ಮಾನವನ ಚರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್‌ಗಳು: Reverted ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
Reverted to revision 779198 by Bschandrasgr (talk): Reverted link spam (TW)
ಟ್ಯಾಗ್: ರದ್ದುಗೊಳಿಸಿ
೭ ನೇ ಸಾಲು:
*ಮಾನವ ದೇಹದಲ್ಲಿ ಅಂಗಾಂಗಳು ಜೀವಕೋಶಗಳು ನಮ್ಮ ಅರಿವಿಗೆ ಬಂದು ಅಥವಾ ಬರದೆ ಸತತ ಕೆಲಸಮಾಡುತ್ತಿರುವುದರಿಂದ ದೇಹದಲ್ಲಿ ಇಂಗಾಲಾಮ್ಲ ಯೂರಿಯಾದಂಥ ಸಸಾರಜನಕ ಅನಗತ್ಯ ಲವಣಗಳು ಮೊಲಾದ ಕಶ್ಮಲಗಳು ಉತ್ಪತ್ತಿಯಾಗುತ್ತವೆ. ಅವುಗಳುನ್ನು ಹೊರಹಾಕಲು ಮೂತ್ರಪಿಂಡ ಅಥವಾ ಕಲಿಜಗಳಂತೆ ಚರ್ಮವೂ ಕಶ್ಮಲಗಲನ್ನು ನಿವಾರಣೆಮಾಡುವ ಒಂದು ದೊಡ್ಡ ಅಂಗ. ನಾವು ನಮ್ಮ ಉಸಿರಾಟದ ಮೂಲಕ ಸುಮಾರು 900 ಗ್ರಾಂ ತೂಕದಷ್ಟು ಇಂಗಾಲಾಮ್ಲವನ್ನು ಹೊರಹಾಕಿದರೆ, ಚರ್ಮದ ಮೂಲಕ 9 ಗ್ರಾಂ ತೂಕದಷ್ಟು ಇಂಗಾಲಾಮ್ಲವನ್ನು ಹೊರಹಾಕುತ್ತೇವೆ. ಅದೇ ಚರ್ಮವು ಸ್ವಲ್ಪಮಟ್ಟಿಗೆ ಆ ಅನಿಲವನ್ನು ಹೀರಿಕೊಳ್ಳಲೂ ಬಲ್ಲದು. ನಮ್ಮ ಕಲಿಜಗಳು ವಿಸರ್ಜಿಸುವ ವೀರು, ಅಜೀವಕ ಲವಣಗಳು, ಯೂರಿಯಾ ಮೊದಲಾದ ಕಶ್ಮಲಗಳನ್ನು ಬೆವರಿನ ಮೂಲಕ ಹೊರಹಾಕುವುದು. ಮೈಯ್ಯ ಕಾವನ್ನು ಕಡೆಮೆಮಾಡಲೂ ಬೆವರು ಸಹಾಯಕ. ಗಾಲಿಗೊಡ್ಡಿದ ಬೆವರು ಆವಿಯಾದಾಗ ಚರ್ಮ/ದೇಹದ ಶಾಖ ಕಡಿಮೆಯಾಗುವುದು. ಚರ್ಮಕ್ಕೆ ಕೆಲವು ಎಣ್ಣೆಯಂಥಹ ವಸ್ತುಗಳನ್ನು ಹೀರುವ ಗುಣವೂ ಇದೆ. ಅದರೆ ಚರ್ಮದ ದೊಡ್ಡ ಕೆಲಸ ಶುದ್ಧೀಕರಣ, ಬೆವರಿನ ಮೂಲಕ ನೀರು ಮತ್ತು ಕಶ್ಮಲಗಳನ್ನು ಹೊರಹಾಕುವುದು. <ref>ಜೀವ ಜೀವನ ಪುಟ ೧೪೫,೧೪೬,೧೪೭; ಡಾ. ಶಿವರಾಮ ಕಾರಂತ</ref> '''ಪುರುಷರ ಮುಂದೋಳಿನಲ್ಲಿ ಚರ್ಮದ ದಪ್ಪ ಸರಾಸರಿ 1. 3 ಮಿಮೀ ಇದ್ದರೆ ಅದೇ ಸ್ತ್ರೀಯರಲ್ಲಿ 1. 26 ಮಿಮೀ ಇರುವುದು.''' ಚರ್ಮದ ದಪ್ಪ ದೇಹದ ಬೇರೆ ಬೇರೆ ಭಾಗಗಲ್ಲಿ ಬದಲಾಗುತ್ತದೆ,
