ಮಹಾವೀರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೦ ನೇ ಸಾಲು:
[[ಅವಿದ್ಯೆ]]ಅಥವಾ ಅಜ್ಞಾನದಿಂದಾಗಿ ಜೀವ ಅಜೀವದೊಂದಿಗೆ ಸಂಪರ್ಕಕ್ಕೆ ಬರುತ್ತದೆ. ಜೀವದ ಸ್ವರೂಪ ಚೈತನ್ಯ; ಅಜೀವದ ಸ್ವರೂಪ ಜಡ. ಜೀವ ನಿತ್ಯ ಆನಂದಸ್ವರೂಪಿಯಾದರೂ ಈ ಅಜೀವದ, ಜಡತ್ವದ ಅಥವಾ ‘ಪುದ್ಗಲ’ದ ಮಾಲಿನ್ಯದೊಂದಿಗೆ ಬೆರೆತು ಕಳಾಹೀನವಾಗಿದೆ. ಆದ್ದರಿಂದಲೇ ಚೈತನ್ಯಸ್ವರೂಪರಾದ ನಾವು ಈ ಜಗತ್ತಿನೊಂದಿಗೆ ಬೆರೆತು ಅಜ್ಞಾನಿಗಳಾಗಿ ದುಃಖಪಡುತ್ತಿದ್ದೇವೆ; ಈ ಜಗತ್ತನ್ನೇ ಸರ್ವಸ್ವ ಎಂದು ತಿಳಿದು ಆಸೆಗಳಿಗೆ ವಶರಾಗಿ ನಾನಾ ಕರ್ಮಗಳನ್ನು ಮಾಡುತ್ತಿದ್ದೇವೆ; ಪಾಪ=ಪುಣ್ಯಗಳ ಭೇದವನ್ನೇ ಮರೆತಿದ್ದೇವೆ. [[ಅವಿದ್ಯೆ]]ಯಿಂದ ಆಸೆಗಳು, ಆಸೆಗಳಿಂದಾಗಿ ಕರ್ಮಗಳು, ಕರ್ಮಗಳಿಂದಾಗಿ ಜೀವದಲ್ಲಿ ಪುದ್ಗಲ, ಪುದ್ಗಲದಿಂದಾಗಿ ದುಃಖ, ದುಃಖದಿಂದಾಗಿ ಮೃತ್ಯು, ಮೃತ್ಯುವಿನ ನಂತರ ಜನ್ಮ, ಮತ್ತೆ ಆಸೆ, ಮತ್ತೆ ಪಾಪಕೃತ್ಯ, ಮತ್ತೆ ದುಃಖ – ಈ ವಿಷವರ್ತುಲದಲ್ಲಿ ನಾವು ಸಂಕಟಪಡುತ್ತಿದ್ದರೂ, ‘ಬಹಳ ಚೆನ್ನಾಗಿದ್ದೇವೆ’ ಎಂದು ಭಾವಿಸುತ್ತೇವೆ.
 
ಈ ಅಜ್ಞಾನ ಮತ್ತು ಕರ್ಮಗಳ ಬಂಧನದಿಂದ ಹೇಗೆ ಬಿಡಿಸಿಕೊಳ್ಳುವುದು? ಬಿಡಿಸಿಕೊಂಡು ಜೀವವನ್ನು ಅಜೀವ ಅಥವಾ ಪುದ್ಗಲಶೂನ್ಯವಾಗಿ ಮಾಡಿ ‘ಸುಷಮಾ-ಸುಷಮಾ’ ಸ್ಥಿತಿಯ ಶಾಂತಿ, ಪ್ರೀತಿ, ಆನಂದಗಳನ್ನು ಮತ್ತೆ ಅನುಭವಿಸುವುದು ಹೇಗೆ? - ಇದನ್ನೇ ಜೈನಧರ್ಮ ಹೇಳಿಕೊಡುತ್ತದೆ.
 
==ಸಂವರಣ==
"https://kn.wikipedia.org/wiki/ಮಹಾವೀರ" ಇಂದ ಪಡೆಯಲ್ಪಟ್ಟಿದೆ