ಇಮ್ಯಾನ್ಯುಅಲ್ ಕಾಂಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿಯನ್ನು ಸರಿಪಡಿಸಿದ್ದೇನೆ.
೧೨೬ ನೇ ಸಾಲು:
ಆಧುನಿಕ ಪಾಶ್ಚಾತ್ಯ ತತ್ತ್ವಶಾಸ್ತ್ರದ ದಾರಿಯಲ್ಲಿ ಕಾಂಟನ ಸ್ಥಾನವೇನು, ಅವನ ತತ್ತ್ವ ಮುಂದೆ ಯಾರ ಮೇಲೆ ಎಷ್ಟು ಪ್ರಭಾವ ಬೀರಿತು ಎಂಬುದನ್ನು ತಿಳಿಯಲು ಕಾಂಟನ ಸೌಂದರ್ಯ ಮೀಮಾಂಸೆ : ಕ್ರಿಟೀಕ್ ಆಫ್ ಜಜ್‍ಮೆಂಟ್ ಎನ್ನುವ ಗ್ರಂಥದಲ್ಲಿ ಕಾಂಟನ ಸೌಂದರ್ಯ ಮೀಮಾಂಸೆ ಅಡಕವಾಗಿದೆ. ಸೌಂದರ್ಯಾನುಭವವನ್ನು ಒಂದು ವಿಶಿಷ್ಟ ರೀತಿಯ ಜ್ಞಾನವೆಂದೇ ಈತ ಪರಿಗಣಿಸುತ್ತಾನೆ. ಇದೊಂದು ಪರಿಪೂರ್ಣ ಜ್ಞಾನ. ಆದರೆ ಇದನ್ನು ಸಾಧಿಸುವುದು ಕೇವಲ ಬುದ್ಧಿಯಿಂದ ಆಗದ ಮಾತು. ಬುದ್ಧಿಗೆ ನಿಲುಕುವ ಜ್ಞಾನ ಅನುಭವಸಿದ್ಧವಾಗಿರುತ್ತದೆ. ಅನುಭವದ ಆಧಾರವೂ ಇಲ್ಲದೆ ಅನುಮಾನವೂ ಕಷ್ಟವಾಗುತ್ತದೆ. ಎಂದರೆ ಇದು ಬುದ್ಧಿ ಅಥವಾ ತರ್ಕಜನ್ಯ ಜ್ಞಾನದ ಮಿತಿ. ಈ ಮಿತಿ ನೀತಿಜ್ಞಾನದಲ್ಲಿ ಸ್ವಲ್ಪ ಸುಧಾರಿಸಿರುತ್ತದೆ. ಏಕೆಂದರೆ ನೀತಿಜ್ಞಾನ ಬುದ್ಧ್ಯಾರೂಢ. ಇಂಥ ಸಂದರ್ಭಗಳಲ್ಲಿ ಅನುಭವದ ಆಧಾರವಿಲ್ಲದೆಯೇ ಪ್ರತ್ಯಕ್ಷ ಜ್ಞಾನ ನಮ್ಮನ್ನು ನಡೆಸಿರುತ್ತದೆ. ಇಂಥ ಪ್ರತ್ಯಕ್ಷ ಜ್ಞಾನದ ಮೂಲವೇ ಆತ್ಮಜ್ಞಾನ ಲಭಿಸಬೇಕಾದರೆ ಅನುಭವಲೋಕದ ಒಂದು ಇರುವಿಕೆ, ನೀತಿಲೋಕದ ಒಂದು ಆದರ್ಶ ಸ್ಥಿತಿ-ಇವೆರಡೂ ಒಂದೇ ಸಂದರ್ಭದಲ್ಲಿ ಸಿದ್ಧಿಸುವುದು ದುರ್ಲಭ. ಎಂದರೆ ಹೇಗೆ ಇರಬೇಕೋ ಹಾಗೆಯೇ ಇರುವುದು ಬಹಳ ಅಪರೂಪ. ಅಂಥ ಸ್ಥಿತಿ ಒದಗಿದರೆ ಅದು ನಮ್ಮ ಪುಣ್ಯ. ಇಂಥ ಒಂದು ಭಾಗ್ಯ ಅಥವಾ ಸುಸಂದರ್ಭ ಸೌಂದರ್ಯ ಕ್ಷೇತ್ರದಲ್ಲಿ ಲಭಿಸುತ್ತದೆಂದು ಕಾಂಟನ ಮತ. ಎಂದರೆ ಸೌಂದರ್ಯಾನುಭವದಲ್ಲಿ ತರ್ಕ ಮತ್ತು ನೀತಿಗಳು ಒಂದಾಗುತ್ತವೆ. ಆದ್ದರಿಂದ ಸೌಂದರ್ಯಾನುಭವ ಇವೆರಡಕ್ಕಿಂತಲೂ ಹೆಚ್ಚು ಉದಾತ್ತ ಮಟ್ಟದಲ್ಲಿದ್ದು ಆತ್ಮದರ್ಶನದ ಸಾಧನವಾಗುತ್ತದೆ. ಆ ಕ್ಷೇತ್ರದಲ್ಲಿ ಆತ್ಮದ ಪ್ರಕಾಶನಕ್ಕೆ ಅವಕಾಶವಿದ್ದು ಆತ್ಮ ತಾನೇ ತಾನಾಗಿ ಮೆರೆಯುತ್ತದೆ. ಸೌಂದರ್ಯಾನುಭವದ ಲಕ್ಷಣವೆಂದರೆ-ಅದು ವೈಯಕ್ತಿಕವಲ್ಲ, ಸಾರ್ವತ್ರಿಕ, ಸೌಂದರ್ಯದ ವಸ್ತು ದೇಶಕಾಲಗಳಲ್ಲಿರಬಹುದಾದ ವಸ್ತುವಲ್ಲ. ತರ್ಕಜ್ಞಾನ ಒಂದು ಸಿದ್ಧಾಂತವನ್ನು ಸೃಷ್ಟಿಮಾಡುವಂತೆ ಸೌಂದರ್ಯಾನುಭವ ಒಂದು ಸುಂದರ ವಸ್ತುವನ್ನು ನಿರ್ಮಾಣಮಾಡುತ್ತದೆ. ಈ ವಸ್ತು ಇಂದ್ರಿಯಾತೀತ ಮತ್ತು ಬುದ್ಧಿಗೆ ಅಪ್ರಾಪ್ಯ. ಎಂದರೆ ಸೌಂದರ್ಯಾನುಭವದ ವಸ್ತು ವ್ಯವಹಾರಿಕ ಅಥವಾ ಪ್ರಾಪಂಚಿಕ ನಿಯಮಗಳಿಗೆ ಅತೀತವಾಗಿದ್ದು, ಅವುಗಳ ಮಾನದಂಡಗಳಿಗೆ ತಲೆಬಾಗುವುದಿಲ್ಲ.
ಕಾಂಟನ ಈ ವಿಚಾರದ ಮೇರೆಗೆ, ಸೌಂದರ್ಯ ಜ್ಞಾನ ತರ್ಕ ಮತ್ತು ನೀತಿಜ್ಞಾನಗಳಿಂದ ಪ್ರತ್ಯೇಕವೆಂದು ತಿಳಿಯುತ್ತದೆ. ಸೌಂದರ್ಯಾನುಭವ ಇಂದ್ರಿಯಜನ್ಯವಲ್ಲ, ಬೋಧಕವಲ್ಲ. ಅದೊಂದು ನಿಸ್ವಾರ್ಥ, ನಿರ್ಲಿಪ್ತ, ಅನಾಸಕ್ತ ಅನುಭವ. ಆದ್ದರಿಂದ ಒಂದು ಕಲಾಕೃತಿಯ ನಿರ್ಮಾಣದಲ್ಲಿ ಕಲಾವಿದನಾದ ಮಾನವ ಕೇವಲ ಕುಂಚ. ಕಲಾಕೃತಿ ಸ್ವಯಂಶಾಸನಾಧಿಕಾರಿಯಾಗಿದ್ದು ತನ್ನನ್ನು ತಾನೇ ಚಿತ್ರಿಸಿಕೊಳ್ಳುವ ಒಂದು ಮಹಾ ಚೈತನ್ಯವಾಗಿದೆ. ಒಂದು ಕೃತಿಯ ಆದರ್ಶ ಆ ಕೃತಿಗೇ ಸೇರಿದ್ದು. ಅದಕ್ಕೆ ಅನ್ಯವಾದ ಆದರ್ಶ ಬೇರೊಂದಿಲ್ಲ. ಕಲಾವಿದನಾಗಲೀ ವಿಮರ್ಶಕನಾಗಲೀ ಅದನ್ನು ನಿರ್ದೇಶಿಸುವ ಹಾಗೆಯೂ ಇರುವುದಿಲ್ಲ. ಕಲಾಕೃತಿಯೆಂದರೆ ಸ್ವಯಂ ಪರಿವರ್ತನಾಶಕ್ತಿಯನ್ನೂ ನಿರ್ದೇಶನಶಕ್ತಿಯನ್ನೂ ಹೊಂದಿರುವ ಬ್ರಹ್ಮಚೈತನ್ಯ. ಈ ಕಾರಣದಿಂದ ಬಹು ಶ್ರೇಷ್ಠ ಕಲಾಕೃತಿ ಅಮರ ಮತ್ತು ಸರ್ವ ಸಮರ್ಪಕ.
<ref>[https://kn.wikisource.org/s/4mk ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಂಟ್, ಇಮ್ಯಾನ್ಯುಅಲ್]</ref>
==ಬಾಹ್ಯ ಸಂಪರ್ಕಗಳು==
{{Library resources box|by=yes|onlinebooks=no|about=yes|wikititle=Immanuel Kant}}
Line ೧೭೧ ⟶ ೧೭೨:
** [http://plato.stanford.edu/entries/kant-hume-causality/ Kant and Hume on Causality]
** [http://plato.stanford.edu/entries/kant-hume-morality/ Kant and Hume on Morality]
==ಉಲ್ಲೇಖ==
 
[[ವರ್ಗ:ತತ್ವಶಾಸ್ತ್ರಜ್ಞರು]]