ವಿನ್ಸೆಂಟ್ ಆರ್ಥರ್ ಸ್ಮಿತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೫ ನೇ ಸಾಲು:
}}
 
:ಸ್ಮಿತ್ ವಿನ್ಸೆಂಟ್ (1848-1920.) ಆಧುನಿಕ [[ಇತಿಹಾಸ]] ತಜ್ಞ. ವಿನ್ಸೆಂಟ್ ಅರ್ಥರ್ ಸ್ಮಿತ್ ಇವನ ಪೂರ್ಣ ಹೆಸರು. ಇವನು 1848ರಲ್ಲಿ ಡಬ್ಲಿನ್‍ನಲ್ಲಿ ಜನಿಸಿದ. ಇವನ ತಂದೆ ವೃತ್ತಿಯಲ್ಲಿ [[ವೈದ್ಯ]]ನಾಗಿದ್ದ; ಪ್ರವೃತ್ತಿಯಲ್ಲಿ ಒಬ್ಬ ಹವ್ಯಾಸಿ ನಾಣ್ಯಶಾಸ್ತ್ರಜ್ಞನೂ ಪುರಾತತ್ತ್ವತಜ್ಞನೂ ಆಗಿದ್ದ. ಸ್ಮಿತ್ 1869ರಲ್ಲಿ [[ಭಾರತ|ಭಾರತದ]] ಸಿವಿಲ್ ಸರ್ವಿಸ್‍ಗೆ ಸೇರ್ಪಡೆಯಾಗಿ ಉತ್ತರ ಪ್ರದೇಶದಲ್ಲಿ ಸೇವೆಸಲ್ಲಿಸಿದ. ಭಾರತದ ಇತಿಹಾಸವನ್ನು ವೈಜ್ಞಾನಿಕವಾಗಿ ಸಂಶೋಧಿಸಿ ಆಧಾರ ಸಹಿತ ಪ್ರಕಟಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಇವನ ಇತಿಹಾಸ ಸಂಶೋಧನಾ ಕಾರ್ಯ, ನಂತರದ ಭಾರತದ ಇತಿಹಾಸಕಾರರಿಗೆ ಮಾರ್ಗದರ್ಶನವಾಯಿತು.
===ಭಾರತೀಯ ಇತಿಹಾಸದ ಸಂಶೋದನೆ===
*ಸ್ಮಿತ್ ಸೇವೆಯಿಂದ ನಿವೃತ್ತಿಯಾದ ಅನಂತರ ಡಬ್ಲಿನ್‍ನಲ್ಲಿ ನೆಲೆಯಾಗಿ ಭಾರತೀಯ [[ಇತಿಹಾಸ]]ದ ಅಧ್ಯಯನ ಕೈಗೊಂಡ (1900). ಈ ಸಮಯದಲ್ಲಿ ಅನೇಕ ಹೊಸ ವಿಷಯಗಳನ್ನು ಬೆಳಕಿಗೆ ತಂದು ಪ್ರಾಚೀನ [[ಭಾರತ]]ದ ಇತಿಹಾಸದ ಕಾಲಮಾನವನ್ನು ಅಭ್ಯಸಿಸಲು ಅಡಿಪಾಯ ಹಾಕಿದ. ಇವನ '''ಅರ್ಲಿ ಹಿಸ್ಟರಿ ಆಫ್ ಇಂಡಿಯ (1904)''' ಎಂಬ ಗ್ರಂಥದಲ್ಲಿ ಪ್ರಾಚೀನ ಭಾರತದ ಇತಿಹಾಸವನ್ನು ಸಮೀಕ್ಷಿಸಲಾಗಿದೆ. ಈ ಕೃತಿ ಮುಖ್ಯವಾಗಿ ರಾಜಕೀಯ ಇತಿಹಾಸಕ್ಕೆ ಸಂಬಂಧಿಸಿದೆ. ಅದುವರೆಗೆ ಪ್ರಾಚೀನ ಭಾರತದ ಬಗ್ಗೆ ಪ್ರಚಲಿತವಿದ್ದ ಹೆಲೆನಿ ಸ್ಮಿತ್‍ನ ಅಭಿಪ್ರಾಯವನ್ನು ಅಲ್ಲಗಳೆದು, ಭಾರತದ ಇತಿಹಾಸದ ಮೇಲೆ ಪಾಶ್ಚಾತ್ಯರ ಪ್ರಭಾವ ತೀರ ಕಡಮೆ ಎಂದು ಈ ಕೃತಿ ಹೇಳಿದೆ. ಇದು ಕ್ರಿಪೂ 600 ರಿಂದ ಕ್ರಿ.ಶ. 1200ರ ವರೆಗಿನ ಇತಿಹಾಸವನ್ನು ಒಳಗೊಂಡಿದೆ. ಇದರಲ್ಲಿ ಭಾರತದ ಮೇಲೆ [[ಅಲೆಕ್ಸಾಂಡರ್]] ಕೈಗೊಂಡ ದಂಡಯಾತ್ರೆಗಳ ಬಗ್ಗೆ ಪ್ರಸ್ತಾಪಿಸಲಾಗಿದೆ (66ಪುಟಗಳು). ಇವನು ಗುಪ್ತರ ಅವಧಿಯನ್ನು ಇಂಗ್ಲೆಂಡಿನ ಎಲಿಜಬೆತ್ ಮತ್ತು ಸ್ಟುವರ್ಟ್‍ರ ಆಡಳಿತಕ್ಕೆ ಹೋಲಿಸಿದ್ದಾನೆ. ತದನಂತರ 1919ರಲ್ಲಿ ಇವನು '''ಆಕ್ಸ್‍ಫರ್ಡ್ ಹಿಸ್ಟರಿ ಆಫ್ ಇಂಡಿಯ''' ಎಂಬ ಗ್ರಂಥವನ್ನು ರಚಿಸಿದ.<ref>ಆಕ್ಸ್‍ಫರ್ಡ್ ಹಿಸ್ಟರಿ ಆಫ್ ಇಂಡಿಯ</ref>