ಶ್ರೀ ರಾಮಾಯಣ ದರ್ಶನಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೬೨ ನೇ ಸಾಲು:
# ತಪಸ್ಸಿದ್ಧಿ (೪೫೮)
# ಅಭಿಷೇಕ ವಿರಾಟ್ ದರ್ಶನಂ (೨೩೮)
 
===ಕೆಲವು ಅಭಿಪ್ರಾಯಗಳು===
ಯುಗದ ಕವಿಗೆ
ಜಗದ ಕವಿಗೆ
ಶ್ರೀ ರಾಮಾಯಣ ದರ್ಶನದಿಂದಲೇ ಕೈ
ಮುಗಿದ ಕವಿಗೆ - ಮಣಿಯದವರು ಯಾರು?
ರಾಮಕೃಷ್ಣ ವಚನೋದಿತ ಪ್ರತಿಭೆ ತೆರೆದ
ಕವನ ತತಿಗೆ ತಣಿಯದವರು ಆರು?
ಮಲೆನಾಡಿನ ಸೌಂದರ್ಯಕೆ ಕುಣಿದಾಡಿದ
ಕವಿಯ ಜತೆಗೆ ಕುಣಿಯದವರು ಆರು?
ಕನ್ನಡಿಸಲಿ ಶಿವ ಜೀವನ
ಮುನ್ನಡೆಸಲಿ ಯುವ-ಜನ-ಮನ
ಇದೆ ಪ್ರಾರ್ಥನೆ ನಮಗೆ
ತಮವೆಲ್ಲಿದೆ ರವಿಯಿದಿರಿಗೆ?
ಉತ್ತಮ ಕವಿ ನುಡಿ-ಚದುರಗೆ
ಚಾರುತ್ವದ ಕುಂದಣದಲಿ
ಚಾರಿತ್ರ್ಯದ ರತ್ನ
ಚಾತುರ್ಯದ ಮಂತಣದಲಿ
ಸತ್ಸಂಗದ ಯತ್ನ
ಇದೆ ತೃಪ್ತಿಯು ನಿಮಗೆ
'''- ದ.ರಾ. ಬೇಂದ್ರೆ'''
 
ಹಳೆಯ ಕಥೆ ಹೊಸ ಯುಗಧರ್ಮವನ್ನು ಮೈಗೂಡಿಸಿಕೊಂಡು, ಎಷ್ಟರಮಟ್ಟಿಗೆ ಹೊಸದಾಗಬಹುದೆಂಬುದಕ್ಕೆ, ಈ ಮಹಾಕಾವ್ಯ ಉಜ್ವಲ ಉದಾಹರಣೆಯಾಗಿದೆ. ಇದಕ್ಕೆ ಭಾರತೀಯ ಸಾಹಿತ್ಯದಲ್ಲಿಯೇ ಒಂದು ಅನನ್ಯವಾದ ಸ್ಥಾನವಿದೆ. ಮಿಲ್ಟನ್ ಕವಿಯ ‘ಪ್ಯಾರಡೈಸ್ ಲಾಸ್ಟ್’ ‘ಪ್ಯಾರಡೈಸ್ ರೀಗೇನ್ಡ್’ ಆದ ಮೇಲೆ ಯಾವ ಭಾಷೆಯಲ್ಲೇ ಆಗಲಿ ಈ ಪ್ರಮಾಣದ ಒಂದು ಮಹಾಕಾವ್ಯ ಬಂದದ್ದನ್ನು ಕಾಣೆ!
'''- ಗೋವಿಂದ ಪೈ'''
 
ಐರೋಪ್ಯರಿಗೆ ಈ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಗುಣಧರ್ಮ ತಿಳಿದಿದ್ದರೆ ನೋಬೆಲ್ ಂರಿvಇಂಂ?ಂPಂPಇI ಅದನ್ನು ಬಿಟ್ಟರೆ ಯಾವ ಕೃತಿಯೂ ಅರ್ಹವಲ್ಲ ಎಂದು ಅವರು ನಿರ್ಧರಿಸುತ್ತಿದ್ದರು.
'''- ಪಾಟೀಲ ಪುಟ್ಟಪ್ಪ'''
 
The Vision and the rhetoric of this poem (Sri Ramayana Darshanam) have been enriched by wealth borrowed from epics of all times and all nations and yet are strikingly original.
....ಇಲ್ಲಿ ಬರುವ ಅತಿಪ್ರಾಕೃತಿಕ ಉದ್ದೇಶ, ದೃಷ್ಟಿ, ವಾಕ್ಸಂಪತ್ತಿ, ಪ್ರಾಚೀನ ಕಾವ್ಯಗಳ ಕಳೆಗಳನ್ನೆಲ್ಲಾ ತುಂಬಿಸಿಕೊಂಡು ಸ್ವಪ್ರಜ್ಞಾಲಂಕೃತವಾಗಿದೆ. ದರ್ಶನ ವೈವಿಧ್ಯವೇ ಯುಗಧರ್ಮವಾಗಿರುವ ಇಪ್ಪತ್ತನೆಯ ಶತಮಾನವನ್ನು ಯಾವ ಒಂದು ಕೃತಿಯೂ ಸಂಪೂರ್ಣವಾಗಿ ಪ್ರತಿನಿಧಿಸುವುದು ಅಸಾಧ್ಯ. ಆದರೆ ಭಾರತೀಯ ಸಂಸ್ಕೃತಿಯ ಮೂಲಗಳಲ್ಲೊಂದಾದ ರಾಮಾಯಣ ಕಥೆಯಲ್ಲಿ ತನ್ನ ಸಮನ್ವಯ ದೃಷ್ಟಿ ಮೂಲಕ ಹೊಸ ಚೈತನ್ಯವನ್ನು ತುಂಬಲೆತ್ನಿಸುವ ಶ್ರೀರಾಮಾಯಣ ದರ್ಶನಂ ಸಾರ್ಥಕ ಕೃತಿ ಎಂದೆನಿಸಿಕೊಳ್ಳುತ್ತದೆ.
'''- ವಿ. ಸೀತಾರಾಮಯ್ಯ'''
 
ಶ್ರೀ ಕುವೆಂಪುರವರು ತಮ್ಮ ಮಹಾಕೃತಿಯಲ್ಲಿ ತಮ್ಮದೇ ಆದ ಒಂದು ಜಾಡಿನಲ್ಲಿ ಸಾಗಿ ರಾಮಾಯಣ ದರ್ಶನವನ್ನು ವಿರಚಿಸಿ ಕೀರ್ತಿ ಶೀಖರವನ್ನೇ ಮುಟ್ಟಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲಿರುವ ಒಂದೊಂದು ಕೀಳ್ಮೆಯ ಪಾತ್ರವನ್ನೂ ವಿಕಾಸದತ್ತ ಎಳೆದು ಅತ್ಯುನ್ನತ ಮಟ್ಟಕ್ಕೇರಿಸಿದ್ದಾರೆ. ಮಂಗನಿಂದ ಮಾನವನಾದರೆ ಕೀಳೇ? ನಾಳೆ ಮೇಲಕ್ಕೇಕೆ ಏರಬಾರದು? ಎಂಬುದನ್ನು ತೋರಿಸಿದ್ದಾರೆ; ಅಲ್ಲದೆ ವಾಸ್ತವಿಕ ಚಿತ್ರಣಗಳ ಸೊಬಗನ್ನು ನಾವಲ್ಲಿ ಧಾರಾಳವಾಗಿ ಕಾಣಬಹುದು. ಅಂತೂ ಇದೊಂದು ವಿನೂತನ ಸೃಷ್ಟಿ; ಕಾಲಕ್ಕೆ ತಕ್ಕಂತಹ ವೈಚಾರಿಕ ನೋಟ. ಹೀಗಾಗಿ ನಿಜವಾಗಿಯೂ ರಾಮಾಯಣ ದರ್ಶನವೊಂದು
ಮಹಾಕಾವ್ಯ. ರಾಷ್ಟ್ರಕವಿ ಕುವೆಂಪುರವರು ರಾಷ್ಟ್ರೀಯರೆಲ್ಲ ಹೆಮ್ಮೆಪಡತಕ್ಕಂತಹ ಮಹಾಕವಿ ಎಂಬುದಂತೂ ನಿರ್ವಿವಾದ.
'''- ತಿರುಕ'''
 
ರಾಮಾಯಣ ದರ್ಶನಂ ಮಹಾಕಾವ್ಯ ನಮ್ಮ ಜನರ ಎಚ್ಚರಿಕೆಯ ಮತ್ತು ಆಳವಾದ ಅಧ್ಯಯನಕ್ಕೆ ಅರ್ಹವಾದ ಕಾವ್ಯವೆಂಬುದು ನನ್ನ ಅಭಿಮತ. ಅದರ ನಿರರ್ಗಳವಾದ ಕಾವ್ಯರಮ್ಯತೆ ಅದರ ಪ್ರಥಮಗುಣ. ಅದರ ವಾಚನ ಶ್ರವಣ ಒಂದು ಕಡೆಯೂ ಬೇಸರಿಕೆಯುಂಟುಮಾಡದೆ, ವಾಚಕನನ್ನೂ ಶ್ರೋತೃವನ್ನೂ ಕುತೂಹಲ ಮತ್ತು ಸುಖಾನುಭವದ ರಸದ ಅಲೆಗಳ ಮೇಲೆ ತೇಲಿಸಿಕೊಂಡು ಹೋಗುತ್ತದೆ.... ರಾಮಾಯಣ ದರ್ಶನ ಕಾವ್ಯವನ್ನು ನಾವು ಚೆನ್ನಾಗಿ ಅಧ್ಯಯನ ಮಾಡಬೇಕು; ಅದನ್ನು ಇತರ ರಾಮಾಯಣಗಳೊಂದಿಗೆ - ಕಂಬ, ತುಳಸಿ, ಆಂಧ್ರ ವಿಶ್ವನಾಥ ಸತ್ಯನಾರಾಯಣರ ರಾಮಾಯಣ ಕಲ್ಪವೃಕ್ಷಮು - ಮುಂತಾದವುಗಳೊಡನೆ ತೋಲನ ಮಾಡಬೇಕು. ಗುಣದೋಷಗಳನ್ನು ತೂಗಿ ನೋಡಬೇಕು. ನಿಷ್ಪಕ್ಷವಾದ ವಿಮರ್ಶೆ ಮಾಡಬೇಕು. ಆ ಕಾವ್ಯಕ್ಕೆ ಇದು ನಮ್ಮಿಂದ ನ್ಯಾಯವಾಗಿ ಸಲ್ಲಬೇಕಾದ ಕರ್ತವ್ಯ.
'''- ಗೋರೂರು ರಾಮಸ್ವಾಮಿ ಅಯ್ಯಂಗಾರ್'''
 
