ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೧೨೨ ನೇ ಸಾಲು:
==ಭಾರತಕ್ಕೆ ಆರು ರಫೇಲ್ ವಿಮಾನದ ಆಗಮನ==
*ದಿ.೨೯-೭-೨೦೨೦ ರಂದು ಬಾರತಕ್ಕೆ ಯುದ್ಧವಿಮಾನ ಖರೀದಿಯ ಫ್ರಾನ್ಸ್–ಭಾರತದ ನಡುವೆ ಒಪ್ಪಂದ ಏರ್ಪಟ್ಟ ನಾಲ್ಕು ವರ್ಷಗಳ ಬಳಿಕ ಮೊದಲ ತಂಡದಲ್ಲಿ ಐದು ವಿಮಾನಗಳು ಭಾರತಕ್ಕೆ ಬರುತ್ತಿವೆ.ಈ ಹಿಂದೆ ಒಂದು ವಿಮಾನವನ್ನು ಹಸ್ತಾರಿಸಲಾಗಿತ್ತು. ಇನ್ನು ಐದು ವಿಮಾನಗಳನ್ನು ಫ್ರಾನ್ಸ್ನಲ್ಲಿ ತರಬೇತಿಗೆ ಬಳಸಿಕೊಳ್ಳಲಾಗುತ್ತಿದೆ. ಫ್ರಾನ್ಸ್ನಿಂದ ಮೊದಲ ಹಂತದ ಐದು ರಫೇಲ್ ಯುದ್ಧ ವಿಮಾನಗಳು 29-7-2020 ಮಧ್ಯಾಹ್ನ ಅಂಬಾಲ ವಾಯುನೆಲೆಗೆ ಬಂದಿಳಿದಿವೆ.
*ವಿವಾದ:ಯುಪಿಎ ಅವಧಿಯಲ್ಲಿ ರೂ.526 ಕೋಟಿಗೆ ಒಂದು ವಿಮಾನದಂತೆ ಎಂದು ಒಪ್ಪಂದದಲ್ಲಿ 126 ವಿಮಾನ ಖರೀದಿ ನಿಗದಿಯಾಗಿತ್ತು. ಆದರೆ ಅದನ್ನು ರದ್ದು ಮಾಡಿ ಎನ್. ಡಿ.ಎ. ಮಾಡಿಕೊಂಡ ಹೊಸ ಒಪ್ಪಂದದಲ್ಲಿ ಅದು ಒಂದು ವಿಮಾನಕ್ಕೆ ರೂ.1,555 ಕೋಟಿಗೆ ಏರಿತು. ಫ್ರಾನ್ಸ್ನ ಡಾಸೋ ಏವಿಯೇಷನ್ನ ಭಾರತೀಯ ಪಾಲುದಾರ ಸಂಸ್ಥೆಯಾಗಿ ರಿಲಯನ್ಸ್ ಡಿಫೆನ್ಸ್ ಆಯ್ಕೆಯಾಗಿತ್ತು. ರೂ.59 ಸಾವಿರ ಕೋಟಿಯ ಈ ಖರೀದಿ ಒಪ್ಪಂದದಲ್ಲಿ ಸರ್ಕಾರಿ ಸ್ವಾಮ್ಯದ ಎಚ್ಎಎಲ್ ಬದಲಿಗೆ ಅನಿಲ್ ಅಂಬಾನಿ ಮಾಲೀಕತ್ವದ ಸಂಸ್ಥೆಯನ್ನು ಸಹಭಾಗಿಯಾಗಿ ಆಯ್ಕೆ ಮಾಡಿರುವುದರಲ್ಲಿ ಅಕ್ರಮ ನಡೆದಿದೆ ಎಂದು ವಿರೋಧ ಪಕ್ಷಗಳುಆರೋಪಿಸುತ್ತಿದೆ. ರಫೇಲ್ ದಾಖಲೆಗಳು ಕಳವಾಗಿವೆ ಎಂಬ ಸರ್ಕಾರದ ಹೇಳಿಕೆ ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು 2019ರ ನವೆಂಬರ್ನಲ್ಲಿ ಕೋರ್ಟ್, ಅರ್ಜಿಗಳನ್ನು ವಜಾಗೊಳಿಸಿತ್ತು.<ref>[https://www.prajavani.net/stories/india-news/rafale-have-entered-indian-airspace-escorted-by-sukhois-land-at-the-ambala-air-force-base-air-chief-749031.html ಅಂಬಾಲ ವಾಯುನೆಲೆಯಲ್ಲಿ ರಫೇಲ್: ವಾಯುಪಡೆಗೆ ಭೀಮಬಲ ;d: 29 ಜುಲೈ 2020,]</ref><ref>[https://www.prajavani.net/stories/india-news/first-batch-of-rafales-for-india-leaves-france-748623.html ಭಾರತಕ್ಕೆ ‘ರಫೇಲ್ ಬಲ’;ಪ್ರಜಾವಾಣಿ;d: 28 ಜುಲೈ 2020,]</ref>
