2020-21ರ ಭಾರತೀಯ ರೈತರ ಪ್ರತಿಭಟನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೩೭ ನೇ ಸಾಲು:
*ಪ್ರತಿಭಟನಾಕಾರರು “ಸ್ಕ್ರೋಲ್.ಇನ್‌” ಮಾಧ್ಯಮಕ್ಕೆ "ಮೋದಿ ಮಾಧ್ಯಮಗಳು ನಮ್ಮನ್ನು ಖಲಿಸ್ತಾನಿಗಳು ಎಂದು ಕರೆಯುತ್ತಿವೆ [...] ನಾವು ಒಂದು ತಿಂಗಳು ಶಾಂತಿಯುತವಾಗಿ ಕುಳಿತಿದ್ದೇವೆ, ಆದರೆ ಇತ್ತೀಚೆಗೆ ಮೋದಿ ಮಾಧ್ಯಮಗಳು ಹಿಂಸಾತ್ಮಕವಾಗಿದೆ. ಅದು ನಮ್ಮನ್ನು ಭಯೋತ್ಪಾದಕರನ್ನಾಗಿ ಮಾಡುತ್ತದೆ." <ref>[ Lalwani, Vijayta (1 December 2020). "'Shame on the media': Why protesting farmers are angry with the news coverage". Scroll.in. Retrieved 1 December 2020. 90]</ref> ಖಲಿಸ್ತಾನ್ ಕೋನ ಎಂದು ವ್ಯಾಖ್ಯಾನಕಾರರು ಹೇಳಿದ್ದಾರೆ ಪ್ರತಿಭಟನೆಯನ್ನು ಕೆಣಕಲು ಈ ಪದ ಬಳಸಲಾಗುತ್ತಿದೆ. <ref>[Arora, Kusum (2 December 2020). "Farmers' Protest: Despite Rightwing Propaganda, 'Khalistani' Angle Finds Little Traction". The Wire. Retrieved3 December 2020. 91]</ref>
*"ಇದು ಜವಾಬ್ದಾರಿಯುತ ಮತ್ತು ನೈತಿಕ ಪತ್ರಿಕೋದ್ಯಮದ ಸಿದ್ಧಾಂತಗಳಿಗೆ ವಿರುದ್ಧವಾಗಿದೆ" ಎಂದು ಪ್ರತಿಭಟಿಸುವ ರೈತರನ್ನು "ಖಲಿಸ್ತಾನಿಗಳು" ಅಥವಾ "ರಾಷ್ಟ್ರ ವಿರೋಧಿಗಳು" ಎಂದು ಲೇಬಲ್ ಮಾಡಬೇಡಿ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮಾಧ್ಯಮವನ್ನು ಕೇಳಿದೆ. ಇಂತಹ ಕ್ರಮಗಳು ಮಾಧ್ಯಮದ ವಿಶ್ವಾಸಾರ್ಹತೆಗೆ ಧಕ್ಕೆಯುಂಟುಮಾಡುತ್ತವೆ, ಎಂದು ಹೇಳಿದೆ.<ref>[Don't label protesting farmers as 'Khalistanis', 'anti-nationals': Editors Guild to media houses". Deccan Herald. 4 December 2020. Retrieved5 December 2020].</ref>
====ಹೊಸ ಬೆಳವಣಿಗೆ- ಬೆಂಗಳೂರಿನ ಯುವತಿ ದಿಶಾ ರವಿ ಬಂಧನ====
*ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದನ್ನು ವಿವರಿಸುವ ‘ಟೂಲ್‌ಕಿಟ್‌’ ಸಿದ್ಧಪಡಿಸಿದ ಆರೋಪದಲ್ಲಿ ಬೆಂಗಳೂರಿನ 21 ವರ್ಷ ವಯಸ್ಸಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಎಂಬವರನ್ನು ದಿ.೧೩-೨-೨೦೨೧ ರಂದು ಬೆಂಗಳೂರಿನ ನಿವಾಸದಿಂದ ಬಂಧಿಸಲಾಗಿದೆ. ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್‌ ಸೇರಿ ಹಲವು ಗಣ್ಯರು ಈ ಟೂಲ್‌ಕಿಟ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ದೇಶದ್ರೋಹ, ಜನರ ನಡುವೆ ದ್ವೇಷಕ್ಕೆ ಕುಮ್ಮಕ್ಕು ಮತ್ತು ಅಪರಾಧ ಒಳಸಂಚಿಗೆ ಸಂಬಂಧಿಸಿ ಫೆ. 4ರಂದು ದೆಹಲಿಯ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಅದರ ಆಧಾರದಲ್ಲಿ ದಿಶಾ ಅವರನ್ನು ಬಂಧಿಸಿ ಶನಿವಾರ ರಾತ್ರಿಯೇ ದೆಹಲಿಗೆ ಕರೆದೊಯ್ಯಲಾಗಿದೆ. ದೆಹಲಿಯ ನ್ಯಾಯಾಲಯವು ದಿಶಾ ಅವರನ್ನು ಐದು ದಿನ ಪೊಲೀಸ್‌ ವಶಕ್ಕೆ ಒಪ್ಪಿಸಿದೆ. ದಿಶಾ, 'ಫ್ರೈಡೇಸ್ ಫಾರ್ ಫ್ಯೂಚರ್ ಇಂಡಿಯಾ' ಸ್ಥಾಪಕ ಸದಸ್ಯರುಗಳಲ್ಲಿ ಒಬ್ಬರಾಗಿದ್ದಾರೆ.
*ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಈ ಬಂಧನವನ್ನು ಖಂಡಿಸಿದ್ದಾರೆ.ಈ ಬಂಧನ ಪ್ರಜಾಪ್ರಭುತ್ವ ಮೇಲೆ ಹಿಂದೆಂದೂ ಕಂಡಿಲ್ಲದ ರೀತಿಯ ದಾಳಿಯಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಕಾಂಗ್ರೆಸ್ ಮತ್ತು ವಿಪಕ್ಷನಾಯಕರು ಖಂಡಿಸಿದ್ದಾರೆ. ನಮ್ಮ ರೈತರಿಗೆ ಬೆಂಬಲ ನೀಡುವುದು ಅಪರಾಧವಲ್ಲ ಎಂದು ಉಲ್ಲೇಖಿಸಿದರು. ಬಿಜೆಪಿ ಬೆಂಬಲಿಗರು ದಿಶಾಳನ್ನು ಉಗ್ರ ಅಜ್ಮಲ್‌ ಕಸಬ್‌ (Ajmal Kasab)ನಿಗೆ ಹೋಲಿಕೆ ಮಾಡಿದ್ದಾರೆ. <ref>[https://www.prajavani.net/india-news/disha-toolkit-farmers-protest-805378.html ‘ಟೂಲ್‌ಕಿಟ್‌’ ಸಿದ್ಧಪಡಿಸಿದ ಆರೋಪ‌: ಬೆಂಗಳೂರಿನ ಯುವತಿ ಸೆರೆ; ಪ್ರಜಾವಾಣಿ d: 15 ಫೆಬ್ರವರಿ 2021,] </ref> <ref>[https://www.prajavani.net/india-news/arrest-of-disha-ravi-unprecedented-attack-on-democracy-arvind-kejriwal-805463.html ಪ್ರಜಾಪ್ರಭುತ್ವ ಮೇಲೆ ಹಿಂದೆಂದೂ ಕಂಡಿಲ್ಲದ ರೀತಿಯ ದಾಳಿಯಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.]</ref>
====ಐತಿಹಾಸಿಕ ತೀರ್ಪು- ದಿಶಾರವಿ ಬಿಡುಗಡೆ====
</ref><ref>[https://www.prajavani.net/india-news/arrest-of-disha-ravi-unprecedented-attack-on-democracy-arvind-kejriwal-805463.html ಪ್ರಜಾಪ್ರಭುತ್ವ ಮೇಲೆ ಹಿಂದೆಂದೂ ಕಂಡಿಲ್ಲದ ರೀತಿಯ ದಾಳಿಯಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.]</ref>
*ದಿಶಾ ಅವರು ಟೂಲ್‌ಕಿಟ್‌ ಮೂಲಕ ಜನರು ದೇಶದ ಬಗ್ಗೆ ಅಸಮಾಧಾನಗೊಳ್ಳುವಂತೆ ಮಾಡಿದ್ದರು ಎಂದು ದೆಹಲಿ ಪೊಲೀಸರು ಮಾಡಿದ ಆರೋಪವನ್ನೇ ನ್ಯಾಯಾಲಯವು ತನ್ನ 18 ಪುಟಗಳ ಆದೇಶದಲ್ಲಿ ತರಾಟೆಗೆ ತೆಗೆದುಕೊಂಡಿದೆ.
'''*‘ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಯಾವುದೇ ದೇಶದಲ್ಲಿ ಪ್ರಜೆಗಳು ಸರ್ಕಾರದ ಆತ್ಮಸಾಕ್ಷಿ ಸಂರಕ್ಷಕರಂತೆ ಕೆಲಸ ಮಾಡುತ್ತಾರೆ. ಸರ್ಕಾರದ ನೀತಿಗಳನ್ನು ಒಪ್ಪಿಲ್ಲ ಎಂಬ ಒಂದೇ ಕಾರಣಕ್ಕೆ ಜನರನ್ನು ಜೈಲಿಗೆ ತಳ್ಳಲಾಗದು ಎಂಬುದು ನನ್ನ ಅಭಿಪ್ರಾಯ’ ಎಂದು ನ್ಯಾಯಾಧೀಶರು ಹೇಳಿದರು.
