ಎಸ್.ಜಿ ನರಸಿಂಹಾಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪ ನೇ ಸಾಲು:
*ಎಸ್. ಜಿ. ನರಸಿಂಹಾಚಾರ್ಯರು ಕಾವ್ಯ ಹಾಗೂ ಗದ್ಯಗ್ರಂಥಗಳ ಭಾಷಾಂತರವನ್ನು ಮಾಡಿದ್ದಲ್ಲದೆ ಹಲವಾರು ಸ್ವತಂತ್ರ ಕೃತಿಗಳನ್ನು ರಚಿಸಿದರು. ಅನೇಕ ಹಳಗನ್ನಡ, ನಡುಗನ್ನಡ ಗ್ರಂಥಗಳ ಪ್ರಕಟಣೆ ಮಾಡಿದರು. ಅನೇಕ ಕನ್ನಡ ಕವಿಗಳ ಚಂಪೂ, ಗದ್ಯ, ಪದ್ಯ, ನಾಟಕ, ಕೀರ್ತನೆ, ಶತಕ, ನಿಘಂಟುಗಳನ್ನು ಪರಿಷ್ಕರಿಸಿ ಪ್ರಕಟಿಸಿದ ಕೀರ್ತಿ ಇವರದು. ಗದಾಯುದ್ಧ, ಮಲ್ಲಿನಾಥ ಪುರಾಣ, ಲೀಲಾವತಿ ಪ್ರಬಂಧ, ಕರ್ನಾಟಕ ಪಂಚತಂತ್ರ, ಮಿತ್ರವಿಂದಾ ಗೋವಿಂದ, ಜಯನೃಪ ಕಾವ್ಯ ಮೊದಲಾದ ಪ್ರಮುಖ ಗ್ರಂಥಗಳ ಪ್ರಕಟಣೆ ಮಾಡಿದರು. ಪ್ರಾಚ್ಯಕೋಶಾಗಾರದ ಮೂಲಕ ಆದಿಪುರಾಣ, ಜಗನ್ನಾಥ ವಿಜಯದ ಪರಿಷ್ಕರಣೆಗಳನ್ನು ಹೊರತಂದರು. ಇವು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಗ್ರಂಥಮಾಲೆಯ ಪ್ರವರ್ತಕ ಗ್ರಂಥಗಳು.
*ನರಸಿಂಹಾಚಾರ್ಯರು 1892ರಲ್ಲಿ ಎಂ.ಎ. ರಾಮಾನುಜ ಅಯ್ಯಂಗಾರ್ಯರೊಡನೆ ‘ಕರ್ನಾಟಕ ಕಾವ್ಯಮಂಜರಿ’ ಮಾಸಪತ್ರಿಕೆ ಪ್ರಾರಂಭ ಮಾಡಿದರು. ಪತ್ರಿಕೆ ನಿಂತುಹೋದಾಗ 1899ರಲ್ಲಿ ‘ಕರ್ನಾಟಕ ಕಾವ್ಯ ಕಲಾನಿ' ಪತ್ರಿಕೆ ಪ್ರಾರಂಭ ಮಾಡಿದರು.
===ಬಾಲ ಸಾಹಿತ್ಯ===
*ಬಾಲ ಸಾಹಿತ್ಯಕ್ಕೂ ಎಸ್. ಜಿ. ನರಸಿಂಹಾಚಾರ್ಯರ ಕೊಡುಗೆ ಅಪಾರ. ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಪಠ್ಯ ಸಮಿತಿಯ ನಿಯಮಾನುಸಾರ ಹಿಂದೂದೇಶದ ನಾಗರಿಕತೆ, ಬಾಲಭೂವಿವರಣೆಯ ಕೃತಿಗಳನ್ನು ಮೂಡಿಸಿದರು. ಮಕ್ಕಳ ಪದ್ಯಗಳಲ್ಲಿ ಮಿನುಗು ಮಿನುಗುತಿಹ ಕಿರುತಾರಣಿಯೆ, ಬಾರೋ ನಾವಾಡುವ ಬಾರೋ, 'ಇಟ್ಟರೆ ಸಗಣಿಯಾದೆ' ಇಂದಿಗೂ ಜನಪ್ರಿಯ ಪದ್ಯಗಳು.
*ಎಸ್. ಜಿ. ನರಸಿಂಹಾಚಾರ್ ಅವರು ಮೂಡಿಸಿದ ಕೃತಿಗಳಲ್ಲಿ ದಿಲೀಪ ಚರಿತೆ, ಅಜನೃಪ ಚರಿತೆ, ಶಾಲಾಪಠ್ಯಗಳಾದ ಷಟ್ಪದಿ ಕಾವ್ಯಗಳು, ಪ್ರೋಷಿತ ಪ್ರಿಯ ಸಮಾಗಮಂ, ಗೋಡ್ಲ್‌ಸ್ಮಿತ್‌ನ ‘ದಿ ಹರ್ಮಿಟ್’ 9 ಜನ ವೀರ ಪುರುಷರ ವೃತ್ತಾಂತದ ಭಾರತ ವೀರ ಚರಿತೆ, ಅಲ್ಲಾವುದೀನ್ ಮತ್ತು ಅದ್ಭುತ ದೀಪ, ಉತ್ತರ ರಾಮಚರಿತಂ, ಸಂಸ್ಕೃತ ನಾಟಕಾನುವಾದ, ಈಸೋಪನ ನೀತಿಕಥೆಗಳು, ಗಲಿವರನ ದೇಶ ಸಂಚಾರ, ಗಯ್ಯಾಳಿಯನ್ನು ಸಾಧುಮಾಡುವಿಕೆ, ಭಾರವಿ, ಮುಕುಂದಮಾಲೆ ಮುಂತಾದುವು ಸೇರಿವೆ.<ref>[https://www.sallapa.com/2020/09/blog-post_69.html ಸಂಸ್ಕೃತಿ ಸಲ್ಲಾಪಎಸ್. ಜಿ. ನರಸಿಂಹಾಚಾರ್]</ref>