ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಯುವ ಪುರಸ್ಕಾರ: ಚಿತ್ರ ಸೇರಿಸಿದೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೧ ನೇ ಸಾಲು:
ಭಾರತ ಸರ್ಕಾರ ನೀಡುವ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಎಂದರೆ ಅದು '''ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ'''. ವಾರ್ಷಿಕ ಪ್ರಶಸ್ತಿಗಳ ಜೊತೆಯಲ್ಲಿಯೇ ಭಾರತದ ವಿಭಿನ್ನ ಭಾಷೆಗಳ ಹಿರಿಯ ಸಾಹಿತಿಗಳನ್ನು ಆಯ್ಕೆ ಮಾಡಿ ಅವರಿಗೆ '''ಸಾಹಿತ್ಯ ಅಕಾಡೆಮಿ ಫೆಲೋ''' ಗೌರವ ನೀಡುತ್ತದೆ. ಇದರ ಜತೆಯಲ್ಲಿ ಯುವ ಸಾಹಿತಿಗಳಿಗೆ '''ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ''', ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ '''ಬಾಲ ಸಾಹಿತ್ಯ ಪುರಸ್ಕಾರ''', ಅನುವಾದ ಕ್ಷೇತ್ರದ ಸಾಧನೆಗೆ '''ಅನುವಾದ ಬಹುಮಾನ'''ಗಳನ್ನೂ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಗಳಿಗೆ ಭಾಜನರಾದ ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಪಟ್ಟಿ ಈ ಕೆಳಗಿನಂತಿದೆ.
 
==[[ಸಾಹಿತ್ಯ ಅಕಾಡೆಮಿ ಫೆಲೋ ಗೌರವ]]==
 
ಸಾಹಿತ್ಯ ಅಕಾಡೆಮಿ ನೀಡುವ ಅತ್ಯುನ್ನತ ಸಾಹಿತ್ಯ ಗೌರವವಿದು. ಭಾರತೀಯ ಭಾಷೆಗಳಲ್ಲಿ ಅಪೂರ್ವ ಸಾಧನೆ ಮಾಡಿದ ಹಿರಿಯ ಸಾಧಕರಿಗೆ ಫೆಲೋ ಗೌರವ ಸಲ್ಲಿಸಲಾಗುತ್ತದೆ. ಹೀಗೆ ಮೊದಲ ಫೆಲೋ ಗೌರವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹಾಗೂ ಭಾರತದ ರಾಷ್ಟ್ರಪತಿಗಳಾಗಿ ದೇಶಕ್ಕೆ ಕೊಡುಗೆ ನೀಡಿದ [[ಸರ್ವೇಪಲ್ಲಿ ರಾಧಾಕೃಷ್ಣನ್]] ಅವರಿಗೆ 1968ರಲ್ಲಿ ಸಂದಿತು. ಇದರ ಜತೆಯಲ್ಲಿ ವಿದೇಶೀ ಲೇಖಕರಿಗೆ '''ಗೌರವ ಫೆಲೋಶಿಪ್''', ಏಷ್ಯಾದ ಕಲೆ, ಸಾಹಿತ್ಯ, ಸಂಸ್ಕೃತಿಯ ಅಧ್ಯಯನ ಮಾಡುವವರಿಗೆ ನೀಡಲಾಗುತ್ತಿದ್ದ '''ಆನಂದ ಕುಮಾರಸ್ವಾಮಿ ಫೆಲೋಶಿಪ್''' (ಈಗ ನಿಲ್ಲಿಸಲಾಗಿದೆ), ಸಾರ್ಕ್ ದೇಶಗಳ ಸಾಹಿತಿಗಳಿಗೆ ಸಲ್ಲುವ '''ಪ್ರೇಮ್‌ಚಂದ್ ಫೆಲೋಶಿಪ್'''ಗಳನ್ನೂ ಸಾಹಿತ್ಯ ಅಕಾಡೆಮಿ ನೀಡುತ್ತಿದೆ.