ಅಗೂಟೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
 
೨ ನೇ ಸಾಲು:
ರಾಡೆನ್ಷಿಯ ವರ್ಗದ ಕೇವಿಡೀ ಎಂಬ ಮೂಷಿಕ ಕುಟುಂಬಕ್ಕೆ ಸೇರಿದ [[ಸ್ತನಿ]]. ಗಾತ್ರದಲ್ಲಿ ಮೊಲದಷ್ಟು ದೊಡ್ಡದು. ಬಣ್ಣ [[ಕಂದು]], ಕೂದಲು ಒರಟು, ಬಾಲ ಚಿಕ್ಕದು. ಅರಣ್ಯದಲ್ಲಿ ಹಗಲು ಹೊತ್ತು [[ಗಿಡ]]ಗಳ ಪೊದರು ಇಲ್ಲವೆ ಬೇರುಗಳ ಮಧ್ಯದಲ್ಲಿ ಕಟ್ಟಿದ ಗೂಡಿನಲ್ಲಿ ಅವಿತುಕೊಂಡಿದ್ದು, ರಾತ್ರಿ ಹೊತ್ತಿನಲ್ಲಿ ಹೊರಬಂದು ತನ್ನ ಚಟುವಟಿಕೆ ಆರಂಭಿಸುವುದು. ಆವಶ್ಯಕತೆ ಬಂದಾಗ ಚೆನ್ನಾಗಿ ಈಜಲೂ ಬಲ್ಲದು. ಬೇರು, ಎಲೆ, ಕಾಯಿ-ಮುಂತಾದ ಸಸ್ಯಜನ್ಯ ಪದಾರ್ಥವೇ ಇದರ ಆಹಾರ. ಈ ಇಲಿ ಟ್ರಿನಿಡಾಡ್ ಮತ್ತು ಗಿನಿ ಪ್ರದೇಶಗಳಲ್ಲಿ ಸರ್ವಸಾಮಾನ್ಯವಾಗಿದ್ದು ಅಲ್ಲಿಯ ಕಬ್ಬು, ಬಾಳೆ ತೋಟಗಳಿಗೆ ಬಹಳ ಉಪದ್ರವಕಾರಿಯೆನಿಸಿದೆ.
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಪ್ರಾಣಿಗಳು]]
"https://kn.wikipedia.org/wiki/ಅಗೂಟೀ" ಇಂದ ಪಡೆಯಲ್ಪಟ್ಟಿದೆ