ಆಹಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೪ ನೇ ಸಾಲು:
===ಆಹಾರದ ಪೋಲು===
*ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮದಡಿ ತಯಾರಿಸಲಾದ ‘ಆಹಾರ ಪೋಲು ಸೂಚ್ಯಂಕ– 2021’ ರ ಪ್ರಕಾರ, 2019ರಲ್ಲಿ ಜಗತ್ತಿನಾದ್ಯಂತ 93.1 ಕೋಟಿ ಟನ್‌ನಷ್ಟು ಆಹಾರ ಪೋಲಾಗಿದೆ. ಇದರಲ್ಲಿ ಮನೆಗಳಲ್ಲೇ ಶೇ 61ರಷ್ಟು ಆಹಾರ ಪೋಲು ಆಗಿದೆ. ಶೇ 26ರಷ್ಟು ಆಹಾರ ತಯಾರಿಕಾ ಉದ್ದಿಮೆಗಳಿಂದ ಹಾಗೂ ಶೇ 13ರಷ್ಟು ಇತರ ಕಡೆಗಳಿಂದ ಪೋಲಾಗಿದೆ. ಜಾಗತಿಕ ಮಟ್ಟದಲ್ಲಿ ಉತ್ಪಾದಿಸಲಾಗುವ ಒಟ್ಟು ಆಹಾರ ಪದಾರ್ಥಗಳಲ್ಲಿ ಶೇ 17ರಷ್ಟು ಪೋಲಾಗಿದೆ ಎಂದು ವರದಿ ಹೇಳಿದೆ.
*ಪೋಲಾಗಿರುವ ಆಹಾರವನ್ನು ತಲಾ 40 ಟನ್‌ಗಳಂತೆ ಲಾರಿಗಳಲ್ಲಿ ತುಂಬಿ, ಒಂದರ ಹಿಂದೊಂದು ನಿಲ್ಲಿಸುತ್ತಾ ಹೋದರೆ, ಅವುಗಳ ಸಾಲು ಭೂಮಿಯನ್ನು 7 ಬಾರಿ ಸುತ್ತುವರಿಯುವಷ್ಟು ಉದ್ದವಾಗುತ್ತದೆ ಎಂದು ವರದಿ ಅಂದಾಜುಮಾಡಿದೆ. ಈ ಉದಾಹರಣೆಯು ಪೋಲಾಗುತ್ತಿರುವ ಆಹಾರದ ಅಗಾಧತೆಯನ್ನು ತಿಳಿಸುವುದು. ಬಡವ– ಶ್ರೀಮಂತ ಭೇದವಿಲ್ಲ: ತಲಾ ಆದಾಯದಲ್ಲಿ ಎಷ್ಟೇ ವ್ಯತ್ಯಾಸವಿರಲಿ ಆಹಾರ ಪೋಲಿನ ಪ್ರಮಾಣ ಎಲ್ಲಾ ರಾಷ್ಟ್ರಗಳಲ್ಲೂ ಬಹುತೇಕ ಒಂದೇ ಪ್ರಮಾಣದಲ್ಲಿದೆ. ಜಾಗತಿಕ ಮಟ್ಟದಲ್ಲಿ ತಲಾವಾರು ಆಹಾರ ಪೋಲು ಪ್ರಮಾಣ ವಾರ್ಷಿಕ 121ಕೆ.ಜಿ.ಯಷ್ಟಿದೆ. ಇದರಲ್ಲಿ 74 ಕೆ.ಜಿ.ಯಷ್ಟು ಮನೆಗಳಲ್ಲೇ ಪೋಲಾಗುತ್ತದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ.
ಜಾಗತಿಕ ಮಟ್ಟದಲ್ಲಿ ತಲಾವಾರು ಆಹಾರ ಪೋಲು ಪ್ರಮಾಣ ವಾರ್ಷಿಕ 121ಕೆ.ಜಿ.ಯಷ್ಟಿದೆ. ಇದರಲ್ಲಿ 74 ಕೆ.ಜಿ.ಯಷ್ಟು ಮನೆಗಳಲ್ಲೇ ಪೋಲಾಗುತ್ತದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ.
*2019ರಲ್ಲಿ 69 ಕೋಟಿ ಜನರು ಆಹಾರದ ಕೊರತೆ ಎದುರಿಸಿದ್ದಾರೆ. ಕೋವಿಡ್‌–19 ಕಾರಣದಿಂದಾಗಿ ಮುಂದಿನ ವರ್ಷಗಳಲ್ಲಿ ಆ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಅಂದಾಜು ಇದೆ. 300 ಕೋಟಿ ಜನರಿಗೆ ಆರೋಗ್ಯಕರ ಆಹಾರ ಕೈಗೆಟುಕದಂತಾಗುವ ಸಾಧ್ಯತೆ ಇದೆ. ಆದ್ದರಿಂದ ಆಹಾರ ಪೋಲನ್ನು ನಿಯಂತ್ರಿಸುವ ಕಡೆಗೆ ಜಗತ್ತು ಗಮನ ಹರಿಸಬೇಕು ಎಂದು ವಿಶ್ವ ಸಂಸ್ಥೆಯ ವರದಿ ಉಲ್ಲೇಖಿಸಿದೆ.
*2030ರ ವೇಳೆಗೆ ಜಾಗತಿಕ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ಕೆಲವು ಗುರಿಗಳನ್ನು ನಿರ್ಧರಿಸಲಾಗಿದೆ. ಆ ಗುರಿಯನ್ನು ಸಾಧಿಸಬೇಕಾದರೆ ಆಹಾರ ಪೋಲು ಪ್ರಮಾಣದ ಮೇಲೆ ನಿಯಂತ್ರಣ ಸಾಧಿಸುವುದು ಅಗತ್ಯ. ಸರ್ಕಾರಗಳು ಇತ್ತ ಗಮನ ಹರಿಸಲೇ ಬೇಕಾಗಿದೆ ಎಂದು ತಜ್ಞರು ಹೇಳಿದ್ದಾರೆ.<ref>[https://www.prajavani.net/explainer/a-challenge-of-food-waste-in-the-world-and-india-811970.html ಆಳ-ಅಗಲ: ಆಹಾರ ಪೋಲು ಹಸಿವು ನಿರ್ಮೂಲನೆಗೆ ಸವಾಲು -ಪ್ರಜಾವಾಣಿ ವಾರ್ತೆ Updated: 10 ಮಾರ್ಚ್ 2021,]</ref>
"https://kn.wikipedia.org/wiki/ಆಹಾರ" ಇಂದ ಪಡೆಯಲ್ಪಟ್ಟಿದೆ