ಸೊನ್ನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೫ ನೇ ಸಾಲು:
==== ಭಾರತದ ಬ್ರಹ್ಮಗುಪ್ತ====
*ಸು. 598ರಲ್ಲಿ ಜನಿಸಿದ ಪ್ರಾಚೀನ ಭಾರತೀಯ ಗಣಿತವಿದ ಬ್ರಹ್ಮಗುಪ್ತ 0ಯ ವಿಶಿಷ್ಟ ಗುಣಗಳನ್ನು ನಿದರ್ಶಿಸಿದ್ದಾನೆ: ಚಿ ಯಾವುದೇ ಪೂರ್ಣಾಂಕವಾಗಿರುವಾಗ (ಚಿ + 0 = ಚಿ), (ಚಿ - 0 = ಚಿ), (ಚಿ x 0 = ಚಿ). ಮತ್ತೆ 0ಯನ್ನು ಛೇದದಲ್ಲಿ ಬಳಸುತ್ತ ಆತ ಬರೆದ . ಇಲ್ಲಿ ಬೇರೆಯದೇ ಒಂದು ಸಂಖ್ಯಾವರ್ಗಕ್ಕೆ ಸೇರಿದೆ, ಇದಕ್ಕೆ ಬೇರಾವುದನ್ನೇ ಕೂಡಿಸಿ ಅಥವಾ ಇದರಿಂದ ಕಳೆದು ಅಥವಾ ಇದನ್ನು ಗುಣಿಸಿ ಇದರ ಬೆಲೆಯನ್ನು ಮಾರ್ಪಡಿಸಲಾಗದೆಂಬುದು ಆತನ ಚಿಂತನೆ. ಆಧುನಿಕ ಪರಿಭಾಷೆಯಲ್ಲಿ “0ಯಿಂದ ಭಾಗಾಹಾರ ನಿಷಿದ್ಧ”. ಇಲ್ಲಿಯ ಭಾಗಲಬ್ಧ ಅನಂತಗಾಮಿಯಾಗುವುದೇ ಇದರ ಕಾರಣ. 0ಯನ್ನು ಒಂದು ನಿರ್ದಿಷ್ಟ ಸಂಖ್ಯೆಯಾಗಿ ಅಂಗೀಕರಿಸುವಲ್ಲಿ ಪೌರಸ್ತ್ಯದೇಶಗಳು (ಭಾರತ ಮತ್ತು ಚೀನ) ಪಾಶ್ಚಾತ್ಯ ರಾಷ್ಟ್ರಗಳಿಗಿಂತ ಹಲವಾರು ಶತಮಾನಗಳೇ ಮುಂದಿದ್ದುವು. ಇಟಲಿಯ ಲಿಯೊನಾರ್ಡೊ ಫಿಬೊನಾಶಿ (ಸು. 1170-1250) ರಂಗಪ್ರವೇಶಿಸುವ ತನಕ ಪಾಶ್ಚಾತ್ಯ ಗಣಿತವಿದರು ಸೊನ್ನೆ ಬಗ್ಗೆ ಗಂಭೀರ ಚಿಂತನೆ ನಡೆಸಿರಲಿಲ್ಲ. ಗಣೀತೇತಿಹಾಸದಲ್ಲಿ 0 ಪ್ರವೇಶಿಸುವುದಕ್ಕೆ ಎಷ್ಟೋ ಹಿಂದೆ ಋಣಸಂಖ್ಯೆಗಳು ಮೈದಳೆದಿದ್ದುವೆಂಬುದು ಕುತೂಹಲಕಾರಿ ಸಂಗತಿ. ಇಂದಿಗಾದರೂ ಶತಮಾನ ಸಂಖ್ಯೆಗಳನ್ನು ನಮೂದಿಸುವಾಗ ಈ ಮೂಲ ಗೊಂದಲ ಕಂಡುಬರುವುದು: ಕ್ರಿ.ಪೂ. 1ನೆಯ ಶತಮಾನ ಮತ್ತು ಕ್ರಿ.ಶ. 1ನೆಯ ಶತಮಾನಗಳ ನಡುವಿನ ಗಡಿ ಸೊನ್ನೆ ಅಲ್ಲ! ಕ್ರಿಸ್ತಪೂರ್ವ 2ನೆಯ ಶತಮಾನದಿಂದ (ಃ) ಕಿ.್ರಪೂ. 1ನೆಯ ಶತಮಾನದ (ಅ) ತನಕ ಸಲ್ಲುವ ಅವಧಿಗೆ ಕ್ರಿ.ಪೂ. 1ನೆಯ ಶತಮಾನವೆಂದೂ ಕ್ರಿ.ಪೂ. 1ನೆಯ ಶತಮಾನದಿಂದ (ಅ) ಕಿ.್ರಶ. 1ನೆಯ ಶತಮಾನದ (ಆ) ತನಕ ಸಲ್ಲುವ ಅವಧಿಗೆ ಕ್ರಿ.ಶ. 1ನೆಯ ಶತಮಾನವೆಂದೂ ಹೇಳುವುದು ರೂಢಿ. ಇಲ್ಲಿಯ ಚಿತ್ರ ಈ ಅಂಶವನ್ನು ಸ್ಪಷ್ಟಪಡಿಸುತ್ತದೆ:
*ಸೊನ್ನೆಯ ಅವಧಿ ಕ್ರಿ.ಪೂ. 2ನೆಯ, ಶತಮಾನದ ಅವಧಿ ಕ್ರಿ.ಪೂ. 1ನೆಯ, ಅ-ಆ ಅವಧಿ ಕಿ.್ರಶ. 1ನೆಯ, ಆ-ಇ ಅವಧಿ ಕ್ರಿ.ಶ. 2ನೆಯ ಇತ್ಯಾದಿ ಶತಮಾನಗಳು. ದಿನಾಂಕಗಳ ಬಗೆಗೂ ಇದೇ ಚಿಂತನೆ ಅಂಗೀಕೃತವಾಗಿದೆ. ಎಂದೇ 20ನೆಯ ಶತಮಾನಾವಧಿ 1-1-1900ರಿಂದ 31-12-1999ರ ತನಕದ 100 ವರ್ಷಗಳು, ಅಂತೆಯೇ 21ನೆಯ ಶತಮಾನಾವಧಿ 1-1-2000ದಿಂದ 31-12-2099ರ ತನಕದ 100 ವರ್ಷಗಳು ಇತ್ಯಾದಿ.ನಾನು ಬಸವರಾಜ್ ಕಳಮಳ್ಳಿ 7411157368 my mobel nomber ನಾನು ಗಣಿತದಲ್ಲಿ ಪಸ್ಟ್ ಬರಬೇಕೆಂದು ಆಸೆ ಇದೆ ಅದಕ್ಕೆ ನನಗೆ help ಮಾಡಿ ಪ್ಲೀಸ್ ಯಾರಾದರೂ
 
===ಬೂಲಿಯನ್ ಬೀಜಗಣಿತ===
"https://kn.wikipedia.org/wiki/ಸೊನ್ನೆ" ಇಂದ ಪಡೆಯಲ್ಪಟ್ಟಿದೆ