ಜೈನ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೬ ನೇ ಸಾಲು:
'''ಜೈನ ಧರ್ಮ''' <sup>೧</sup> [[ವಿಶ್ವ]]ದ ಅನಂತ ಸತ್ಯಗಳ ಮೇಲೆ ಆಧಾರಿತವಾದ ಧರ್ಮ. ಪಾರಂಪರಿಕ ನಂಬಿಕೆಯ ಅನುಸಾರ, [[ಋಷಭದೇವ]] ಈ ಸತ್ಯಗಳನ್ನು ಮೊದಲು ಅರಿತವ. ಈ ಅರಿವನ್ನು ಪಡೆದವರು [[ತೀರ್ಥಂಕರ]]ರೆಂದು ಕರೆಯಲ್ಪಡುತ್ತಾರೆ. ಋಷಭದೇವನ ನಂತರ ಬಂದ ೨೩ ತೀರ್ಥಂಕರರಲ್ಲಿ ಕೊನೆಯವ [[ವರ್ಧಮಾನ ಮಹಾವೀರ]].
 
== ಶಬ್ದ ಉತ್ಪತ್ತಿ ==
ಜೈನ ಎಂದರೆ 'ಜಿನ'ಎಂಬ ಶಬ್ಧದಿಂದ ಉತ್ಪತ್ತಿಯಾದ ಶಬ್ದವಾಗಿದ್ದು ಜಿನ ಎಂದರೆ 'ಇಂದ್ರಿಯಗಳನ್ನು ಗೆದ್ದವನು' ಎಂದು ಹೇಳಬಹುದು.[[ಕರ್ಮ]]ದ ಕಟ್ಟನ್ನು ಮುರಿದು ಸಂಸಾರವನ್ನು ದಾಟಿ ಮುಕ್ತಿಯನ್ನು ಪಡೆದವ [[ಜೀವ]]ರಿಗೆ 'ಜಿನರು' ಎಂದು ಹೆಸರು. ಜಿನರಿಂದ ಉಪದೇಶಿ ಸಲ್ಪಟ್ಟ [[ಧರ್ಮ]]ವೇ ಜೈನಧರ್ಮ.
 
== ಜೈನ ತತ್ವಗಳು ==
'''ಸಂಕ್ಷಿಪ್ತ ಪರಿಚಯ'''
*ಜೈನ ಧರ್ಮದಲ್ಲಿ ಸತ್ಯ, ನೀತಿ, ಉತ್ತಮ ನಡವಳಿಕೆಗಳಿಗೆ ಹೆಚ್ಚಿನ ಪ್ರಧಾನ್ಯತೆ ಇದೆ. ಅಹಿಂಸೆ ಮತ್ತು ದಯೆ ಇವುಗಳು ಮೂಲ ಸೂತ್ರಗಳು.[[ಜೈನ ದರ್ಶನ]]ದ ಪ್ರಕಾರ ಜಗತ್ತು ಮತ್ತು ಜೀವ (ಆತ್ಮ) ಅನಾದಿಯಾದುದು. ಜೀವರುಗಳ ಹುಟ್ಟು, ಸಾವು, ಸುಖ, ದು:ಖಗಳಿಗೆ [[ಕರ್ಮ]]ವೇ ಕಾರಣವಾಗಿದ್ದು ಕರ್ಮವೂ ಅನಾದಿಯಾಗಿರುತ್ತದೆ. ಆದರೆ [[ಸಮ್ಯಕ್ ಜ್ಞಾನ]], [[ಸಮ್ಯಕ್ ದರ್ಶನ]], [[ಸಮ್ಯಕ್ ಚಾರಿತ್ರ್ಯ]] ಎಂಬ 'ರತ್ನತ್ರಯ'ಗಳ ಸಾಧನೆಯ ಸಹಾಯದಿಂದ ಕರ್ಮದ ಕಟ್ಟು(ಸಂಸಾರ ಬಂಧ)ಗಳಿಂದ ಮುಕ್ತರಾಗಬಹುದು.
*ಇದರೊಂದಿಗೆ ಜೈನರು ಪಾಲಿಸಬೇಕಾದ ಪಂಚಾಣು ವ್ರತಗಳನ್ನು ಹೇಳಲಾಗಿದೆ. ಅವುಗಳು [[ಅಹಿಂಸೆ]], [[ಸತ್ಯ]], [[ಆಸ್ತೇಯ]], [[ಬ್ರಹ್ಮಚರ್ಯ]] ಮತ್ತು [[ಅಪರಿಗ್ರಹ]]. ಜೈನ ಧರ್ಮ ದೇವರನ್ನು ಜಗತ್ತಿನ ಕರ್ತೃ ಎಂದು ಒಪ್ಪುವುದಿಲ್ಲವಾದರೂ ಕರ್ಮಬಂಧಗಳಿಂದ ಮುಕ್ತರಾದ [[ಪಂಚ ಪರಮೇಷ್ಠಿ]]ಗಳ [[ಪೂಜೆ]],ಆರಾಧನೆ ನಡೆಯುತ್ತದೆ.
 
