ಎಸ್.ಜಿ ನರಸಿಂಹಾಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ವಿಸ್ತರಣೆ++
೧ ನೇ ಸಾಲು:
'''ಎಸ್.ಜಿ ನರಸಿಂಹಾಚಾರ್''' (1862-1907- ಕ್ರಿ.ಶ.೧೮೬೨-೧೯೦೭) ಪ್ರಾಚೀನ [[ಕನ್ನಡ]] ಕಾವ್ಯಗಳನ್ನು ಸಂಪಾದಿಸಿ ಹೊರತಂದ ಮೊದಲ ಕನ್ನಡಿಗರು, ಸ್ವಂತ ಕವಿಗಳೂ ಹೌದು. ಹುಟ್ಟಿದ್ದು [[ಶ್ರೀರಂಗಪಟ್ಟಣ]]ದಲ್ಲಿ. ಇವರು ಕನ್ನಡದ ಪ್ರಸಿದ್ಡ ಅನುವಾದಕಾರರು. ಇವರು [[ಆಂಗ್ಲ ಭಾಷೆ|ಆಂಗ್ಲ ಭಾ‍ಷೆಯ]] ಪ್ರಸಿದ್ಡ ಮಕ್ಕಳ ಗೀತೆಯಾದ '''ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್'''ನ್ನು ಕನ್ನಡಕ್ಕೆ '''ಮಿರು ಮಿರುಗುವ ಹಾ ಕಿರು ತಾರಗಯ''' ಎಂದು ಅನುವಾದ ಮಾಡಿದ್ದಾರೆ.ಮೊದಲು ಇಂಗ್ಲಿಷ್ ಗೀತೆಗಳ ಅನುವಾದ ಕಾರ್ಯವನ್ನು ಪ್ರಾರಂಬಿಸಿದವರು.
===ಕುಟುಂಬ- ಉದ್ಯೋಗ- ಕನ್ನಡ ಸೇವೆ===
*ನರಸಿಂಹಾಚಾರ್ಯರು 1862ರ ಸೆಪ್ಟೆಂಬರ್ 11ರಂದು ಶ್ರೀರಂಗಪಟ್ಟಣದಲ್ಲಿ ಜನಿಸಿದರು. ತಂದೆ ದೇವಾಲಯದಲ್ಲಿ ಕೈಂಕರ್ಯದಲ್ಲಿದ್ದ ಪೂಜಾಳಂ ಮನೆತನದ ಅಳಸಿಂಗಾಚಾರ್ಯರು. ತಾಯಿ ಸೀತಮ್ಮನವರು. ನರಸಿಂಹಾಚಾರ್ಯರ ಪ್ರಾರಂಭಿಕ ಶಿಕ್ಷಣ ಶ್ರೀರಂಗಪಟ್ಟಣದಲ್ಲಿ ಹಾಗೂ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ನಡೆಯಿತು. ಬಿ.ಎ. ಪದವಿಯ ನಂತರ ಮೈಸೂರು ಸರಕಾರದ ವಿದ್ಯಾ ಇಲಾಖೆಗೆ ಸೇರಿ ಶ್ರೀರಂಗಪಟ್ಟಣದಲ್ಲಿ ಉಪಾಧ್ಯಾಯರಾಗಿ, ಮೈಸೂರು ಪ್ರಾಚ್ಯ ಕೋಶಾಗಾರದಲ್ಲಿ ಪಂಡಿತರಾಗಿ, ಗ್ರಂಥಪಾಲಕರಾಗಿ, ಸರಕಾರದ ಕನ್ನಡ ಭಾಷಾಂತರಕಾರರಾಗಿ ವಿವಿದೆಡೆಯಲ್ಲಿ ಸೇವೆ ಸಲ್ಲಿಸಿದರು. ಕನ್ನಡ ಭಾಷಾಭಿವೃದ್ಧಿ ಸಮಿತಿ, ಶಾಲಾ ಪಠ್ಯ ನಿಯಾಮಕ ಸಮಿತಿ, ಪರೀಕ್ಷಾ ಮಂಡಲಿಗಳಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು.
