2020-21ರ ಭಾರತೀಯ ರೈತರ ಪ್ರತಿಭಟನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೪೬ ನೇ ಸಾಲು:
 
===ಟ್ರ್ಯಾಕ್ಟರ್‌ ರ್‍ಯಾಲಿ===
*ದಿ.26-1-2021 ರಂದು ಟ್ರ್ಯಾಕ್ಟರ್‌ ರ್‍ಯಾಲಿ ಸಂದರ್ಭದಲ್ಲಿನ ಹಿಂಸಾಚಾರವು ‘ಪೂರ್ವಯೋಜಿತ ಸಂಚು’ ಎಂದು ಟೂಲ್‌ಕಿಟ್‌ ಪ್ರಕರಣದ "ಎಫ್‌ಐಆರ್‌"ನಲ್ಲಿ ಹೇಳಲಾಗಿದೆ. ಪ್ರತ್ಯೇಕತಾವಾದಿ ಧ್ವಜ ಹಾರಿಸಲು ಮತ್ತು ಹಿಂಸಾಚಾರ ನಡೆಸಲು ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯು 2.5 ಲಕ್ಷ ಡಾಲರ್‌ ಕೊಟ್ಟಿತ್ತು ಎಂದು ಎಫ್‌ಐಆರ್‌ನಲ್ಲಿ ಇದೆ. '''ಆದರೆ, ಜ. 26ರಂದು ಕೆಂಪುಕೋಟೆಯಲ್ಲಿ ಹಾರಿಸಿದ್ದು ಧಾರ್ಮಿಕ ಧ್ವಜ. ಪ್ರತ್ಯೇಕವಾದಿ ಖಾಲಿಸ್ತಾನ ಧ್ವಜ ಅಲ್ಲ.''' ಶಾಂತಿಯುತವಾಗಿ ಟ್ರ್ಯಾಕ್ಟರ್‌ ರ್‍ಯಾಲಿ ನಡೆಸಲು ರೈತರು ಒಪ್ಪಿದ್ದರು. ಆದರೆ, ಟೂಲ್‌ಕಿಟ್‌ನ ಹಿಂದಿರುವ ಶಕ್ತಿಗಳೇ ಗಲಭೆಗೆ ಕುಮ್ಮಕ್ಕು ಕೊಟ್ಟಿವೆ ಎಂದು ಪೊಲೀಸರು ಆರೋಪಿಸಿದ್ದಾರೆ. ‘ಪಂಜಾಬ್‌ ಅನ್ನು *ಭಾರತದಿಂದ ಪ್ರತ್ಯೇಕಿಸಿ ಖಾಲಿಸ್ತಾನ ಎಂದು ಘೋಷಿಸಬೇಕು ಎಂದು ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯು ಬಹಳ ಹಿಂದಿನಿಂದಲೂ ಪ್ರತಿಪಾದಿಸುತ್ತಿದೆ. ರೈತರ ಪ್ರತಿಭಟನೆಯನ್ನು ಮುಂದಿರಿಸಿಕೊಂಡು ತನ್ನ ಕಾರ್ಯಸೂಚಿಯನ್ನು ಮುಂದಕ್ಕೆ ತರುತ್ತಿದೆ. ಜನರಿಗೆ ಹಣ ನೀಡಿ, ಅಕ್ರಮವನ್ನು ಪ್ರಚೋದಿಸುವ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಈ ಸಂಘಟನೆಯು ಹಿಂಸೆಗೆ ಕುಮ್ಮಕ್ಕು ನೀಡಿದೆ’ ಎಂದು ಎಫ್‌ಐಆರ್‌ನಲ್ಲಿ ಇದೆ.
*ಈ ಟೂಲ್‌ಕಿಟ್‌ ಅನ್ನು ಗ್ರೇಟಾ ಅವರಿಗೆ ನೀಡಿದ್ದು ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ. ದಿಶಾ, ಮುಂಬೈನ ವಕೀಲೆ ನಿಕಿತಾ ಜೇಕಬ್‌ ಮತ್ತು ಬೀಢ್‌ನ ಶಾಂತನು ಮುಲುಕ್‌ ಹಾಗೂ ಇತರರು ಈ ಟೂಲ್‌ಕಿಟ್‌ ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಈ ಆರೋಪವನ್ನು ಈ ಎಲ್ಲರೂ ನಿರಾಕರಿಸಿದ್ದಾರೆ. <ref>[https://www.prajavani.net/india-news/activist-disha-ravi-arrested-for-farmers-protest-toolkit-806699.html ಟೂಲ್‌ಕಿಟ್‌ ಎಫ್‌ಐಆರ್‌: ‘ಹಿಂಸೆಗೆ ಪ್ರತ್ಯೇಕತೆ ಕುಮ್ಮಕ್ಕು’;; ಪ್ರಜಾವಾಣಿ ವಾರ್ತೆ Updated: 19 ಫೆಬ್ರವರಿ 2021]</ref>
 
