ಜುನೂನ್ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Junoon (1978 film)" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
( ಯಾವುದೇ ವ್ಯತ್ಯಾಸವಿಲ್ಲ )

೦೨:೨೫, ೧೫ ಫೆಬ್ರವರಿ ೨೦೨೧ ನಂತೆ ಪರಿಷ್ಕರಣೆ

ಜುನೂನ್ (ಅನುವಾದ : ಗೀಳು) 1978 ರ ಒಂದು ಹಿಂದಿ ಚಲನಚಿತ್ರ. ಇದನ್ನು ಶಶಿ ಕಪೂರ್ ನಿರ್ಮಿಸಿದ್ದಾರೆ ಮತ್ತು ಶ್ಯಾಮ್ ಬೆನೆಗಲ್ ನಿರ್ದೇಶಿಸಿದ್ದಾರೆ. ಈ ಚಿತ್ರವು ರಸ್ಕಿನ್ ಬಾಂಡ್ ಅವರ ಕಾಲ್ಪನಿಕ ಕಾದಂಬರಿ ಅ ಫ್ಲೈಟ್ ಆಫ್ ಪಿಜನ್ಸ್‍ನ್ನು ಆಧರಿಸಿದೆ. ಇದು 1857ರ ಭಾರತೀಯ ದಂಗೆಯ ಸುತ್ತ ರಚಿಸಲ್ಪಟ್ಟಿದೆ. ಚಿತ್ರದ ಧ್ವನಿವಾಹಿನಿಯನ್ನು ವನ್‍ರಾಜ್ ಭಾಟಿಯಾ ಸಂಯೋಜಿಸಿದರೆ ಛಾಯಾಗ್ರಹಣವನ್ನು ಗೋವಿಂದ್ ನಿಹಲಾನಿ ಮಾಡಿದ್ದಾರೆ.[೧]

ಜುನೂನ್
ಚಲನಚಿತ್ರದ ಭಿತ್ತಿಪತ್ರ
ನಿರ್ದೇಶನಶ್ಯಾಂ ಬೆನೆಗಲ್
ನಿರ್ಮಾಪಕಶಶಿ ಕಪೂರ್
ಲೇಖಕಶ್ಯಾಂ ಬೆನೆಗಲ್ (ಚಿತ್ರಕಥೆ)
ಸತ್ಯದೇವ್ ದುಬೇ (ಸಂಭಾಷಣೆ)
ಇಸ್ಮತ್ ಚುಗ್ತಾಯ್ (ಸಂಭಾಷಣೆ)
ರಸ್ಕಿನ್ ಬಾಂಡ್
ಆಧಾರರಸ್ಕಿನ್ ಬಾಂಡ್‍ರ ಅ ಫ಼್ಲೈಟ್ ಆಫ಼್ ಪಿಜನ್ಸ್ ಮೇಲೆ ಆಧಾರಿತ
ಸಂಭಾಷಣೆಅಮ್ರೀಶ್ ಪುರಿ
ಪಾತ್ರವರ್ಗಶಶಿ ಕಪೂರ್
ಶಬಾನಾ ಆಜ಼್ಮಿ
ಜೆನಿಫರ್ ಕೆಂಡಾಲ್
ನಾಸೀರುದ್ದೀನ್ ಷಾ
ಸಂಗೀತವನ್‍ರಾಜ್ ಭಾಟಿಯಾ
ಛಾಯಾಗ್ರಹಣಗೋವಿಂದ್ ನಿಹಲಾನಿ
ಸಂಕಲನಭಾನುದಾಸ್ ದಿವಾಕರ್
ಬಿಡುಗಡೆಯಾಗಿದ್ದು
  • 30 ಮಾರ್ಚ್ 1979 (1979-03-30)
ಅವಧಿ141 ನಿಮಿಷಗಳು
ದೇಶಭಾರತ
ಭಾಷೆಹಿಂದಿ
ಇಂಗ್ಲಿಷ್

ಇದರ ಪಾತ್ರವರ್ಗದಲ್ಲಿ ಶಶಿ ಕಪೂರ್, ಅವರ ಪತ್ನಿ ಜೆನ್ನಿಫರ್ ಕೆಂಡಾಲ್, ನಫೀಸಾ ಅಲಿ, ಟಾಮ್ ಆಲ್ಟರ್, ಶಬಾನಾ ಅಜ್ಮಿ, ಕುಲಭೂಷಣ್ ಖರ್ಬಂದಾ, ನಸೀರುದ್ದೀನ್ ಷಾ, ದೀಪ್ತಿ ನವಲ್, ಪರ್ಲ್ ಪದಮ್ಸೀ ಮತ್ತು ಸುಷ್ಮಾ ಸೇಠ್ ಸೇರಿದ್ದಾರೆ.[೨] ಈ ಚಿತ್ರದಲ್ಲಿ ಶಶಿ ಮತ್ತು ಜೆನ್ನಿಫರ್ ಅವರ ಮಕ್ಕಳಾದ ಕರಣ್ ಕಪೂರ್, ಕುನಾಲ್ ಕಪೂರ್ ಮತ್ತು ಸಂಜನಾ ಕಪೂರ್ ಕೂಡ ಇದ್ದರು.

