2020-21ರ ಭಾರತೀಯ ರೈತರ ಪ್ರತಿಭಟನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬೯ ನೇ ಸಾಲು:
*ದಿ.26-1-2021 ರಂದು ಟ್ರ್ಯಾಕ್ಟರ್‌ ರ್‍ಯಾಲಿ ಸಂದರ್ಭದಲ್ಲಿನ ಹಿಂಸಾಚಾರವು ‘ಪೂರ್ವಯೋಜಿತ ಸಂಚು’ ಎಂದು ಟೂಲ್‌ಕಿಟ್‌ ಪ್ರಕರಣದ "ಎಫ್‌ಐಆರ್‌"ನಲ್ಲಿ ಹೇಳಲಾಗಿದೆ. ಪ್ರತ್ಯೇಕತಾವಾದಿ ಧ್ವಜ ಹಾರಿಸಲು ಮತ್ತು ಹಿಂಸಾಚಾರ ನಡೆಸಲು ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯು 2.5 ಲಕ್ಷ ಡಾಲರ್‌ ಕೊಟ್ಟಿತ್ತು ಎಂದು ಎಫ್‌ಐಆರ್‌ನಲ್ಲಿ ಇದೆ. '''ಆದರೆ, ಜ. 26ರಂದು ಕೆಂಪುಕೋಟೆಯಲ್ಲಿ ಹಾರಿಸಿದ್ದು ಧಾರ್ಮಿಕ ಧ್ವಜ. ಪ್ರತ್ಯೇಕವಾದಿ ಖಾಲಿಸ್ತಾನ ಧ್ವಜ ಅಲ್ಲ.''' ಶಾಂತಿಯುತವಾಗಿ ಟ್ರ್ಯಾಕ್ಟರ್‌ ರ್‍ಯಾಲಿ ನಡೆಸಲು ರೈತರು ಒಪ್ಪಿದ್ದರು. ಆದರೆ, ಟೂಲ್‌ಕಿಟ್‌ನ ಹಿಂದಿರುವ ಶಕ್ತಿಗಳೇ ಗಲಭೆಗೆ ಕುಮ್ಮಕ್ಕು ಕೊಟ್ಟಿವೆ ಎಂದು ಪೊಲೀಸರು ಆರೋಪಿಸಿದ್ದಾರೆ. ‘ಪಂಜಾಬ್‌ ಅನ್ನು *ಭಾರತದಿಂದ ಪ್ರತ್ಯೇಕಿಸಿ ಖಾಲಿಸ್ತಾನ ಎಂದು ಘೋಷಿಸಬೇಕು ಎಂದು ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯು ಬಹಳ ಹಿಂದಿನಿಂದಲೂ ಪ್ರತಿಪಾದಿಸುತ್ತಿದೆ. ರೈತರ ಪ್ರತಿಭಟನೆಯನ್ನು ಮುಂದಿರಿಸಿಕೊಂಡು ತನ್ನ ಕಾರ್ಯಸೂಚಿಯನ್ನು ಮುಂದಕ್ಕೆ ತರುತ್ತಿದೆ. ಜನರಿಗೆ ಹಣ ನೀಡಿ, ಅಕ್ರಮವನ್ನು ಪ್ರಚೋದಿಸುವ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಈ ಸಂಘಟನೆಯು ಹಿಂಸೆಗೆ ಕುಮ್ಮಕ್ಕು ನೀಡಿದೆ’ ಎಂದು ಎಫ್‌ಐಆರ್‌ನಲ್ಲಿ ಇದೆ.
