ಎಂ. ಆರ್. ಶ್ರೀನಿವಾಸಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೫ ನೇ ಸಾಲು:
ಎಂ. ಆರ್. ಶ್ರೀ ಅವರು ವಿಜ್ಞಾನದ ಉಪಾಧ್ಯಾಯರಾಗಿ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು ಶ್ರದ್ಧೆಯಿಂದ ಪಾಠ ಮಾಡುತ್ತಿದ್ದರು. ಅವರ ಬೋಧನೆ ಎಂದೂ ಶುಷ್ಕವಾಗಿರುತ್ತಿರಲಿಲ್ಲ. ತಮ್ಮ ಬದುಕಿನಲ್ಲಿ ಶಿಸ್ತನ್ನು ನಿಷ್ಠೆಯಿಂದ ಪರಿಪಾಲಿಸಿದ ಅವರು ಮಕ್ಕಳಲ್ಲೂ ಅದನ್ನು ಪ್ರಕಟಗೊಳಿಸಲುಲು ವಿಶೇಷವಾಗಿ ಶ್ರಮಿಸಿದರು. ನಾರ್ಮಲ್ ಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದಾಗ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದಾದರೊಂದು ಸಾಹಿತ್ಯ ಕೃತಿಯ ಪರಿಚಯ ಮಾಡಿಕೊಡುತ್ತಿದ್ದರು.
==ಮಹತ್ವದ ಕೊಡುಗೆ==
ಎಂ. ಆರ್. ಶ್ರೀ ಅವರ ಶಿಕ್ಷಣಕ್ಕೆ ಸಂಬಂಧಪಟ್ಟ ಅನೇಕ ವಿಚಾರ ಧಾರೆಗಳು ಅವರ [[s:kn:ರಂಗಣ್ಣನ ಕನಸಿನ ದಿನಗಳು|‘ರಂಗಣ್ಣನ ಕನಸಿನ ದಿನಗಳು’]] ಕಾದಂಬರಿಯಲ್ಲಿ ಮೂಡಿವೆ. ಅವರ ‘ಸ್ಕೌಟ್ ಮಾಸ್ಟರುಗಳಿಗೆ ಸಲಹೆಗಳು’ ಎಂಬ ಅನುವಾದಿತ ಗ್ರಂಥ ಹಾಗೂ ‘ಸ್ಕೌಟುಗಳ ಕೈಪಿಡಿ’ ಉಪಯುಕ್ತ ಕೃತಿಗಳು. ಸ್ಕೌಟುಗಳಿಗಾಗಿಯೇ ಅವರು ಬರೆದ ‘ಕಂಠೀರವ ವಿಜಯ’ ಕೃತಿಯನ್ನು ಓದಿ ಮೆಚ್ಚಿದ ಮಹಾರಾಜರು ಎಂ.ಆರ್. ಶ್ರೀ ಅವರನ್ನು ಅರಮನೆಗೆ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದರು. ‘ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು’ ಅವರ ದುಡಿಮೆಯ ಮಹಸ್ಮಾರಕವಾಗಿದೆ.
==ಶ್ರೇಷ್ಠ ಭಾಷಣಕಾರರು==
ಎಂ. ಆರ್. ಶ್ರೀ ಅವರು ಶ್ರೇಷ್ಠ ವಾಗ್ಮಿಗಳು. ಕನ್ನಡ ಸಾಹಿತ್ಯದ ಬಗೆಗೆ ಅದರಲ್ಲೂ ವೀರಶೈವ ಸಾಹಿತ್ಯದ ಬಗೆಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲ ವಿದ್ವಾಂಸರಾಗಿದ್ದರು. ಜರಿಯ ಪೆಟ, ಪಟ್ಟೆಯಾಗಿ ಮಡಿಸಿದ ಶಲ್ಯ, ಎದ್ದು ಕಾಣುವ ಕಿವಿಯ ಹತ್ತಕಡಕುಗಳು, ಎತ್ತರವಾದ ನಿಲುವು, ಕೆಂಬಿಳುಪಿನ ಮೈಬಣ್ಣ, ಕಾಂತಿಯುಕ್ತವಾದ ನಗುಮುಖ-ಹೀಗೆ ಹತ್ತು ಜನರಲ್ಲಿ ಎದ್ದು ಕಾಣುವ ವ್ಯಕ್ತಿತ್ವದ ಎಂ.ಆರ್. ಶ್ರೀ ಅವರು ಭಾಷಣಕ್ಕೆ ನಿಂತರೆ ಪುಂಖಾನುಪುಂಖವಾಗಿ ಶಿವಶರಣರ ವಚನಗಳು, ಹರಿಹರನ ರಗಳೆಗಳ ಸಾಲು ಸಾಲುಗಳು, ಕನ್ನಡದ ಧೀಮಂತ ಕವಿಗಳ ಪದ್ಯಗಳ ಜೊಂಪೆ ಜೊಂಪೆ ಉಲ್ಲೇಖಗಳು ಹರಿದು ಬರುತ್ತಿದ್ದವು. ಅವರ ನೆನಪಿನಾಳದಿಂದ ಉಕ್ಕಿ ಬರುವ ಉಲ್ಲೇಖ ಪದ್ಯಗಳನ್ನು ಕೇಳಿದಾಗ ಜನ ಮಂತ್ರಮುಗ್ಧರಾಗುತ್ತಿದ್ದರು. ಅವರದು ಕೇವಲ ಶುಷ್ಕ ಪಾಂಡಿತ್ಯವಾಗಿರಲಿಲ್ಲ. ಶ್ರೋತೃಗಳ ಮನದುಂಬುವಂತೆ ನವಿರಾದ ಹಾಸ್ಯವನ್ನು ಬಳಸಿ ವಿವರಿಸುವ ಭಾಷಣ ಕಲೆ ಅವರಿಗೆ ಕರಗತವಾಗಿತ್ತು. ಎಂ. ಆರ್. ಶ್ರೀ ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿದ್ದುದು ಭಾಷಣಗಳ ಮೂಲಕವೇ ಎಂದರೆ ತಪ್ಪಾಗಲಾರದು.