ಅಂತಾರಾಷ್ಟ್ರೀಯ ಸರಕು ಒಪ್ಪಂದಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಉಲ್ಲೇಖ: Clean up ;, replaced: <reflist/> → {{reflist|2}} using AWB
 
೩ ನೇ ಸಾಲು:
ಮುಖ್ಯವಾದ ಕಚ್ಚಾವಸ್ತುಗಳ ಮತ್ತು ಕೆಲವು ವಿಶೇಷ ಆಹಾರ ವಸ್ತುಗಳ ಬೆಲೆ ಬಹಳವಾಗಿ ಏರಿಳಿತಕ್ಕೊಳಗಾಗಿ ಉತ್ಪಾದಕರಿಗೆ ಮತ್ತು ಗ್ರಾಹಕರಿಗೆ ಕಷ್ಟ ಪರಿಸ್ಥಿತಿಯನ್ನುಂಟು ಮಾಡುತ್ತಿದ್ದುದನ್ನು ತಪ್ಪಿಸುವುದಕ್ಕಾಗಿ ಸರಕು ಒಪ್ಪಂದಗಳನ್ನು ರೂಪಿಸಲಾಯಿತು. ಬೇಡಿಕೆ ಮತ್ತು ನೀಡಿಕೆಗಳಲ್ಲಿ ಆಗುವ ಬದಲಾವಣೆಗಳು ಬೆಲೆಗಳ ಏರಿಳಿತಕ್ಕೆ ಕಾರಣವಾಗುವುದರಿಂದ ಸರಕುಗಳ ಉತ್ಪಾದನೆ ಮತ್ತು ವ್ಯಾಪಾರದ ಮೇಲೆ ಅಂತಾರಾಷ್ಟ್ರೀಯ ಹತೋಟಿ ಅವಶ್ಯಕವೆಂಬುದನ್ನು ಮನಗಂಡು ಒಪ್ಪಂದಗಳ ಮೂಲಕ ಮುಖ್ಯವಾದ ಕಚ್ಚಾವಸ್ತುಗಳು ಮತ್ತು ಆಹಾರ ವಸ್ತುಗಳ ಉತ್ಪಾದನೆ ಮತ್ತು ವ್ಯಾಪಾರದ ಮೇಲೆ ಹತೋಟಿ ಇಡಲು ಯತ್ನಿಸಲಾಯಿತು. ಉತ್ಪಾದನೆಯನ್ನು ನಿಗದಿ ಮಾಡಿ ಅಧಿಕ ಉತ್ಪಾದನೆಯಿಂದ ಉದ್ಭವಿಸುವ ಸಮಸ್ಯೆಗಳನ್ನು ತಡೆಯಲು ಮತ್ತು ನಿಗಧಿಯಾದ ಬೆಲೆಗೆ ಕೊಳ್ಳಲು ಮತ್ತು ಮಾರಲು ಒಪ್ಪಂದ ಮಾಡಿಕೊಂಡು ಉತ್ಪಾದಕರಿಗೆ ಒದಗಬಹುದಾದ ನಷ್ಟವನ್ನು ತಪ್ಪಿಸುವುದು-ಇವೇ ಅಂತಾರಾಷ್ಟ್ರೀಯ ಸರಕು ಒಪ್ಪಂದಗಳ ಮೂಲಭೂತ ಉದ್ದೇಶಗಳು.<ref>http://www.encyclopedia.com/doc/1G2-3045000218.html</ref>
===ಅಂತಾರಾಷ್ಟ್ರೀಯ ಗೋದಿ ಒಪ್ಪಂದ===
ಹಲವಾರು ವರ್ಷಗಳ ಪ್ರಯತ್ನದ ಫಲವಾಗಿ 1933ರಲ್ಲಿ ಪ್ರಥಮ ಬಾರಿಗೆ ಅಂತರರಾಷ್ಟ್ರೀಯ ಗೋದಿ ಒಪ್ಪಂದ ಜಾರಿಗೆ ಬಂದಿತು. ಕೆಲವು ವರ್ಷಗಳಿಗೆ ಮಾತ್ರ ಅನ್ವಯಿಸುವಂತೆ ಒಪ್ಪಂದವನ್ನು ಮಾಡಿಕೊಂಡು ಅದರ ಅವಧಿ ಮುಗಿದ ಕೂಡಲೆ ಸೂಕ್ತ ಮಾರ್ಪಾಡುಗಳೊಂದಿಗೆ ಮುಂದಿನ ಕೆಲವು ವರ್ಷಗಳಿಗೆ ಅನ್ವಯಿಸುವಂತೆ ಮತ್ತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿತ್ತು. 1949ರ ಒಪ್ಪಂದ 1953ರ ವರೆಗೆ ಜಾರಿಯಲ್ಲಿದ್ದು, 1953ರಲ್ಲಿ ಅದನ್ನು 1957ರ ವರೆಗೂ ಅನಂತರ 1962ರ ವರೆಗೂ ಮುಂದುವರಿಸಲಾಯಿತು. ಈ ಒಪ್ಪಂದಗಳ ಪ್ರಕಾರ, ಸ್ಥಿರವಾದ ಬೆಲೆಯಲ್ಲಿ ಆಮದು ರಫ್ತು ವ್ಯಾಪಾರ ನಿರಾತಂಕವಾಗಿ ನಡೆಯುವಂತೆ ಭರವಸೆ ನೀಡಲಾಯಿತು.

