ವಿಕಿಪೀಡಿಯ:ಯೋಜನೆ/ಬೆಂಗಳೂರಿನ ಶಿಲಾಶಾಸನಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
{{Shortcut|WP:ISB}}
ಬೆಂಗಳೂರಿನ ಇತಿಹಾಸವು ನಮಗೆ ಹೆಚ್ಚಾಗಿ ಗೊತ್ತಿರುವುದುಪ್ರಚಲಿತದಲ್ಲಿರುವುದು [[ಕೆಂಪೇಗೌಡ|ಕೆಂಪೇಗೌಡರ]] ಕಾಲದ ನಂತರದ್ದು ಮಾತ್ರ. ಆದರೆ ಈ ಪ್ರದೇಶದಲ್ಲಿ ಜನವಸತಿಯು ಸುಮಾರು ೨೫೦೦ ವರ್ಷಗಳ ಹಿಂದೆಯೇ ಇತ್ತು ಎಂಬುದನ್ನು ಬೆಂಗಳೂರಿನಲ್ಲಿ ದೊರಕಿರುವ ಕಬ್ಬಿಣ ಯುಗದ ಸಮಾಧಿಗಳು ಹೇಳುತ್ತವೆ. '''ಬೆಂಗಳೂರು''' ಎಂಬ ಹೆಸರು ಕೂಡ ಒಂಬತ್ತನೆಯ ಶತಮಾನದಲ್ಲೇ ಉಲ್ಲೇಖವಾಗಿರುವುದು ಇಲ್ಲಿ ಅತಿ ಮುಖ್ಯ. ಹಳೆಯ [[ಮೈಸೂರು ರಾಜ್ಯ]]ದ ಪ್ರಾಚ್ಯವಿಜ್ಞಾನ ಸಂಸ್ಥೆಯ‌ (ಇಂದಿನ ಪುರಾತತ್ವ ಇಲಾಖೆ) ಮುಖ‍್ಯ ಅಧಿಕಾರಿಯಾಗಿದ್ದ [[ಬಿ.ಎಲ್.ರೈಸ್]] ಅವರು ನಡೆಸಿದ ಅಧ್ಯಯನ ನಡೆಸಿ ಪ್ರಕಟಿಸಿದ [[ಎಪಿಗ್ರಾಫಿಯ ಕರ್ನಾಟಿಕ]] ಗ್ರಂಥದ ಒಂಬತ್ತನೇ ಸಂಪುಟದಲ್ಲಿರುವ ಪ್ರಕಾರ ಈಗಿನ ಬೆಂಗಳೂರು ನಗರ ಪ್ರದೇಶದಲ್ಲಿ ಸುಮಾರು 140ಕ್ಕೂ ಹೆಚ್ಚಿನ ಶಿಲಾಶಾಸನಗಳು ದಾಖಲಾಗಿವೆ.<ref>[https://archive.org/details/epigraphiacarnat09myso Epigraphia carnatica]</ref>
 
ಆದರೆ ನಗರೀಕರಣ, ನಿರ್ಲಕ್ಷ್ಯ, ಅಸಡ್ಡೆ ಮತ್ತು ಶಿಲಾಶಾಸನಗಳ ಬಗ್ಗೆ ತಿಳುವಳಿಕೆಯ ಕೊರತೆಯ ಕಾರಣ ಅವುಗಳಲ್ಲಿ ಹಲವಾರು ಶಾಸನಗಳು ನಾಶವಾಗಿ ಈಗ ಕೇವಲ ೩೦+ ಶಾಸನಗಳು ಮಾತ್ರ ಉಳಿದಿವೆ. ಈ ಮೂವತ್ತು ಕಲ್ಲುಗಳನ್ನು Epigraphia carnatica ಗ್ರಂಥದ ಸಹಾಯದಿಂದ ಹುಡುಕಲಾಗಿದ್ದು ಅವುಗಳ ಪಟ್ಟಿ ಈ ಕೆಳಗಿನಂತಿದೆ.