ಜಿ.ಎಸ್.ಗಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
ವಿಜಯಪುರದಲ್ಲಿ ಅವರ ಪ್ರೌಢಶಾಲೆಯವರೆಗಿನ ಶಿಕ್ಷಣ ಸಾಗಿತು. .ನಂತರ ಪುಣೆಯಲ್ಲಿ ಫರ್ಗ್ಯುಸನ್ ಕಾಲೇಜಿನಲ್ಲಿ ಪದವಿ ಪಡೆದರು. ಪದವಿಯಲ್ಲಿ, ಸಂಸ್ಕೃತ ಅವರ ಆಯ್ಕೆಯ ವಿಷಯ. ೧೯೩೯ರಲ್ಲಿ ಆನರ್ಸ್ ಪದವಿ ಪಡೆದರು. ಅವರು ಸಂಶೋಧನೆಗೆ ಆರಿಸಿ ಕೊಂಡ ವಿಷಯ ಎಂಟು, ಒಂಬತ್ತು, ಮತ್ತು ಹತ್ತನೇ ಶತಮಾನದ ಶಾಸನಗಳ ಹಿನ್ನೆಲೆಯಲ್ಲಿ ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ ವ್ಯಾಕರಣ. '''Historical grammar of old Kannada''' ಎಂಬ ಪ್ರೌಢ ಮಹಾಪ್ರಬಂಧವನ್ನು ಪ್ರೊ.ಸಿ.ಆರ್.ಶಂಕರನ್ ಅವರ ಮಾರ್ಗ ದರ್ಶನದಲ್ಲಿ ಬಾಂಬೆ ವಿ.ವಿ ಯಿಂದ ಪಿ.ಎಚ್.ಡಿ ಪದವಿಯನ್ನು ಪಡೆದರು.
 
=== ವೃತ್ತಿ ಜೀವನ ===
ಅವರ ಮೊದಲ ಉದ್ಯೋಗ ಪರ್ವ ಮೊದಲಾದುದು ನೀಲಗಿರಿಯ ಉದಕಮಂಡಲದ ಶಾಸನ ತಜ್ಞರ ಕಛೇರಿಯಲ್ಲಿ. ಭಾರತ ಸರ್ಕಾರದ ಶಾಸನ ಸಹಾಯಕನ ಹುದ್ದೆ ಅವರದಾಯಿತು. ಅಲ್ಲಿ ಆರು ವರ್ಷದವರೆಗ ಸೇವೆಸಲ್ಲಿಸಿ , ಮುಂಬಯಿ ಸಂಸ್ಥಾನದಲ್ಲಿದ್ದ ಧಾರವಾಡದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿನ ದ್ರಾವಿಡ ಭಾಷಾಶಾಸ್ತ್ರದ ಪ್ರವಾಚಕರು ಹಾಗೂ ಉಪನಿರ್ದೇಶಕರಾಗಿ ೧೯೪೯ ರಲ್ಲಿನೇಮಕ ಗೊಂಡರು. ಅಲ್ಲಿ ಹಿರಿಯ ವಿದ್ವಾಂಸರಾದ ಆರ್.ಎಸ್. ಪಂಚಮುಖಿ ಮತ್ತು ಎ.ಎಂ ಅಣ್ಣಿಗೇರಿಯವರ ಸಹವಾಸ ಮಾರ್ಗದರ್ಶನ ಸಿಕ್ಕಿತು. ಅದು ಅನೇಕ ಮಹತ್ವದ ಸಂಶೋಧನೆಗಳಿಗೆ ನಾಂದಿಯಾಯಿತು. ಈ ಮಧ್ಯ ಅವರು ಅಮೇರಿಕಾ ಮತ್ತು ಯುರೋಪು ಸಂದರ್ಶಿಸಲು ರಾಕ್ಫೆಲರ್ ಫೌಂಡೇಷನ್ನನ ಫೆಲೋ ಷಿಪ್ ದೊರಕಿತು ನಂತರ ಮತ್ತೆ ಉದಕಮಂಡಲದ ಕೇಂದ್ರ ಸಕಾರದ ಶಾಸನ ತಜ್ಞ ಕಚೇರಿಗೆ ೧೯೫೬ರಲ್ಲಿ ಹಿಂತಿರುಗಿದರು. ಅಲ್ಲಿ ಸಾರ್ಥಕ ಸೇವೆ ಸಲ್ಲಿಸಿ ೧೯೬೨ ರಲ್ಲಿ ಸಂಸ್ಥೆಯ ಅತ್ಯುನ್ನತ ಹುದ್ದೆಯಾದ ಪ್ರಧಾನ ಶಾಸನ ತಜ್ಞ ಹುದ್ದೆಯನ್ನೂ ಅಲಂಕರಿಸಿದರು. ಅವರ ಪರಿಣತೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮನ್ನಣೆ ದೊರಕಿತು. ಎರಡನೇ ಅಂತಾರಾಷ್ಟ್ರೀಯ ಏಷಿಯನ್ ಪುರಾತತ್ವ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾದರು. ಅಲ್ಲಿ ಶಾಸನ ಶಾಸ್ತ್ರ ಮತ್ತು ಲಿಪಿಗೋಷ್ಠಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು.
ಅಲಭ್ಯವಾಗಿದ್ದ ಮೌಲಿಕ "ಎಪಿಗ್ರಾಫಿಯಾ ಕರ್ಣಾಟಕ” ಸಂಪುಟಗಳ ಪರಿಷ್ಕರಣ ಮತ್ತು ಪುನರ್ಮುದ್ರಣ ಸಲಹಾ ಸಮಿತಿಯಲ್ಲಿ ಐದು ವರ್ಷ ಸೇವೆ ಸಲ್ಲಸಿದರು. ಈ ಅವಧಿ ಬಹು ಕ್ರಿಯಾಶೀಲವಾಗಿತ್ತು. ಅಂತರಾಷ್ಟ್ರೀಯ ಓರಿಯಂಟಲಿಸ್ಟ್ ಕಾಂಗ್ರೆಸ್ ನ ಆಹ್ವಾನದ ಮೇರೆಗೆ ವಿದೇಶಕ್ಕೆ ಹೋಗಿ ಪ್ರಾಚೀನ ಇತಿಹಾಸ ಗೋಷ್ಠಿಯ ಅಧ್ಯಕ್ಷತೆ ಕಾರ್ಯ ನಿರ್ವಹಿಸಿದರು. ಅವರ ಅಮೋಘ ಸೇವೆಯನ್ನು ಗುರುತಿಸಿ ಮಿಥಿಕ್ ಸೊಸೈಟಿಯು ಪದಕ ಮತ್ತು ತಾಮ್ರ ಪತ್ರವನ್ನೊಳಗೊಂಡ ಪ್ರಶಸ್ತಿ ನೀಡಿ ಗೌರವಿಸಿತು. ಕನ್ನಡ ಸಾಹಿತ್ಯ ಪರಿಷತ್ ಅವರನ್ನು ಎರಡು ಬಾರಿ ಸಮ್ಮೇಳನದಲ್ಲಿ ಗೌರವಿಸಿತು.
"https://kn.wikipedia.org/wiki/ಜಿ.ಎಸ್.ಗಾಯಿ" ಇಂದ ಪಡೆಯಲ್ಪಟ್ಟಿದೆ