚ್ಚಾಪದಾರ್ಥಗಳನ್ನು ಒದಗಿಸಿಕೊಡುತ್ತಿದ್ದುವು. ಎರಡು, ಯೂರೋಪಿನಲ್ಲಿ ತಯಾರಾದ ಸಿದ್ಧವಸ್ತುಗಳಿಗೆ ಇವು ಮಾರುಕಟ್ಟೆಯಾಗಿದ್ದವು. ಟಿನ್, ರಬ್ಬರ, ಅಕ್ಕಿ, [[ಪೆಟ್ರೋಲಿಯಂ]]ಗಳಿಗೆ ಆಗ್ನೇಯ ಏಷ್ಯ ಬಹಳ ಪ್ರಾಮುಖ್ಯವಾಗಿತ್ತೆಂಬ ಅಂಶವನ್ನು ಇಲ್ಲಿ ಸ್ಮರಿಸಬಹುದು.
ವಿವಿಧ ಯೂರೋಪಿಯನ್ ರಾಷ್ಟ್ರಗಳು ಅನೇಕ ರೀತಿಯ ರಾಜ್ಯಾಡಳಿತ ಕ್ರಮಗಳನ್ನು, ನೀತಿಗಳನ್ನು ತಮ್ಮ ವಸಾಹತುಗಳಲ್ಲಿ ಅನುಸರಿಸಿದರು. ಅವುಗಳ ಪರಿಣಾಮಗಳಲ್ಲಿ ವ್ಯತ್ಯಾಸಗಳಿದ್ದರೂ ಅವರ ವಸಾಹತು ನೀತಿ ದೇಶೀಯ ಜನರಿಗೆ ಅಷ್ಟಾಗಿ ಉಪಯೋಗವಾಗಲಿಲ್ಲ. ಅವರಿಂದ ದೇಶೀಯರಿಗೆ ತೊಂದರೆಯೇ ಹೆಚ್ಚಾಯಿತು. ಯೂರೋಪಿಯನ್ನರು ಸ್ಥಾಪಿಸಿದ ಗಣಿಗಳಲ್ಲಿ ರಬ್ಬರ್ ಮತ್ತು ಕಾಫಿತೋಟಗಳಲ್ಲಿ ದುಡಿಯಲು, ಚೀನೀಯರು ಆಗ್ನೇಯ ಏಷ್ಯದ ರಾಷ್ಟ್ರಗಳಿಗೆ ವಲಸೆಹೋಗಿ, ಅಲ್ಲಿ ನಿಂತು, ಅನೇಕ ಸಾರಿ ಆ ದೇಶಗಳ ಸ್ವಾತಂತ್ರ್ಯಹೋರಾಟದಲ್ಲಿ ಸಮಸ್ಯೆಯಾದರು. ಭಾರತೀಯರು ಮಲಯ ಮತ್ತು ಬರ್ಮದಲ್ಲೂ, ಚೀನೀಯರು ಇಂಡೋನೇಷಿಯ, ಥಾಯ್‍ಲ್ಯಾಂಡ್, ಮಲಯಗಳಲ್ಲೂ ಹೆಚ್ಚಾಗಿ ಆಯಾ ದೇಶಗಳ ಜನಾಂಗದ ಸಮಾಜದಲ್ಲಿ ಮುಖ್ಯ ಅಂಶವಾದರು.