===ಸಂಕ್ಷಿಪ್ತ ವಿವರಣೆ===
*ನಮ್ಮ ಚರ್ಮದ ಕೆಳಗಡೆಯಲ್ಲಿ ಅಲ್ಲಲಿ ಸ್ವೇದಗ್ರಂಥಿ ಅಥವಾ ಬೆವರಿನ ಗ್ರಂಥಿ (ಸ್ವೆಟ್ ಗ್ಲ್ಯಾಂಡ್ಸ್ –sweat glands) ಇರುವುದು. ಹವೆಯಲ್ಲಿ ಉಷ್ಣತೆ ಹೆಚ್ಚಿದಾಗ ಸ್ವೇದಗ್ರಂಥಿಯ ಚಟುವಟಿಕೆ ಹೆಚ್ಚುತ್ತದೆ. ಅದರಿಂದ ಮೈ ಬೆವರುತ್ತದೆ. ಹವಾಮಾನವನ್ನು ಅನುಸರಿಸಿ ನಮ್ಮ ಮೈಯಿಂದ 200 ರಿಂದ 500 ಘನಸೆಂಟಿಮೀಟರಿನಷ್ಟು ಬವರು ಹೊರಬರಬಹುದು (ಒಣಚರ್ಮದವರಿಗೆ ಕಡಿಮೆ). ಅಧಿಕ ಶ್ರಮದಿಂದ ನಮ್ಮ ಜೀವಕೋಶಗಳಲ್ಲಿ ಅಧಿಕ ಕಶ್ಮಲ ಉತ್ಪತ್ತಿಯಾಗುವುದು. ಆಗ ಹೆಚ್ಚು ಕಶ್ಮಲ ಬೆವರಿನ ಮೂಲಕವೇ ಹೊರಗೆ ತಳ್ಳಲ್ಪಡುತ್ತದೆ. ನಮ್ಮ ಮೆದುಳಿಗೂ ಸ್ವೇದಗ್ರಂಥಿಗಳಿಗೂ ಸಂಬಂದವಿದೆ, ಮನಸ್ಸಿನ ಗಾಬರಿ, ಉದ್ವೇಗಗಳು ಹೆಚ್ಚು ಬೆವರಲು ಮೆದುಲಿನ ಪ್ರೇರಣೆ ಕಾರಣ. ದೇಹ ರಕ್ಷಣೆಗೆ ಚರ್ಮ ತೀರಾಅಗತ್ಯ; ಹಾಗೆಯೇ ಚರ್ಮದೊಳಗೆ ಪಸರಿಸಿರುವ ಒಂದು ಜಾತಿಯ ಪುಡಿಗಳು (ಪಿಗ್ಮೆಂಟ್ಸ್ -pigments) ಸೂರ್ಯರಶ್ಮಿಯಲ್ಲಿರುವ ಹಾನಿಕಾರಕ ಶಕ್ತಿಯಕಿರಣಗಳನ್ನು ತಡೆಯುತ್ತವೆ.<ref>[https://www.dermatologydiaries.com/pigmentation-treatment/ Pigmentation treatment]</ref>
===ನರದ ಕುಡಿಗಳು===
*ಚರ್ಮದ ಕೆಳಗಡೆ ಅಸಂಖ್ಯ ನರದಕುಡಿಗಳಿವೆ. ಅವು ನೋವು, ಸ್ಪರ್ಶ, ಒತ್ತಡ, ಶೀತ, ಉಷ್ನಗಳನ್ನು ಮತ್ತು ವಿವಿಧ ಅನುಭವಗಳನ್ನು ತಿಳಿಸುವುವು. ಅದೇ ಅನೇಕ ಇತರೆ ಪ್ರಾಣಿಗಳ ಮತ್ತು ಜಲಚರಪ್ರಾಣಿಗಳ ಚರ್ಮ ನಮ್ಮ ಚರ್ಮದಂತೆ ಇಲ್ಲ ಆದ್ದರಿಂದ ಅದು ಹೆಚ್ಚಿನ ಶಾಖ ಬಿಸಿಲು ಅಥವಾ ಹವಾಮಾನದ ವಿಶೇಷ ವ್ಯತ್ಯಾಸ ಸಹಿಸಲಾರವು. ಹವೆಯ ಸಾಮಾನ್ಯತರ ವ್ಯತ್ಯಾಸಗಳನ್ನು ಮೈ ಚರ್ಮವು ತನ್ನ ರೋಮ ರಂದ್ರಗಳ ಸಂಕೋಚನ ವಿಕೋಚನಗಳ (ವಿಸ್ತರಣ) ಮೂಲಕವೂ ಬೆವರುವಿಕೆಯಿಂದಲೂ ನಿಯಂತ್ರಿಸುವುದು.
