ಸದಸ್ಯ:Dhanalakshmi .K. T/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
೧ ನೇ ಸಾಲು:
"ನೀವು ಕರೆ ಮಾಡಿರುವ ಚಂದದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ, ಪುನಃ ಕರೆ ಮಾಡಿ"
 
ಇಳಿ ಸಂಜೆಯ ಹೊತ್ತು, ಗಾಳಿಯ ರಭಸಕ್ಕೆ ಕಿಟಕಿಯ ಗಾಜೊಂದು ಪssಳ್ ಎಂದು ಒಡೆದ್ದಿತ್ತು. ಅದರ ಮೂಲಕ ಯುವತಿಯೊಬ್ಬಳು ಹಾಗೆಯೇ ಮೈರೆತು ಹೊರ ಜಗತ್ತನ್ನು ನೋಡಲಾರಂಭಿಸಿದಳು. ಭುವಿಯನ್ನೇ ಅಪ್ಪುವಂತಿರುವ ಮೋಡಗಳ ಮಧ್ಯದಿಂದ ನುಗ್ಗಿ ಬರುತ್ತಿರುವ ಮಿಂಚು. ತುಂತುರು ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನಾಯಿಗಳು ದಿಕ್ಕಾಪಾಲಾಗಿ ಓಡತೊಡಗಿದವು. ಗಾಳಿಯ ಹೊಡೆತಕ್ಕೆ ಬಾಗಿಹೋದ ಮರ-ಗಿಡಗಳು, ವೇಗವಾಗಿ ನಾ ಮುಂದು ತಾ ಮುಂದು ಎಂಬು ಸಾಗುತ್ತಿರುವ ದ್ವಿಚಕ್ರ ವಾಹನಗಳು, ಮಳೆಯ ನೀರಲ್ಲಿ ಆಡಿ ನಲಿಯುತ್ತಿರುವ ಮಕ್ಕಳು. ಇದನ್ನೇ ತೀಕ್ಷ್ಣವಾಗಿ ನೋಡುತ್ತಿರುವ ಯುವತಿಯನ್ನು ಎಚ್ಚರಿಸುವಂತೆ ಅದೇನೋ ಜೋರಾದ ಶಬ್ದ. ನಡುಮನೆಗೆ ಓಡಿಹೋದಂತೆ, ಫೋಟೊವೊಂದು ಬಿದ್ದು, ಅದರ ಗಾಜು ಚೆಲ್ಲಾಪಿಲ್ಲಿಯಾಗಿ ನೆಲದಮೇಲೆ ಬಿದ್ದಿತ್ತು. ಅದನ್ನು ಕೈಗೆ ತೆಗೆದುಕೊಂಡಂತೆ ಕಡುಮೌನ. ನಂದಿಬೆಟ್ಟದ ತುದಿಯಲ್ಲಿ ನಿಂತಿರುವ ತಾನು ಹಾಗು ತನ್ನ ಗಂಡ ಆದಿಯ ಛಾಯಾಚಿತ್ರ. ಅದನ್ನು ನೋಡುತ್ತಾ ಯುವತಿ ತನ್ನ ನೆನಪಿನ ವಿಹಾರಕ್ಕೆ ಜಾರಿದಳು.
 
ಅಂದು ಸೋಮವಾರ, ನನ್ನ ಮದುವೆ ಕಳೆದು ೨ ದಿನವಾಗಿತ್ತು. ನಾನು ಮತ್ತು ಆದಿ ನಂದಿಬೆಟ್ಟಕ್ಕೆ ಹೋಗಿದ್ದೆವು. ಈ ಫೋಟೊ ಅಲ್ಲೇ ತೆಗಿದ್ದಿದ್ದು.
 