*ಎಸ್. ಜಿ. ನರಸಿಂಹಾಚಾರ್ಯರು ಕಾವ್ಯ ಹಾಗೂ ಗದ್ಯಗ್ರಂಥಗಳ ಭಾಷಾಂತರವನ್ನು ಮಾಡಿದ್ದಲ್ಲದೆ ಹಲವಾರು ಸ್ವತಂತ್ರ ಕೃತಿಗಳನ್ನು ರಚಿಸಿದರು. ಅನೇಕ ಹಳಗನ್ನಡ, ನಡುಗನ್ನಡ ಗ್ರಂಥಗಳ ಪ್ರಕಟಣೆ ಮಾಡಿದರು. ಅನೇಕ ಕನ್ನಡ ಕವಿಗಳ ಚಂಪೂ, ಗದ್ಯ, ಪದ್ಯ, ನಾಟಕ, ಕೀರ್ತನೆ, ಶತಕ, ನಿಘಂಟುಗಳನ್ನು ಪರಿಷ್ಕರಿಸಿ ಪ್ರಕಟಿಸಿದ ಕೀರ್ತಿ ಇವರದು. ಗದಾಯುದ್ಧ, ಮಲ್ಲಿನಾಥ ಪುರಾಣ, ಲೀಲಾವತಿ ಪ್ರಬಂಧ, ಕರ್ನಾಟಕ ಪಂಚತಂತ್ರ, ಮಿತ್ರವಿಂದಾ ಗೋವಿಂದ, ಜಯನೃಪ ಕಾವ್ಯ ಮೊದಲಾದ ಪ್ರಮುಖ ಗ್ರಂಥಗಳ ಪ್ರಕಟಣೆ ಮಾಡಿದರು. ಪ್ರಾಚ್ಯಕೋಶಾಗಾರದ ಮೂಲಕ ಆದಿಪುರಾಣ, ಜಗನ್ನಾಥ ವಿಜಯದ ಪರಿಷ್ಕರಣೆಗಳನ್ನು ಹೊರತಂದರು. ಇವು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಗ್ರಂಥಮಾಲೆಯ ಪ್ರವರ್ತಕ ಗ್ರಂಥಗಳು.
*ನರಸಿಂಹಾಚಾರ್ಯರು 1892ರಲ್ಲಿ ಎಂ.ಎ. ರಾಮಾನುಜ ಅಯ್ಯಂಗಾರ್ಯರೊಡನೆ ‘ಕರ್ನಾಟಕ ಕಾವ್ಯಮಂಜರಿ’ ಮಾಸಪತ್ರಿಕೆ ಪ್ರಾರಂಭ ಮಾಡಿದರು. ಪತ್ರಿಕೆ ನಿಂತುಹೋದಾಗ 1899ರಲ್ಲಿ ‘ಕರ್ನಾಟಕ ಕಾವ್ಯ ಕಲಾನಿ' ಪತ್ರಿಕೆ ಪ್ರಾರಂಭ ಮಾಡಿದರು.
===ಬಾಲ ಸಾಹಿತ್ಯ==
*ಬಾಲ ಸಾಹಿತ್ಯಕ್ಕೂ ಎಸ್. ಜಿ. ನರಸಿಂಹಾಚಾರ್ಯರ ಕೊಡುಗೆ ಅಪಾರ. ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಪಠ್ಯ ಸಮಿತಿಯ ನಿಯಮಾನುಸಾರ ಹಿಂದೂದೇಶದ ನಾಗರಿಕತೆ, ಬಾಲಭೂವಿವರಣೆಯ ಕೃತಿಗಳನ್ನು ಮೂಡಿಸಿದರು. ಮಕ್ಕಳ ಪದ್ಯಗಳಲ್ಲಿ ಮಿನುಗು ಮಿನುಗುತಿಹ ಕಿರುತಾರಣಿಯೆ, ಬಾರೋ ನಾವಾಡುವ ಬಾರೋ, 'ಇಟ್ಟರೆ ಸಗಣಿಯಾದೆ' ಇಂದಿಗೂ ಜನಪ್ರಿಯ ಪದ್ಯಗಳು.