೨೭೦ ನೇ ಸಾಲು:
====ಕಾಂಗ್ರೆಸ್ ಅದ್ಯಕ್ಷೆ ಸೋನಿಯಾ ಗಾಂಧಿ====
*ಕೃಷಿ ಕಾಯ್ದೆಗಳನ್ನು ವಾಪಸು ಪಡೆಯುವುದೇ ನಿಜವಾದ ರಾಜಧರ್ಮ. ಹಾಗೂ ಮೃತಪಟ್ಟಿರುವ ರೈತರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ ಎಂದು ಸೋನಿಯಾಗಾಂಧಿ ಅವರು ಹೇಳಿದ್ದಾರೆ.<ref>[https://www.prajavani.net/india-news/first-time-such-arrogant-govt-in-power-must-withdraw-farm-laws-unconditionally-sonia-792979.html ದಾರ್ಷ್ಟ್ಯದ ಮನೋಭಾವ ಬಿಡಿ, ಕೃಷಿ ಕಾಯ್ದೆ ಬೇಷರತ್ ಹಿಂಪಡೆಯಿರಿ: ಸೋನಿಯಾ ಆಗ್ರಹ; ಪ್ರಜಾವಾಣಿ ವಾರ್ತೆ Updated: 03 ಜನವರಿ 2021]</ref>
 
===ಪ್ರತಿಪಕ್ಷಗಳ ನಿರ್ಣಯ===
*2021 ಜನವರಿ 29 ರಂದು ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲಿಗೆ ಸಂಸತ್ತಿನ ಜಂಟಿ ಸಭೆಯನ್ನು ಕುರಿತು ಮಾಡುವ ಅಧ್ಯಕ್ಷರ ಭಾಷಣವನ್ನು ಬಹಿಷ್ಕರಿಸಲು 16 ವಿರೋಧ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ. ಕಾಂಗ್ರೆಸ್, ಎನ್‌ಸಿಪಿ, ಡಿಎಂಕೆ, ಟಿಎಂಸಿ, ಶಿವಸೇನೆ, ಸಮಾಜವಾದಿ ಪಕ್ಷ, ಆರ್‌ಜೆಡಿ, ಸಿಪಿಐ, ಸಿಪಿಐ (ಎಂ) ಮತ್ತು ಪಿಡಿಪಿ ಮತ್ತು ಇತರ ಪಕ್ಷಗಳ ಜಂಟಿ ಹೇಳಿಕೆಯಲ್ಲಿ ಮೂರು ಕೃಷಿ ಕಾನೂನುಗಳು "ರಾಜ್ಯಗಳ ಹಕ್ಕುಗಳ ಮೇಲಿನ ಆಕ್ರಮಣ" ಮತ್ತು ಸಂವಿಧಾನದ ಸಂಯುಕ್ತ ಮನೋಭಾವವನ್ನು ಉಲ್ಲಂಘಿಸುತ್ತದೆ ".ಅವರು ಈ ಕಾನೂನುಗಳನ್ನು" ಯಾವುದೇ ಸಮಾಲೋಚನೆಗಳಿಲ್ಲದೆ ತರಲಾಗಿದೆ ", " ರಾಷ್ಟ್ರೀಯ ಒಮ್ಮತದ ಕೊರತೆ "ಮತ್ತು" ಸಂಸತ್ತಿನ ಪರಿಶೀಲನೆಯನ್ನು ಬೈಪಾಸ್ ಮಾಡಲಾಗಿದೆ ... ಪ್ರತಿಪಕ್ಷಗಳನ್ನು ಗೊಂದಲಕ್ಕೀಡುಮಾಡಿದೆ "ಎಂದು ಅವರು ಹೇಳಿದರು.