ಮೂರೇ ದಿನದಲ್ಲಿ ಹಿಂದಿರುಗುತ್ತೇನೆ ಎಂದು ಆದಿ ಚಿಕ್ಕಮಗಳೂರಿನ ಎಸ್ಟೇಟ್‌ಗೆ ಹೋದರು, ಆದರೇ ಒಂದು ವಾರವಾದರು ಹಿಂದಿರುಗಲಿಲ್ಲ. ತುಂಬಾ ಸಲ ಕರೆ ಮಾಡಲು ಪ್ರಯತ್ನಿಸಿದೆ ಮತ್ತೆ ಅದೇ ಉತ್ತರ: "ನೀವು ಕರೆ ಮಾಡಿರುವ ಚಂದದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ, ಪುನಃ ಕರೆ ಮಾಡಿ". ಇದನ್ನು ಪದೇ ಪದೇ ಕೇಳಿದ ನನಗೆ ಒಂದೇ ಕ್ಷಣದಲ್ಲಿ ದುಃಖ, ಕೋಪ, ಭಯದ ಅನುಭವವಾಯಿತು. ಇದರ ಜೊತೆ ಬಿಡದೇ ಕಾಡುತ್ತಿರುವ ಏಕಾಂತ. ಇದೆಲ್ಲವನ್ನು ಸಹಿಸಲಾರದೆ ಚಿಕ್ಕಮಗಳೂರಿಗೆ ಖುದ್ದಾಗಿ ನಾನೇ ಹೊಗಲು ಸಿದ್ಧಳಾದೆ.
 
ಸಮಯ, ಸಂಜೆ ೫ ಗಂಟೆ,
 
ಮಳೆ ತನ್ನ ಓಟವನ್ನು ನಿಲ್ಲಿಸ್ಸಿತ್ತು. ವರುಣನ ರೌದ್ರ ನರ್ತನಕ್ಕೆ ತತ್ತರಿಸ್ಸಿದ್ದ ನಾಯಿಗಳು ಮೈ ಕೊಡವಿಕೊಂಡು ಮತ್ತೆ ರಸ್ತೆಗಿಳಿದವು. ನಾನು ಮನೆ ಮತ್ತು ಕಾರ್ ಕೀಯನ್ನು ಕೈಗೆತ್ತಿಕೊಂಡೆ. ಇನ್ನೇನು ಬಾಗಿಲು ಹಾಕಬೇಕೆನ್ನುವಷ್ಟರಲ್ಲಿ, ಆದಿ ಹೇಳುತ್ತಿದ್ದ ಸೀರಿಯಲ್ ಕಿಲ್ಲರ್‌ನ ನೆನಪಾಯ್ತು. ರಿವಾಲ್ವರ್‌ ತೆಗೆದುಕೊಳ್ಳಲು ರೂಮಿಗೆ ಓಡಿದೆ. ಅಲ್ಲೆ ಲಾಕರ್‌ನಲ್ಲಿದ್ದ ರಿವಾಲ್ವರ್‌ನ್ನು ಬ್ಯಾಗ್‌ನಲ್ಲಿ ಹಾಕಿಕೊಂಡೆ. ಮನೆಯ ಬಾಗಿಲು ಹಾಗು ಗೇಟ್‌ಗೆ ಬೀಗಜಡಿದು ಖಾತ್ರಿ ಪಡಿಸಿಕೊಂಡೆ. ಕಾರ್‌ನ ಒಳಗೆ ಕುಳಿತೆ. ಬ್ಯಾಗ್‌ನಲ್ಲಿದ್ದ ರಿವಾಲ್ವರ್ ಅನ್ನು ಕಾರ್ ಮ್ಯಾಟ್‌ನ ಕೆಳಗಿಟ್ಟೆ. ಇಂಜಿನ್ ಸ್ಟಾರ್ಟ್ ಮಾಡಿ ಶರವೇಗದಲ್ಲಿ ಹೊರಟೆ, ಕಾರ್ ಟ್ರಾಫ಼ಿಕ್‌ನಲ್ಲಿ ಲೀನವಾಯಿತು. ಟ್ರಾಫ಼ಿಕ್‌ ಸಿಗ್ನಲ್‌ನ ಟೈಮರ್‌ ಇಳಿಕೆಯಾಗುತ್ತಿದ್ದಂತೆ ನನ್ನ ಎದೆಬಡಿತ ಏರತೊಡಗಿತು. ಮತ್ತೊಮ್ಮೆ ಆದಿಗೆ ಕರೆ ಮಾಡಲು ಪ್ರಯತ್ನಿಸಿದೆ. ಮತ್ತದೇ ಉತ್ತರ: "ನೀವು ಕರೆ ಮಾಡಿರುವ ಚಂದದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ, ಪುನಃ ಕರೆ ಮಾಡಿ".... ಮತ್ತಷ್ಟು ನಿರಾಸೆ. ನಗರ ಬಿಟ್ಟು ಹೆದ್ದಾರಿಗೆ ಸೇರಿದೆ.
 