== ಜೈನ ದರ್ಶನ ==
'''ಜೈನ ದರ್ಶನ''' <sup>೨</sup>
*೧. ಭಾರತದಲ್ಲಿ ಹುಟ್ಟಿದ ಜೈನ ದರ್ಶನವು ಅವೈದಿಕ ದರ್ಶನವಾಗಿದೆ -ವೇದಗಳನ್ನು ಒಪ್ಪುವುದಿಲ್ಲ. ಅದು ಶ್ರಮಣ ಪಂಥವನ್ನು ಅನುಸರಿಸುವುದು.( '''ಸಮಣ ವಾ, ಬ್ರಾಹ್ಮಣ ವಾ'''). ಶ್ರಮಣ ಪರಂಪರೆಗೆ ಕ್ಷತ್ರಿಯರು ನಾಯಕರು. ಉಪನಿಷತ್ತುಗಳಲ್ಲಿಯೂ ಕ್ಷತ್ರಿಯ ಉಪದೇಶಕರು (ರಾಜರು) ಪ್ರಾವೀಣ್ಯತೆ, ಪ್ರಾಶಸ್ತ್ಯ ಪಡೆದಿದ್ದರು.
*೨. ಬ್ರಾಹ್ಮಣರು ಪಶು ಯಜ್ಞ ತ್ಯಜಿಸಿದ್ದು, ಸಸ್ಯಾಹಾರಕ್ಕೆ ಪ್ರಾಶಸ್ತ್ಯ ಕೊಟ್ಟಿರುವುದು. ಮೊದಲಾದವು ಜೈನ [[ಬೌದ್ಧ]] ಧರ್ಮಗಳ ಪ್ರಭಾವದಿಂದ ಎಂದು ಹೇಳಬಹುದು. ಈ ಧರ್ಮದವರು ಅಹಿಂಸೆ ಮತ್ತು ಮನೋನಿಗ್ರಹವು ಮೋಕ್ಷಕ್ಕೆ ಸಾಧನವೆಂದು ನಂಬುತ್ತಾರೆ. ಇದರಲ್ಲಿ ಮುಖ್ಯವಾಗಿ ದಿಗಂಬರರು, ಶ್ವೇತಾಂಬರರು ಎಂದು ಎರಡು ಪಂಥಗಳಿವೆ.
 
== ಇತಿಹಾಸ ==
*ಜೈನಧರ್ಮವು ಅತ್ಯಂತ ಪ್ರಾಚೀನವಾದುದು. ಬೌದ್ಧ ಧರ್ಮಕ್ಕಿಂತ ಹಿಂದಿನದು. ಈ ಧರ್ಮದ ಆದಿ (ಮೊದಲನೆಯ) ತೀರ್ಥಂಕರ ಆದಿನಾಥ. ಇಪ್ಪತ್ನಾಲು ತೀರ್ಥಂಕರರಲ್ಲಿ [[ಮಹಾವೀರ]]ನು ಇಪ್ಪತ್ನಾಲ್ಕನೆಯ ತೀರ್ಥಂಕರ. ಇವನು ಗೌತಮ ಬುದ್ಧನ ಸಮಕಾಲೀನನಾಗಿದ್ದು ಜೈನ ಧರ್ಮವನ್ನು ಪ್ರಖ್ಯಾತಗೊಳಿಸಿದನು. ಒಂದು ಕಾಲದಲ್ಲಿ ಇದು [[ರಾಜ]] ಧರ್ಮವಾಗಿದ್ದು, ೮ ನೇ ಶತಮಾನದ ನಂತರ ಅವನತಿ ಹೊಂದಿತು.
*ಈಗ ಭಾರತದಲ್ಲಿ ಈ ಧರ್ಮದವರು ಅಲ್ಪ ಸಂಖ್ಯಾತರಾಗಿದ್ದು ಕೇವಲ ೪೨ ಲಕ್ಷ ಜನರಿದ್ದಾರೆಂದು (ಜನಗಣತಿ ೨೦೦೧) ಅಂದಾಜು ಮಾಡಿದೆ.ಈ ಧರ್ಮದ ಕೆಲವರು ಬೆಲ್ಜಿಯಮ್, ಕೆನಡ, ಹಾಂಗ್ ಕಾಂಗ್, ಜಪಾನ್, ಸಿಂಗಪುರ, ಯು.ಎಸ್.ಎ. ಗಳಿಗೆ ವಲಸೆ ಹೋಗಿದ್ದಾರೆ. ಇವರಲ್ಲಿ ಅಕ್ಷರಸ್ಥರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ ;
*ಅದು ೯೧.೪% (೨೦೦೧ ಜನಗಣತಿ) . ಈಧರ್ಮದವರ ಕೈ ಬರೆಹದ ಪ್ರತಿಗಳು ಭಾರತದಲ್ಲಿ ಅತ್ಯಂತ ಪ್ರಾಚೀನವಾದವುಗಳು. ತೀರ್ಥಂಕರರಾದ [[ಅರಿಷ್ಟನೇಮಿ]], [[ಪಾರ್ಶ್ವನಾಥ]] , ಮಹಾವೀರನಿಗಿಂತ ಹಿಂದಿನವರು. ಉತ್ತರಾದ್ಯಾಯ ಸೂತ್ರಗಳಲ್ಲಿ ಪಾರ್ಶ್ವನಾಥನ ಹೆಸರು ಕಂಡು ಬರುವುದಾಗಿ ತಿಳಿದು ಬಂದಿದೆ. (ಇಂಗ್ಲಿಷ್ ವಿಕಿಪೀಡಿಯಾ)
 
