ಕೈಗಾರಿಕೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೮ ನೇ ಸಾಲು:
[[ಸಾರ್ವಜನಿಕ ವಲಯ]]ವು ರಭಸವಾಗಿ ವಿಸ್ತಾರಗೊಂಡಿರುವುದು ಸ್ವಾತಂತ್ರೋತ್ತರ ಅವಧಿಯ ಕೈಗಾರಿಗಾ ಬೆಳವಣಿಗೆಯ ಪ್ರಮುಖ ಲಕ್ಷಣವಾಗಿದೆ. ೧೯೫೧ ರಲ್ಲಿ ಕೇವಲ ೫ ವಿಭಾಗೇತರ ಸಾರ್ವಜನಿಕ ಉದ್ಯಮಗಳಿದ್ದವು. ಅವುಗಳಲ್ಲಿ ತೊಡಗಿಸಿದ [[ಬಂಡವಾಳ]]ದ [[ಹೂಡಿಕೆ]] ರೂ.೨೯ ಕೋಟಿಯಾಗಿತ್ತು. ೧೯೯೪ ರ ಮಾರ್ಚ್ ೩೧ ರಲ್ಲಿ ಅವುಗಳ ಸಂಖ್ಯೆ ೨೪೬ಗೆ ಬೆಳೆಯಿತು ಮತ್ತು ಅವುಗಳಲ್ಲಿ ತೊಡಗಿಸಿದ ಬಂಡವಾಳದ ಹೂಡಿಕೆ ರೂ.೧೬೪೩೩೨ ಕೋಟಿಗೆ ಏರಿತ್ತು. ಈ ಉದ್ಯಮಗಳು ಉಕ್ಕು, [[ಕಲ್ಲಿದ್ದಲು]], [[ರಾಸಾಯನಿಕಗಳು]], ರೈಲಿನ [[ಎಂಜಿನ್]], ರೈಲು [[ಬೋಗಿ]], [[ಹಡಗುಗಳು]], ವೈಮಾನಿಕ ಸಾಮಗ್ರಿಗಳು, ತಾಂತ್ರಿಕ ವಸ್ತುಗಳೂ ಸೇರಿದಂತೆ ವೈವಿಧ್ಯಮಯ ಸರಕುಗಳನ್ನು ಉತ್ಪಾದನೆ ಮಾಡುತ್ತಿವೆ.
 
=='''ಪ್ರಮುಖ ಕೈಗಾರಿಕೆಗಳು'''==
 
==='''ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ'''===
[[ಚಿತ್ರ:TATA STEEL011.jpg|thumbnail|right|ಟಾಟಾ ಉಕ್ಕಿನ ಕಾರ್ಖಾನೆ]]
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಭಾರತದ ಆರ್ಥಿಕತೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ.<ref>http://pib.nic.in/feature/feyr2000/fmar2000/f060320002.html</ref> ಇದೊಂದು ಮೂಲ ಹಾಗೂ ಬೃಹತ್ ಕೈಗಾರಿಕೆಯಾಗಿದೆ. ಇಂದು ಈ ಕೈಗಾರಿಕೆಯು ನಮ್ಮ ಕೈಗಾರಿಕ ರೂಪಿಸುವುದಕ್ಕೆ ಮತ್ತು ಇಡೀ ಆರ್ಥಿಕ ವ್ಯವಸ್ಥೆಗೆ ಪೋಷಕ ಕಾರ್ಯವನ್ನು ನಿರ್ವಹಿಸುತ್ತಿದೆ. ಈಗ ದೇಶದಲ್ಲಿ ೭ ದೊಡ್ಡ ಉಕ್ಕಿನ ಕಾರ್ಖಾನೆಗಳಿದ್ದು ೨೦೦ ಲಕ್ಷ ಟನ್ನುಗಳ ಉತ್ಪಾದನ ಸಾಮರ್ಥ್ಯ ಹೊಂದಿವೆ. ಈಗ ೧೫ ವರ್ಷಗಳಲ್ಲಿ ಉಕ್ಕಿನ ಕೈಗಾರಿಕೆ ವ್ಯಾಪಕವಾಗಿ ಬೆಳೆದಿದೆ. ಇತ್ತೀಚಿನವರೆಗು ಭಾರತದ ಆರ್ಥಿಕತೆಯಲ್ಲಿ ಹತ್ತಿ ಕೈಗಾರಿಕೆಯು ಪಡೆದಿದ್ದ ಹೆಮ್ಮೆಯು ಸ್ಥಾನವನ್ನು ಈಗ ಈ ಕೈಗಾರಿಕೆ ಪಡೆದು ಕೊಂಡಿದೆ.
ಆಧುನಿಕ ಪದ್ಧತಿಯಲ್ಲಿ ಉಕ್ಕಿನ ಉತ್ಪಾದನೆಗೆ ಈಗ ಸುಮಾರು ಒಂದೂವರೆ ಶತಮಾನಗಳ ಹಿಂದೆಯೇ ಪ್ರಯತ್ನ ನಡೆದಿತ್ತು. ೧೮೩೦ ರಲ್ಲಿ ತಮಿಳುನಾಡಿನ ದಕ್ಷಿಣ ಆರ್ಕಾಟ್‍ನಲ್ಲಿ ಮತ್ತು ೧೮೭೪ ರಲ್ಲಿ [[ಬಿಹಾರ]]ದ ಝಾರಿಯಾದಲ್ಲಿ ಈ ಪ್ರಯತ್ನಗಳು ನಡೆದ್ದಿದವು. ಆದರೆ ಅವು ಅಷ್ಟೊಂದು ಯಶಸ್ವಿಯಾಗಲಿಲ್ಲ.
 
