"ಆಹಾರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
==ಉತ್ಪಾದನೆ==
ಸಾಮಾನ್ಯವಾಗಿ ಆಹಾರವನ್ನು ನಾವು ವ್ಯವಸಾಯ, ಬೇಟೆ ಅಥವಾ ಮೀನುಗಾರಿಕೆಯಿಂದ, ಇಲ್ಲವಾದಲ್ಲಿ ಸ್ಥಳೀಯವಾದ ಇನ್ನಾವುದೇ ವಿಧಾನದಿಂದ ಪಡೆಯುತ್ತೇವೆ. ಇತ್ತೀಚಿನ ದಿನಗಳಲ್ಲಿ ನಿಯಮಿತವಾದ ವ್ಯವಸಾಯದಿಂದ ಅಧಿಕ ಇಳುವರಿಯನ್ನು ಪಡೆಯುತ್ತಿದ್ದೇವೆ. ಇದು ಸಹಜವಾಗಿ ಗ್ರಾಹಕರ ಬೇಡಿಕೆ, ಸ್ಥಳೀಯ ಆಹಾರ ಸ್ವಾವಲಂಬನೆ ಮತ್ತು ಸಾವಯವ ವ್ಯವಸಾಯವನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಅಂತರಾಷ್ಟ್ರೀಯ ಸಂಸ್ಥೆಗಳು ( ವಿಶ್ವ ವ್ಯಾಪಾರ ಒಕ್ಕೂಟ, ಸಾಮಾನ್ಯ ವ್ಯವಸಾಯ ನೀತಿ), ರಾಷ್ಟ್ರೀಯ ನೀತಿ, ಯುದ್ಧಗಳ ಮೇಲೆ ಅವಲಂಬಿತವಾಗಿದೆ.
 
==ರುಚಿ==
ಸಾಮಾನ್ಯವಾಗಿ ಮಾನವನು ಐದು ಬಗೆಯ ರುಚಿಗಳನ್ನು ಗುರುತಿಸಬಲ್ಲವನಾಗಿದ್ದಾನೆ. ಸಿಹಿ, ಉಪ್ಪು, ಖಾರ, ಒಗರು ಮತ್ತು ಹುಳಿಯನ್ನು ಗುರುತಿಸುವನು. ಸಾಮಾನ್ಯವಾಗಿ ನಮಗೆ ಶಕ್ತಿಯನ್ನು ಕೊಡುವ ಸಿಹಿ ಅಥವಾ ಕೊಬ್ಬು ಪದಾಥ೯ಗಳನ್ನು ಮಾನವ ಇಷ್ಟಪಟ್ಟು ತಿನ್ನುವನು. ಹುಳಿ, ಒಗರು ಪದಾಥ೯ಗಳನ್ನು ಅಷ್ಟಾಗಿ ಇಚ್ಛಿಸಿ ತಿನ್ನುವುದಿಲ್ಲ. ಜೀವನಕ್ಕೆ ಅತ್ಯವಶ್ಯಕವಾದ ನೀರಿಗೆ ಯಾವುದೇ ರುಚಿ ಇರುವುದಿಲ್ಲ.
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/1026031" ಇಂದ ಪಡೆಯಲ್ಪಟ್ಟಿದೆ