ಸಮಯ, ಸಂಜೆ ೬ ಗಂಟೆ ೩೫ ನಿಮಿಷ,
 
ಮೈಲಿಕಲ್ಲಿನ ಪ್ರಕಾರ ಚಿಕ್ಕಮಗಳೂರಿಗೆ ಇನ್ನೂ ೨೫೦ ಕಿ. ಮೀ. ಪ್ರಯಾಣಿಸಬೇಕಿತ್ತು. ನನ್ನ ಆತಂಕ ಹೆಚ್ಚಾಯ್ತು. ನಾನು ಸರಿ ಸುಮಾರು ೧೨೦ ಕಿ. ಮೀ. ವೇಗದಲ್ಲಿ ಕಾರನ್ನು ಚಲಾಯಿಸುತ್ತಿದ್ದೆ. ನನ್ನ ಮನಸಲ್ಲಿ ಸಾವಿರಾರು ಪ್ರಶ್ನೆಗಳು...... ಆದಿ ಯಾಕೆ ಬರಲಿಲ್ಲ? ಯಾಕೆ ಕರೆ ಮಾಡಲಿಲ್ಲ? ಅವರಿಗೆ ಏನಾದರು ತೊಂದರೆ ಆಯ್ತೇ? ಅವ್ರ ಪ್ರಾಣಕ್ಕೇ ಏನಾದರೂ..!!?? ಇಲ್ಲ ಇಲ್ಲ.. "ಅಯ್ಯೋ.. ದೇವರೇ ಅವರಿಗೆ ಏನು ಆಗದೇ ಇರಲಿ" ಎಂದು ದೇವರನ್ನು ನೆನೆಯುವಷ್ಟರಲ್ಲಿ ಮತ್ತೆ ಮಳೆ ಸುರುವಾಯ್ತು. ಕಾರ್‌ನ ವೈಪರ್ ಆನ್ ಮಾಡ್ದೆ.
 
