ಸುಬ್ರಮಣಿಯನ್ ಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೮೨ ನೇ ಸಾಲು:
 
==ಸ್ವಾಮಿ ರಾಜಕೀಯ ಜೀವನ==
ಸ್ವಾಮಿ ಯವರ ನಿಜವಾದ ರಾಜಕೀಯ ಜೀವನ ಆರಂಭವಾಗಿದ್ದು [[ಭಾರತೀಯ ತಂತ್ರಜ್ಞಾನ ಸಂಸ್ಥೆ]](IIT)ಯಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರನ್ನು ಉಚ್ಚಾಟಿಸಿದ ನಂತರ. ಸ್ವಾಮಿ ಯವರು ಕೊಟ್ಟ ಆರ್ಥಿಕ ಉದಾರೀಕರಣದ ನೀತಿ ನಿಯಮಗಳು ಆರ್ಥಿಕತೆಯನ್ನು ಸುಧಾರಿಸುವಲ್ಲಿ ಸಂಪೂರ್ಣ ವಿಫಲವಾದ ಕಾರಣವೇ ಸ್ವಾಮಿ ಯವರನ್ನು IITಯಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ವೃತ್ತಿಯಿಂದ ಉಚ್ಚಾಟಿಸಲು ಮುಖ್ಯ ಕಾರಣ. ಅರ್ಥಿಕ ಉದಾರೀಕರಣ ನೀತಿಯಲ್ಲಿ ದೇಶ ಬೆಳವಣಿಗೆ ಹೊಂದುವುದು ಸಾಧ್ಯವಿದೆ ಎನ್ನುವುದು ಸ್ವಾಮಿ ಯವರ ನಿಲುವಾದರೆ, ಆಗಿನ ಪ್ರಧಾನಿ ಇಂದಿರಾ ಗಾಂಧಿ ಸೊವಿಯಟ್ ಒಕ್ಕೂಟ ಮಾದರಿಯ ಆರ್ಥಿಕ ನೀತಿಗಳಲ್ಲಿ ಹೆಚ್ಚಿನ ಆಸಕ್ತಿ ಉಳ್ಳವರಾಗಿದ್ದರು. ಆದರೆ ಅಂತಹ ಆರ್ಥಿಕತೆಯಲ್ಲಿ ಬೆಳವಣಿಗೆ ಅತೀ ಕಡಿಮೆ ಇರುತ್ತದೆ, ಇದು ದೇಶದ ಸರ್ವಾಂಗೀಣ ಬೆಳವಣಿಗೆಯ ಮೇಲೆ ಪ್ರಭಾವ ಬೀರಿ ಸಂಪೂರ್ಣ ಆರ್ಥಿಕತೆಯನ್ನು ಕುಂಠಿತಗೊಳಿಸುತ್ತದೆ ಎಂಬ ವಾದವನ್ನು ಸ್ವಾಮಿ ಮಂಡಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಇಂದಿರಾ ಗಾಂಧಿ "ಸ್ವಾಮಿ ಒಬ್ಬ ಸಂತಾ ಕ್ಲಾಸ್ ನಂತೆ ನಿಜವಾಗಿರದ ಯೋಚನೆಗಳನ್ನಷ್ಟೇ ಹೊತ್ತು ತಿರುಗುವ ಮನುಷ್ಯ" ಎಂದು ಜರೆದಿದ್ದರು. ಇನ್ನೂ ಮುಂದುವರೆದು ಸ್ವಾಮಿ ಯವರನ್ನು IITಯಿಂದ ಉಚ್ಚಾಟಿಸುವಂತೆ ಅಧಿಕಾರಿಗಳಿಗೆ ಆಜ್ಞೆ ಮಾಡುತ್ತಾರೆ. ಮುಂದೆ ಅದೇ ಸಂಬಂಧಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ಸ್ವಾಮಿ ಸತತ ೨೨ ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ IITಯಿಂದ ತಮ್ಮನ್ನು ಉಚ್ಚಾಟಿಸಿದ್ದು ನಿಯಮಾವಳಿಗಳಿಗೆ ವಿರುದ್ಧವಾಗಿದ್ದು ಎಂದು ಸಾಧಿಸಿದರು<ref>{{cite web|url=https://zeenews.india.com/news/nation/hc-swamys-plea-for-recovery-of-dues-from-iit_760640.html |title=ಸುಬ್ರಮಣಿಯನ್ ಸ್ವಾಮಿ ಅವರ ದೆಹಲಿ IIT ದಾವೆ ಕುರಿತ ಕಲಾಪಕ್ಕೆ ದೆಹಲಿ ಹೈ ಕೋರ್ಟ್ ಅಸ್ತು: ಜೀ ನ್ಯೂಸ್ ಆಂಗ್ಲ ವರದಿ ತಾಣ}}</ref>. ಕೊನೆಗೆ ಆ ಸಂಪೂರ್ಣ ೨೨ ವರ್ಷದ ಸ್ವಾಮಿಯವರ ಸಂಬಳ ವನ್ನು IITಯು ಸ್ವಾಮಿ ಯವರಿಗೆ ತಲುಪಿಸಬೇಕು ಎಂದು ಕೋರ್ಟ್ IITಗೆ ನಿರ್ದೇಶನ ನೀಡಿತು. ಆದರೆ ಅಷ್ಟರಲ್ಲಿ ಆ ಉಚ್ಚಾಟನೆಗೆ ಮುಖ್ಯ ಕಾರಣರಾಗಿದ್ದ ಇಂದಿರಾ ಗಾಂಧಿ ಬದುಕಿರಲಿಲ್ಲ.ದೇಶದಲ್ಲಿ ಆಗ್ಗೆ ಮಂಚೂಣಿಯಲ್ಲಿದ್ದ ನಾಯಕಿ ಇಂದಿರಾ ಗಾಂಧಿ ವಿರೋಧ ಕಟ್ಟಿಕೊಂಡು IITಯಿಂದ ಹೊರಬಿದ್ದ ಸ್ವಾಮಿ ಯವರನ್ನು ಸ್ವಾಗತಿಸಿದ್ದು ಬಲ ಪಂಥೀಯ ವಿಚಾರಗಳಿಂದ ಪ್ರಭಾವಿತವಾಗಿದ್ದ '''''ಜನಸಂಘ್''''' ಪಕ್ಷ.
 
ಅದೇ ಪಕ್ಷದಿಂದ ಉತ್ತರ ಪ್ರದೇಶ ಕ್ಷೇತ್ರದಿಂದ ಚುನಾಯಿತರಾಗಿ ರಾಜ್ಯಸಭೆಗೂ ಸ್ವಾಮಿ ಪದಾರ್ಪಣೆ ಮಾಡಿದರು. ಇಂದಿರಾಗಾಂಧಿಗೆ ಕೇಂದ್ರದಲ್ಲಿ ಪ್ರಬಲ ಎದುರಾಳಿಗಳ ಕೊರತೆ ಎದುರಿಸುತ್ತಿದ್ದ ಕಾರಣ ಹಾಗು ಸ್ವಾಮಿ ಅದಾಗಲೇ ಇಂದಿರಾ ಗಾಂಧಿ ವಿರೋಧ ಕಟ್ಟಿಕೊಂಡಿದ್ದ ಹಿನ್ನೆಲೆ ಅರಿತು ಸ್ವಾಮಿಯವರೇ ಇಂದಿರಾ ಗಾಂಧಿ ಪ್ರ್ರಬಲ ವಿರೋಧವೊಡ್ಡಬಲ್ಲರು ಎಂದು ಅರಿತು ಜನಸಂಘ್ ಪಕ್ಷ ರಾಜ್ಯಸಭೆಯಲ್ಲಿ ಸ್ವಾಮಿ ಇರುವಂತೆ ನೋಡಿಕೊಂಡಿತು. ೧೯೭೪ ರಿಂದ ೧೯೯೯ ರವರೆವಿಗೂ ಸಂಸತ್ ನಲ್ಲಿ ಒಂದಲ್ಲ ಒಂದು ಹುದ್ದೆಯನ್ನು ಅಲಂಕರಿಸಿಯೇ ಇದ್ದರು ಸ್ವಾಮಿ, ಎರಡು ಬಾರಿ ರಾಜ್ಯ ಸಭಾ ಸದಸ್ಯರಾಗಿ ಉತ್ತರ ಪ್ರದೇಶ ರಾಜ್ಯದಿಂದ ಚುನಾಯಿತರಾದರೆ ಇನ್ನೆರಡು ಬಾರಿ ಲೋಕಸಭಾ ಕ್ಷೇತ್ರಗಳಲ್ಲಿ ನೇರವಾಗಿ ಚುನಾವಣೆಗೆ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸಿ ಕೇಂದ್ರ ಮಂತ್ರಿಯ ಪದವಿಯನ್ನು ಅಲಂಕರಿಸಿದ್ದರು. ಇದೀಗ ಮೂರನೇ ಬಾರಿ ರಾಜ್ಯಸಭೆ ಪ್ರವೇಶಿಸಿರುವ ಸ್ವಾಮಿ ಉನ್ನತ ವ್ಯಕ್ತಿತ್ವದ ಆಧಾರದ ಮೇಲೆ ರಾಷ್ಟ್ರ ಪತಿಗಳಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
೧೧೪ ನೇ ಸಾಲು:
 
===ನ್ಯಾಷನಲ್ ಹೆರಾಲ್ಡ್ ಹಗರಣ===
ಕಾಂಗ್ರೆಸ್ ಅಧ್ಯಕ್ಷೀಯ ಮನೆತನದವರಾದ [[ಸೋನಿಯಾ ಗಾಂಧಿ]] ಹಾಗು [[ರಾಹುಲ್ ಗಾಂಧಿ]] 'ಅಸೋಸಿಯೇಟೆಡ್ ಜರ್ನಲ್ಸ್ ಪ್ರೈವೇಟ್ ಲಿಮಿಟೆಡ್' (ಎ ಜೆ ಪಿ ಎಲ್ ) ಎಂಬ ಹೆಸರಿನ ಸಾರ್ವಜನಿಕ ಕಂಪನಿಯೊಂದರ ಆಸ್ತಿಯನ್ನು ತಮ್ಮ ಖಾಸಗಿ ಕಂಪನಿ 'ಯಂಗ್ ಇಂಡಿಯಾ' ಹೆಸರಿನ ಮೂಲಕ ಪರಭಾರೆ ಮಾಡುವ ಮೂಲಕ ಸುಮಾರು ೨೦ ಕೋಟಿ ರುಪಾಯಿ ವಂಚನೆ ಎಸಗಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ನವೆಂಬರ್ ೧, ೨೦೧೩ ರಲ್ಲಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು<ref>{{cite web|url=https://www.rediff.com/news/report/national-herald-case-what-you-should-know/20151209.htm |title=ನ್ಯಾಷನಲ್ ಹೆರಾಲ್ಡ್ ಹಗರಣದ ಕುರಿತಾಗಿ ರೆಡ್ಡಿಫ್ ತಾಣದ ಆಂಗ್ಲ ವರದಿ}}</ref><ref>{{cite web|url=https://indianexpress.com/article/explained/national-herald-case-where-the-matter-stands/ |title=ನ್ಯಾಷನಲ್ ಹೆರಾಲ್ಡ್ ಹಗರಣ ಕುರಿತು ಮೇಲ್ನೋಟ ಮಾಹಿತಿ, 'ದಿ ಇಂಡಿಯನ್ ಎಕ್ಸ್ಪ್ರೆಸ್' ಆಂಗ್ಲ ವೃತ್ತಪತ್ರಿಕೆಯ ವರದಿ}}</ref>. ಎ ಜೆ ಪಿ ಎಲ್ ಅನ್ನು ಯಂಗ್ ಇಂಡಿಯಾ ಕಂಪನಿ ಆಕ್ರಮಿಸಿಕೊಳ್ಳುವ ಮೂಲಕ '[[ನ್ಯಾಷನಲ್ ಹೆರಾಲ್ಡ್]]' ಹಾಗೂ 'ಕ್ವಾಮಿ ಅವಾಜ್' ಎಂಬ ಎರಡು ಪತ್ರಿಕೆಗಳ ಪ್ರಕಟಣೆ ಹಕ್ಕು ಮತ್ತು ಎ ಜೆ ಪಿ ಎಲ್ ದೆಹಲಿ ಹಾಗು ಉತ್ತರ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಆಸ್ತಿಗಳನ್ನು ಪಡೆಯಿತು ಎಂದು ದೂರಿನಲ್ಲಿ ನಮೂದಿಸಿದ್ದಾರೆ. ಇನ್ನು ಮುಂದುವರೆದು ಪತ್ರಿಕಾ ವಿಚಾರವಾಗಿ ವಿನಿಮಯವಾದ ಸ್ಥಳದಲ್ಲಿ ಸದ್ಯ ಒಂದು ಪಾಸ್ ಪೋರ್ಟ್ ಕಚೇರಿ ನಡೆಯುತ್ತಿದ್ದು ಅದರಿಂದ ಮಾಸಿಕ ಲಕ್ಷಾಂತರ ರುಪಾಯಿ ಆದಾಯ ಉತ್ಪತ್ತಿಯಾಗುತ್ತಿದೆ ಎನ್ನುವ ಅಂಶವನ್ನು ಸೇರಿಸಲಾಗಿದೆ.
 
ಪ್ರಕರಣ ಆಳಕ್ಕಿಳಿದಂತೆ ಹೊಸ ಹೊಸ ವಿಷಯಗಳನ್ನು ಸ್ವಾಮಿ ತೆರೆದಿಡುತ್ತಾ ಹೋದರು. ೨೦೧೧ರ ಫೆಬ್ರವರಿ ೨೬ ರಂದು ಎ ಜೆ ಪಿ ಎಲ್ ಯಾವುದೇ ಆಧಾರವಿಲ್ಲದೆ ಹಾಗು ಬಡ್ಡಿ ರಹಿತವಾಗಿ ೯೦೦ ಕೋಟಿ ರುಪಾಯಿಗಳನ್ನು [[ಅಖಿಲ ಭಾರತ ಕಾಂಗ್ರೆಸ್ ಸಮಿತಿ]]ಗೆ(AICC) ವರ್ಗಾಯಿಸುತ್ತದೆ. ಇದೆ ವಿಚಾರವನ್ನು ಹಿಡಿದು ಸ್ವಾಮಿ ಈ ಹಗರಣ ಆದಾಯ ತೆರಿಗೆ ಅಧಿನಿಯಮದ ೧೯೬೧ರ ಪರಿಚ್ಛೇದ ೨೬೯ಟಿ ಸ್ಪಷ್ಟ ಉಲ್ಲಂಘನೆ, ಆ ಕಾಯಿದೆಯ ಪ್ರಕಾರ ಯಾವ ರಾಜಕೀಯ ಪಕ್ಷಗಳು ಹಣ ಪಡೆಯಬೇಕಾದರೂ ಪಾಲಿಸುವ ಎಲ್ಲ ನಿಯಮಗಳನ್ನು 'ನ್ಯಾಷನಲ್ ಹೆರಾಲ್ಡ್' ವಿಚಾರದಲ್ಲಿ ಗಾಳಿಗೆ ತೂರಲಾಗಿದೆ ಎಂದು ಅಪಾದಿಸುತ್ತಾರೆ. ಇದಕ್ಕೆ ಕಾಂಗ್ರೆಸ್ ಪಕ್ಷ ಪ್ರತಿಕ್ರಿಯಿಸಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ನವೀಕರಣಕ್ಕಾಗಿ ಅಷ್ಟು ದೊಡ್ಡ ಮೊತ್ತದ ಸಾಲ ಪಡೆದಿರುವುದೇ ಪರಂತು ಅಲ್ಲಿ ಯಾವ ವ್ಯಾವಹಾರಿಕ ಹಿತಾಸಕ್ತಿಗಳು ಇಲ್ಲವೆಂದು ಉತ್ತರ ನೀಡುತ್ತದೆ.
