ಭ್ರಮಾಧೀನ ವ್ಯಕ್ತಿತ್ವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ವಿಕೀಕರಣ
೧ ನೇ ಸಾಲು:
{{Under construction}}
 
'''ಭ್ರಮಾಧೀನ ವ್ಯಕ್ತಿತ್ವ''' ಇದೊಂದು ಸ್ವಭಾವ ಅಥವಾ ವ್ಯಕ್ತಿತ್ವದ ಲಕ್ಷಣವಾಗಿದ್ದು, ಇದರಲ್ಲಿ ವ್ಯಕ್ತಿಯು ಆಜೀವಪರ್ಯಂತ  ವಿಸ್ತಾರವಾದ ಮತ್ತು ಆಳವಾದ [[ಕಲ‍್ಪನೆ|ಕಲ್ಪನಾಲೋಕದಲ್ಲಿ]] ಮುಳುಗಿರುತ್ತಾನೆ.<ref name="Lynn">{{Cite journal|last=Lynn|first=Steven J.|last2=Rhue|first2=Judith W.|year=1988|title=Fantasy proneness: Hypnosis, developmental antecedents, and psychopathology|url=|journal=American Psychologist|volume=43|issue=1|pages=35–44|doi=10.1037/0003-066x.43.1.35|pmid=3279876}}</ref> ಈ ನಿಲುವು ಅತಿಯಾದ ಕಲ್ಪನೆ ಅಥವಾ ಭ್ರಮಾಲೋಕ/ ಕನಸಿನ ಲೋಕದಲ್ಲಿ ವಾಸಿಸುವುದನ್ನು ಉತ್ತಮವಾಗಿ ವಿವರಿಸುವ ಪ್ರಯತ್ನವಾಗಿದೆ. ಇಂತಹ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯು ವಾಸ್ತವಿಕತೆ ಮತ್ತು ಕಲ್ಪನೆಯನ್ನು ಬೇರ್ಪಡಿಸಿ ಅರ್ಥೈಸಲು ಕಷ್ಟವಾಗುತ್ತದೆ/ ಅಸಾಧ್ಯವೆನಿಸುತ್ತದೆ; ಹಾಗೆಯೇ ಆ ವ್ಯಕ್ತಿ ಭ್ರಮೆಗೊಳಗಾಗುತ್ತಾನೆ ಮತ್ತು ಸ್ವಯಂ ಸೂಚಿತ ಮನೋದೈಹಿಕ ಲಕ್ಷಣಗಳನ್ನು ತೋರುತ್ತಾನೆ. ಇದಕ್ಕೆ ಸಂವಾದಿಯಾದ ಮನಶಾಸ್ತ್ರೀಯ ಸ್ಥಿತಿಗಳು - ಹಗಲುಗನಸು, ಅಂತರ್ಗತ, ಮತ್ತು ಸುಸ್ಪಷ್ಟ ನೆನಪಿನ ಸಾಮರ್ಥ್ಯ.
 
