ಮಕ್ಕಳ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
 
೭೨ ನೇ ಸಾಲು:
ಈ ಸಂಕಲನದಲ್ಲಿ ೧೦೪ ಕತೆಗಳಿವೆ. ಕತೆಗಳ ವಸ್ತುವಿನಲ್ಲಿ ವೈವಿಧ್ಯತೆ ಇದೆ. ಇದೇ ೨೦ ನೆ ಶತಮಾನದ ವಿಶೇಶವೆಂದರೆ ತಪ್ಪಾಗಲಾರದು. ಪ್ರಾಣಿಗಳು ಕತೆಯಲ್ಲಿ ಪಾತ್ರರಾಗಿ ಇನ್ನೂ ಉಳಿದಿವೆ. ಉದಾಹರಣೆಗೆ, ಜಯಂತ ಕಾಡದೆವರ ' ತೋಳ ನರಿ ಮತ್ತು ಚಿರತೆ', ನಾಗರಾಜ ಶೆಟ್ಟಿಯವರ 'ನಾಚಿದ ಬೀಜಣ್ಣ', ಸತ್ಯ ಕಲಾ ಧ್ವನಿಯವರ ' ಪ್ರೀತಿಯ ಗುಬ್ಬಿ' ಬಿ.ಟಿ ಸತೀಶ್ ರವರ ' ನಾಯಿ ಮತ್ತು ಯಜಮಾನ' ಹೀಗೆ ಹಲವಾರ್ಯ್ ಉದಾಹರಣೆಗಳು ದೊರಕುತ್ತವೆ. ಪ್ರಾಣಿಗಳ ಮುಗ್ಧತೆಯಿಂದಲೋ ಅಥವಾ ಒಡನಾಡುವ ಪ್ರಾಣಿಗಳ ವಿಧೇಯತೆಯಿಂದಲೋ ಮಕ್ಕಳಿಗೂ ಪ್ರಾಣಿಗಳಿಗೂ ಇರುವ ಸಂಬಂಧ ವಿವರಿಸಲಾಗದಶ್ಟು ಅನ್ಯೋನ್ಯವಾಗಿ ಬೆಳೆದು ಬಂದಿದೆ. ಬಹುಶ: ಇದು ಎಂದೆಂದಿಗೂ ಉಳಿಯುತ್ತದೆ. ಈ ಕತೆಗಳ ಏನು ಹೇಳುತ್ತವೆ ಎನ್ನುವುದಕ್ಕಿಂತ ಪ್ರಾಣಿಗಳ ಹಕತೆ ಹೇಳಿದರೆ ಮಕ್ಕಳ ಗಮನವನ್ನು ಸುಲಭವಾಗಿ ಸೆಳೆಯಬಹುದು; ಮತ್ತು ಅಂತಹ ಕತೆಗಳ ಮೂಲಕ ಕೆಲವು ಸಂದೇಶಗಳನ್ನು ತಲುಪಿಸುವುದು ಸುಲಭ ಎನ್ನುವುದು ಇಲ್ಲಿ ಮುಖ್ಯ ಪಂಚರತಂತ್ರ ಕತೆಗಳಲ್ಲಿ ಕಾಣುವ ಈ ತಿಳುವಳಿಕೆ ಇನ್ನೂ ನಮ್ಮ ಬರಹಗಾರರನ್ನು ಮರ್ಗದರ್ಶನ ಮಾಡುತ್ತಿದೆ ಎನ್ನುವುದು ಒಂದು ವಿಧದಲ್ಲಿ ಆಶ್ಚರ್ಯದ ಸಂಗತಿಯಾದರೂ ಇನ್ನೊಂದು ವಿಧದಲ್ಲಿ ಅಲ್ಲ. ಅಂತಹ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಅತ್ಯಂತ ಪ್ರತಿಭಾವಂತ ಬರಹಗಾರನಿಗೂ ಕಶ್ಟವಿದೆ.ಬರಿ ಪ್ರಾಣಿಗಳ ಕತೆಯಶ್ಟೇ ಅಲ್ಲ. ಗಾಂಧಿಯ ಕೆಲವು ಆದರ್ಶಗಳು ಇನ್ನೂ ಉಳಿದಿವೆ ಎನ್ನುವುದಕ್ಕೆ ಶಂ.ಗು ಬಿರಾದಾರ ಅವರ ' ಅಜ್ಜ ಹೆಳಿದ ಕತೆ ' ಉದಾಹರಣೆಯಾಗಬಹುದು. " ಸತ್ಯ ಹೇಳಿದನೆಲ್ಲಾ ಎಂಬ ಸ್ಂತೋಶದಲ್ಲಿ ತಾಯಿಯನ್ನು ತಬ್ಬಿಕೊಂಡ". ಕತೆಯ ಕೊನೆಯ ಪ್ಯಾರದಲ್ಲಿ ಹುಡುಗ ಹೇಳುವ ಈ ವಾಕ್ಯ ಭಾವುಕತೆಗೆ ತಿರುಗುತ್ತದೆ. ಆದರೂ ಮಕ್ಕಳಿಗೆ ಸೂಚ್ಯ ಭಾಶೆಯನ್ನುಪಯೋಗಿಸಿದರೆ ಬುದ್ಧಿ ಸಮ್ಮತಮವಾಗಿ ಸಂವಹದ ಪ್ರಶ್ನೆ ಬರುತ್ತಿತ್ತ್ಂದು ಹಾಗೆ ಬರೆದಿದ್ದರೆಂದು ಭಾವಿಸಬಹುದು. ಮನಿಯಾಲ್ ಗಣೀಶ್ ಶೆಣೈ ಅವರ ' ಹೋತದ ಜಾಣತನ ' ಶಕ್ತಿಯಿಂದ ಗೆಲ್ಲಲಾಗದ ಸಂದರ್ಭಗಳನ್ನೂ, ವೈರಿಗಳನ್ನೂ ಸಮಯ ಅರಿವಿನಿಂದ ಗೆಲ್ಲಬಹುದು ಎಂದು ಹೇಳಿದ್ದಾರೆ. ಮೂರ್ತಿ ರಾಮನಾಥಪುರ ಅವರ ' ವಿದ್ಯೆ ಉಪಾಸನೆ ' ಮಕ್ಕಳಿಗೆ ಚ್ಂತನೆ ಮಾಡಲು ಸಾಧ್ಯವಾಗುವಂತಿದೆ.
