ಊರ್ವಶಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬ ನೇ ಸಾಲು:
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ತೆಲುಗು ಚಲನಚಿತ್ರ ನಟಿಯರು]]
 
ಊರ್ವಶಿ ದಕ್ಷಿಣ ಭಾರತದ ಜನಪ್ರಿಯ ಅಭಿನೇತ್ರಿ. ತಮಿಳು, ಮಲಯಾಳಂ, ಕನ್ನಡ ಮತ್ತು ತೆಲುಗು ಭಾಷೆಯ ಅನೇಕ ಚಿತ್ರಗಳಲ್ಲಿ ಇವರು ನಾಯಕಿಯಾಗಿ ನಟಿಸಿದ್ದಾರೆ. ಕಮಲ್ ಹಾಸನ್, ರಜನಿ ಕಾಂತ್, ವಿಷ್ಣುವರ್ಧನ್, ಅಂಬರೀಶ್, ಮೋಹನ್ ಲಾಲ್, ಮಮ್ಮೂಟಿ, ರವಿಚಂದ್ರನ್, ಡಾ. ರಾಜ್ ರೊಂದಿಗೆ 1984 ರಲ್ಲಿ ತೆರೆಕಂಡ ‘ಶ್ರಾವಣ ಬಂತು’ ಚಿತ್ರದಿಂದ ಕನ್ನಡ ಚಿತ್ರರಂಗದ ಪ್ರವೇಶ ಮಾಡಿದರು. ಇನ್ನೂ ಮುಂತಾದ ನಟರೊಂದಿಗೆ ನಾಯಕಿಯಾಗಿ ನಟಿಸಿ ಅಪೂರ್ವ ಯಶಸ್ಸನ್ನು ಗಳಿಸಿದ್ದಾರೆ.
 
1980 ರಲ್ಲಿ ಚಿತ್ರರಂಗಕ್ಕೆ ಬಾಲನಟಿಯಾಗಿ ಕಾಲಿಟ್ಟ ನಟಿ 1984 ರಲ್ಲಿ ತೆರೆಕಂಡ ‘ಶ್ರಾವಣ ಬಂತು’ ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ನಾನು ನನ್ನ ಹೆಂಡತಿ’ ಚಿತ್ರದಲ್ಲಿ ತುಂಬಾ ಚೂಟಿಯಾದ ಹಾಗೂ ನಟಿಯಾಗಿದ್ದ ನಾಯಕಿಯ ಪಾತ್ರದಲ್ಲಿ ಜೀವತುಂಬಿ ನಟಿಸಿ ಕನ್ನಡ ಪ್ರೇಕ್ಷಕರು ಹಾಗೂ ಕನ್ನಡ ಸಿನಿಮಾ ರಂಗದಿಂದ ಪ್ರಶಂಸೆ ಪಡೆದುಕೊಂಡರು.
 
ಮುದ್ದಾಗಿ, ದುಂಡಾಗಿ ಇದ್ದ ಊರ್ವಶಿ ಯವರನ್ನು ಅಂದಿನ ಸಿನಿಮಾ ಪ್ರೇಕ್ಷಕರು ತುಂಬಾ ಇಷ್ಟಪಟ್ಟರು, ಜನವರಿ 25 1967 ರಂದು ಕೇರಳದ ತಿರುವಂತಪುರಂ ನಲ್ಲಿ ಊರ್ವಶಿ ಜನಿಸಿದರು ಕೇವಲ ಹತ್ತನೇ ವಯಸ್ಸಿಗೆ ಮಳೆಯಾಳಿ ಸಿನಿಮಾಗಳಲ್ಲಿ ನಟನೆ ಮಾಡಲು ಶುರು ಮಾಡಿದರು, 1980ರಲ್ಲಿ ಮಲಯಾಳಿ ಚಿತ್ರದ ಮೂಲಕ ಪರಿಪೂರ್ಣ ನಾಯಕ ನಟಿಯಾಗಿ ಅಭಿನಯಿಸಿದರು, ಕನ್ನಡದಲ್ಲಿ ನಾಯಕಿಯಾಗಿ ಮತ್ತು ಪೋಷಕ ನಟಿಯ ಪಾತ್ರದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮಲಯಾಳಂ, ತೆಲುಗು ಕನ್ನಡ ಸೇರಿದಂತೆ ಸುಮಾರು ಮುನ್ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ, ಇನ್ನು ಕನ್ನಡದಲ್ಲಿ ಹಬ್ಬ, ಕೋತಿಗಳು ಸಾರ್ ಕೋತಿಗಳು, ಕತ್ತೆಗಳು ಸಾರ್ ಕತ್ತೆಗಳು, ಯಾರಿಗೆ ಸಾಲುತ್ತೆ ಸಂಬಳ, ರಾಮ ಶಾಮ ಭಾಮ ಚಿತ್ರಗಳಲ್ಲಿನ ಕಾಮಿಡಿ ನಟನೆಗೆ ಎಷ್ಟುಬಾರಿ ಚಪ್ಪಾಳೆ ತಟ್ಟಿದರು ಸಾಲದು.
 
ಕಾಮಿಡಿ ನಾಯಕ ನಟಿಯಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಜನರನ್ನು ನಕ್ಕು ನಗಿಸುವ ನಟಿ ಎಂದು ಒಬ್ಬರು ಇದ್ದರೆ ಅದು ನಟಿ ಊರ್ವಶಿ ಮಾತ್ರ, ತಾನು ನಟಿಸಿದ ಹಲವಾರು ಕನ್ನಡ ಚಿತ್ರಗಳಲ್ಲಿ ಕಾಮಿಡಿ ಕಮಾಲ್ ಮಾಡಿದ್ದಾರೆ ನಟಿ ಉರ್ವಶಿ.
"https://kn.wikipedia.org/wiki/ಊರ್ವಶಿ" ಇಂದ ಪಡೆಯಲ್ಪಟ್ಟಿದೆ