ಬಂಡಾಯ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೩ ನೇ ಸಾಲು:
[[ಚನ್ನಣ್ಣ ವಾಲೀಕಾರ]] ಬಂಡಾಯ ಚಳವಳಿಯಲ್ಲಿ ಬರೆಯುತ್ತಿರುವ ಒಬ್ಬ ಶಕ್ತ ಲೇಖಕ. ನವೋದಯ, ನವ್ಯದ ತರುವಾಯ ಉತ್ತರ ಕರ್ನಾಟಕದ ಭಾಷೆಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಕವಿ ಹಾಗೂ ನಾಟಕಕಾರ. ಇವರ ಇತ್ತೀಚಿನ ಕೃತಿಗಳಾದ ಟೊಂಕದ ಕೆಳಗಿನ ಜನ; ಪ್ಯಾಂಥರ್ ಪದ್ಯಗಳು ಸಾಮಾಜಿಕ ಅಸಮಾನತೆಯ ವಿರುದ್ಧ ಸಿಡಿದೆದ್ದ ಕೃತಿಗಳು.
 
[[ಹೊರೆಯಾಲ ದೊರೆಸ್ವಾಮಿ]]ಯವರ ಕೂಳೆ, [[ಎಸ್.ಎಸ್. ಹಿರೇಮಠ]] ಅವರ ಮನುಷ್ಯನೆಲ್ಲಿ, ಸೂಗಯ್ಯ ಹಿರೇಮಠರ ‘ಉಂಡು ಮಲಗಿದವರು’ ಕವನ ಸಂಕಲನ; [[ಇಂದೂಧರ ಹೊನ್ನಾಪುರ]] ಅವರ ಬಂಡಾಯ; [[ರಮಜಾನ ದರ್ಗಾ]] ಅವರ ಕಾವ್ಯ ಬಂತು ಬೀದಿಗೆ; [[ಅಲ್ಲಮಪ್ರಭು ಬೆಟ್ಟದೂರು]] ಅವರ ಇದು ನನ್ನ ಭಾರತ; [[ಗವಿಸಿದ್ದ ಬಳ್ಳಾರಿ]]ಯವರ ಕತ್ತಲದೇಶದ ಪದ್ಯಗಳು; [[ಗಂಗಾಧರಮೂರ್ತಿ]]ಯವರ ಹೂ ಅರಳುವಂಥ ಮಣ್ಣು; [[ರಂಗಾರೆಡ್ಡಿ ಕೋಡಿರಾಂಪುರ]] ಅವರ ಒಂದು ಸೊಸೈಟಿಯ ಕತೆ; [[ಗಂಗಾಧರ ಮೊದಲಿಯಾರ್]] ಅವರ ಸೂರ್ಯ ಹುಟ್ಟಿದ ದೇಶ ಮುಂತಾದ ಕೃತಿಗಳಲ್ಲಿ ಶೋಷಣೆಯ ವಿವಿಧ ಮುಖಗಳು ಕಂಡುಬರುತ್ತವೆ. ಸಾಹಿತ್ಯದ ಪ್ರತಿಕೆಗಳಲ್ಲಿ ಅನೇಕ ಕವಿತೆಗಳನ್ನು ಪ್ರಕಟಿಸುತ್ತಿರುವ ಬಂಡಾಯ ಕವಿಗಳಿದ್ದಾರೆ. ಅವರ ಪೈಕಿ ಮುಖ್ಯರಾದವರು ಎಚ್, ಗೋವಿಂದಯ್ಯ, ಬಾಬಾಜಾನ ಅತ್ತರ, ಮಹಾಬಲೇಶ್ವರ ಕಾಟ್ರಹಳ್ಳಿ ಇಕ್ಬಾಲ್ ಹುಸೇನ್, ಹುಲ್ಲಕೆರೆ ಮಹಾದೇವ, ಸತೀಶ ಕುಲಕರ್ಣಿ, ಶಿವರಾಮು ಕಾಡನಕುಪ್ಪೆ, ಎಂ, ಶಿವನಂಜಯ್ಯ, ಅಶೋಕ ಶೆಟ್ಟರ, ಜಗದೀಶ ಮಂಗಳೂರುಮಠ, ವಿಜಯ ಪಾಟೀಲ, ಮಹೇಂದ್ರ ಪ್ರಸಾದ್, ಬಿ.ರಾಜಣ್ಣ, ಹೊ.ಮ. ಪಂಡಿತಾರಾಧ್ಯ, ರಮೇಶ ಧಾನವಾಡಕರೆ, ಚಂದ್ರಶೇಖರ ಆಲೂರು, ಆರ್ಕೆ ಮಣಿಪಾಲ, ಶ್ಯಾಮಸುಂದರ ಬಿದರಕುಂದಿ ಈ ಕವಿಗಳು ತೀಕ್ಷ್ಣವಾದ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಯಿಂದ ಕವಿತೆಗಳನ್ನು ರಚಿಸುತ್ತಿದ್ದಾರೆ.<ref> [https://kn.wikisource.org/s/3aw ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಂಡಾಯ ಸಾಹಿತ್ಯ]</ref>
==ನೋಡಿ==
*[[ಕನ್ನಡ ಸಾಹಿತ್ಯ ಪ್ರಕಾರಗಳು]]
"https://kn.wikipedia.org/wiki/ಬಂಡಾಯ_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