ಬಹುತೇಕ ಸಮಕಾಲೀನ ಮಕ್ಕಳ ಕತೆಗಳಲ್ಲಿ ಭಾವನೆಗಳು ದುಡಿಸಿಕೊಳ್ಳುವ ಪ್ರಯತ್ನವಿದೆಯೇ ಹೊರತು ಮಕ್ಕಳ ಬುದ್ದ್ಧಿಯನ್ನು ದುಡಿಸಿಕೊಂಡು ಯೋಚನೆ ಮಾಡುವಂತೆ ಪ್ರಚೋದಿಸುವ ಕತೆಗಳು ಕೆಲವು ಕಾಣುತ್ತವೆ. ಅಂತಹದರಲ್ಲಿ ಸಂಪಟೂರು ವಿಶ್ವನಾಥ್ ಅವರ ' ಋಣಭಾರ' ವನ್ನು ಒಂದು ಉದಾಹರಣೆಯಾಗಿ ನೋಡಬಹುದು.ಇವರ ಕಥೆಯಲ್ಲಿ ಇರುವುದು ಕೇವಲ ಎರಡೇ ಪಾತ್ರಗಳು.ಬದುಕಿನ ಸಂದರ್ಭಗಳಲ್ಲಿ ನಡೆಯುವ ಘಟನೆಗಳಿಗೆ ಒಂದೇ ಅರ್ಥವಿರುವುದಿಲ್ಲ ಎಂಬುದು ಮಕ್ಕಳಿಗೂ ಅರಿವಾಗಬೇಕು. ಬದಲಾಗುತ್ತಿರುವ,ಬದಲಾಗಿರುವ ಸಂಕೀರ್ಣ ಬದುಕಿನ ಸನ್ನಿವೇಶಗಳಿಗೆ ಹಲವು ಅರ್ಥಗಳಿರುತ್ತವೆ ಎಂಬುದು ಮಕ್ಕಳಿಗೆ ಎಳೆಯೆ ವಯಸ್ಸಿನಿಂದಲೇ ಪರಿಚಯ ಮಾಡಿಸುವುದು ಅವರ ಮುಕ್ತ ವಿವೇಚನೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಸಂದೇಶವನ್ನು ಹಾಗು ತಿಳುವಳಿಕೆಯನ್ನು ಸಾರಲು ಕತೆಗಳು ಉತ್ತಮ ಮಾಧ್ಯಮಗಳು.
<ref>.ಶತಮಾನದ ಮಕ್ಕಳ ಸಾಹಿತ್ಯ - ಸಂ.ಎನ್.ಎಸ್.ರಘುನಾಥ್; ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. ೨೦೦೧</ref>.<ref> ಕನ್ನಡ ವಿಶ್ವಕೋಶ ಸಂಪುಟ ಮೂರು. ಕನ್ನಡ ಅಧ್ಯಯನ ಸಂಸ್ಥೆ ;, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ೧೯೯೧.</ref><ref>ಎನ್.ಶ್ರೀನಿವಾಸ ಉಡುಪ, ಕುಂಬಕಣ‍ನ ನಿದ್ದೆ.; ನವಕರ್ನಾಟಕ ಪ್ರಕಾಶನ ಬೆಂಗಳೂರು - ೧೯೯೯.</ref>
==ಸಂಗ್ರಹಗಳು==
==ಉಲ್ಲೇಖಗಳು==
# ಶತಮಾನದ ಮಕ್ಕಳ ಸಾಹಿತ್ಯ - ಸಂ.ಎನ್.ಎಸ್.ರಘುನಾಥ್ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. ೨೦೦೧</ref>.
# ಕನ್ನಡ ವಿಶ್ವಕೋಶ ಸಂಪುಟ ಮೂರು. ಕನ್ನಡ ಅಧ್ಯಯನ ಸಂಸ್ಥೆ , ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ೧೯೯೧.</ref>
# ಎನ್.ಶ್ರೀನಿವಾಸ ಉಡುಪ, ಕುಂಬಕಣ‍ನ ನಿದ್ದೆ. ನವಕರ್ನಾಟಕ ಪ್ರಕಾಶನ ಬೆಂಗಳೂರು - ೧೯೯೯.</ref>
 
[[ವರ್ಗ:ಸಾಹಿತ್ಯ]]
[[ವರ್ಗ:ಕನ್ನಡ ಸಾಹಿತ್ಯ]]
"https://kn.wikipedia.org/wiki/ಮಕ್ಕಳ_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