ಸಂಪಾದನೆಯ ಸಾರಾಂಶವಿಲ್ಲ
(→ಕರ್ನಾಟಕ ಏಕೀಕರಣ: added content) ಟ್ಯಾಗ್ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary ಟ್ಯಾಗ್ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೨೦೨೦ ನವೆಂಬರ್ ೧ನೆಯ ತಾರೀಖಿಗೆ ಕರ್ನಾಟಕ ಏಕೀಕರಣವಾಗಿ ಅರವತ್ತಾ ನಾಲ್ಕು ವರ್ಷಗಳು ತುಂಬಿವೆ. ಕರ್ನಾಟಕ ಏಕೀಕರಣದ ಇತಿಹಾಸ ಬಲ್ಲವರಿಗೆ ಏಕೀಕರಣಕ್ಕೆ ನಡೆದ ಹೋರಾಟವು ಕಹಿ-ಸಿಹಿ ಘಟನೆಗಳ ಸ್ಮೃತಿ. ಒಡೆದುಕೊಳ್ಳುವ ಮತ್ತು ಕೂಡಿ ಕೊಳ್ಳುವ ಕನ್ನಡಿಗರ ಸ್ವಭಾವ ಇತಿಹಾಸಕ್ಕೆ ಹೊಸದಲ್ಲ. ಈ ಒಡೆದುಕೊಳ್ಳುವ ಮನೋಭಾವಕ್ಕೆ ಯಾವಾಗಲೂ ಪ್ರೇರಣೆಯಾಗಿರುವುದು ಬಹುತೇಕ ಅಧಿಕಾರದ ಆಸೆ. ಒಂದಾಗಲು ಕಾರಣವಾಗಿರುವುದು ಭಾಷೆ ಮತ್ತು ಸಂಸ್ಕೃತಿಯ ಬಗೆಗಿನ ಪ್ರೀತಿ ಮತ್ತು ಗೌರವ.
*ಹೊಯ್ಸಳರು ಮತ್ತು ಸೇವುಣರ ನಡುವಿನ ರಾಜಕೀಯ ಸೆಣಸಾಟದಲ್ಲಿ ಕರ್ನಾಟಕವು ಎರಡು ಭಾಗವಾಯಿತು. ತುಂಗಭದ್ರಾ ನದಿಯ ಉತ್ತರಕ್ಕೆ ಸೇವುಣರೂ, ದಕ್ಷಿಣಕ್ಕೆ ಹೊಯ್ಸಳರೂ ಆಳಿದರು. ಇದು ನಡೆದದ್ದು ೧೩ ನೆಯ ಶತಮಾನದ ಆರಂಭದಲ್ಲಿ; ಆಗ ಬೇರೆಯಾದ ಕನ್ನಡಿಗರು ಆಡಳಿತಾತ್ಮಕವಾಗಿ ಒಂದಾದದ್ದು ೧೯೫೬ ರಲ್ಲಿ.
* ಅಂದರೆ ಸುಮಾರು ೭೫೦ ವರ್ಷಗಳ ಕಾಲ ಕನ್ನಡಿಗರೇ ಅಧಿಕವಾಗಿದ್ದ ಭಾಗಗಳನ್ನು ಆಳಿದವರು ಕನ್ನಡೇತರರು. ಆಳುವ ವರ್ಗವು ಬಯಸುವ ಭಾಷೆಯನ್ನು ಆಡಳಿತದಲ್ಲಿ ಬಳಸುವುದು ವಾಡಿಕೆ. ಯಾವುದೇ ಭಾಷೆಯ ಬಳಕೆ ಕಡಿಮೆಯಾದರೆ, ಆ ಭಾಷೆಯ ಅವನತಿ ಆರಂಭವಾಗುತ್ತದೆ.