== ಜೈನರ ಪ್ರಾಚೀನ ಗ್ರಂಥಗಳು ==
:ಪೂರ್ವ ಆಗಮಗಳು, ದೇವರ್ದಿ ಎಂಬುವನಿಂದ ಸಂಗ್ರಹವಾದವುಗಳು (ಕ್ರಿ . ಶ. ೫ ನೇ ಶತಮಾನ. ) ಮತ್ತು ಅಂಗಗಳು ಇವು ಈ ದರ್ಶನದ ಪ್ರಮುಖ ಗ್ರಂಥಗಳು,- ಆದರೆ ಇವು ವಿಲುಪ್ತವಾಗಿವೆ ಎಂದು ಹೇಳುತ್ತಾರೆ. ಇವುಗಳ ಭಾಷೆ ಅರ್ಧಮಾಗಧಿ.
*ಕ್ರಿ.ಶ. ೫ ನೇ ಶತಮಾನದ ನಂತರ ದರ್ಶನ ಗ್ರಂಥಗಳನ್ನು ರಚಿಸಿ ಪ್ರಚಾರ ಪಡಿಸಿದವರು - ಉಮಾಸ್ವಾಮಿ, ಕುಂದಕುಂದಾಚಾರ್ಯ, ಸಮಂತಭದ್ರ ಇತ್ಯಾದಿ. ಪೂರ್ವವೆಂಬ ಹದಿನಾಲ್ಕು ಭಾಗಗಳಲ್ಲಿದ್ದ ಈ ಧರ್ಮದ ಸಾಹಿತ್ಯ ಹಿಂದೆ ಕಂಠಪಾಠದ ಮೂಲಕ ನೆನಪಿನಲ್ಲಿ ಉಳಿದು ಬಂದಿತ್ತು. ಆದರೆ ಕಾಲ ಕ್ರಮೇಣ ಬಹಳಷ್ಟು ನಶಿಸಿಹೋಗಿ ನಂತರ ಅಳಿದು ಉಳಿದವು.
೩೧ ನೇ ಸಾಲು:
*'''ಜೈನ ಧರ್ಮಕ್ಕೆ ಎರಡು ಮುಖ''' ; ತಾತ್ವಿಕ ವಿಚಾರ , ಮತೀಯ ಅಥವಾ ಧಾರ್ಮಿಕ ವಿಚಾರ. ಅಹಿಂಸೆ ಮುಖ್ಯವಾದ ಧಾರ್ಮಿಕ ಆಚಾರ. ಜೀವಂತವಾಗಿರುವ ಎಲ್ಲಾ ಜೀವಿಗಳಲ್ಲಿ ಬಾಂಧವ್ಯ -ಪ್ರೀತಿ ಹೊಂದಿರುವುದು ಅಥವಾ ತೋರಿಸುವುದು.
 