ಸಮಯ, ರಾತ್ರಿ ೯ ಗಂಟೆ,
 
ಅಂಗಡಿಯ ಮಾಲೀಕರು ಅಂಗಡಿಯನ್ನು ಮುಚ್ಚಿ ಮನೆಗೆ ತೆರಳುತ್ತಿದ್ದರು. ಬಾರ್‌ನ ಮುಂದೆ ಕುಡುಕರು ಓಲಾಡುತ್ತಾ ಸಾಗುತ್ತಿದ್ದರು. ಇದೆಲ್ಲವನ್ನು ನೋಡುತ್ತಾ ಡ್ರೈವ್ ಮಾಡುತ್ತಿದ್ದ ನನಗೆ ಬೆಕ್ಕೊಂದು ಕಾರಿಗೆ ಸಿಕ್ಕಿ ಹಾಕಿಕೊಂಡಿತು. ಅತಿ ವೇಗದಲ್ಲಿದ್ದ ಕಾರ್ ನಿಯಂತ್ರಣಕ್ಕೆ ಸಿಗಲಿಲ್ಲ. ಆದ್ದರಿಂದ ಕಾರ್ ಸ್ಕಿಡ್‌ ಆಗಿ ನಿಂತಿತು. ಸಾಮಾನ್ಯವಾಗಿ ಬೆಕ್ಕು ಎದುರಿಗೆ ಬಂದರೆ ಅಪಶಕುನವೆನ್ನುತ್ತಾರೆ, ಆದರೆ ಇಲ್ಲಿ ನನ್ನಿಂದ ಬೆಕ್ಕಿನ ಹತ್ಯೆಯೇ ಆಯಿತು. ಡೋರ್ ತೆಗೆದು ಮೊಬೈಲ್ ಟಾರ್ಚ್ ಆನ್ ಮಾಡಿ ಕಾರ್‌ನ ಕೆಳಗೆ ನೋಡಿದೆ. ಏನಿದು ವಿಚಿತ್ರ.. ಅಲ್ಲಿ ಹತ್ಯೆಯೂ ಇಲ್ಲಾ... ಬೆಕ್ಕು ಸಹಾ ಇಲ್ಲಾ... ನನ್ನ ಊಹೆ ಸುಳ್ಳಾಯಿತೆಂದು ಸಂತೋಷ ಪಡಬೇಕೋ ಅಥವಾ ಬೆಕ್ಕು ಎಲ್ಲಿ ಎಂದು ಚಿಂತಿಸಬೇಕೋ? ಅಷ್ಟರಲ್ಲಿ ಅಲ್ಲೇ ನಿಂತು ಸಿಗರೇಟ್‌ನ ಹೊಗೆ ಉಗುಳುತ್ತಿದ್ದ ವ್ಯಕ್ತಿಯೊಬ್ಬ ಇದೆಲ್ಲವನ್ನು ತೀಕ್ಷ್ಣವಾಗಿ ವೀಕ್ಷಿಸುತ್ತಿರುವುದು ನನ್ನ ಗಮನಕ್ಕೆ ಬಂತು. "ಓಹ್.. ಆದಿ ಹೇಳುತ್ತಿದ್ದ ಸೀರಿಯಲ್ ಕಿಲ್ಲರ್ ಇವನೇ ಇರಬಹುದಾ!!?? ಅವನು ನನ್ನ ಹತ್ತಿರವೇಕೆ ಬರುತ್ತಿದ್ದಾನೆ?" ಅಷ್ಟರಲ್ಲೇ ನಾನು ಅವಸರದಿಂದ ಕಾರ್ ಸ್ಟಾರ್ಟ್ ಮಾಡಿದೆ.
 
ಸಮಯ ರಾತ್ರಿ ೧೦ ಗಂಟೆ,
 
ಕಾರ್ ಚಿಕ್ಕಮಗಳೂರಿಗೆ ಬಂದಾಕ್ಷಣ, ಮನಸ್ಸು ಗಟ್ಟಿಯಾಯ್ತು. ಚೆಕ್‌ಪೋಸ್ಟ್‌ನಲ್ಲಿದ್ದ ವಾಚ್‌ಮ್ಯಾನ್‌ನನ್ನು ತೋಟದಮನೆ ಎಸ್ಟೇಟ್‌ಗೆ ದಾರಿ ಕೇಳಿದೆ. ಆತ "ಇಲ್ಲಿಂದ ೪ ಕಿ. ಮೀ. ಇದೆ. ಮುಂದೆ ಒಂದು ಸೇತುವೆ ಸಿಗುತ್ತೆ ಅಲ್ಲಿಂದ ಬಲಕ್ಕೆ ತಿರುಗಿ" ಎಂದ ಅವನ ಮುಖದಲ್ಲಿ ಏನೋ ಗಾಬರಿ ಕಾಣಿಸಿತು. ನಂತರ ಹೀಗೆಂದ "ಮೇಡಂ ಹುಷಾರು, ಆ ದಾರಿ ಸರಿ ಇಲ್ಲ. ಎಲ್ಲೂ ನಿಲ್ಲಿಸಬೇಡಿ. ಅಲ್ಲೊಬ್ಬ ವಿಚಿತ್ರ ಸೀರಿಯಲ್ ಕಿಲ್ಲರ್ ಇದ್ದಾನೆ. ಆತ ಏಕಾಂಗಿಯಾಗಿ ಸಂಚರಿಸುವವರನ್ನು ಬರ್ಬರವಾಗಿ ಕೊಲ್ಲುತ್ತಾನೆ." ಇದನ್ನು ಕೇಳಿ ಮತ್ತಷ್ಟು ಗಾಬರಿಗೊಂಡ ನಾನು ಆದಿಗೆ ಕರೆ ಮಾಡಲು ಯತ್ನಿಸಿದೆ. ಮತ್ತದೇ ಉತ್ತರ: "ನೀವು ಕರೆ ಮಾಡಿರುವ ಚಂದದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ, ಪುನಃ ಕರೆ ಮಾಡಿ" ನನ್ನಲ್ಲಿದ್ದ ಭಯ ದ್ವಿಗುಣವಾಯಿತು.
 
