ವಿಜಯನಾರಸಿಂಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೭ ನೇ ಸಾಲು:
೧೯೫೩ರಲ್ಲಿ [[ಜಿ.ಕೆ.ವೆಂಕಟೇಶ್]] ಓಹಿಲೇಶ್ವರ ಚಿತ್ರಕ್ಕೆ ವಿಜಯನಾರಸಿಂಹ ಅವರನ್ನು ಚಿತ್ರಸಾಹಿತಿಯಾಗಿ ಕರೆತಂದರು. ಆ ಚಿತ್ರಕ್ಕೆ ವಿಜಯನಾರಸಿಂಹರು ಬರೆದ ‘ಈ ದೇಹದಿಂದ ದೂರನಾದೆ ಏಕೆ ಆತ್ಮನೇ’ ಎಂಬುದು ಅವರ ಮೊದಲ ಚಿತ್ರಗೀತೆಯಾಗಿ, ಇಂದಿಗೂ ಪ್ರಸಿದ್ಧಿಯಾಗಿದೆ.
 
== ಕೆಲವು ಜನಪ್ರಿಯ ಹಾಡುಗಳು ==
==ಒಂದಕ್ಕಿಂತ ಒಂದು ಶ್ರೇಷ್ಠ ಗೀತೆಗಳು==
ಮುಂದೆ ಅವರು ಬರೆದ ಹಾಡುಗಳು ಒಂದಕ್ಕಿಂತ ಒಂದು ಮಹತ್ವಪೂರ್ಣವಾದುದು. ‘ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ’, 'ನೋಡು ಬಾ ನೋಡು ಬಾ ನಮ್ಮೂರ', ‘ಪಂಚಮವೇದ ಪ್ರೇಮದ ನಾದ’, ‘ಬಾರೆ ಬಾರೆ ಚಂದದ ಚೆಲುವಿನ ತಾರೆ’, ‘ಆಸೆಯ ಭಾವ ಒಲವಿನ ಜೀವ’, ‘ವಸಂತ ಬರೆದನು ಒಲವಿನ ಓಲೆ’, ‘ವಿರಹಾ ನೂರು ನೂರು ತರಹ’, ‘ಆಡೋಣಾ ನೀನು ನಾನು’, ‘ನೀತಿವಂತ ಬಾಳಲೇ ಬೇಕು’, ‘ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ’, ‘ಭಾರತ ಭೂಶಿರ ಮಂದಿರ ಸುಂದರಿ’, ‘ಆ ದೇವರೆ ನುಡಿದ ಮೊದಲ ನುಡಿ’, ‘ಯಾವ ತಾಯಿಯು ಹಡೆದ ಮಗಳಾದರೇನು’, ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ’, ‘ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ’, ‘ಸಂದೇಶ ಮೇಘ ಸಂದೇಶ’, ‘ಹದಿನಾಲ್ಕು ವರುಷ ವನವಾಸದಿಂದ ಮರಳಿ ಬಂದಳು ಸೀತೆ’, ‘ನಿಲ್ಲು ನಿಲ್ಲೇ ಪತಂಗ’, ‘ಪ್ರೀತಿನೇ ಆ ದ್ಯಾವ್ರು ತಂದ ಆಸ್ಥಿ ನಮ್ಮ ಬಾಳಿಗೆ’, ‘ಕಾಪಾಡು ಶ್ರೀ ಸತ್ಯನಾರಾಯಣ’, ‘ಟೂ ಟೂ ಟೂ ಬೇಡಪ್ಪ ಓಡಿ ಬಂದು ನನ್ನ ಸಂಗ ಕಟ್ಟಪ್ಪ’, ‘ಸಂಗಮ ಅನುರಾಗ ತಂದ ಸಂಗಮ’, ‘ಸೇವಂತಿಗೆ ಚಂಡಿನಂತ ಮುದ್ದು ಕೋಳಿ’, ‘ನಗುವಿನ ಅಳುವಿನ ಸಂಕೋಲೆ’, ‘ಬಂದಿದೆ ಬದುಕಿನ ಬಂಗಾರದಾ ದಿನ’, ‘ಹನಿ ಹನಿಗೂಡಿದ್ರೆ ಹಳ್ಳ’ , ‘ಏನೇ ಸುಬ್ಬಿ ತುಂಬ ಕೊಬ್ಬಿ’, ‘ಹಿಂದೂಸ್ಥಾನವು ಎಂದೂ ಮರೆಯದ’, ‘ನೀನೇ ಸಾಕಿದಾ ಗಿಣಿ’, ‘ಕೇಳು ಮಗುವೆ ಕಥೆಯಾ ಆಸೆ ತಂದ ವ್ಯಥೆಯಾ’, 'ಸಕಲ ಕಾರ್ಯ ಕಾರಣಗೆ ಸಾಷ್ಟಾಂಗ ವಂದನೆ' ಮುಂತಾದ ಸಹಸ್ರಾರು ಹಾಡುಗಳನ್ನು ವಿಜಯನಾರಸಿಂಹ ಬರೆದರು. ನನಗೆ ವೈಯಕ್ತಿಕವಾದ ಇಂಥಹ ಪ್ರಿಯವಾದ ಹಾಡುಗಳೇ ಇನ್ನೂ ನೂರಾರು ಸಿಗುತ್ತವೆ.
 
==ಪ್ರಖ್ಯಾತ ಭಕ್ತಿಗೀತೆಗಳು==
ಭಕ್ತಿಗೀತೆಗಳಲ್ಲಿ ಇವತ್ತಿಗೂ ನಂಬರ್ ಆನ್ ಎನಿಸಿಕೊಂಡಿರುವ `ಗಜಮುಖನೆ ಗಣಪತಿಯೆ ನಿನಗೆ ವಂದನೆ’ಯನ್ನು ಬರೆದವರು ಇದೇ ವಿಜಯನಾರಸಿಂಹ. ಬಹುಶಃ ಇಂದೂ ಹೆಚ್ಚಿನ ರೀತಿಯಲ್ಲಿ ಪ್ರಚಲಿತವಿರುವ ‘ಭಾದ್ರಪದ ಶುಕ್ಲದ ಚೌತಿ’ಯಷ್ಟು ಖರ್ಚಾದ ಭಕ್ತಿಗೀತೆಯ ಕ್ಯಾಸೆಟ್ ಸಿ ಡಿ ಮತ್ತೊಂದು ಕನ್ನಡನಾಡಿನಲ್ಲಿ ಇರಲಾರದು. ಗಣೇಶನ ಹಬ್ಬ ನಮ್ಮ ಊರುಗಳಲ್ಲಿ ಈ ಹಾಡುಗಳಿಲ್ಲದೆ ನಡೆಯುವುದೇ ಇಲ್ಲ ಎಂದರೂ ಸರಿಯೇ. ಶರಣು ಶರಣಯ್ಯ ಶರಣು ಬೆನಕ ಈ ಕ್ಯಾಸೆಟ್ಟಿನ ಮತ್ತೊಂದು ಪ್ರಖ್ಯಾತ ಗೀತೆ. ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ಎಂಬುದು ಅವರ ಮತ್ತೊಂದು ಪ್ರಖ್ಯಾತ ಗೀತೆ.
"https://kn.wikipedia.org/wiki/ವಿಜಯನಾರಸಿಂಹ" ಇಂದ ಪಡೆಯಲ್ಪಟ್ಟಿದೆ