೭೦ ನೇ ಸಾಲು:
 
==ರಚನೆ==
*[[ಚರ್ಮ]]ವು ಹೊರಚರ್ಮ ಮತ್ತು ಒಳಚರ್ಮ ಎಂಬ ಎರಡು ಪದರಗಳನ್ನು ಹೊಂದಿದೆ. ಚರ್ಮವು ಮೆಸೊಡೆರ್ಮಲ್ ( mesodermal ) ಜೀವಕೋಶಗಳನ್ನು ಹೊಂದಿದೆ. ಹೊರಚರ್ಮ: ಚರ್ಮದ ತೀರಾ ಹೊರಪದರವು ನಿರ್ಜೀವ ಕೋಶಗಳಿಂದ ಆಗಿದೆ. ಕೆಳಗಿನ ಪದರ ಸಜೀವ ಕೋಶಗಳಿಂದ ಆಗಿದ್ದು, ಕಾಲಕ್ರಮೇಣ ಮೇಲಕ್ಕೆಸರಿದು ನಿರ್ಜೀವ ಕೋಶಗಳಾಗುತ್ತವೆ. ಹೊರಚರ್ಮದ ತೀರಾ ಒಳಪದರವನ್ನು ಮ್ಯಾಲ್ಫೀಜಿಯನ್ ಎನ್ನುತ್ತಾರೆ. ಇದು ಹೊಸಕೋಸಗಳನ್ನು ಉತ್ಪತ್ತಿಮಾಡಿ ಸವೆದುಹೋದ ಭಾಗಗಳನ್ನು ಸರಿಪಡಿಸುತ್ತದೆ. ಬೆಳೆಯುವ ಪದರವು ಮೆಲಾನಿನ್ ಎಂಬ ವಸ್ತುವನ್ನು ತಯಾರಿಸುತ್ತದೆ. ಮೆಲಾನಿನ್ ಎಂದು ವರ್ಣದ್ರವ್ಯಗಳ ಹೊಂದಿದೆ.<ref>[https://www.dermatologydiaries.com/skin-whitening-treatment/ Skin lightening treatment]</ref> ಇದು ಚರ್ಮಕ್ಕೆ ಬಣ್ಣವನ್ನು ಕೊಡುತ್ತದೆ. ಮೆಲನೊಸೈಟ್ ಗಳು ಈ ಮಲಾನಿನ್ ಗಳನ್ನು ಒದಗಿಸುವುದು. ಈ ಮಲಾನಿನ್‍ಗಳು ಬಿಸಿಲಿನಲ್ಲಿರುವ ಅಪಾಯಕಾರಿ ನೇರಳಾತೀತ (ನೀಲಾತೀತ?) ವಿಕಿರಣವನ್ನು (ಯು.ವಿ UV -ಆಲ್ಟ್ರಾವಿಯೊಲೆಟ್) ಹೀರಿಕೊಂಡು ಒಳಗಿನ ಅಂಗಾಂಶಗಳನ್ನು ನಾಶವಾಗದಂತೆ ರಕ್ಷಿಸುತ್ತದೆ.
 
*ಈ ಕಿಣ್ವಗಳ (enzymes) ಜೀನ್ಗಳ ಕೊರತೆ ಇರುವ ಜನರು ಚರ್ಮ ಕ್ಯಾನ್ಸರ್ ನಿಂದ ಹೆಚ್ಚಿಗೆ ಬಳಲುತ್ತಿದ್ದಾರೆ. ದುರಸ್ತಿ ಕಿಣ್ವಗಳ ಕೊರತೆ , ಪ್ರಧಾನವಾಗಿ ಯುವಿ ಬೆಳಕಿನಕಿರಣಗಳಿಂದ ಆಗುವ ಹಾನಿಯ, ಮಾರಣಾಂತಿಕ ವಾಗಬಹುದು. ಮೆಲನೋಮವು , ತ್ವರಿತವಾಗಿ ಹರಡಲು ಕಾರಣವಾಗುತ್ತದೆ, ವಿಶೇಷವಾಗಿ ಆಕ್ರಮಣಕಾರಿ, ಮತ್ತು ಸಾಮಾನ್ಯವಾಗಿ ಮಾರಣಾಂತಿಕವಾಗಿರುತ್ತವೆ. ಮಾನವ ಚರ್ಮದ ವರ್ಣದ್ರವ್ಯವು ಎದ್ದುಕಾಣುವ ರೀತಿಯಲ್ಲಿ ಜನಗಳಿಂದ ಜನಗಳಿಗೆ (ಜನಾಂಗಗಳಲ್ಲಿ) ಬದಲಾಗುತ್ತದೆ. ಈ ಚರ್ಮದ ಬಣ್ಣದ ಆಧಾರದ ಮೇಲೆ ಜನರ (ಜನಾಂಗಗಳ) ವರ್ಗೀಕರಣಕ್ಕೆ ಕಾರಣವಾಗಿದೆ. <ref>Maton, Anthea; Jean Hopkins; Charles William McLaughlin; Susan Johnson; Maryanna Quon Warner; David LaHart; Jill D. Wright (1893). Human Biology and Health. Englewood Cliffs, New Jersey, USA: Prentice Hall. </ref>