ಮುಂದುವರೆದ ನಾನು ಸೇತುವೆ ದಾಟಿ ಬಲಕ್ಕೆ ತಿರುಗುವಾಗ, ಕಾರ್‌ನ ಹೆಡ್‌ಲೈಟ್‌ನ ಬೆಳಕಿಗೆ '''ತೋಟದಮನೆ''' ಎಂದು ಬರೆದ ಬೋರ್ಡ್ ಅಸ್ಪಷ್ಟವಾಗಿ ಕಾಣಿಸಿತು. ಹಾಗೆ ಮುಂದೆ ಸಾಗಿದೆ. ಆ ಕ್ಷಣದಲ್ಲಿ ವೇಗವಾಗಿ ಹಿಂಬಾಲಿಸಿತ್ತಿದ್ದ ಲಾರಿಗೆ ಸೈಡ್ ಕೊಡಲು ಕಾರನ್ನು ಎಡಕ್ಕೆ ಚಲಾಯಿಸಿದೆ. ಆಗಷ್ಟೇ ಬಂದ ಮಳೆಯಿಂದ ರಸ್ತೆಯ ಬದಿಯ ಕೆಸರಲ್ಲಿ ಕಾರಿನ ಚಕ್ರ ಸಿಕ್ಕಿ ಹಾಕಿಕೊಂಡಿತು. ಕಾರ್‌ನಿಂದ ಇಳಿದೆ, ಕಗ್ಗತ್ತಲು, ಸುತ್ತಲೂ ಬೃಹದಾಕಾರದ ಮರಗಳು, ಗುಯ್ಗುಟ್ಟುತ್ತಿರುವ ಕೀಟಗಳು, ಅತಿಯಾದ ಮೌನದಲ್ಲಿ ನನ್ನ ಉಸಿರಾಟವೇ ನನಗೆ ಕೇಳಿಸುತ್ತಿತ್ತು. ಟಾರ್ಚ್ ಹಾಕಿ ಇಣುಕಿ ನೋಡಿದೆ, ಮುಂದಿನ ಚಕ್ರ ಕೆಸರಲ್ಲಿ ಸಿಲುಕಿತ್ತು. ಅಷ್ಟರಲ್ಲಿ ಡೋರ್ ಸದ್ದಾದಂತೆ ಭಾಸವಾಯ್ತು. ಹಿಂದೆ ತಿರುಗಿದಂತೆ ಲಾರಿಯ ಹಾರ್ನ್ ಶಬ್ದ ಹೆಚ್ಚಾಯ್ತು. ತಟ್ಟನ್ನೇ ಬಂದು ಸೀಟ್‌ನಲ್ಲಿ ಕುಳಿತು ಸಕಲ ದೈವಗಳನ್ನು ನೆನೆದು ಕಾರ್ ಸ್ಟಾರ್ಟ್ ಮಾಡಿ ರಿವೆರ್ಸ್ ಗೇರ್ ಹಾಕಿದೆ. ಕಾರ್ ಸಂಪೂರ್ಣ ರಸ್ತೆಯ ಮೇಲೆ ಬಂತು. ಮುಂದುವರೆದಂತೆ ಲಾರಿಯು ನನ್ನಷ್ಟೆ ವೇಗದಲ್ಲಿ ಹಿಂಬಾಲಿಸಿತು. ಲಾರಿಯಲ್ಲಿದ್ದ ಅಜಾನುಬಾಹುವೊಬ್ಬ ಸಿಗರೇಟ್ ಹೊಗೆಯುಗುಳುತ್ತಿರುವುದು ಮಿರರ್‌ನಲ್ಲಿ ಕಾಣಿಸಿತು. ಅವನೇ ಕಿಲ್ಲರ್ ಎಂದು ಖಾತ್ರಿಯಾಯ್ತು.
 
