ಶ್ರವಣಬೆಳಗೊಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಪೀಠಿಕೆ ಮತ್ತು ಇತಿಹಾಸ: ಚಿತ್ರ ಸೇರಿಸಿದೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
→‎ಪೀಠಿಕೆ ಮತ್ತು ಇತಿಹಾಸ: ಚಿತ್ರ ಸೇರಿಸಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೪ ನೇ ಸಾಲು:
* ಮತ್ತೊಂದೆಡೆ ತುಳುನಾಡಿನ ಪ್ರಸಿದ್ದ ಶಿಲ್ಪಿ "ವೀರ ಶಂಭು ಕಲ್ಕುಡ "ಕೆತ್ತಿದನೆಂದು ಹೇಳಲ್ಪಡುತ್ತದೆ.(ಕೋಟಿ ಚೆನ್ನಯ:-ಡಾ| ವಾಮನ ನಂದಾವರ ಪುಟ219) ವಿಂಧ್ಯಗಿರಿಯ ಬೆಟ್ಟದ ಮೇಲಕ್ಕೆ ಹೋಗಲು ಸುಮಾರು ೭೦೦ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಹತ್ತಲಾಗದವರಿಗೆ [[ಡೋಲಿ]] ವ್ಯವಸ್ಥೆಯೂ ಲಭ್ಯವಿದೆ. ವಿಂಧ್ಯಗಿರಿಯ ಎದುರಿನಲ್ಲೇ ಚಿಕ್ಕಬೆಟ್ಟ ಅಥವಾ ಚಂದ್ರಗಿರಿ ಬೆಟ್ಟವಿದ್ದು ಇಲ್ಲೂ ಸಹ ಪ್ರಾಚೀನ ಬಸದಿಗಳಿವೆ.
[[File:Odegal basadi.jpg|thumb|ವಿಂಧ್ಯಗಿರಿ ಮೇಲಿನ ವದೆಗಲ್ ಬಸದಿ]]
[[File:Basafi of 24 pillars in Shravana Belagola.jpg|thumb|ಇಪ್ಪತ್ನಾಲ್ಕು ಕಂಬಗಳ ಬಸದಿ]]
*ಕ್ಷೇತ್ರದಲ್ಲಿ ಜೈನ ಮಠವಿದ್ದು, ಮಠದ ಪಕ್ಕದಲ್ಲಿಯೇ ಪ್ರಾಚೀನವಾದ ಭಂಡಾರಿ ಹುಳ್ಳ ಬಸದಿ ಹಾಗೂ ಚಂದ್ರನಾಥ ಸ್ವಾಮಿಯ ಬಸದಿಯಿದೆ. ಜೈನ ಮಠದ ಈಗಿನ ಭಟ್ಟಾರಕರಾದ ಶ್ರೀ ಚಾರುಕೀರ್ತಿ ಸ್ವಾಮೀಜಿಯವರು (Charukeerthi swamiji, Shravanabelagola) ವಿದ್ವತ್‌ಪೂರ್ಣರು ಹಾಗೂ ಸಾಕಷ್ಟು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.
*ಹನ್ನೆರಡು ವರ್ಷಗಳಿಂದ ಕಠಿಣ ವ್ರತದ ಕಾರಣ ಸಂಚಾರಕ್ಕೆ ವಾಹನವನ್ನೂ ಸಹ ಬಳಸದ ಸ್ವಾಮೀಜಿಯವರು ಇತ್ತೀಚೆಗೆ ತಾನೆ ಧರ್ಮಪ್ರಚಾರಕ್ಕೋಸ್ಕರ ಮತ್ತೆ ವಾಹನವನ್ನು ಬಳಸಿ ಧರ್ಮಪ್ರಚಾರ ಕೈಗೊಳ್ಳುತ್ತಿದ್ದಾರೆ. ಶ್ರೀ ಕ್ಷೇತ್ರದ ವತಿಯಿಂದ ನಡೆಸುತ್ತಿರುವ ಶ್ರೀ ಬಾಹುಬಲಿ ಇಂಜಿನಿಯರಿಂಗ್ ಕಾಲೇಜ್ ಸಹ ಇಲ್ಲಿದ್ದು, ಸಾಕಷ್ಟು ಹೊರ ರಾಜ್ಯದ ವಿದ್ಯಾರ್ಥಿಗಳು ಈ ಗ್ರಾಮೀಣ ಪ್ರದೇಶದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಪಾಲಿಟೆಕ್ನಿಕ್, ವಿಜ್ಞಾನ ಕಾಲೇಜು, ಪ್ರೌಢ ಮತ್ತು ಪ್ರಾಥಮಿಕ ಶಾಲೆಯನ್ನೂ ಶ್ರೀಕ್ಷೇತ್ರದ ವತಿಯಿಂದ ನಡೆಸಲಾಗುತ್ತಿದೆ.ಶ್ರವಣಬೆಳಗೊಳ ಜೈನರ ಕಾಶಿ ಎಂದು ಕರೆಯಲ್ಪಡುವ ಸ್ಥಳ.
"https://kn.wikipedia.org/wiki/ಶ್ರವಣಬೆಳಗೊಳ" ಇಂದ ಪಡೆಯಲ್ಪಟ್ಟಿದೆ