ಅಚ್ಯುತರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಚ್ಯುತರಾಯ
ಇಂಗ್ಲೀಶ್ ವಿಕಿಪೀಡಿಯಾ ಪುಟದಿಂದ ಚಿತ್ರ ಸೇರ್ಪಡೆ
೧ ನೇ ಸಾಲು:
'''ಅಚ್ಯುತರಾಯ''' (೧೫೩೦-೧೫೪೨) ಸುಪ್ರಸಿದ್ಧ [[ಕೃಷ್ಣದೇವರಾಯ]]ನ ಮರಣಾನಂತರ [[ವಿಜಯನಗರ]] ಸಾಮ್ರಾಜ್ಯವನ್ನಾಳಿದ ದೊರೆ. ಕೃಷ್ಣದೇವರಾಯನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಮಧುರೆಯ ಮಂಡಲಾಧಿಪತಿ ದಂಗೆಯೆದ್ದು ಸ್ವತಂತ್ರನಾಗಲು ಯತ್ನಿಸಿದ್ದ. ಅಚ್ಯುತರಾಯನು ಸಿಂಹಾಸನಕ್ಕೆ ಬಂದಕೂಡಲೆ ಅವನನ್ನು ಅಡಗಿಸಿ, ಅವನಿಗೆ ಸಹಾಯ ನೀಡಿದ್ದ [[ತಿರುವಾಂಕೂರು]] ದೊರೆಯನ್ನು ದಂಡಿಸಿದ. ಅನಂತರ ವಿಷಯಲೋಲುಪನಾಗಿ ಆಡಳಿತಕ್ಕೆ ಗಮನ ಕೊಡಲಿಲ್ಲ. ರಾಜ್ಯಭಾರ ಸಂಬಂಧಿಗಳಾಗಿದ್ದ ತಿರುಮಲ ಸಹೋದರರ ಕೈಸೇರಿತು. ಅವರ ಉತ್ಕರ್ಷ, ದರ್ಪಗಳನ್ನು ಸೈರಿಸದೆ [[ಅರವೀಡು]] ಮನೆತನಕ್ಕೆ ಸೇರಿದ ಮಂಡಾಲಾಧಿಪತಿಗಳು ವಿರೋಧಪಕ್ಷವನ್ನು ಕಟ್ಟಿದರು. ಅತ್ತ [[ವಿಜಯಪುರ|ಬಿಜಾಪುರ]]ದ ಸುಲ್ತಾನ ದಂಡೆತ್ತಿಬಂದು ನಾಗಲಾಪುರವನ್ನು (ಈಗಿನ [[ಹೊಸಪೇಟೆ]]) ವಶಪಡಿಸಿಕೊಂಡು ವಿಜಯನಗರಕ್ಕೆ ಮುತ್ತಿಗೆ ಹಾಕಿದ ಅವನೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಕೃಷ್ಣದೇವರಾಯ ಅಷ್ಟೊಂದು ಸಾಹಸ ದಕ್ಷತೆಗಳಿಂದ ಕಟ್ಟಿದ್ದ ಸಾಮ್ರಾಜ್ಯದ ಬಿಗಿ ಸಡಿಲವಾಯಿತು. ಮುಂದೆ ಬಂದ [[ರಕ್ಕಸತಂಗಡಿ]] ಅನಾಹುತಕ್ಕೆ ಮಂಡಲಾಧಿಪತಿಗಳ ಈ ವೈಮನಸ್ಯ ನಾಂದಿಯಾಯಿತು.
[[ಚಿತ್ರ:Shiva_temple_(1539_AD)_at_Timmalapura.jpg|right|thumb|ಅಚ್ಯುತರಾಯನ ಆಳ್ವಿಕೆಯಲ್ಲಿ ಕ್ರಿ.ಶ. ೧೫೩೯ ರಲ್ಲಿ ತಿಮ್ಮಲಾಪುರ]ದಲ್ಲಿ ನಿರ್ಮಾಣವಾದ ಶಿವದೇವಾಲಯ ]]
[[ಚಿತ್ರ:Kannada_inscription_of_1539_AD_at_Shiva_temple_in_Timmalapura.jpg|right|thumb|ತಿಮ್ಮಲಾಪುರದ ಶಿವಮಂದಿರದಲ್ಲಿರುವ ಕ್ರಿ.ಶ ೧೫೩೯ ರ ಅಚ್ಯುತರಾಯನ ಕನ್ನಡ ಶಾಸನ ]]
[[ಚಿತ್ರ:Kannada_inscription_of_Achuta_Raya_(1536_AD)_at_Vitthala_temple_in_Hampi.JPG|left|thumb|ಹಂಪೆಯ ವಿಟ್ಠಲ ದೆವಸ್ಥಾನದಲ್ಲಿರುವ ದೊರೆ ಅಚ್ಯುತದೇವರಾಯನ ಕಾಲದ ( ಕ್ರಿ.ಶ. ೧೫೩೬) ಕನ್ನಡ ಶಾಸನ ]]
[[ಚಿತ್ರ:Kannada_inscription_(1536_AD)_of_Achyuta_Raya_at_entrance_to_Vitthala_temple_in_Hampi.JPG|left|thumb|ಹಂಪೆಯ ವಿಟ್ಠಲ ದೆವಸ್ಥಾನದಲ್ಲಿರುವ ದೊರೆ ಅಚ್ಯುತದೇವರಾಯನ ಕಾಲದ ( ಕ್ರಿ.ಶ. ೧೫೩೬) ಕನ್ನಡ ಶಾಸನ]]
[[ಚಿತ್ರ:View_from_within_the_Shiva_temple_at_Timmalapura_2.jpg|left|thumb|200x200px|ಹಂಪೆಯ ಹತ್ತಿರ ತಿಮ್ಮಲಾಪುರದಲ್ಲಿ ದೊರೆ ಅಚ್ಯುತರಾಯನು ಕಟ್ಟಿಸಿದ ಶಿವದೇವಾಲಯ ]]
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಚ್ಯುತರಾಯ|ಅಚ್ಯುತರಾಯ}}
[[ವರ್ಗ:ಕರ್ನಾಟಕದ ಇತಿಹಾಸ]]
"https://kn.wikipedia.org/wiki/ಅಚ್ಯುತರಾಯ" ಇಂದ ಪಡೆಯಲ್ಪಟ್ಟಿದೆ