ಕಥಾವಸ್ತು

ಈ ಕಥೆಯನ್ನು 1857ಭಾರತೀಯ ದಂಗೆಯ ಸುತ್ತಲೂ ರೂಪಿಸಲ್ಪಟ್ಟಿದೆ. ಜಾವೇದ್ ಖಾನ್ (ಶಶಿ ಕಪೂರ್) ಮುಸ್ಲಿಂ ಪಠಾಣ್ ಪರಂಪರೆಯನ್ನು ಹೊಂದಿರುವ ಅಜಾಗರೂಕ ಊಳಿಗಮಾನ್ಯ ಮುಖಂಡನಾಗಿರುತ್ತಾನೆ. ಅವನ ಪ್ರಪಂಚವು ವಾಹಕ ಪಾರಿವಾಳಗಳ ಸಂತಾನೋತ್ಪತ್ತಿಯ ಸುತ್ತ ಸುತ್ತುತ್ತದೆ. ಅವನ ಕಿರಿಯ ಸೋದರ ಮಾವ ಸರ್ಫರಾಜ್ ಖಾನ್ (ನಸೀರುದ್ದೀನ್ ಷಾ) ರಾಜಕೀಯವಾಗಿ ಜಾಗೃತಗೊಂಡಿರುತ್ತಾನೆ ಮತ್ತು ಬ್ರಿಟೀಷರ ವಿರುದ್ಧದ ಹೋರಾಟವನ್ನು ಸಕ್ರಿಯವಾಗಿ ಯೋಜಿಸುತ್ತಾನೆ. ಸ್ವಾತಂತ್ರ್ಯ ಹೋರಾಟಗಾರರು ಸ್ಥಳೀಯ ಬ್ರಿಟಿಷ್ ಆಡಳಿತಗಾರರ ಮೇಲೆ ಅವರು ಚರ್ಚ್‌ನಲ್ಲಿ ಭಾನುವಾರ ಪೂಜೆಯಲ್ಲಿರುವಾಗ ದಾಳಿ ಮಾಡುತ್ತಾರೆ. ಅವರೆಲ್ಲರನ್ನೂ ಕಗ್ಗೊಲೆ ಮಾಡುತ್ತಾರೆ. ಮಿರಿಯಮ್ ಲಬಡೂರ್ (ಜೆನ್ನಿಫರ್ ಕೆಂಡಾಲ್) ತನ್ನ ಮಗಳು, ರುತ್ (ನಫಿಸಾ ಅಲಿ) ಮತ್ತು ರಾಂಪುರದ ಅರಸು ನವಾಬ್ ಕುಟುಂಬದ ಮುಸ್ಲಿಂ ಮಹಿಳೆ ಮತ್ತು ಇಂಗ್ಲಿಷ್ ವ್ಯಕ್ತಿಯನ್ನು ಮದುವೆಯಾದ ತನ್ನ ತಾಯಿಯೊಂದಿಗೆ (ಇಸ್ಮತ್ ಚುಗ್ತೈ) ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾಳೆ. ಆ ಮೂವರು ಮಹಿಳೆಯರು ಲಾಲಾ ರಾಮ್‌ಜೀಮಲ್ (ಕುಲಭೂಷಣ್ ಖರ್ಬಂದಾ) ಎಂಬ ಶ್ರೀಮಂತ ಹಿಂದೂ ಕುಟುಂಬದಲ್ಲಿ ಆಶ್ರಯ ಕೇಳುತ್ತಾರೆ. ಲಾಲಾ ಭಾರತದ ಬಗೆಗಿನ ತನ್ನ ನಿಷ್ಠೆ ಮತ್ತು ಬ್ರಿಟೀಷರ ಕೆಳಗೆ ತನ್ನ ಸವಲತ್ತುಳ್ಳ ಸ್ಥಾನಗಳ ನಡುವೆ, ಮತ್ತು ಮಿರಿಯಮ್ ಬಗ್ಗೆ ತನ್ನ ಮೂಕ ಪ್ರೀತಿಯಲ್ಲಿಯೂ ಸೀಳಿಹೋಗುತ್ತಾನೆ. ಅವಳೂ ಮೌನವಾಗಿ ಅದನ್ನು ಹಿಂದಿರುಗುಸುತ್ತಿರುವಂತೆ ತೋರುತ್ತದೆ. ಆದರೆ, ಜಾವೇದ್ ಖಾನ್ ಲಾಲಾನ ಮನೆಗೆ ನುಗ್ಗಿದಾಗ ಪರಿಸ್ಥಿತಿ ಅವನ ಕೈಯಿಂದ ತಪ್ಪಿಹೋಗಿ, ಜಾವೇದ್ ರುತ್ ಮತ್ತು ಅವರ ಕುಟುಂಬವನ್ನು ಬಲವಂತವಾಗಿ ತನ್ನ ಮನೆಗೆ ಕರೆದೊಯ್ಯುತ್ತಾನೆ. ಇದು ಅವನ ಪತ್ನಿ ಫಿರ್ದೌಸ್‍ನ (ಶಬಾನಾ ಅಜ್ಮಿ) ಅಸೂಯೆ ಮತ್ತು ಅವನ ಸಹೋದರನ ಕೋಪಕ್ಕೆ ಕಾರಣವಾಗುತ್ತದೆ. ಅವನು ಅಂತಿಮವಾಗಿ ಆಹ್ವಾನಿಸದ ಅತಿಥಿಗಳಿಗೆ ಸಹ ಆತಿಥ್ಯ ಮತ್ತು ಅಭಯಧಾಮವನ್ನು ನೀಡುವ ಪಠಾಣ್ ಸಂಪ್ರದಾಯವನ್ನು ಒಪ್ಪಿಕೊಳ್ಳುತ್ತಾನೆ. ಮುಸ್ಲಿಂ ಮನೆಯ ದೇಶೀಯ ದಿನಚರಿಯಲ್ಲಿ ಅದರ ಹೊಸ ಇಂಗ್ಲಿಷ್ ಅತಿಥಿಗಳೊಂದಿಗೆ ಸಾಂಸ್ಕೃತಿಕ ತಪ್ಪುಗ್ರಹಿಕೆಯಿಂದಾಗಿ ವಿವಿಧ ಸನ್ನಿವೇಶಗಳು ಉಂಟಾಗುತ್ತವೆ. ಜಾವೇದ್ ರುತ್‌ನನ್ನು ಪ್ರೀತಿಸುತ್ತಾನೆ, ಮತ್ತು ಅವಳನ್ನು ಮದುವೆಯಾಗಲು ಬಯಸುತ್ತಾನೆ. ಆದರೆ ಅವಳ ತಾಯಿ ಅದನ್ನು ತೀವ್ರವಾಗಿ ವಿರೋಧಿಸುತ್ತಾಳೆ. ಮಗಳು ರುತ್ ಬಗ್ಗೆ ಜಾವೇದ್‌ನ ತೀವ್ರವಾದ ಭಾವನೆಗಳನ್ನು ಗಮನಿಸಿದ ಮಿರಿಯಮ್ ಲಬಡೂರ್ (ತಾಯಿ) ಜಾವೇದ್‌ನೊಂದಿಗೆ ಜಾಣತನದ ಒಪ್ಪಂದ ಮಾಡಿಕೊಳ್ಳುತ್ತಾಳೆ. ಬ್ರಿಟೀಷರನ್ನು ಸೋಲಿಸಿದರೆ ಮಾತ್ರ ಮಗಳ ಕೈಯನ್ನು ಜಾವೇದ್‌ಗೆ ಕೊಡುವುದಾಗಿ ಹೇಳುತ್ತಾಳೆ. ಮೊದಲಿಗೆ, ಜಾವೇದ್ ಹಿಂಜರಿಯುತ್ತಾನೆ. ಆದರೆ ಮಿರಿಯಮ್ ಬ್ರಿಟೀಷರ ವಿರುದ್ಧದ ಯುದ್ಧದಲ್ಲಿ ಅವನಿಗೆ ಅಳಕುಗಳಿವೆಯೇ ಎಂದು ಕೇಳಿದಾಗ ಅವನು ಆ ಪ್ರಸ್ತಾಪವನ್ನು ಸ್ವೀಕರಿಸುತ್ತಾನೆ. ಫಿರ್ದೌಸ್‌ನ ಕಾವಲಿನ ಅನುಮಾನಾಸ್ಪದ ಕಣ್ಣುಗಳ ಅಡಿಯಲ್ಲಿ ಒಂದು ಪ್ರೇಮ ಪ್ರಕರಣದ ಮರಳುವಿಕೆ ಇದೆ.