== ಇತಿಹಾಸ ==
[[ಅಮೇರಿಕನ್]] ಮನಃಶಾಸ್ತ್ರಜ್ಞರಾದ ಶೆರಿಲ್ ಸಿ ವಿಲ್ಸನ್ ಮತ್ತು ಥಿಯೋಡರ್ ಎಕ್ಸ್ ಬಾರ್ಬರ್ ೧೯೮೧ರಲ್ಲಿ ಮೊದಲ ಬಾರಿಗೆ [[ಭ್ರಮೆ|ಭ್ರಮಾಧೀನ]] ವ್ಯಕ್ತಿತ್ವವನ್ನು ಗುರುತಿಸಿದರು; ಹಾಗೂ ಇದು ೪% ಜನಸಂಖ್ಯೆಗೆ ಅನ್ವಯಿಸುತ್ತದೆ ಎಂದು ಹೇಳಿದರು. ಈ ಗುಣಲಕ್ಷಣವನ್ನು ಗುರುತಿಸುವುದರ ಜೊತೆಗೆ, ವಿಲ್ಸನ್ ಮತ್ತು ಬಾರ್ಬರ್  ಭ್ರಮಾಧೀನ ವ್ಯಕ್ತಿತ್ವವುಳ್ಳ ಅನೇಕ ಜನರ  ಬಾಲ್ಯದ ಜೀವನವನ್ನು ಅಧ್ಯಯಿಸಿದ್ದಾರೆ ಮತ್ತು ಬಾಲ್ಯದಲ್ಲಿ ನಡೆದ ಕೆಲವು ಘಟನೆಗಳು ಆ ವ್ಯಕ್ತಿಗಳ ನಂತರದ ಜೀವನದಲ್ಲಿ ಕಲ್ಪನಾಲೋಕಕ್ಕೆ ಅಡಿಪಾಯವನ್ನು ಹಾಕಿತು ಎಂದಿದ್ದಾರೆ, ಉದಾಹರಣೆಗೆ, " ಪೋಷಕರು, ಅಜ್ಜ-ಅಜ್ಜಿ, ಶಿಕ್ಷಕರು ಅಥವಾ ಸ್ನೇಹಿತರು ಕಾಲ್ಪನಿಕ ಕಥೆಗಳನ್ನು ಓದಲು ಪ್ರೋತ್ಸಾಹಿದ್ದು, ಮಗುವಿನ ಕಲ್ಪನಾಶಕ್ತಿಯನ್ನು ಬಲವಾಗುವಂತೆ ಮಾಡಿತು; ಹಾಗೂ ಇದು ಮನುಷ್ಯ/ ಪ್ರಾಣಿಗಳ ಗೊಂಬೆಗಳನ್ನು ಜೀವಂತವಾದವುಗಳು" ಎಂದು ನಂಬುವಂತೆ ಮಾಡಿತು. ಈ ರೀತಿಯ ಸ್ವಭಾವಗಳು ಸಂಮೋಹನಕ್ಕೆ ಸುಲಭವಾಗಿ ಸ್ಪಂದಿಸುವ ಮನಸ್ಥಿತಿಗೆ ಸಮಾನವಾಗಿ ಇದೆಯೆಂದು ಅವರ ಇಂಗಿತ. ೧೯೮೦ರಲ್ಲಿ ಮನಃಶಾಸ್ತ್ರಜ್ಞರಾದ ಜುಡಿತ್ ರೂ ಮತ್ತು ಸ್ಟೀವನ್ ಜೇ ಲಿನ್ ಭ್ರಮಾಧೀನ ವ್ಯಕ್ತಿತ್ವದ ಬಗೆಗೆ ಮೊದಲ ವ್ಯವಸ್ಥಿತ ಅಧ್ಯಯನಗಳನ್ನು ಮಾಡಿದರು. ೧೯೯೦ ರ ದಶಕದಲ್ಲಿ ಹಾರ್ವರ್ಡ್ನಲ್ಲಿ ಡೀರ್ಡ್ರೆ ಬ್ಯಾರೆಟ್ ನಡೆಸಿದ ಸಂಶೋಧನೆಯು ಭ್ರಮಾಧೀನ ಜನರ ಈ ಗುಣಲಕ್ಷಣಗಳನ್ನು ಧೃಢೀಕರಿಸಿತು; ಹಾಗೂ ಅತಿಯಾಗಿ [[ಸಂಮೋಹನ ಶಾಸ್ತ್ರ|ಸಂಮೋಹನಕ್ಕೊಳಗಾಗಬಲ್ಲ]] ಜನರು ಅಂದರೆ ಯಾರು ಆಘಾತಕಾರಿ ಬಾಲ್ಯವನ್ನು ಹೊಂದಿದ್ದರೋ, ಕಲ್ಪನಾಲೋಕದಲ್ಲಿ ಹೆಚ್ಚು ಸಮಯವನ್ನು ಕಳೆದಿದ್ದರೋ ಅವರ ಇನ್ನೊಂದು ಗುಂಪನ್ನು ಸಹ ಅವರು ಗುರುತಿಸಿದರು.
 
