ಕಂದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೧೬ ನೇ ಸಾಲು:
== ಕಂದ ಪದ್ಯ - ಪ್ರಸ್ತಾರ ಕ್ರಮ ==
ಉದಾಹರಣೆ-
U U U U | _ _ |U U U U |
ಒಡೆಯಲ |ಜಾಂಡಂ | ಕುಲಗಿರಿ |

U U _ | U U_|U _ U|UU_| U U_|
ಕೆಡೆಯಲ್| ಪಿಳಿಯ|ಲ್ಕೆ ಧಾತ್ರಿ|ದಿವಿಜರ್| ನಡುಗ-|

U U U U| U _U | _ U U|
ಲ್ಕೊಡರಿಸು |ವಿನಂ ಜ | ಟಾಸುರ|

U _ U| UU_|U_U | _ _|__|
ಹಿಡಿಂಬ | ಬಕವೈ|ರಿ ಸಿಂಹ|ನಾದಂ| ಗೆಯ್ದಂ||

ಈ ಪದ್ಯ ರಚನೆಯ ಕುರಿತ [http://padyapaana.com/?page_id=645 ವಿಡಿಯೋ] ಹಾಗೂ ವಿವರಗಳನ್ನು [http://padyapaana.com/?page_id=438 ಪದ್ಯಪಾನ ಜಾಲ]ದಲ್ಲಿಯೂ ನೋಡಬಹುದು. ಕಂದಪದ್ಯ ರಚನೆಗೆ ಪ್ರಯತ್ನಿಸಲು ಕೂಡ ಈ [http://padyapaana.com/?page_id=647 ವಿಡಿಯೋ] ಸಹಕಾರಿಯಾಗಿದೆ.

ಮೂಲದೊಡನೆ ಪರಿಶೀಲಿಸಿ

'''ಕಂದ1''' : ಒಂದು ಮಾತ್ರಾವೃತ್ತ. ಕನ್ನಡ ಮತ್ತು ತೆಲುಗು ಚಂಪುಕಾವ್ಯಗಳಲ್ಲಿ ಇದರ ಬಳಕೆ ವಿಶೇಷವಾಗಿ ಕಾಣುತ್ತದೆ. ಕನ್ನಡದಲ್ಲಿಯಂತೂ ಕಂದವನ್ನೇ ಮುಖ್ಯ ಛಂದಸ್ಸಾಗಿಟ್ಟುಕೊಂಡು ರಚಿಸಿರುವ ಕೃತಿಗಳೇ ಇವೆ. ಲಕ್ಷಣಗ್ರಂಥಗಳ ಸೂತ್ರಗಳು ಸಾಮಾನ್ಯವಾಗಿ ಕಂದದಲ್ಲಿಯೇ ಕಟ್ಟಿದವಾಗಿವೆ. ಉದಾಹರಣೆಗೆ, ಜನ್ನಕವಿಯ ಯಶೋಧರ ಚರಿತೆ (ಪ್ರ.ಶ.1209), ಕೇಶಿರಾಜನ ಶಬ್ದಮಣಿದರ್ಪಣ (ಪ್ರ.ಶ. ಸು. 1260) ಇಂಥವನ್ನು ಹೇಳಬಹುದು. ಹೀಗೆ ಕನ್ನಡ ಕವಿಗಳಿಗೆ ಕಂದ ಅಚ್ಚುಮೆಚ್ಚಿನ ಛಂದಸ್ಸು, ಕಂದಂಗಳಮೃತ ಲತಿಕಾ| ಕಂದಂಗಳ್|.... ಕಂದಂಗಳ್ ವಾಗ್ವನಿತೆಯ| ಕಂದಂಗಳ್...ಎಂದು ಮುಂತಾಗಿ ಹರಿಹರ, ಸುರಂಗಕವಿ ಮೊದಲಾದ ಒಬ್ಬಿಬ್ಬರು ಕವಿಗಳು ತಮ್ಮ ಮೆಚ್ಚಿಗೆಯನ್ನು ವ್ಯಕ್ತವಾಗಿಯೇ ತಿಳಿಸಿದ್ದಾರೆ. ಕನ್ನಡದಲ್ಲಿ ಕಂದದ ಬಳಕೆಗೆ ದೀರ್ಘವಾದ ಇತಿಹಾಸವಿದೆ. ಪ್ರಾಚೀನ ಕನ್ನಡ ಶಾಸನಗಳಲ್ಲಿಯೇ ಅದು ತಲೆದೋರಿದೆ. ಕವಿರಾಜಮಾರ್ಗದಲ್ಲಿಯ (ಪ್ರ.ಶ.ಸು.850) ಸೂತ್ರೋದಾಹರಣೆಗಳಲ್ಲಿ ಅದು ವಿಪುಲವಾಗಿ ಬಳಕೆಯಾಗಿದೆ. ಅದರ ಬಂಧದ ಸೊಗಸು ನೆನೆಯತಕ್ಕದ್ದಾಗಿದೆ. ಅಲ್ಲಿಂದೀಚೆಗೆ ಪಂಪ ಮೊದಲಾದ ಕನ್ನಡ ಚಂಪು ಕವಿಗಳು ತಮ್ಮ ಕೃತಿಗಳಲ್ಲಿ ಕಂದವನ್ನು ಇತರ ವೃತ್ತಜಾತಿಗಳಿಗಿಂತ ಪ್ರಾಯಃ ಹೆಚ್ಚಾಗಿಯೇ ಎನ್ನುವಂತೆ ಹೇರಳವಾಗಿ ಬಳಸಿದ್ದಾರೆ. ಕವಿರಾಜ ಮಾರ್ಗದ ಕರ್ತೃವೂ ಪಂಪ, ಜನ್ನ, ಷಡಕ್ಷರಿ ಈ ಮೊದಲಾದ ಕೆಲವರೂ ಕಂದಪದ್ಯವನ್ನು ಸೊಗಸಾಗಿ ಬರೆಯಬಲ್ಲವರೆಂದು ಹೆಸರಾಗಿದ್ದಾರೆ. ಅದು ಹಳಗನ್ನಡ ಸಾಹಿತ್ಯದ ಜೀವಾಳವಾದ ಛಂದಸ್ಸು. ಅದರ ಲಕ್ಷಣದಲ್ಲಿ, ನಡುಗನ್ನಡದ ಕಾಲದಿಂದೀಚೆಗೆ ಆಗಾಗ ಶೈಥಿಲ್ಯಗಳು ತಲೆದೋರದಿದ್ದರೂ ಇಂದಿಗೂ ಅದರ ರಚನೆ ನಿಂತಿಲ್ಲ.
"https://kn.wikipedia.org/wiki/ಕಂದ" ಇಂದ ಪಡೆಯಲ್ಪಟ್ಟಿದೆ