"ಐದು ಸಾವಿರ ವರ್ಷಗಳ ನಮ್ಮ ನಾಗರಿಕತೆಯು ವಿವಿಧ ರೀತಿಯ ಚಿಂತನೆಗಳ ಬಗ್ಗೆ ಯಾವತ್ತೂ ಅಸಡ್ಡೆ ಹೊಂದಿರಲಿಲ್ಲ ಎಂದು ಋಗ್ವೇದವನ್ನು ಉಲ್ಲೇಖಿಸಿ ರಾಣಾ ಅವರು ಹೇಳಿದ್ದಾರೆ.
ಭಿನ್ನಮತ, ವೈವಿಧ್ಯ, ಅಸಮಾಧಾನ ಮತ್ತು ಅಸಮ್ಮತಿಗಳೆಲ್ಲವೂ ಸರ್ಕಾರದ ನೀತಿಯಲ್ಲಿ ವಸ್ತುನಿಷ್ಠತೆ ಮೂಡಿಸುವ ನ್ಯಾಯಬದ್ಧ ಸಾಧನಗಳು ಎಂಬುದನ್ನು ಒಪ್ಪಿಕೊಳ್ಳಲಾಗಿದೆ. ಸರ್ಕಾರದ ಒಣಜಂಭವನ್ನು ತೃಪ್ತಿಪಡಿಸುವುದಕ್ಕಾಗಿ ದೇಶದ್ರೋಹ ಕಾಯ್ದೆಯನ್ನು ಬಳಸಿಕೊಳ್ಳಲಾಗದು ಎಂದು ತೀರ್ಪಿನಲ್ಲಿ ಹೇಳಲಾಗಿದೆ".''' <ref>[https://www.prajavani.net/india-news/toolkit-case-release-of-environmental-activist-disha-ravi-farmers-protest-delhi-808199.html ಟೂಲ್‌ಕಿಟ್ ಪ್ರಕರಣ‌: ಪರಿಸರ ಕಾರ್ಯಕರ್ತೆ ದಿಶಾ ರವಿ ಬಿಡುಗಡೆ;ಪ್ರಜಾವಾಣಿ ವಾರ್ತೆ Updated: 24 ಫೆಬ್ರವರಿ 2021,]</ref>
===ಟ್ರ್ಯಾಕ್ಟರ್‌ ರ್‍ಯಾಲಿ===
*ದಿ.26-1-2021 ರಂದು ಟ್ರ್ಯಾಕ್ಟರ್‌ ರ್‍ಯಾಲಿ ಸಂದರ್ಭದಲ್ಲಿನ ಹಿಂಸಾಚಾರವು ‘ಪೂರ್ವಯೋಜಿತ ಸಂಚು’ ಎಂದು ಟೂಲ್‌ಕಿಟ್‌ ಪ್ರಕರಣದ "ಎಫ್‌ಐಆರ್‌"ನಲ್ಲಿ ಹೇಳಲಾಗಿದೆ. ಪ್ರತ್ಯೇಕತಾವಾದಿ ಧ್ವಜ ಹಾರಿಸಲು ಮತ್ತು ಹಿಂಸಾಚಾರ ನಡೆಸಲು ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯು 2.5 ಲಕ್ಷ ಡಾಲರ್‌ ಕೊಟ್ಟಿತ್ತು ಎಂದು ಎಫ್‌ಐಆರ್‌ನಲ್ಲಿ ಇದೆ. '''ಆದರೆ, ಜ. 26ರಂದು ಕೆಂಪುಕೋಟೆಯಲ್ಲಿ ಹಾರಿಸಿದ್ದು ಧಾರ್ಮಿಕ ಧ್ವಜ.''' ಶಾಂತಿಯುತವಾಗಿ ಟ್ರ್ಯಾಕ್ಟರ್‌ ರ್‍ಯಾಲಿ ನಡೆಸಲು ರೈತರು ಒಪ್ಪಿದ್ದರು. ಆದರೆ, ಟೂಲ್‌ಕಿಟ್‌ನ ಹಿಂದಿರುವ ಶಕ್ತಿಗಳೇ ಗಲಭೆಗೆ ಕುಮ್ಮಕ್ಕು ಕೊಟ್ಟಿವೆ ಎಂದು ಪೊಲೀಸರು ಆರೋಪಿಸಿದ್ದಾರೆ. ‘ಪಂಜಾಬ್‌ ಅನ್ನು *ಭಾರತದಿಂದ ಪ್ರತ್ಯೇಕಿಸಿ ಖಾಲಿಸ್ತಾನ ಎಂದು ಘೋಷಿಸಬೇಕು ಎಂದು ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯು ಬಹಳ ಹಿಂದಿನಿಂದಲೂ ಪ್ರತಿಪಾದಿಸುತ್ತಿದೆ. ರೈತರ ಪ್ರತಿಭಟನೆಯನ್ನು ಮುಂದಿರಿಸಿಕೊಂಡು ತನ್ನ ಕಾರ್ಯಸೂಚಿಯನ್ನು ಮುಂದಕ್ಕೆ ತರುತ್ತಿದೆ. ಜನರಿಗೆ ಹಣ ನೀಡಿ, ಅಕ್ರಮವನ್ನು ಪ್ರಚೋದಿಸುವ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಈ ಸಂಘಟನೆಯು ಹಿಂಸೆಗೆ ಕುಮ್ಮಕ್ಕು ನೀಡಿದೆ’ ಎಂದು ಎಫ್‌ಐಆರ್‌ನಲ್ಲಿ ಇದೆ.