ಏತನ್ಮಧ್ಯೆ, ದಂಗೆಯು ಸಮಸ್ಯೆಗಳಿಗೆ ಸಿಲುಕುತ್ತದೆ ಮತ್ತು ಬ್ರಿಟೀಷರು ಕಳಪೆಯಾಗಿ ಸಂಘಟಿಸಲ್ಪಟ್ಟ ಭಾರತೀಯ ಪಡೆಗಳನ್ನು ಸೋಲಿಸುತ್ತಿದ್ದಾರೆ. ಒಂದು ಬಿರುಸಾದ ದೃಶ್ಯದಲ್ಲಿ, ಭಾರತೀಯ ಪಡೆಗಳು ದೆಹಲಿ ಯುದ್ಧವನ್ನು ಸೋತಿವೆ ಎಂದು ತಿಳಿದ ನಂತರ ಸರ್ಫರಾಜ್ ಜಾವೇದ್‍ನ ಗೂಡುಗಳನ್ನು ನಾಶಪಡಿಸಿ ತನ್ನ ಸಾಕುಪ್ರಾಣಿಗಳನ್ನು ಮುಕ್ತಗೊಳಿಸುತ್ತಾನೆ. ಬ್ರಿಟೀಷರಿಂದ ವಸಾಹತೀಕರಣಗೊಂಡ ಜಾವೇದ್‍ಗೆ ತನ್ನ ಅಧೀನ ಗುರುತಿನ ವಿಳಂಬದ ಗುರುತಾಗುತ್ತದೆ. ಬ್ರಿಟೀಷರ ವಿರುದ್ಧದ ಯುದ್ಧದಲ್ಲಿ ಸರ್ಫರಾಜ್ ಸಾಯುತ್ತಾನೆ. ಫಿರ್ದೌಸ್ ಕಳ್ಳತನದಿಂದ ಲಬಡೂರರನ್ನು ಸಾಗಿಸಿ ಮರು ನಿಯೋಜಿತ ಬ್ರಿಟಿಷ್ ತುಕಡಿಯ ರಕ್ಷಣೆಗೆ ಹಿಂತಿರುಗಿಸುತ್ತಾಳೆ. ಆಕೆ ತನ್ನ ಮದುವೆಯನ್ನು ಮಾತ್ರ ಉಳಿಸಿಕೊಳ್ಳಲು ಬಯಸುತ್ತಾಳೆ. ಲಬಡೂರ್‌ಗಳು ಚರ್ಚ್‌ನಲ್ಲಿ ಅಭಯಧಾಮವನ್ನು ಕೇಳಿದ್ದಾರೆಂದು ಜಾವೇದ್‍ಗೆ ಗೊತ್ತಾಗಿ ಕೊನೆಯ ಬಾರಿಗೆ ರುತ್‌ನನ್ನು ಭೇಟಿಯಾಗಲು ಅಲ್ಲಿಗೆ ಧಾವಿಸುತ್ತಾನೆ. ಆಶ್ಚರ್ಯಕರವಾಗಿ, ರುತ್ ಹೊರಬಂದು ತನ್ನ ತಾಯಿಯ ಇಚ್ಛೆಗೆ ವಿರುದ್ಧವಾಗಿ ಜಾವೇದ್ ಬಗ್ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾಳೆ. ಆದರೆ, ಜಾವೇದ್ ತನ್ನ ಮಾತು ಮತ್ತು ಮಿರಿಯಮ್ ಲಬಡೂರ್‌ಗೆ ನೀಡಿದ ಭರವಸೆಯನ್ನು ಗೌರವದಿಂದ ಉಳಿಸಿಕೊಂಡು ರೂತ್‍ಳನ್ನು ಬಿಟ್ಟು ಚರ್ಚ್ ಅನ್ನು ತೊರೆಯುತ್ತಾನೆ. ರೂತ್ ಮತ್ತು ಅವಳ ತಾಯಿ ಇಂಗ್ಲೆಂಡ್‌ಗೆ ಹಿಂದಿರುಗುತ್ತಾರೆ ಮತ್ತು ಜಾವೇದ್ ಬ್ರಿಟೀಷರ ವಿರುದ್ಧ ಹೋರಾಡುತ್ತಾ ಹುತಾತ್ಮನಾಗುತ್ತಾನೆ ಎಂಬ ಅಶರೀರವಾಣಿಯೊಂದಿಗೆ ಚಲನಚಿತ್ರವು ಕೊನೆಗೊಳ್ಳುತ್ತದೆ. ರೂತ್ ಐವತ್ತೈದು ವರ್ಷಗಳ ನಂತರ ಮದುವೆಯಾಗದೆ ಸಾಯುತ್ತಾಳೆ.