ಈ ರೀತಿಯ ವಸಾಹತುನೀತಿಯ ವಿರುದ್ಧವಾಗಿ, ಪರಕೀಯರ ಆಡಳಿತದ ಕಷ್ಟ ಪರಂಪರೆಗಳಿಗೆ ಬೇಸತ್ತ ದೇಶೀಯರು, ಈ ಶತಮಾನದ ಆದಿಭಾಗದಿಂದ ಸ್ವಾತಂತ್ರ್ಯ ಚಳುವಳಿಯನ್ನು ಪ್ರಾರಂಭಮಾಡಿದರು. ಮೊದಮೊದಲು ಈ ಸಂಗ್ರಾಮ ಆಧುನಿಕ ವಿದ್ಯಾಭ್ಯಾಸವನ್ನು ಪರದೇಶಗಳಲ್ಲಿ ಮುಗಿಸಿ ಬಂದ ವಿದ್ಯಾವಂತರಿಂದ ಪ್ರಾರಂಭವಾಗಿ, ಕೊನೆಗೆ [[ಎರಡನೆಯ ಮಹಾಯುದ್ಧ]]ವಾದ ಅನಂತರ ಎಲ್ಲರೂ ಭಾಗವಹಿಸುವಂತಾಯಿತು. ಇಂಡೋನೇಷಿಯದ ಸುಕಾರ್ನೊ ಮತ್ತು ಮಹಮದ್ ಹಟ್ಟಾ, ಬರ್ಮಾದ ಅಂಗ ಸಾನ್ ಮತ್ತು ಉನೂ, ಫಿಲಿಪೈನ್ಸ್‍ನ ಜೋಸ್ ರಿಜಾಲೆ, ವಿಯಟ್ನಾಂನ [[ಹೋ ಚಿ ಮಿನ್]], ಮಲಯಾದ ಟುಂಕು ಅಬ್ದುಲ್ ರಹಮಾನ್ ಆಗ್ನೇಯ ಏಷ್ಯದ ಸ್ವಾತಂತ್ರ್ಯಸಂಗ್ರಾಮದ ಮೂಲಪುರುಷರಲ್ಲಿ ಅಗ್ರಗಣ್ಯರಾದರು. ಈ ಹೋರಾಟಕ್ಕೆ ಜಪಾನೀಯರು ಆಗ್ನೇಯ ಏಷ್ಯವನ್ನು 1942-45ರವರೆಗೆ ಆಕ್ರಮಿಸಿಕೊಂಡ ಕಾಲದಲ್ಲಿ ಅತಿ ಹೆಚ್ಚಿನ ಪ್ರೋತ್ಸಾಹ ದೊರೆಯಿತು ಎನ್ನಬಹುದು. ಜಪಾನೀಯರ ವಿಜಯದಿಂದ, ಯೂರೋಪಿಯನ್ನರನ್ನು ಏಷ್ಯನರು ಗೆಲ್ಲಲು ಸಾಧ್ಯವಿಲ್ಲ ಎಂಬ ನಂಬಿಕೆ ನಶಿಸಿಹೋಯಿತು. ಎರಡನೆಯ ಮಹಾಯುದ್ಧದ ಅನಂತರ ಒಂದೊಂದೇ ರಾಷ್ಟ್ರಗಳು ಸ್ವತಂತ್ರವಾದುವು. 1946ರಲ್ಲಿ ಫಿಲಿಪೈನ್ಸ್ ಅಮೆರಿಕನ್ನರಿಂದ ಸ್ವಾತಂತ್ರಗಳಿಸಿತು. 1948ರಲ್ಲಿ ಬರ್ಮ ಬ್ರಿಟಿಷ್‍ರಿಂದಲೂ, 1949ರಲ್ಲಿ ಇಂಡೋನೇಷಿಯ ಡಚ್ಚರಿಂದಲೂ, 1954ರಲ್ಲಿ ವಿಯಟ್ನಾಂ, ಲಾವೋ ಮತ್ತು ಕಾಂಬೋಡಿಯಗಳು, 1957ರಲ್ಲಿ ಮಲಯ ಫ್ರೆಂಚರಿಂದಲೂ ಸ್ವಾತಂತ್ರ್ಯಗಳಿಸಿದುವು. ರಾಜಕೀಯ ಸ್ವಾತಂತ್ರ್ಯ ಪಡೆದ ಆಗ್ನೇಯ ಏಷ್ಯದ ರಾಷ್ಟ್ರಗಳು ಈಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಆರ್ಥಿಕ ಕ್ಷೇತ್ರದಲ್ಲಿ ಕ್ರಾಂತಿ ನಡೆದಿದ್ದರೂ ಈ ರಾಷ್ಟ್ರಗಳು ಇನ್ನೂ ಬಹಳ ಹಿಂದೆ ಉಳಿದಿವೆ. ರಾಜಕೀಯ ಕ್ಷೇತ್ರಗಳಲ್ಲಿ ಆಂತರಿಕ ಜಗಳ ಸಾಮಾನ್ಯವಾಗಿದೆ. ವಿವಿಧ ಜನಾಂಗಗಳಿಂದ ತುಂಬಿದ ರಾಷ್ಟ್ರಗಳಲ್ಲಿ ರಾಷ್ಟ್ರೀಯತೆಯ ತತ್ತ್ವಗಳನ್ನು, ಆದರ್ಶಗಳನ್ನು ಜನತೆಯ ಮುಂದೆ ಇಡುವುದು ಅಲ್ಲಿಯ ನಾಯಕರಿಗೆ ಕಷ್ಟವಾಗಿದೆ. ಬಹುಸಂಖ್ಯಾತರಾದ ಮೂಲಜನಾಂಗದವರಿಗೂ ಇತ್ತೀಚೆಗೆ ವಲಸೆಬಂದ ಚೀನೀಯರಿಗೂ ಭಾರತೀಯರಿಗೂ ಅನೇಕ ಸಾರಿ ಘರ್ಷಣೆಗಳಾಗಿ ರಾಜಕೀಯಸ್ಥಿತಿ ಅಲ್ಲೋಲಕಲ್ಲೋಲವಾಗಿರುವುದು ಉಂಟು. ಅಂತರರಾಷ್ಟ್ರೀಯ ಕ್ಷೇತ್ರದಲ್ಲಂತೂ ಆಗ್ನೇಯ ಏಷ್ಯ ಇತ್ತೀಚೆಗೆ ಬಹಳ ಪ್ರಾಮುಖ್ಯವಾಗಿದೆ. ಹಾಗೂ ಸಮಸ್ಯೆಯೂ ಆಗಿದೆ. 1954ರಲ್ಲಿ ನಡೆದ ಜಿನೀವ ಒಪ್ಪಂದದ ಪ್ರಕಾರ, ವಿಯಟ್ನಾಂ ದೇಶ ಇಬ್ಭಾಗವಾಗಿ, [[ಉತ್ತರ ವಿಯಟ್ನಾಂ]] ಕಮ್ಯುನಿಸ್ಟರ ಹಿಡಿತಕ್ಕೆ ಬಂತು; ದಕ್ಷಿಣ ವಿಯಟ್ನಾಂ ಯೂರೋಪಿನ ಮತ್ತು ಅಮೆರಿಕನ್ ಶಕ್ತಿಬಣಕ್ಕೆ ಸೇರಿದ ಪ್ರಜಾಸತ್ತೆಯ ರಾಷ್ಟ್ರವಾಯಿತು. ಈ ಸಮಸ್ಯೆ ಇವತ್ತಿಗೂ ಬೃಹದಾಕಾರವಾಗಿ ನಿಂತಿದೆ. [[ಅಮೆರಿಕ]], [[ಚೀನಾ|ಚೀನ]] ಮತ್ತು ರಷ್ಯಗಳು ಆಗ್ನೇಯ ಏಷ್ಯದ ರಾಷ್ಟ್ರಗಳ ಪರ ಮತ್ತು ವಿರುದ್ಧವಾಗಿ ಬೆಂಬಲ ನಿಂತು ತಮ್ಮ ತಮ್ಮ ಶಕ್ತಿ ಪ್ರದರ್ಶನ ನಡೆಸುತ್ತಿವೆ. 1954ರಲ್ಲಿ ಅಮೆರಿಕದ ನೇತೃತ್ವದಲ್ಲಿ ಸಿಯಾಟೋ ಎಂಬ ಮಿಲಿಟರಿ ಬಣವನ್ನು ಫಿಲಿಪೈನ್ಸ್, ಥಾಯ್‍ಲ್ಯಾಂಡ, ಪಾಕೀಸ್ತಾನಗಳನ್ನು ಒಳಗೊಂಡಂತೆ ಕಮ್ಯುನಿಸ್ಟರ ಪ್ರಭಾವವನ್ನು ಆಗ್ನೇಯ ಏಷ್ಯದಲ್ಲಿ ತಡೆಯುವಂತೆ ರಚಿತವಾಯಿತು. 1955ರಲ್ಲಿ ಇಂಡೋನೇಷಿಯದ [[ಬಾಂಡುಂಗ್‍]]ನಲ್ಲಿ ಮೊತ್ತಮೊದಲಿಗೆ ಏಷ್ಯನ್ ಮತ್ತು ಆಫ್ರಿಕನ್ ರಾಷ್ಟ್ರಗಳ ಅಗ್ರಸಮ್ಮೇಳನ ನಡೆಯಿತು. ಕಾಂಬೋಡಿಯ, ಇಂಡೋನೇಷಿಯ, ಲಾವೋ ಮತ್ತು ಬರ್ಮ ದೇಶಗಳು ಯಾವ ಶಕ್ತಿಬಣಕ್ಕೂ ಸೇರದ ತಟಸ್ಥನೀತಿಯನ್ನು ಅನುಸರಿಸುತ್ತಿವೆ.
 
==ವಾಸ್ತುಶಿಲ್ಪ==
"https://kn.wikipedia.org/wiki/ಆಗ್ನೇಯ_ಏಷ್ಯಾ" ಇಂದ ಪಡೆಯಲ್ಪಟ್ಟಿದೆ