* ಅಂತೆಯೇ ಆಗಿನ ಮುಂಬಯಿ ಗವರ್ನರ್ ಆರ್.ಗ್ರಾಂಟ್ ಅವರ ೧೯-೯-೧೮೩೭ರ ಪತ್ರವು ಕನ್ನಡಕ್ಕೆ ದೊರೆಯಲೇ ಬೇಕಾದ ಪ್ರಾಶಸ್ತ್ಯದ ಬಗ್ಗೆ ಮನವರಿಕೆ ಮಾಡಿದೆ. ಹೈದರಾಬಾದ್ ಸಂಸ್ಥಾನದಲ್ಲೂ ಕನ್ನಡದ ಪರಿಸ್ಥಿತಿಯು ಕೆಟ್ಟಿತ್ತು. ಅಲ್ಲಿ ಮರಾಠೀ ಭಾಷೆಯ ಜೊತೆಗೆ ಉರ್ದು ಭಾಷೆಯೂ ಪ್ರಭಾವಶಾಲಿಯಾಗಿತ್ತು. ಶಿಕ್ಷಣದಲ್ಲೂ ಉರ್ದುವೇ ಮುಖ್ಯವಾಗಿತ್ತು.
* ಮೈಸೂರು ಸಂಸ್ಥಾನದಲ್ಲಿ ಮಾತ್ರ ಕನ್ನಡದ ಪರಿಸ್ಥಿತಿ ತೀರಾ ಹದಗೆಟ್ಟಿರಲಿಲ್ಲ.ಕನ್ನಡಿಗರೇ ಅಧಿಕವಾಗಿದ್ದ ಭಾಗಗಳಲ್ಲಿ ಕನ್ನಡ ಭಾಷೆಯ ಪರಿಸ್ಥಿತಿ ಇದಾದರೆ, ಕನ್ನಡ ಸಂಸ್ಕೃತಿಯ ಪರಿಸ್ಥಿತಿಯು ಮತ್ತಷ್ಟು ಹದಗೆಟ್ಟಿತ್ತು. ಕನ್ನಡ ಭಾಷೆ ಮತ್ತು ಆ ಮೂಲಕ ರೂಪುಗೊಳ್ಳುವ ಸಂಸ್ಕೃತಿಯನ್ನು ಉಳಿಸಲು ಕನ್ನಡಿಗರೇ ಹೆಚ್ಚು ವಾಸಿಸುವ ಪ್ರದೇಶಗಳನ್ನು ಒಂದೇ ಆಡಳಿತ ವ್ಯಾಪ್ತಿಗೆ ತರುವ ಅಗತ್ಯ ಇತ್ತು. ಅದಕ್ಕಾಗಿ ಅವಶ್ಯಕ ವಾತಾವರಣ ನಿರ್ಮಾಣವಾದದ್ದು ೧೯೦೫ ರ ಸುಮಾರಿನಲ್ಲಿ.
== ಬಂಗಾಲ ವಿಭಜನೆ ==
* ಒಡೆದು ಆಳುವ ನೀತಿಗೆ ಪ್ರಸಿದ್ಧರಾಗಿದ್ದ ಅಂದಿನ ಬ್ರಿಟಿಷ್ ಆಳುವ ವರ್ಗವು ಈಶಾನ್ಯ ಭಾರತವನ್ನು ಒಡೆದು ಆಳಲು ನಿರ್ಧಾರ ಮಾಡಿದ ಫಲವಾಗಿ, ಬಂಗಾಲದ ವಿಭಜನೆ ಆಯಿತು. ಮೊದಲಿನಿಂದಲೂ ರಾಷ್ಟ್ರೀಯತೆಗಾಗಿ ಬ್ರಿಟಿಷರನ್ನು ವಿರೋಧಿಸುತ್ತಲೇ ಇದ್ದ ಬಂಗಾಲದ ಜನ ಬ್ರಿಟಿಷ್ ರಾಜಕೀಯ ತಂತ್ರವನ್ನು ಒಪ್ಪಲಿಲ್ಲ.
|