===ಭಾರತದ ಮಧ್ಯವರ್ತಿಗೆ ಹಣ===
*ರಫೇಲ್ ಜೆಟ್ಗಳ ತಯಾರಕರಾದ ಡಸಾಲ್ಟ್, 2016 ರಲ್ಲಿ ಇಂಡೋ-ಫ್ರೆಂಚ್ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಭಾರತೀಯ ಮಧ್ಯವರ್ತಿಗೆ ಒಂದು ಮಿಲಿಯನ್ ಯೂರೋ ಪಾವತಿಸಲು ಒಪ್ಪಿಕೊಂಡರು ಎಂದು ಫ್ರೆಂಚ್ ಪ್ರಕಟಣೆಯೊಂದರ ತನಿಖೆಯ ಪ್ರಕಾರ ಅಕ್ರಮವನ್ನು ಮೊದಲು ಫ್ರೆಂಚ್ ಭ್ರಷ್ಟಾಚಾರ-ವಿರೋಧಿ ಏಜೆನ್ಸಿಯ ಇನ್ಸ್ಪೆಕ್ಟರ್ಗಳು, ಎಜೆನ್ಸ್ ಫ್ರಾಂಕೈಸ್ ಆಂಟಿಕರ್ರಪ್ಷನ್ (ಎಎಫ್ಎ) ಪತ್ತೆಹಚ್ಚಿದ್ದಾರೆ. ಅಕ್ರಮವನ್ನು ಮೊದಲು ಫ್ರೆಂಚ್ ಭ್ರಷ್ಟಾಚಾರ-ವಿರೋಧಿ ಏಜೆನ್ಸಿಯ ಇನ್ಸ್ಪೆಕ್ಟರ್ಗಳು, ಎಜೆನ್ಸ್ ಫ್ರಾಂಕೈಸ್ ಅಂಟಿಟಿಕರ್ರಪ್ಷನ್ (ಎಎಫ್ಎ) ಪತ್ತೆಹಚ್ಚಿದ್ದಾರೆ.
ಡಸಾಲ್ಟ್ ಗುಂಪಿನ 2017 ರ ಖಾತೆಗಳಲ್ಲಿ '''"ಗ್ರಾಹಕರಿಗೆ ಉಡುಗೊರೆಗಳು" ಮುಖ್ಯಸ್ಥರ ಅಡಿಯಲ್ಲಿ 508,925 ಯೂರೋ (ರೂ.94.93 ಕೋಟಿ) ಮೊತ್ತವನ್ನು ಪಾವತಿಸಲಾಗಿದೆ''' ಎಂದು ಆರೋಪಿಸಲಾಗಿದೆ <ref>[https://www.indiatoday.in/india/story/dassault-paid-1-million-euros-as-gift-to-indian-middleman-in-rafale-deal-french-report-1787202-2021-04- 05 - Dassault paid 1 million euro as 'gift' to Indian middleman in Rafale deal: French report--Ankit Kumar- New Delhi- April 5, 2021; UPDATED: April 5, 2021]</ref> <ref>[https://www.prajavani.net/india-news/congress-seeks-probe-in-fresh-bribery-allegations-in-rafale-deal-819637.html ಪ್ರಜಾವಾಣಿ ವಾರ್ತೆ Updated: 05 ಏಪ್ರಿಲ್ 2021,]</ref>
==ನೋಡಿ==
|