ಪಾತ್ರವರ್ಗ

  • ಜಾವೇದ್ ಖಾನ್ ಪಾತ್ರದಲ್ಲಿ ಶಶಿ ಕಪೂರ್
  • ರುತ್ ಲಬಡೂರ್ ಪಾತ್ರದಲ್ಲಿ ನಫೀಸಾ ಅಲಿ
  • ಮಿರಿಯಮ್ ಲಬಡೂರ್ ಪಾತ್ರದಲ್ಲಿ ಜೆನ್ನಿಫರ್ ಕೆಂಡಾಲ್
  • ಸರ್ಫರಾಜ್ ಖಾನ್ ಪಾತ್ರದಲ್ಲಿ ನಸೀರುದ್ದೀನ್ ಷಾ
  • ಫಿರ್ದೌಸ್ ಪಾತ್ರದಲ್ಲಿ ಶಬಾನಾ ಅಜ್ಮಿ
  • ಮಿರಿಯಮ್‍ನ ತಾಯಿಯಾಗಿ ಇಸ್ಮತ್ ಚುಗ್ತಾಯ್
  • ಲಾಲಾ ರಾಮ್‌ಜೀಮಲ್ ಪಾತ್ರದಲ್ಲಿ ಕುಲಭೂಷಣ್ ಖರ್ಬಂದಾ
  • ಸಂಜನಾ ಕಪೂರ್
  • ಕುನಾಲ್ ಕಪೂರ್
  • ಕರಣ್ ಕಪೂರ್
  • ರಶೀದ್ ಖಾನ್ ಪಾತ್ರದಲ್ಲಿ ಬೆಂಜಮಿನ್ ಗಿಲಾನಿ
  • ಜಾವೇದ್‍ನ ಚಿಕ್ಕಮ್ಮನಾಗಿ ಸುಷ್ಮಾ ಸೇಠ್
  • ಪಾದ್ರಿ ಪಾತ್ರದಲ್ಲಿ ಟಾಮ್ ಆಲ್ಟರ್
  • ನಿರೂಪಕನಾಗಿ ಅಮ್ರೀಶ್ ಪುರಿ
  • ಜೆಫ್ರಿ ಕೆಂಡಾಲ್
  • ರಶೀದ್‍ನ ಹೆಂಡತಿಯಾಗಿ ದೀಪ್ತಿ ನವಲ್
  • ನಿಷ್ಠುರ ಮಹಿಳೆಯಾಗಿ ಪರ್ಲ್ ಪದಮ್ಸೀ

