ಅಂತಾರಾಷ್ಟ್ರೀಯ ವಿಚಾರಸಂಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೫ ನೇ ಸಾಲು:
ಇದರ ಧ್ಯೇಯ ಅಂತಾರಾಷ್ಟ್ರೀಯ ವ್ಯವಹಾರಗಳನ್ನು ರಾಜಕೀಯ, ಆರ್ಥಿಕ, ಹಾಗೂ ಸಾಮಾಜಿಕ ಮೊದಲಾದ ದೃಷ್ಟಿಗಳಿಂದ ನಿಷ್ಪಕ್ಷಪಾತವಾಗಿ ಸಮದೃಷ್ಟಿಯಿಂದ ಪರಿಶೀಲಿಸುವುದು. ಇದಕ್ಕೆ ಸರ್ಕಾರದ ಅಥವಾ ಯಾವ ರಾಜಕೀಯ ಪಕ್ಷದ ಸೋಂಕೂ ಇಲ್ಲ. ಸನ್ನದಿನ ನಿಯಮಗಳ ಪ್ರಕಾರ ಸಂಸ್ಥೆ ಯಾವ ಅಂತಾರಾಷ್ಟ್ರೀಯ ವಿಚಾರದಲ್ಲೂ ತನ್ನ ಅಭಿಪ್ರಾಯ ಕೊಡಬಾರದು; ಇದರ ಚರ್ಚಾಗೋಷ್ಠಿಗಳಲ್ಲೂ ಪ್ರಕಾಶನಗಳಲ್ಲೂ ವ್ಯಕ್ತವಾದ ಅಭಿಪ್ರಾಯಗಳು ಸದಸ್ಯರ ವೈಯಕ್ತಿಕ ಅಭಿಪ್ರಾಯಗಳು. ಬ್ರಿಟನ್ನಿನ ರಾಜನೀತಿಜ್ಞರಲ್ಲಿ ಪ್ರಮುಖರಾದವರೇ ಇದರ ಅಧ್ಯಕ್ಷರು-ವೈಕೌಂಟ್ ಸೆಸಿಲ್, [[ವಿನ್‌ಸ್ಟನ್‌ ಚರ್ಚಿಲ್‌]], ಮೇಜರ್ ಅಟ್ಲೀ ಮೊದಲಾದವರು. ಬ್ರಿಟನ್ನಿನ ಪ್ರಧಾನಮಂತ್ರಿ ಅಧಿಕಾರದ ಕಾರಣದಿಂದಾಗಿ ನೇಮಕಗೊಂಡ ಉಪಾಧ್ಯಕ್ಷ. ಇದರ ಆಶ್ರಿತ ಸಂಸ್ಥೆಗಳು [[ಕೆನಡ]], [[ಆಸ್ಟ್ರೇಲಿಯ]] ಮತ್ತು [[ಪಾಕಿಸ್ತಾನ]]ಗಳಲ್ಲಿವೆ. ಸಂಸ್ಥೆಯ ಸದಸ್ಯತ್ವ ಕೇವಲ ಆಮಂತ್ರಣಗಳ ಮೂಲಕ. ಆದ್ದರಿಂದ ಇದಕ್ಕೆ ವಿದ್ವಾಂಸರಲ್ಲಿ ಅಧಿಕ ಮನ್ನಣೆ, ಪುರಸ್ಕಾರ. ಸದಸ್ಯರ ಸಂಖ್ಯೆ ಸು. 3,000. ಪುಸ್ತಕಾಲಯದಲ್ಲಿ 10 ಲಕ್ಷಕ್ಕೆ ಮೀರಿ ಗ್ರಂಥಗಳಿವೆ. ಮುಖ್ಯ ನಿಯತಕಾಲಿಕ ಪ್ರಕಾಶನಗಳು-ಸರ್ವೆ ಆಫ್ ಇಂಟನಾರ್್ಯಷನಲ್ ಅಫೇರ್ಸ್ (ವಾರ್ಷಿಕ); ಬ್ರಿಟಿಷ್ ಬುಕ್ ಆಫ್ ಇಂಟನಾರ್್ಯಷನಲ್ ಲಾ (ವಾರ್ಷಿಕ); ಇಂಟನ್ಯಾಷನಲ್ ಅಫೇರ್ಸ್ (ತ್ರೈಮಾಸಿಕ); ದಿ ವಲ್ರ್್ಟ ಟುಡೇ (ಮಾಸಿಕ). ಇವಲ್ಲದೆ ಹಲವಾರು ಇತರ ಉತ್ತಮ ಪ್ರಕಾಶನಗಳೂ ಉಂಟು.
{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತಾರಾಷ್ಟ್ರೀಯ ವಿಚಾರಸಂಸ್ಥೆ    }
 
==ಬಾಹ್ಯ ಸಂಪರ್ಕಗಳು==