== ವಿಶಿಷ್ಟ ಲಕ್ಷಣಗಳು ==
ಭ್ರಮಾಧೀನ ವ್ಯಕ್ತಿತ್ವವುಳ್ಳ ಜನರು ತಮ್ಮ ಸಮಯದ  ಅರ್ಧ ಅಥವಾ ಅರ್ಧಕ್ಕಿಂತ ಹೆಚ್ಚು ಸಮಯವನ್ನು [[ಹಗಲುಗನಸು|ಹಗಲುಗನಸಿನಲ್ಲಿಯೇ]] ಕಳೆಯುತ್ತಾರೆ. ಹಾಗೂ ವಾಸ್ತವಿಕತೆ ಮತ್ತು ಕಲ್ಪನೆಗಳ ನಡುವಿನ ವ್ಯತ್ಯಾಸಗಳನ್ನು ಅರಿಯದೇ ದ್ವಂದ್ವದಲ್ಲಿ ಸಿಲುಕಿ, ಎರಡೂ ನೆನಪುಗಳನ್ನು ಬೆರೆಸುತ್ತಾರೆ. ತಾವು [[ದೇಹ|ದೇಹದಿಂದ]] ಹೊರ ಬಂದಂತೆ, ಕೆಲವು ಅತೀಂದ್ರಿಯ (ಪ್ಯಾರಸೈಕೋಲಾಜಿಕಲ್) ಎಂದು ವ್ಯಾಖ್ಯಾನಿಸುವ ಅನುಭವಗಳನ್ನು ಹೇಳುತ್ತಾರೆ.
 
ಪ್ಯಾರಾಕೋಸ್ಮ್ ಎನ್ನುವುದು ಅತ್ಯಂತ ವಿವರವಾದ ಮತ್ತು ರಚನಾತ್ಮಕ ಭ್ರಮಾತ್ಮಕ/ಕಲ್ಪನಾ ಜಗತ್ತು, ಇದನ್ನು ಹೆಚ್ಚಾಗಿ ತೀವ್ರ ಕಲ್ಪನಾನಿರತರು ರಚಿಸುತ್ತಾರೆ.
೧೯ ನೇ ಸಾಲು:
* ಕಲ್ಪಿತ ಸಂವೇದನೆಗಳನ್ನು ನೈಜವೆಂದು ಪರಿಗಣಿಸುವುದು.
* ಬಲವಾದ ಸಂವೇದನಾ ಗ್ರಹಿಕೆಗಳನ್ನು ಹೊಂದಿರುವುದು.
* ದೈಹಿಕ ಪ್ರಚೋದನೆಯಿಲ್ಲದೆ [[ಲೈಂಗಿಕ]] ತೃಪ್ತಿಯನ್ನು ಪಡೆಯುವುದು.
 
ಕಲ್ಪನೆಗಳ ಸ್ಪಷ್ಟತೆಗಳನ್ನು ಬಾಲ್ಯದ ನೆನಪುಗಳು ಮತ್ತು ಕಲ್ಪನೆಗಳ ಪಟ್ಟಿ (ಐಸಿಎಂಐ-ಇನ್ವೆಂಟರಿ ಆಫ್ ಚೈಲ್ಡ್ ಹುಡ್ ಮೆಮೊರಿಸ್ ಆಂಡ್ ಇಮಾಜಿನಿಂಗ್ಸ್ )<ref name="myers">{{Cite journal|last=Myers|first=S. A.|year=1983|title=The Wilson-Barber Inventory of Childhood Memories and Imaginings: Children's form [etc]|url=|journal=Journal of Mental Imagery|volume=7|issue=|pages=83–94}}</ref> ಹಾಗೂ ಸೃಜನಶೀಲ ಅನುಭವಗಳ ಪ್ರಶ್ನಾವಳಿ (ಸಿಇಕ್ಯೂ- ಕ್ರಿಯೇಟಿವ್ ಎಕ್ಸ್ಪೀರಿಯೆನ್ಸಸ್ ಕ್ವಶ್ಚನೇರ್) ಯಿಂದ ಅಳೆಯಲಾಗುತ್ತದೆ.<ref name="Horselenberg">{{Cite journal|last=Merckelbach|first=H.|display-authors=etal|year=2001|title=The Creative Experiences Questionnaire (CEQ): a brief self-report measure of fantasy proneness|url=https://cris.maastrichtuniversity.nl/portal/en/publications/the-creative-experiences-questionnaire-ceq-a-brief-selfreport-measure-of-fantasy-proneness(fd2e42a1-16b4-4e48-a118-a5ea6aafc4b5).html|journal=Personality and Individual Differences|volume=31|issue=6|pages=987–995|doi=10.1016/s0191-8869(00)00201-4}}</ref>
೪೯ ನೇ ಸಾಲು:
 