*ಈ ಟೂಲ್‌ಕಿಟ್‌ ಅನ್ನು ಗ್ರೇಟಾ ಅವರಿಗೆ ನೀಡಿದ್ದು ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ. ದಿಶಾ, ಮುಂಬೈನ ವಕೀಲೆ ನಿಕಿತಾ ಜೇಕಬ್‌ ಮತ್ತು ಬೀಢ್‌ನ ಶಾಂತನು ಮುಲುಕ್‌ ಹಾಗೂ ಇತರರು ಈ ಟೂಲ್‌ಕಿಟ್‌ ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಈ ಆರೋಪವನ್ನು ಈ ಎಲ್ಲರೂ ನಿರಾಕರಿಸಿದ್ದಾರೆ. <ref>[https://www.prajavani.net/india-news/activist-disha-ravi-arrested-for-farmers-protest-toolkit-806699.html ಟೂಲ್‌ಕಿಟ್‌ ಎಫ್‌ಐಆರ್‌: ‘ಹಿಂಸೆಗೆ ಪ್ರತ್ಯೇಕತೆ ಕುಮ್ಮಕ್ಕು’;; ಪ್ರಜಾವಾಣಿ ವಾರ್ತೆ Updated: 19 ಫೆಬ್ರವರಿ 2021]</ref>
===ಹುತಾತ್ಮರ ಸ್ಮಾರಕ===
 
*ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ 320 ರೈತರು ಸಾವನ್ನಪ್ಪಿದ್ದಾರೆ. ಸಾಮಾಜಿಕ ಕಾರ್ಯಕರ್ತರು ‘ಹುತಾತ್ಮರ ಸ್ಮಾರಕ‘ ನಿರ್ಮಾಣಕ್ಕಾಗಿ ಎಲ್ಲ ಮೃತ ರೈತರ ಹಳ್ಳಿಗಳಿಂದ ಮಣ್ಣನ್ನು ಸಂಗ್ರಹಿಸಿ ಪ್ರತಿಭಟನಾ ಸ್ಥಳಕ್ಕೆ ತಂದಿದ್ದಾರೆ. ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಸಾವನ್ನಪ್ಪಿದ ರೈತರ ಸ್ಮರಣಾರ್ಥ ಪ್ರತಿಭಟನಾ ಸ್ಥಳ ‘ಗಾಜಿಪುರ–ಗಾಜಿಯಾಬಾದ್‌(ಉತ್ತರ ಪ್ರದೇಶದ ಗಡಿ)ಗಡಿಯಲ್ಲಿ ‘ಹುತಾತ್ಮರ ಸ್ಮಾರಕ' ನಿರ್ಮಾಣಕ್ಕೆ ಭಾರತೀಯ ಕಿಸಾನ್‌ ಒಕ್ಕೂಟ(ಬಿಕೆಯು) ಅಡಿಗಲ್ಲು ಹಾಕಿದೆ. ಬಿಕೆಯು ಮುಖಂಡ ರಾಕೇಶ್ ಸಿಂಗ್ ಟಿಕಾಯತ್, ಸಾಮಾಜಿಕ ಹೋರಾಟಗಾರ್ತಿ ಮೇಧಾಪಾಟ್ಕರ್ ಅವರು ಮಂಗಳವಾರ ‘ಹುತಾತ್ಮ ಸ್ಮಾರಕ‘ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. <ref>[https://www.prajavani.net/india-news/foundation-laid-for-memorial-delhi-to-farmers-who-died-during-course-of-protest-against-agri-laws-820143.htmlದೆಹಲಿಯ ಗಡಿಯಲ್ಲಿ ಹುತಾತ್ಮರ ಸ್ಮಾರಕ
ಪಿಟಿಐ‌ Updated: 07 ಏಪ್ರಿಲ್ 2021]</ref>
==ಬೆಂಬಲ==
====ಗ್ರೆಟಾ ಥನ್‌ಬರ್ಗ್‌ ಬೆಂಬಲ====
*ದಿ.19 ಫೆಬ್ರವರಿ 2021- ಟೂಲ್‌ಕಿಟ್‌ ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನಲ್ಲಿರುವ ಪರಿಸರ ಹೋರಾಗಾರ್ತಿ ಬೆಂಗಳೂರಿನ ದಿಶಾ ರವಿ ಅವರಿಗೆ ಅಂತರರಾಷ್ಟ್ರೀಯ ಪರಿಸರ ಹೋರಾಟಗಾರ್ತಿ [[ಗ್ರೇಟಾ ಥನ್‍ಬರ್ಗ್|ಗ್ರೆಟಾ ಥನ್‌ಬರ್ಗ್‌]] ಬೆಂಬಲ ಸೂಚಿಸಿದದರು.'ವಾಕ್ ಸ್ವಾತಂತ್ರ್ಯ, ಶಾಂತಿಯುತ ಪ್ರತಿಭಟನೆ ಮತ್ತು ಸಭೆ ಸೇರುವ ಹಕ್ಕು ಚೌಕಾಸಿ ಇಲ್ಲದ ಮಾನವ ಹಕ್ಕುಗಳಾಗಿವೆ. ಇವು ಯಾವುದೇ ಪ್ರಜಾಪ್ರಭುತ್ವದ ಮೂಲಭೂತ ಅಂಶವಾಗಿರಬೇಕು,' ಎಂದು ಗ್ರೆಟಾ ಪ್ರತಿಪಾದಿಸಿದ್ದಾರೆ. ಅಲ್ಲದೆ, ಈ ಟ್ವೀಟ್‌ ನೊಂದಿಗೆ ಗ್ರೆಟಾ ಅವರು #StandWithDishaRavi ಎಂಬ ಹ್ಯಾಷ್‌ ಟ್ಯಾಗ್‌ ಅನ್ನೂ ಬಳಸಿದ್ದಾರೆ.<ref>[https://www.prajavani.net/india-news/greta-tweets-in-support-of-arrested-22-year-old-activist-disha-ravi-806913.html ದಿಶಾ ರವಿ ಬೆಂಬಲಿಸಿದ ಗ್ರೆಟಾ: ಮಾನವ ಹಕ್ಕು ಪ್ರತಿಪಾದನೆ; ಪ್ರಜಾವಾಣಿ ವೆಬ್‌ ಡೆಸ್ಕ್‌ Updated: 19 ಫೆಬ್ರವರಿ 2021]</ref>