== ತತ್ವ : ==
:Epistemology - The nature of truth
*'''ಅನೇಕಾಂತವಾದ''' :
೫೩ ನೇ ಸಾಲು:
:'''ಅನಂತಧರ್ಮಾತ್ಮಕಂ ವಸ್ತು''' ಪ್ರತಿಯೊಂದು ವಸ್ತು ಎಲ್ಲಿಯೂ ಇರಬಲ್ಲುದು; ಪ್ರತಿ ವಸ್ತುವಿಗೂ ಇರಬಹುದಾದ ಧರ್ಮಗಳಿಗೆ ಲೆಕ್ಕವಿಲ್ಲ; ಅವು ಅನಂತ. [[ಅನಂತವಾದ]]
 
== ಪ್ರಮಾಣ ಮತ್ತು ನಯ : ==
:'''ಪ್ರಮಾಣ ಮತ್ತು ನಯ :'''
:ಜೈನ ಧರ್ಮವು '''-ಪ್ರತ್ಯಕ್ಷ , ಅನುಮಾನ, ಆಗಮ''' ಗಳೆಂಬ ಮೂರುಪ್ರಮಾಣಗಳನ್ನು ಅಂಗೀಕರಿಸುತ್ತದೆ. ವಸ್ತುವಿನ ಯಥಾರ್ಥ ಜ್ಞಾನವನ್ನು ಒದಗಿಸುವುದೇ ಪ್ರಮಾಣ. ವಸ್ತುವಿನ ಒಂದು ಅಂಶದ ಬಗೆಗೆ ತಿಳಿಸುವುದು ನಯ. ಎಂದರೆ ಅದರ ಒಂದು ದೃಷ್ಠಿಕೋನದಿಂದ ಹೇಳುವುದು ನಯ.
:'''ಏಕ ದೇಶ ವಿಶಿಷ್ಠಾರ್ಥೋ ನಯಸ್ಯ ವಿಷಯೋ ಮತಃ.'''
 
== ಸ್ಯಾದ್ವಾದ ==
:ಸತ್ಯದ ಜಟಿಲ ಸಂಕೀರ್ಣತೆಯ ಬಗೆಗೆ ವಿಚಾರ ಮಾಡುವುದೇ '''ಅನೇಕಾಂತವಾದ;''' ಅನೇಕಾಂತವಾದವೇ -ಸ್ಯಾದ್ವಾದ. (ಎಲ್ಲಾ ಬಗೆಯ ಸಂಭಾವ್ಯತೆ ಯನ್ನು ಒಪ್ಪುವುದು)
:ಸತ್ಯವು ಹೀಗೆ ಇರಬಹುದು ಎಂಬ ಸಂಭಾವ್ಯತಾ ಸಿದ್ಧಾಂತ. ವಿಶ್ವವನ್ನು ಅನೇಕ ದೃಷ್ಠಿಯಿಂದ ನೋಡಬಹುದು. ಪ್ರತ್ಯೇಕ ನಿರ್ಣಯಕ್ಕೂ ಬರಬಹುದು; ಸತ್ಯದ ಪೂರ್ಣ ಸ್ವರೂಪವನ್ನು ನಿರ್ಣಯಿಸುವುದಿಲ್ಲ. ಏಳು ಹಂತಗಳಿಂದ ಸತ್ಯವನ್ನು ತಿಳಿಯುವ ಪ್ರಯತ್ನವನ್ನು ಮಾಡಬಹುದು.
೭೦ ನೇ ಸಾಲು:
:ಈ ವಾದ ಜೈನ ಧರ್ಮದ ದೃಷ್ಠಿ ವೈಶಾಲ್ಯವನ್ನೂ ತೋರಿಸುತ್ತದೆ.
 
== ರತ್ನ ತ್ರಯ ==
:ಜೈನ ಶಬ್ದವು ಜಯ, ಜಯಿಸಿದವನು ಎನ್ನುವ ಶಬ್ದದಿಂದ ಬಂದಿದೆ.
:ಅದರ ಅರ್ಥ , ಇಂದ್ರಿಯಗಳನ್ನು -ರಾಗ ದ್ವೇಷಗಳನ್ನು ಗೆದ್ದವನು; ಇದನ್ನು ಸಾಧಿಸಲು ರತ್ನ ತ್ರಯಗಳನ್ನು ಪಾಲಿಸಬೇಕು. ಇವು:
೮೫ ನೇ ಸಾಲು:
:೪.೫. ಗೃಹಸ್ಥರಿಗೆ -ಏಕ ಪತ್ನಿತ್ವ, ಮತ್ತು ಸಂತೋಷ.
 