== ಆರೋಗ್ಯದ ಮೇಲಿನ ಪರಿಣಾಮಗಳು ==
'''ಸುಳ್ಳು [[ಗರ್ಭಧಾರಣೆ]] (ಸೂಡೊಸೈಸಿಸ್)''' -   ಹೆಚ್ಚಿನ ಸಂಖ್ಯೆಯ ಸ್ತ್ರೀ ಕಲ್ಪನಾನಿರತರು/ಭ್ರಮಾಧೀನರು ಇದನ್ನು ಹೊಂದಿದ್ದಾರೆ. ವಿಲ್ಸನ್-ಬಾರ್ಬರ್ ಅಧ್ಯಯನದಲ್ಲಿ ಪ್ರಶ್ನೆಗೊಳಪಟ್ಟವರಲ್ಲಿ  ೬೦% ಭ್ರಮಾಧೀನ ಸ್ತ್ರೀಯರು ಒಮ್ಮೆಯಾದರೂ ಸುಳ್ಳು ಗರ್ಭಧಾರಣೆಯನ್ನು (ಸೂಡೊಸೈಸಿಸ್) ಹೊಂದಿದ್ದಾರೆಂದು ಹೇಳಿದ್ದಾರೆ. ವರದಿಯ ಪ್ರಕಾರ  ಸೂಡೊಸೈಸಿಸ್ ಹೊಂದಿರುವವರು ತಾವು ಗರ್ಭಿಣಿ ಎಂದು ನಂಬಿದ್ದರು ಮತ್ತು ಅವರು ಗರ್ಭಿಣಿಯ ಲಕ್ಷಣಗಳನ್ನು ಹೊಂದಿದ್ದರು.  ಅಮೆನೋರಿಯಾ (ಮುಟ್ಟಿನ ನಿಲುಗಡೆ)ದ ಜೊತೆಗೆ, ಸ್ತನದಲ್ಲಿ ಬದಲಾವಣೆಗಳು, ಕಿಬ್ಬೊಟ್ಟೆಯ ಹಿಗ್ಗುವಿಕೆ, ಬೆಳಿಗ್ಗೆ ಕಾಯಿಲೆ, ಕಡುಬಯಕೆಗಳು ಮತ್ತು "ಭ್ರೂಣದ" ಚಲನೆಗಳು ಇತ್ಯಾದಿಗಳಲ್ಲಿ ಕನಿಷ್ಟ ನಾಲ್ಕು ಲಕ್ಷಣಗಳನ್ನು ಅನುಭವಿಸಿದ್ದಾರೆ: ಅವರಲ್ಲಿಬ್ಬರು ಗರ್ಭಪಾತಕ್ಕೂ ಹೋಗಿದ್ದರು, ಆಗ ಯಾವುದೇ ಭ್ರೂಣ ಕಂಡುಬಂದಿಲ್ಲ ಎಂದು ಅವರಿಗೆ ವೈದ್ಯರು ತಿಳಿಸಿದ್ದರು. ಗರ್ಭಧಾರಣೆಯ ಪರೀಕ್ಷೆಗಲ್ಲಿ ನಕಾರಾತ್ಮಕ ಫಲಿತಾಂಶಗಳನ್ನು ಪಡೆದಾಗ, ಮಗುವನ್ನು ಪಡೆಯುವ ತೀವ್ರವಾದ ಇಚ್ಛೆಯಿದ್ದರೂ ಮಗು ಆಗದಿದ್ದಾಗ ಸುಳ್ಳು ಗರ್ಭಧಾರಣೆ (ಸೂಡೊಸೈಸಿಸ್)ಯ ಪ್ರಕರಣಗಳು ಹೆಚ್ಚುತ್ತವೆ.
 