೧೨೧ ನೇ ಸಾಲು:
==ಆರ್ಯ ಮತ್ತು ದ್ರಾವಿಡ ಜನಾಂಗಗಳ ಬಗ್ಗೆ ಸ್ವಾಮಿ ನಿಲುವು==
[[ಆರ್ಯ]]ರು [[ದ್ರಾವಿಡ]]ರು ಎಂಬ ವಿಚಾರವನ್ನು ಮೊದಲು ತೆಗೆದಿದ್ದು ಬ್ರಿಟೀಷರು. ೧೮೫೭ ರ ದಂಗೆಯ ವರೆವಿಗೂ [[ಹಿಂದೂ]] ಮತ್ತು ಮುಸ್ಲೀಂ ಗಳಿಗೆ ವಿರೋಧ ಉಂಟಾಗುವಂತೆ ಮಾಡಬಹುದು ಎಂಬ ಅರಿವೂ ಕೂಡ ಬ್ರಿಟೀಷರಿಗೆ ಇರಲಿಲ್ಲ. ಅದಕ್ಕಿಂತಲೂ ಮುಂಚೆ ಮೂಲತಹ ಕಪ್ಪು ಹಾಗು ಮಿಶ್ರಿತ ವರ್ಣಗಳಲ್ಲಿದ್ದ ಭಾರತದ ದಕ್ಷಿಣ ಪ್ರಾಂತ್ಯದ ಜನರನ್ನು ದ್ರಾವಿಡರು ಎಂದು ಕರೆದರು. ಅದಕ್ಕೆ ಅವರು ಆರಿಸಿಕೊಂಡ ಪ್ರಬಲ ದಾಖಲೆ [[ಆದಿ ಶಂಕರಾಚಾರ್ಯ]]ರು ತಮ್ಮ ಗ್ರಂಥಗಳಲ್ಲಿ ನಮೂದಿಸಿರುವ 'ದ್ರಾವಿಡ' ಎಂಬ ಪದ. ಹೀಗೆ ದ್ರಾವಿಡರು ಎನಿಸಿಕೊಂಡ ಜನಾಂಗಕ್ಕೂ ಹಾಗು ಉತ್ತರ ಭಾರತದಲ್ಲಿ ಬಹುಶಃ ಶ್ವೇತ ವರ್ಣದವರಾಗಿರುವ ಜನಾಂಗಕ್ಕೂ ಭೇದ ಕಲ್ಪಿಸುವುದನ್ನು ರೂಢಿ ಮಾಡಿಕೊಳ್ಳತೊಡಗಿದರು. ಉತ್ತರ ಭಾರತದ ಜನ ಮೂಲತಹ ಆರ್ಯರೆಂದು ಹಾಗು ಅವರು ಏಷ್ಯಾ ಖಂಡದ ಮಧ್ಯ ಪ್ರಾಚ್ಯ ರಾಷ್ಟ್ರಗಳಿಂದ ಭಾರತಕ್ಕೆ ವಲಸೆ ಬಂದವರೆಂದೂ, ಅವರು ಇಲ್ಲಿಗೆ ಬರುವ ಸಮಯದಲ್ಲಿ ಭಾರತ ಪೂರ್ತಿ ದ್ರಾವಿಡರ ಅಧೀನವಾಗಿತ್ತು ಆರ್ಯರು ದ್ರಾವಿಡರ ಮೇಲೆ ನಿರ್ದಾಕ್ಷಿಣ್ಯ ದಾಳಿ ಮಾಡಿ ದಕ್ಷಿಣ ದಿಕ್ಕಿಗೆ ಓಡಿಸಿ ಅಲ್ಲಿನ ಪ್ರದೇಶಗಳಲ್ಲಿ ತಮ್ಮದೇ ಸಾರ್ವಭೌಮತ್ವ ಘೋಷಿಸಿಕೊಂಡು ಬೀಡು ಬಿಟ್ಟರು ಎಂದು ನವಿರಾದ ಹೊಸ ಸುಳ್ಳು ಇತಿಹಾಸವನ್ನು ಸೃಷ್ಟಿ ಮಾಡಿದರು. ಆದರೆ ಸತ್ಯಾಂಶವೇ ಬೇರೆ ಯಾಗಿದ್ದು ಆದಿ ಶಂಕರರು ದಕ್ಷಿಣದಿಂದ ಉತ್ತರದೆಡೆಗೆ ಪ್ರಯಾಣಿಸುವ ಸಂಧರ್ಭದಲ್ಲಿ ತಮ್ಮ ಗುರುತಿನ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಅವರು "ನಾನೊಬ್ಬ ದ್ರಾವಿಡ ಶಿಶು" ಎಂದೇ ಉತ್ತರಿಸುತ್ತಿದ್ದರಂತೆ. ದ್ರಾವಿಡ ಎಂಬ ಪದವು 'ತ್ರ' ಮತ್ತು 'ವಿದ್' ಎಂಬ ಎರಡು ಪದಗಳ ಸಂಯೋಜನೆಯಿಂದ ಉತ್ಪತ್ತಿಯಾಗಿರುವ ಪದವಾಗಿದ್ದು, ಅದರ ಅರ್ಥ 'ಮೂರು ಸಮುದ್ರಗಳು ಕೂಡುವ ಭೂಬಾಗ' ಎಂದಾಗಿದೆ. ಇನ್ನು ದಕ್ಷಿಣ ಭಾರತೀಯರ ವರ್ಣದ ವಿಚಾರವಾಗಿ ಗಮನ ಹರಿಸಿದರೆ ದಕ್ಷಿಣ ಭಾರತ ಭೂಮಧ್ಯ ರೇಖೆಗೆ ಹತ್ತಿರವಿರುವುದರಿಂದ ಸೂರ್ಯನ ಕಿರಣಗಳು ಉತ್ತರ ಭಾರತಕ್ಕಿಂತಲೂ ದಕ್ಷಿಣ ದಲ್ಲಿ ನೇರವಾಗಿರುತ್ತವೆ. ಈ ಕಾರಣದಿಂದ ಕಾಲಾಂತರದಲ್ಲಿ ಇಲ್ಲಿನ ಜನಗಳ ಚರ್ಮ ಕಪ್ಪು ಬಣ್ಣಕ್ಕೆ ತಿರುಗಿದ್ದು ಅದಕ್ಕೆ ವಿಶೇಷ ಗಮನವೇನು ಕೊಡುವ ಅವಶ್ಯಕತೆ ಇಲ್ಲ ಎನ್ನವುದು ಸ್ವಾಮಿ ವೈಜ್ಞಾನಿಕ ಅಭಿಪ್ರಾಯ.
 
==ಉಲ್ಲೇಖಗಳು==
 
[[ವರ್ಗ:೧೯೩೯ ಜನನ]]