೧೦೬ ನೇ ಸಾಲು:
*ಮಾನವನ ಚರ್ಮವು ಕಪ್ಪಾದ ಕಂದು ಬಣ್ಣದಿಂದ ಗುಲಾಬಿ-ಬಿಳಿ ಬಣ್ಣಗಳ ವರೆಗೆ ಚರ್ಮದ ಬಣ್ಣದ ವಿವಿಧ ಬಗೆಗಳನ್ನು ಹೊಂದಿದೆ. . ಮಾನವನ ಚರ್ಮವು ಯಾವುದೇ ಏಕ ಸಸ್ತನಿ ವರ್ಗಗಳ ಬಣ್ಣಗಳಿಂತ ಹೆಚ್ಚಿನ ವೈವಿಧ್ಯತೆಯನ್ನು ತೋರಿಸುತ್ತದೆ ಮತ್ತು ವೈವಿಧ್ಯತೆ ನೈಸರ್ಗಿಕ ಆಯ್ಕೆಯ ಪರಿಣಾಮವಾಗಿದೆ. ಮಾನವರಲ್ಲಿ ಚರ್ಮದ ವರ್ಣದ್ರವ್ಯವು ಪ್ರಾಥಮಿಕವಾಗಿ ನೇರಳಾತೀತ ವಿಕಿರಣ (ಯುವಿಆರ್), ಜೀವರಾಸಾಯನಿಕ ಪರಿಣಾಮಗಳು ನಿಯಂತ್ರಿಸುವ ಪ್ರಮಾಣವನ್ನು ಚರ್ಮ ಸೂಕ್ಷ್ಮಗ್ರಾಹಿಯಾಗಿ ತನ್ನನ್ನು ನಿಯಂತ್ರಿಸಲು ಆದ ವಿಕಸನ ಕ್ರಿಯೆ.
 
*ಬೇರೆ ಬೇರೆ ಮನುಷ್ಯರಲ್ಲಿ ನಿಜವಾದ ಚರ್ಮದ ಬಣ್ಣ, ಅನೇಕ ವಸ್ತುಗಳ ಪರಿಣಾಮ ಆದರೂ ಮಾನವನ ಚರ್ಮದ ಬಣ್ಣ ನಿರ್ಧರಿಸುವ ಒಂದು ಮುಖ್ಯ ವಸ್ತು “ಬಣ್ಣದ ಮೆಲನಿನ್” ಆಗಿದೆ.<ref>[https://www.dermatologydiaries.com/glutathione-injections/ Glutathione injection for skin lightening]</ref> ಮೆಲನಿನ್ ಎಂಬ ವಸ್ತು ಚರ್ಮದಲ್ಲಿರುವ ಮೆಲನೋಸೈಟ್ ಎಂಬ ಜೀವಕೋಶಗಳಿಂದ ಉತ್ಪಾದಿಸಲ್ಪಟ್ಟವು ಮತ್ತು ಇದು ಕಪ್ಪು ಚರ್ಮವುಳ್ಳ ಮಾನವರ ಚರ್ಮದ ಬಣ್ಣದ ಮುಖ್ಯ ಅಂಶವಾಗಿದೆ. ತೆಳು ಚರ್ಮದ ಜನರ ಚರ್ಮದ ಬಣ್ಣ ಮುಖ್ಯವಾಗಿ ಒಳಚರ್ಮದ ಅಡಿಯಲ್ಲಿ ನೀಲಿ-ಬಿಳುಪು ಸಂಯೋಜಕ ಅಂಗಾಂಶ ಮತ್ತು ಒಳಚರ್ಮದ ರಕ್ತನಾಳಗಳಲ್ಲಿ ಪರಿಚಲನೆಯಲ್ಲಿರುವ ಹಿಮೋಗ್ಲೋಬಿನ್ ನಿರ್ಧರಿಸುತ್ತದೆ. ಚರ್ಮದ ಕೆಳಗಿರುವ ಕೆಂಪು ಬಣ್ಣ ವಿಶೇಷವಾಗಿ ಎದ್ದು ಕಾಣುತ್ತದೆ. ದೈಹಿಕ ವ್ಯಾಯಾಮ ಪರಿಣಾಮವಾಗಿ ಅಥವಾ ನರಮಂಡಲದ ಉದ್ದೀಪನದಿಂದ (ಕೋಪ, ಭಯ ಗಳಲ್ಲಿ) ಅಪಧಮನಿಕೆಗಳು ಹಿಗ್ಗಿದಾಗ, ಮುಖದಲ್ಲಿ ಹೆಚ್ಚು ಕಾಣಿಸುತ್ತದೆ.