== ಕರ್ಮ ಸಿದ್ಧಾಂತ ==
'''ಕರ್ಮ ಸಿದ್ಧಾಂತ'''
:ಕರ್ಮವು ಭೌತ ವಸ್ತು, ಅದು ಜೀವವನ್ನು ಆವರಿಸಿ, ಜೀವವನ್ನು ಜನ್ಮಾಂತರ ಚಕ್ರ ಅಥವಾ ಭವಾವಳಿಯಲ್ಲಿ ಮಾನವನನ್ನು ನೂಕುತ್ತದೆ. ಜೀವನು ಬದ್ಧ ಪುರುಷನಾಗುತ್ತಾನೆ.
೯೨ ನೇ ಸಾಲು:
:ಮೋಕ್ಷವನ್ನು ಹಂತವಾಗಿ ಹಂತವಾಗಿ ಪಡೆಯುತ್ತಾರೆ. ಹದಿನಾಲ್ಕು ಹಂತಗಳಲ್ಲಿ ಕೊನೆಯದು ಆಯೋಗ. ಮೊದಲು ತೀರ್ಥಂಕರ-ಅರ್ಹತ,- [[ಅರ್ಹಂತ]]-ಇತ್ಯಾದಿ. ಇವರು ಜೀವನ್ಮುಕ್ತರು. ಅವರು ಅಂತಿಮ ಅವಸ್ಥೆಯಲ್ಲಿ ಲೋಕಾಕಾಶ, ಅಲೋಕಾಕಾಶದ ನಡುವೆ. ಸಿದ್ಧಶಿಲಾ ಎಂಬ ಸ್ಥಾನವನ್ನು ಪಡೆಯುತ್ತಾರೆ. ಆ ಮುಕ್ತರೆಲ್ಲಾ ಅನಂತ ಚತುಷ್ಟಯ ಸಂಪನ್ನರಾಗಿರುತ್ತಾರೆ.
 
== ಸಮೀಕ್ಷೆ ==
:ಜೈನ ದರ್ಶನವು ವೇದ ಪ್ರಾಮಾಣ್ಯವನ್ನು ಒಪ್ಪದೇ ಇರುವುದರಿಂದ ಅದನ್ನು ನಾಸ್ತಿಕ ಪಂಥಕ್ಕೆ ಸೇರಿಸಲಾಗಿದೆ. ಆದರೆ ಜೈನರು ಆತ್ಮದ ಅಸ್ತಿತ್ವವನ್ನು ಒಪ್ಪುತ್ತಾರೆ ; ಮತ್ತು ತೀರ್ಥಂಕರನನ್ನೇ ಭಗವಂತನ ಸ್ಥಾನಕ್ಕೆ ಏರಿಸುತ್ತಾರೆ. ಕರ್ಮಕ್ಕೆ ತಕ್ಕ ಫಲವನ್ನು ಮಾನವನು ಅನುಭವಿಸುತ್ತಾನೆ ಎಂಬ ಸಿದ್ಧಾಂತ ಕ್ಕೆ ಸಹಮತವಿದೆ. ಆದರೆ ಫಲ ಕೊಡುವ ವಿಧಾತನಿಲ್ಲ ಎನ್ನುತ್ತದೆ ಅವರ ಸಿದ್ಧಾಂತ ; ಜಗತ್ತು ಜೀವಗಳು ನಿತ್ಯವೆಂದು ಹೇಳುತ್ತದೆ; ಅತೀಂದ್ರಿಯ ಅನುಭವ ಹಾಗೂ ಇಂದ್ರಿಯಾನುಭವಕ್ಕೂ ಸಮನ್ವಯ ಮತ್ತು ಪ್ರಾಮುಖ್ಯತೆ ಕೊಡುತ್ತಾರೆ. (ಪ್ಲೂರಲಿಸ್ಟಿಕ್ ರಿಯಲಿಸಮ್).
:ಸ್ಯಾದ್ವಾದವು ಜೈನಧರ್ಮದ ಮಹತ್ದ ಕೊಡುಗೆಯಾಗಿದೆ.
೧೨೬ ನೇ ಸಾಲು:
* [http://jainlibrary.org jainlibrary.org], A complete list of texts on Jainism, sponsored by the JAINA Education Committee
 
== ಉಲ್ಲೇಖ==
[[ವರ್ಗ:ಜೈನ ಧರ್ಮ]]
[[ವರ್ಗ:ಧರ್ಮ]]
"https://kn.wikipedia.org/wiki/ಜೈನ_ಧರ್ಮ" ಇಂದ ಪಡೆಯಲ್ಪಟ್ಟಿದೆ