ಅರಕಲಗೂಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೦ ನೇ ಸಾಲು:
ಅರಕಲಗೂಡು ತಾಲೂಕು ರಾಮನಾಥಪುರವು ಸುಬ್ರಹ್ಮಣ್ಯ ಸ್ವಾಮಿಯ ಹಾಗೂ ಹೊಯ್ಸಳರ ಕಾಲದ ರಾಮೇಶ್ವರ ದೇವಸ್ಥಾನ ಹೊಂದಿದ್ದು ದಕ್ಷಿಣ ಕಾಶಿ ಎಂದೂ ಪ್ರಸಿದ್ಧವಾಗಿದೆ.
ಅದೆ ರಾಮನಾಥಪುರದಲ್ಲಿ ತಂಬಾಕು ಮಂಡಳಿಯ ಮಾರುಕಟ್ಟೆಯಿದ್ದು ಬೃಹತ್ ವಹಿವಾಟು ನಡೆಸುತ್ತಾ ತಂಬಾಕು ಬೆಳೆಗಾರರಿಗೆ ವರದಾನವಾಗಿದೆ.
 
ದೊಡ್ಡಮ್ಮ ತಾಯಿ ದೇವಸ್ಥಾನ
 
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ದೊಡ್ಡಮ್ಮ ತಾಯಿಯ ದೇವಾಲಯವಿದೆ. ಅರಕಲಗೂಡಿನ ಬಸ್ ನಿಲ್ದಾಣದಿಂದ ಅತ್ಯಂತ ಸಮೀಪದಲ್ಲಿದ್ದು, ಈ ದೇವಾಲಯವು ಬಹಳ ಪ್ರಸಿದ್ದಿ ಪಡೆದುಕೊಂಡಿದೆ. ದೊಡ್ಡಮ್ಮ ತಾಯಿಯ ದೇವಸ್ಥಾನ ಅತ್ಯಂತ ಸುಂದರವಾಗಿದ್ದು, ತಾಯಿಯು ತನ್ನ ಭಕ್ತರಿಗೆ ಪ್ರತಿ ದಿನವೂ ದರ್ಶನವನ್ನು ನೀಡುತ್ತಾಳೆ. ಹಾಗೆಯೇ ಪ್ರತಿ ಶುಕ್ರವಾರ ತಾಯಿಗೆ ಪುಷ್ಪಗಳ ಅಲಂಕಾರದಿಂದ ಶೃಂಗರಿಸಿ ವಿಶೇಷ ಪೂಜೆಯು ಸಹ ಇಲ್ಲಿ ನೆರವೇರುತ್ತದೆ. ಪ್ರತಿ ಐದು ವರ್ಷಗಳಿಗೊಮ್ಮೆ ಇಲ್ಲಿ ಬಹಳ ಅದ್ದೂರಿಯಾದ ಜಾತ್ರಾಮಹೋತ್ಸವವು ನೆರವೇರುತ್ತದೆ. ಆ ಸುಂದರವಾದ ಅದ್ಭುತವಾದ ಜಾತ್ರೆಯನ್ನು ಎಲ್ಲ ಭಕ್ತರು ಕಣ್ಣು ತುಂಬಿಕೊಳ್ಳುತ್ತಾರೆ.
 
ಅರಕಲಗೂಡಿಗೆ ಹೊಂದಿಕೊಂಡಂತೆಯೆ ಇರುವ ಗೊರೂರಿನಲ್ಲಿ ಹೇಮಾವತಿ ನದಿಗೆ ಅಣೆಕಟ್ಟು ನಿರ್ಮಿಸಲಾಗಿದ್ದು ನೀರಾವರಿಗೆ ಇಂಬು ನೀಡಲಾಗಿದೆ.
"https://kn.wikipedia.org/wiki/ಅರಕಲಗೂಡು" ಇಂದ ಪಡೆಯಲ್ಪಟ್ಟಿದೆ