*ಈ ಟೂಲ್‌ಕಿಟ್‌ ಅನ್ನು ಗ್ರೇಟಾ ಅವರಿಗೆ ನೀಡಿದ್ದು ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ. ದಿಶಾ, ಮುಂಬೈನ ವಕೀಲೆ ನಿಕಿತಾ ಜೇಕಬ್‌ ಮತ್ತು ಬೀಢ್‌ನ ಶಾಂತನು ಮುಲುಕ್‌ ಹಾಗೂ ಇತರರು ಈ ಟೂಲ್‌ಕಿಟ್‌ ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಈ ಆರೋಪವನ್ನು ಈ ಎಲ್ಲರೂ ನಿರಾಕರಿಸಿದ್ದಾರೆ. <ref>[https://www.prajavani.net/india-news/activist-disha-ravi-arrested-for-farmers-protest-toolkit-806699.html ಟೂಲ್‌ಕಿಟ್‌ ಎಫ್‌ಐಆರ್‌: ‘ಹಿಂಸೆಗೆ ಪ್ರತ್ಯೇಕತೆ ಕುಮ್ಮಕ್ಕು’;; ಪ್ರಜಾವಾಣಿ ವಾರ್ತೆ Updated: 19 ಫೆಬ್ರವರಿ 2021]</ref>
 
====ಗ್ರೆಟಾ ಥನ್‌ಬರ್ಗ್‌ ಬೆಂಬಲ====
*ದಿ.19 ಫೆಬ್ರವರಿ 2021- ಟೂಲ್‌ಕಿಟ್‌ ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನಲ್ಲಿರುವ ಪರಿಸರ ಹೋರಾಗಾರ್ತಿ ಬೆಂಗಳೂರಿನ ದಿಶಾ ರವಿ ಅವರಿಗೆ ಅಂತರರಾಷ್ಟ್ರೀಯ ಪರಿಸರ ಹೋರಾಟಗಾರ್ತಿ [[ಗ್ರೇಟಾ ಥನ್‍ಬರ್ಗ್|ಗ್ರೆಟಾ ಥನ್‌ಬರ್ಗ್‌]] ಬೆಂಬಲ ಸೂಚಿಸಿದದರು.'ವಾಕ್ ಸ್ವಾತಂತ್ರ್ಯ, ಶಾಂತಿಯುತ ಪ್ರತಿಭಟನೆ ಮತ್ತು ಸಭೆ ಸೇರುವ ಹಕ್ಕು ಚೌಕಾಸಿ ಇಲ್ಲದ ಮಾನವ ಹಕ್ಕುಗಳಾಗಿವೆ. ಇವು ಯಾವುದೇ ಪ್ರಜಾಪ್ರಭುತ್ವದ ಮೂಲಭೂತ ಅಂಶವಾಗಿರಬೇಕು,' ಎಂದು ಗ್ರೆಟಾ ಪ್ರತಿಪಾದಿಸಿದ್ದಾರೆ. ಅಲ್ಲದೆ, ಈ ಟ್ವೀಟ್‌ ನೊಂದಿಗೆ ಗ್ರೆಟಾ ಅವರು #StandWithDishaRavi ಎಂಬ ಹ್ಯಾಷ್‌ ಟ್ಯಾಗ್‌ ಅನ್ನೂ ಬಳಸಿದ್ದಾರೆ.<ref>[https://www.prajavani.net/india-news/greta-tweets-in-support-of-arrested-22-year-old-activist-disha-ravi-806913.html ದಿಶಾ ರವಿ ಬೆಂಬಲಿಸಿದ ಗ್ರೆಟಾ: ಮಾನವ ಹಕ್ಕು ಪ್ರತಿಪಾದನೆ; ಪ್ರಜಾವಾಣಿ ವೆಬ್‌ ಡೆಸ್ಕ್‌ Updated: 19 ಫೆಬ್ರವರಿ 2021]</ref>