ಪ್ರಶಸ್ತಿಗಳು

1979 ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

  • ಅತ್ಯುತ್ತಮ ಹಿಂದಿ ಚಲನಚಿತ್ರ - ಶಶಿ ಕಪೂರ್ (ನಿರ್ಮಾಪಕರಾಗಿ)
  • ಅತ್ಯುತ್ತಮ ಛಾಯಾಗ್ರಹಣ - ಗೋವಿಂದ್ ನಿಹಲಾನಿ
  • ಅತ್ಯುತ್ತಮ ಧ್ವನಿಮುದ್ರಣ - ಹಿತೇಂದ್ರ ಘೋಷ್

1980 ರ ಫಿಲ್ಮ್‌ಫೇರ್ ಪ್ರಶಸ್ತಿಗಳು

  • ಅತ್ಯುತ್ತಮ ಚಿತ್ರ - ಶಶಿ ಕಪೂರ್
  • ಅತ್ಯುತ್ತಮ ನಿರ್ದೇಶಕ - ಶ್ಯಾಮ್ ಬೆನೆಗಲ್
  • ಅತ್ಯುತ್ತಮ ಸಂಭಾಷಣೆ - ಪಂಡಿತ್ ಸತ್ಯದೇವ್ ದುಬೆ
  • ಅತ್ಯುತ್ತಮ ಸಂಕಲನ - ಭಾನುದಾಸ್ ದಿವಾಕರ್
  • ಅತ್ಯುತ್ತಮ ಛಾಯಾಗ್ರಹಣ - ಗೋವಿಂದ್ ನಿಹಲಾನಿ
  • ಅತ್ಯುತ್ತಮ ಧ್ವನಿಮುದ್ರಣ - ಹಿತೇಂದ್ರ ಘೋಷ್

1980 ರ ಫಿಲ್ಮ್‌ಫೇರ್ ಪ್ರಶಸ್ತಿಗಳ ನಾಮನಿರ್ದೇಶನಗಳು

  • ಅತ್ಯುತ್ತಮ ಪೋಷಕ ನಟ - ನಸೀರುದ್ದೀನ್ ಶಾ
  • ಅತ್ಯುತ್ತಮ ಪೋಷಕ ನಟಿ - ಜೆನ್ನಿಫರ್ ಕೆಂಡಾಲ್

ಧ್ವನಿವಾಹಿನಿ

ಧ್ವನಿವಾಹಿನಿಯಲ್ಲಿ ವನ್‍ರಾಜ್ ಭಾಟಿಯಾ ಸಂಯೋಜಿಸಿದ 4 ಹಾಡುಗಳಿವೆ. ಯೋಗೇಶ್ ಪ್ರವೀಣ್ ಅವರ ಮೂಲ ಸಾಹಿತ್ಯವಿದೆ ಮತ್ತು ಅಮೀರ್ ಖುಸ್ರೊ, ಜಿಗರ್ ಮೊರಾದಾಬಾದಿ ಮತ್ತು ಸಂತ ಕಬೀರ್ ಅವರಿಂದ ಇತರ ಸಾಹಿತ್ಯವಿದೆ.

  1. "ಖುಸ್ರೋ ರೇನ್ ಪಿಯಾ ಕಿ ಜಾಗಿ ಪೀ ಕೆ ಸಂಗ್" - ಜಮೀಲ್ ಅಹ್ಮದ್
  2. "ಇಷ್ಕ್ ನೇ ತೋಡಿ ಸರ್ ಪೆ ಕಯಾಮತ್" - ಮೊಹಮ್ಮದ್ ರಫಿ
  3. "ಕಮ್ ಲಿವ್ ವಿತ್ ಮೀ ಆಂಡ್ ಬೀ ಮೈ ಲವ್" - ಜೆನ್ನಿಫರ್ ಕೆಂಡಾಲ್
  4. "ಘಿರ್ ಆಯಿ ಕಾರಿ ಘಟಾ ಮತ್ವಾಲಿ ಸಾವನ್ ಕಿ ಆಯಿ ಬಹಾರ್ ರೇ" - ಆಶಾ ಭೋಸ್ಲೆ, ವರ್ಷಾ ಭೋಸ್ಲೆ

ಉಲ್ಲೇಖಗಳು

  1. Sen, Raja (25 August 2005). "Revisiting 1857: Benegal's Junoon". Rediff.com. Retrieved 3 September 2017.
  2. Lokapally, Vijay (10 July 2014). "Blast from the Past: Junoon (1978)". The Hindu. Retrieved 3 September 2017.

ಹೊರಗಿನ ಕೊಂಡಿಗಳು