ಒಂದೊಂದು ಅವಧಿಯ ಒಪ್ಪಂದದಲ್ಲೂ ಸಣ್ಣಪುಟ್ಟ ವ್ಯತ್ಯಾಸಗಳು ಕಂಡು ಬಂದರೂ ಎಲ್ಲದರ ಸಾಮಾನ್ಯ ನಿಬಂಧನೆಗಳು ಈ ರೀತಿ ಇದ್ದುವು: 1.

# ರಫ್ತು ರಾಷ್ಟ್ರಗಳು ನಿಗದಿಯಾದ ಪ್ರಮಾಣದ ಗೋದಿಯನ್ನು ನಿಗದಿಯಾದ ಅಧಿಕತಮ ಬೆಲೆಯನ್ನು ಮೀರದಂತೆ ಖಾತರಿಯಾಗಿ ಒದಗಿಸಬೇಕು. 2.
# ಆಮದು ರಾಷ್ಟ್ರಗಳು ಗೊತ್ತಾದ ಪ್ರಮಾಣದ ಗೋದಿಯನ್ನು ನಿಗದಿಯಾದ ಕನಿಷ್ಠತಮ ಬೆಲೆಗೆ ಕಡಿಮೆ ಇಲ್ಲದಂತೆ ರಫ್ತುರಾಷ್ಟ್ರಗಳಿಂದ ಖಾತರಿಯಾಗಿ ಕೊಳ್ಳಬೇಕು. 3.
# ಒಪ್ಪಂದಕ್ಕೆ ಸಹಿಹಾಕಿದ ರಾಷ್ಟ್ರಗಳು ಗೋದಿಯ ಅಂತಾರಾಷ್ಟ್ರೀಯ ಬೆಲೆಯ ಕನಿಷ್ಠತಮ ಮತ್ತು ಅಧಿಕತಮ ಮಟ್ಟವನ್ನು ನಿಗದಿ ಮಾಡಬೇಕು ಆಂತರಿಕ ಬೆಲೆಗೆ ಈ ನಿಯಂತ್ರಣ ಅನ್ವಯಿಸಕೂಡದು.
 
 
ಗೋದಿ ಒಪ್ಪಂದದ ಆಡಳಿತವನ್ನು ನಿರ್ವಹಿಸಲು ಒಂದು ಅಂತಾರಾಷ್ಟ್ರೀಯ ಗೋದಿ ಸಭೆಯನ್ನು ನಿಯಮಿಸಲಾಯಿತು. ಗೋದಿಬೆಳೆ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸಿ ಸದಸ್ಯರಾಷ್ಟ್ರಗಳಿಗೆ ಒದಗಿಸುವುದು, ವಾರ್ಷಿಕ ವರದಿಗಳನ್ನು ಪ್ರಕಟಿಸುವುದು ಮತ್ತು ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸುವುದರಿಂದ ಸಂಭವಿಸುವ ವಿವಾದಗಳನ್ನು ಪರಿಹರಿಸುವುದು-ಮುಂತಾದುವು ಇದರ ಮುಖ್ಯ ಕರ್ತವ್ಯಗಳು. ಈ ಸಭೆಗೆ ಪ್ರತಿಸದಸ್ಯ ರಾಷ್ಟ್ರದಿಂದ ಒಬ್ಬೊಬ್ಬ ಪ್ರತಿನಿಧಿ ಇರಬೇಕೆಂದು ತೀರ್ಮಾನಿಸಲಾಯಿತು. ಸಭೆಯ ಕಾರ್ಯ ಚಟುವಟಿಕೆಗಳಲ್ಲಿ ನೆರವಾಗಲು ಒಂದು ಕಾರ್ಯಕಾರಿ ಸಮಿತಿ ಮತ್ತು ಒಂದು ಬೆಲೆ ಸಲಹಾ ಸಮಿತಿ ನೇಮಕವಾದುವು.
===ಅಂತಾರಾಷ್ಟ್ರೀಯ ಸಕ್ಕರೆ ಒಪ್ಪಂದ===