===ಐದು ವಿವಿಧ ವರ್ಣದ್ರವ್ಯ ಕಣಗಳು===
*ಚರ್ಮದ ಬಣ್ಣ ನಿರ್ಧರಿಸಲು ಕನಿಷ್ಠ ಐದು ವಿವಿಧ ವರ್ಣದ್ರವ್ಯ ಕಣಗಳು ಇವೆ. ಈ ವರ್ಣದ್ರವ್ಯಗಳನ್ನು ವಿವಿಧ ಹಂತಗಳಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ಇರುತ್ತವೆ.
೧೨೧ ನೇ ಸಾಲು:
*ಚರ್ಮ ವಯಸ್ಸಾದಂತೆ, ತೆಳುವಾಗುವುದು ಮತ್ತು ಸುಲಭವಾಗಿ ಹಾನಿ ಆಗುತ್ತದೆ. ಇದಕ್ಕೆ ಕಾರಣ ಮನುಷ್ಯನಿಗೆ ವಯಸ್ಸಾದಂತೆ ಸ್ವತಃ ಸರಿಪಡಿಸಲು ತೀವ್ರಗೊಳಿಸುವ ಚರ್ಮದ ಕಡಿಮೆ ಸಾಮರ್ಥ್ಯ.
 
*ಇತರೆ ವಿಷಯಗಳ ನಡುವೆ, ಚರ್ಮ ವಯಸ್ಸಾದಂತೆ ಪರಿಮಾಣ ಕಡಿಮೆಯಾಗುವುದು (ವಿಸ್ತಾರದಲ್ಲಿ ಕಡಿಮೆ –ಕುಗ್ಗುವಿಕೆ) ಮತ್ತು ಸ್ಥಿತಿಸ್ಥಾಪಕತ್ವ ಇಳಿಕೆ ಗಮನಾರ್ಹವಾಗಿ ಆಗುವುದು. ಚರ್ಮಕ್ಕೆ ವಯಸ್ಸಾದಂತೆ ಹೀಗಾಗಲು ಅನೇಕ ಆಂತರಿಕ ಮತ್ತು ಬಾಹ್ಯ ಕಾರಣಗಳಿವೆ.<ref>[https://www.dermatologydiaries.com/anti-aging-treatment/ Anti aging treatment]</ref> ಉದಾಹರಣೆಗೆ, ವಯಸ್ಸಾದ ಚರ್ಮದಲ್ಲಿ ರಕ್ತದ ಹರಿವು ಕಡಿಮೆಯಾಗುವುದು ಮತ್ತು ಚರ್ಮವು ಗ್ರಂಥಿಗಳ ಕಡಿಮೆ ಚಟುವಟಿಕೆಯ ಪರಿಣಾಮದ ಫಲವಾಗಿ ಈ ದುರ್ಬಲತೆ ಪಡೆಯುತ್ತದೆ. ಹೀಗಾಗಿ ಚರ್ಮಕ್ಕೆ ತೀವ್ರ ಘಾತವಾದಲ್ಲಿ (ತೀವ್ರ ಬಿಸಿಲಿನ ಝಳದ ಸುಡುವಿಕೆ) ಚರ್ಮದ ಕ್ಯಾನ್ಸರ್ ಆಗುವ ಸಂಭವವೂ ಇದೆ.
==ಮಾನವ ಚರ್ಮದ ಮೇಲೆ ಜೀವ ಜಾಲ==
[[File:Skin Microbiome20169-300.jpg|thumb|ಮಾನವ ಚರ್ಮದಮೇಲೆ ಸೂಕ್ಷ್ಮಾಣು ಜೀವಜಾಲ::ಚರ್ಮದ 20 ಪ್ರದಶಗಳಲ್ಲಿ ಗುರುತಿಸಿರುವುದು. (Skin Microbiome 2016 9-300)]]
"https://kn.wikipedia.org/wiki/ಮಾನವನ_ಚರ್ಮ" ಇಂದ ಪಡೆಯಲ್ಪಟ್ಟಿದೆ