==='''ಹತ್ತಿ ಬಟ್ಟೆಯ ಕೈಗಾರಿಕೆ'''===
[[ಚಿತ್ರ:Girl workers in a booming Bombay textile mill 8b09843v.jpg|thumbnail|left|ಮುಂಬಯಿ ಹತ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು]]
ಹತ್ತಿ ಬಟ್ಟೆಯ ಕೈಗಾರಿಕೆಯು ಭಾರತದಲ್ಲಿ ಅತಿ ದೊಡ್ಡದಾದ ಮತ್ತು ಪ್ರಾಚೀನವಾದ ಕೈಗಾರಿಕೆ. ಈ ಕೈಗಾರಿಕೆಗೆ ೧೫೦ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ.<ref>http://www.citiindia.com/textile-industry/indian-textiles-overview.html</ref> ೧೮೧೮ ರಲ್ಲಿ ಕಲ್ಕತ್ತಾದಲ್ಲಿ ಹತ್ತಿ ಜವಳಿ ಕಾರ್ಖಾನೆಯೊಂದು ಸ್ಥಾಪನೆಯಾಗಿ ಅಂದಿನಿಂದ ಈ ಕೈಗರಿಕೆ ಪ್ರಾರಂಭಗೊಂಡಿತು. ಹತ್ತಿ ಜವಳಿ ಕೈಗಾರಿಕೆಯೂ ೧೯೨೦ ರ ವರೆಗೂ [[ಮುಂಬಯಿ]]ಯಲ್ಲಿಯೇ ಕೇಂದ್ರಿಕೃತವಾಗಿತ್ತು. ನಂತರ [[ಉತ್ತರಪ್ರದೇಶ]], [[ಗುಜರಾತ್]], ಬಂಗಾಲ, [[ಮಹರಾಷ್ಟ್ರ]], [[ತಮಿಳುನಾಡು]], [[ಹರ್ಯಾಣಾ]], [[ಕರ್ನಾಟಕ]] ರಾಜ್ಯಗಳ ಅನೇಕ ಭಾಗಗಳಲ್ಲಿ ಹತ್ತಿ ಜವಳಿ ಕಾರ್ಖಾನೆಗಳು ವ್ಯಾಪಕವಾಗಿ ಸ್ಥಾಪಿಸಲ್ಪಟ್ಟವು. ಆದರೆ ಮುಂಬಯಿಯು ಹತ್ತಿ ಜವಳಿ ಕೈಗಾರಿಕೆಯ ಒಂದು ದೊಡ್ಡ ಕೇಂದ್ರವಾಗಿ ಉಳಿಯಿತು. ದೇಶದ ರಾಜಧಾನಿಯಾದ [[ದೆಹಲಿ]]ಯಲ್ಲಿ ಸಹ ಹತ್ತಿ ಜವಳಿ ಕೈಗಾರಿಕೆ ಕೇಂದ್ರವಾಗಿದೆ.
 
==='''ಸಕ್ಕರೆ ಕೈಗಾರಿಕೆಗಳು'''===
[[ಚಿತ್ರ:Sugar plant dsc09052.jpg|thumbnail|right|ಸಕ್ಕರೆ ಕಾರ್ಖಾನೆ]]
ಸಕ್ಕರೆ ಕೈಗಾರಿಕೆಯು ಒಂದು ವ್ಯವಸ್ತಿತ ಮತ್ತು ಅತ್ಯುತ್ತಮ ಕೃಷಿ ಆಧಾರಿತ ಕೈಗಾರಿಕೆಯಾಗಿದೆ.<ref>http://www.sugarindustry.com/</ref> ಭಾರತದ ಆರ್ಥಿಕ ವ್ಯವಸ್ತೆ ಮತ್ತು ಕೈಗಾರಿಕ ಸ್ವರೂಪದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಈ ಕೈಗಾರಿಕೆಯು ಸುಮಾರು ೧೩೫೦ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯನ್ನು ಪಡೆದಿದೆ. ಇದು ಸುಮಾರು ೩.೨೫ ಲಕ್ಷ ಕೆಲಸಗಾರರಿಗೆ ನೇರವಾಗಿ ಉದ್ಯೋಗವನ್ನು ಒದಗಿಸಿದೆ, ಅಲ್ಲದೆ ಸುಮಾರು ೨.೫ ಕೋಟಿ [[ಕಬ್ಬು]] ಬೆಳೆಗಾರರು ಇದರಿಂದ ಪರೋಕ್ಷ ಉದ್ಯೋಗ ಕಂಡುಕೊಂಡಿದ್ದಾರೆ.
"https://kn.wikipedia.org/wiki/ಕೈಗಾರಿಕೆಗಳು" ಇಂದ ಪಡೆಯಲ್ಪಟ್ಟಿದೆ