ಎಸ್ಟೇಟ್‌ನ ಗೇಟ್ ಸಮೀಪಿಸಿದಂತೆ ನಾನು ಕಾರ್‌ನ ವೇಗವನ್ನು ಹೆಚ್ಚಿಸಿದೆ. ತಾನು ಬೆಂಬಿಡದೇ ಹಿಂಬಾಲಿಸುತ್ತಿರುವುದನ್ನು ಸೂಚಿಸಲು ಲಾರಿಯ ಚಾಲಕ ಮತ್ತೊಮ್ಮೆ ಜೋರಾಗಿ ಹಾರ್ನ್ ಹಾಕಿ ಏನೋ ಕೈ ಸನ್ನೆ ಮಾಡಿದ....
ನಾನು ಮನೆಯ ಅಂಗಳ ಸೇರುವಷ್ಟರಲ್ಲಿ, ಆದಿಯೂ ಗಾಬರಿ ಇಂದ ಓಡಿ ಬಂದರು. ಕಾರನ್ನು ನಿಲ್ಲಿಸಿ ರಿವಾಲ್ವರ್‌ನ್ನು ಆದಿಯ ಕೈಗಿಟ್ಟು ಅಳಲಾರಂಭಿಸಿದ ನಾನು "ಶೂಟ್ ಹಿಮ್... ಶೂಟ್ ಹಿಮ್... ಅವನೇ ಸೀರಿಯಲ್ ಕಿಲ್ಲರ್ ಎಂದು ಲಾರಿ ಚಾಲಕನನ್ನು ತೋರಿಸಿದೆ. ಆಗ ಆದಿ ರಿವಾಲ್ವಾರನ್ನು ಅವನ ಕಡೆಗೆ ಗುರಿ ಇಟ್ಟರು. ಲಾರಿಯಿಂದ ಇಳಿದಾತ "ಸಾರ್.. ಸಾರ್... ನಾನು ಸಿರಿಯಲ್ ಕಿಲ್ಲರ್ ಅಲ್ಲ. ಅವನು ನಿಮ್ಮ ಕಾರಲ್ಲಿ ಅಡಗಿದ್ದಾನೆ. ದಾರಿಯಲ್ಲಿ ಕಾರ್ ಕೆಸರಲ್ಲಿ ಸಿಕ್ಕಿ ಹಾಕಿಕೊಂಡಾಗ ಆ ಸೀರಿಯಲ್ ಕಿಲ್ಲರ್ ಕಾರ್ ಹತ್ತಿದ್ದನ್ನು ನೋಡಿದ ಹಾಗೆಯೇ, ಮೇಡಂಗೆ ಇದನ್ನು ತಿಳಿಸಲು ಹಿಂಬಾಲಿಸಿದೆ." ಅಷ್ಟರಲ್ಲೇ ಕಾರ್‌ನಿಂದ ಇಳಿದ ಸೀರಿಯಲ್ ಕಿಲ್ಲರ್ ಓಡಲಾರಂಭಿಸಿದ. ಆಗ ಇವರು ಕಿಲ್ಲರ್‌ನ ಕಾಲಿ ಗುಂಡು ಹಾರಿಸಿದಾಕ್ಷಣ ಆತ ಅಲ್ಲೇ ಕುಸಿದು ಬಿದ್ದ. ಹಂತಕನನ್ನು ಎಲ್ಲರೂ ಸೇರಿ ಕಟ್ಟಿ ಹಾಕಿದೆವು. ನಾನು ಅದೇ ಹಳ್ಳಿಯಲ್ಲಿದ್ದ ಪೋಲಿಸಿಗೆ ಕರೆ ಮಾಡಲು ಪ್ರಯತ್ನಿಸಿದೆ: "ನೀವು ಕರೆ ಮಾಡಿರುವ ಚಂದದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ, ಪುನಃ ಕರೆ ಮಾಡಿ"