*ಎಸ್. ಜಿ. ನರಸಿಂಹಾಚಾರ್ ಅವರು ಮೂಡಿಸಿದ ಕೃತಿಗಳಲ್ಲಿ ದಿಲೀಪ ಚರಿತೆ, ಅಜನೃಪ ಚರಿತೆ, ಶಾಲಾಪಠ್ಯಗಳಾದ ಷಟ್ಪದಿ ಕಾವ್ಯಗಳು, ಪ್ರೋಷಿತ ಪ್ರಿಯ ಸಮಾಗಮಂ, ಗೋಡ್ಲ್‌ಸ್ಮಿತ್‌ನ ‘ದಿ ಹರ್ಮಿಟ್’ 9 ಜನ ವೀರ ಪುರುಷರ ವೃತ್ತಾಂತದ ಭಾರತ ವೀರ ಚರಿತೆ, ಅಲ್ಲಾವುದೀನ್ ಮತ್ತು ಅದ್ಭುತ ದೀಪ, ಉತ್ತರ ರಾಮಚರಿತಂ, ಸಂಸ್ಕೃತ ನಾಟಕಾನುವಾದ, ಈಸೋಪನ ನೀತಿಕಥೆಗಳು, ಗಲಿವರನ ದೇಶ ಸಂಚಾರ, ಗಯ್ಯಾಳಿಯನ್ನು ಸಾಧುಮಾಡುವಿಕೆ, ಭಾರವಿ, ಮುಕುಂದಮಾಲೆ ಮುಂತಾದುವು ಸೇರಿವೆ.<ref>[https://www.sallapa.com/2020/09/blog-post_69.html ಸಂಸ್ಕೃತಿ ಸಲ್ಲಾಪಎಸ್. ಜಿ. ನರಸಿಂಹಾಚಾರ್]</ref>
===ವಿದ್ವತ್ತು===
ಎಸ್.ಜಿ.ನರಸಿಂಹಾಚಾರ್ ಕನ್ನಡವನ್ನು ಹೊರತುಪಡಿಸಿ ಸಂಸ್ಕೃತ, ತಮಿಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಬುದ್ಧ ವಿದ್ವಾಂಸ. ಅವರು ಅನುವಾದಕರಾಗಿ ಪಾರ್ ಎಕ್ಸಲೆನ್ಸ್ ಎನ್ನಿಸಿಕೊಂಡಿದ್ದಾರೆ. ಇಂಗ್ಲಿಷ್ನಿಂದ ಅವರ ಇಂಗ್ಲಷ್ ಛಂದಸ್ಸಿನ ಬ್ಲ್ಯಾಕ್‍ವರ್ಸ್ ಅನುವಾದಗಳು ಪ್ರಸಿದ್ಧ ಮತ್ತು
“ಇಟ್ಟರೆ ಸಗಣಿಯಾದೆ” ಮತ್ತು “ಕಾವೇರಿಯ ಮಹಿಮೆ” ಯಂತಹ ಕವನಗಳು ಬಹಳ ಜನಪ್ರಿಯವಾಗಿವೆ. ಅವರ ಇತರ ಪ್ರಮುಖ ಕೃತಿಗಳಲ್ಲಿ ‘ಹಿಂದೂದೇಶ ಚರಿತ್ರೆ’, ‘ಅಲ್ಲಾವುದಿನಾನ
ಅದ್ಭುತ ದೀಪ ’,‘ ಈಸೋಪನ ನೀತಿಕಥೆಗಳು ’,‘ ಗಲಿವರನ ದೇಶಸಂಚಾರ' ಮತ್ತು ‘ಭಾರತ ವೀರಚರಿತೆ’ ಇವು ಮುಖ್ಯವಾದವು. ಅವರು 1907 ರಲ್ಲಿ ಧಾರವಾಡದಲ್ಲಿ ನಡೆದ ಕನ್ನಡದ ಬರಹಗಾರರ ಮೊದಲ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. <ref>[http://gazetteer.kar.nic.in/gazetteer/pdf/2009-22-0/Mandya_2009_Chapter14_Literature_and_Culture.pdf CHAPTER XIV LITERATURE AND CULTURE The Renaissance Literature and Culture Mandya District Gazetteer]</ref>
*1907ರ ಡಿಸೆಂಬರ್ 22ರಂದು ಇನ್ನೂ 45ರ ಹರೆಯದಲ್ಲೇ ಎಲ್ಲರನ್ನೂ ಅಗಲಿಹೋದರು.<ref>[https://www.sallapa.com/2020/09/blog-post_69.html ಸಂಸ್ಕೃತಿ ಸಲ್ಲಾಪಎಸ್. ಜಿ. ನರಸಿಂಹಾಚಾರ್]</ref>
===ಮಕ್ಕಳ ಪದ್ಯಗಳು===
*ನಕ್ಷತ್ರ (ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್)
Line ೩೩ ⟶ ೪೧:
 
[[ವರ್ಗ:ಅನುವಾದಕರು]] [[ವರ್ಗ:ಲೇಖಕರು]]