'''ಹೊಂದಾಣಿಕೆಯಿಲ್ಲದ ಹಗಲುಗನಸು'''- ಇದು ಪ್ರಸ್ತಾವಿತ ಮಾನಸಿಕ ಅಸ್ವಸ್ಥತೆಯಾಗಿದೆ,  ದೈನಂದಿನ ಜೀವನದಲ್ಲಿ ವ್ಯಕ್ತಿಗಳ ನಡುವಿನ ಪರಸ್ಪರ ಕ್ರಿಯೆಯನ್ನು ಬದಲಿಸುವ ಹಾಗೂ ಕೆಲಸ, ಸಂಬಂಧಗಳು ಮತ್ತು ಸಾಮಾನ್ಯ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಉಂಟು ಮಾಡುವ ಕಲ್ಪನೆಗಳನ್ನೊಳಗೊಂಡ ಚಟುವಟಿಕೆಯಾಗಿದೆ. ಈ ಲಕ್ಷಣವನ್ನೊಳಗೊಂಡಿರುವ ವ್ಯಕ್ತಿಗಳು ಕಲ್ಪನೆಯಲ್ಲಿ ತಮಗೆ ಬೇಕಾದಂತೆ, ತಮ್ಮ ಇಚ್ಛೆಗನುಸಾರವಾಗಿ ಸನ್ನಿವೇಶಗಳನ್ನು ಮತ್ತು ಪಾತ್ರಗಳನ್ನು ಸೃಷ್ಟಿಸುತ್ತಾರೆ . ಅತಿಯಾದ ಹಗಲುಗನಸಿನಿಂದ ಬಳಲುತ್ತಿರುವ ಜನರು ತಮ್ಮ ಕಲ್ಪನೆಗಳ ಸನ್ನಿವೇಶಗಳು ಮತ್ತು ಪಾತ್ರಗಳು ನೈಜವಾಗಿಲ್ಲ ಮತ್ತು ವಾಸ್ತವವಾದದ್ದನ್ನು ನಿರ್ಧರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ, ಈ ಲಕ್ಷಣ ಅವರನ್ನು ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವವರಿಂದ ಪ್ರತ್ಯೇಕಿಸುವ ಅಂಶವಾಗಿದೆ.<ref>{{Cite journal|last=Somer|first=Eli|title=Maladaptive daydreaming: A qualitative inquiry|journal=Journal of Contemprary Psychotherapy|volume=32|issue=2/3|year=2002|pages=197 - 211|url=https://somer.co.il/articles/2002Malaptdaydr.contemp.psych.pdf}}</ref>
 
೨೦೧೧ರಲ್ಲಿ  ೯೦ ಮಂದಿ ವಿಪರೀತ, ಕಂಪಲ್ಸಿವ್ ಅಥವಾ ಅಸಮರ್ಪಕ ಕಲ್ಪನಾನಿರತರು ಯಾರು ತಮ್ಮನ್ನು ತಾವು ಹೆಚ್ಚು ರಚನಾತ್ಮಕ, ತಲ್ಲೀನಗೊಳಿಸುವ ಕಾಲ್ಪನಿಕ ಅನುಭವಗಳಲ್ಲಿ ವ್ಯಾಪಕ ಅವಧಿಗಳಲ್ಲಿ ತೊಡಗಿಸಿಕೊಂಡಿದ್ದಾರೋ ಅವರ ಬಗೆಗೆ  ಅಧ್ಯಯಿಸಿ ವರದಿ ಮಾಡಿದೆ. ಅವರು ಆಗಾಗ್ಗೆ ಮೂರು ಅಂಶಗಳಿಂದ ಉಂಟಾಗುವ ತೊಂದರೆಯನ್ನು ವರದಿ ಮಾಡಿದ್ದಾರೆ:
 
# ಅಗಾಧವಾಗಿ ಕಾಣುವ ಅವರ ಕಲ್ಪನೆಗಳನ್ನು ನಿಯಂತ್ರಿಸುವಲ್ಲಿ ತೊಂದರೆ/ಕಷ್ಟವಾಗುವುದು.
# ಅತಿಯಾದ ಕಲ್ಪನೆಗಳು ತಮ್ಮ ನಿತ್ಯಜೀವನದ ಚಟುವಟಿಕೆಗಳಿಗೆ, ವೈಯಕ್ತಿಕ ಸಂಬಂಧಗಳನ್ನು ನಿಭಾಯಿಸುವಲ್ಲಿ ಅಡಚಣೆಯಾಗಿ ಕಾಡುವುದು.