ಸಂಸ್ಕೃತದಿಂದ ಕನ್ನಡಕ್ಕೆ ಒದಗತಕ್ಕ ಸೊಗಸು ಎಂಥದು ಎಂಬುದಕ್ಕೆ ಕುವೆಂಪು ಅವರ ಕಾವ್ಯ ಉತ್ತಮ ನಿದರ್ಶನ. ‘ಶ್ರೀರಾಮಾಯಣ ದರ್ಶನಂ’ ಅದನ್ನು ಸಾಧಿಸಿ ತೋರಿಸಿದೆ.
'''- ತೀ.ನಂ.ಶ್ರೀ.'''
 
‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಸರ್ವವ್ಯಾಪಿ ‘ದರ್ಶನ’ದಲ್ಲಿಯೇ ಅದರ ಸಾರ್ವಕಾಲೀನ ಪ್ರಜ್ಞೆ ಸಂಯೋಗಗೊಂಡಿದೆ.... ಕೃತಿಯ ದರ್ಶನ ವಿಚಾರವಾಗಿ ಈವರೆಗೆ ನಡೆದಿರುವ, ಮುಂದೆ ನಡೆಯಲಿರುವ, ಸಮಾಲೋಚನೆಗಳಲ್ಲಿ ಈ ವಿ?ಂಂiಂಂzಂ ವಿವೇಚನೆ ಅಂಗಭೂತವಾಗಿ ಅನಿವಾರ್ಯವಾಗಿ ಇದ್ದೇ ಇರುತ್ತದೆ. ‘ಶ್ರೀರಾಮಾಯಣ ದರ್ಶನಂ’ ಕೃತಿಯಲ್ಲಿ ನವೋನವೀನವಾಗಿ ಉಇಚಿಂ?ಂUಇಂಂಡಿgಂಂವ ಆ ಸರ್ವ ಶುಭೋದಯ ‘ದರ್ಶನ’ವನ್ನು ಸಾರ್ವಕಾಲೀನ ಪ್ರಜ್ಞೆಯುಳ್ಳ ‘ರಸಋಷಿ’ ಮಾತ್ರ ಒಂದು ಕಾವ್ಯ ಪ್ರತಿಮೆಯ ರೂಪದಲ್ಲಿ ಕಂಡರಿಸಬಲ್ಲನು.
'''- ಪ್ರೊ|| ಎಂ.ವಿ. ಸೀತಾರಾಮಯ್ಯ'''
 
ಕುವೆಂಪು ಅವರ ಪರಿಣತ ತಪಶ್ಯಕ್ತಿಗೆ, ಪಾರದರ್ಶಿತ್ವಕ್ಕೆ, ನವನವೋನ್ಮೇಷಶಾಲಿನಿಯಾದ ಪ್ರತಿಭಾ ಶಕ್ತಿಗೆ, ನವೋಜ್ಜ್ವಲ ಪಾಂಡಿತ್ಯಕ್ಕೆ ಶಾಶ್ವತಸಾಕ್ಷಿಯೆಂಬಂತೆ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಅವತಾರವಾಗಿದೆ. ಆಗಿನ ಜನಮನದ ಅಭೀಪ್ಸೆ ಶ್ರೀರಾಮನನ್ನು ಭೂಮಿಗೆಳೆದಂತೆ ಈಗಿನ ಜನಮನದ ಅಭೀಪ್ಸೆ ಶ್ರೀರಾಮಾಯಣದರ್ಶನ’ದ ಅವತಾರಕ್ಕೆ ಕಾರಣವಾಗಿದೆ..... ಕುವೆಂಪು ಅವರ ವಿಶ್ವಮಾನವ ಸಂದೇಶಕ್ಕೆ ‘ಶ್ರೀರಾಮಾಯಣ ದರ್ಶನಂ’ ಕಾವ್ಯಭಾಷೆಯಂತೆ ಇರುವುದರಿಂದ ಇದರ ಗ್ರಹಿಕೆಗೆ ಆ ಸಂದೇಶದ ಪೂರ್ಣಾಭ್ಯಾಸವೂ ಅನುಕೂಲವಾಗುತ್ತದೆ.
'''- ದೇಜಗೌ'''
 
ಕುವೆಂಪು ಕೇವಲ ಕರ್ನಾಟಕದವರಲ್ಲ, ಭಾರತದ ಮಹಾ ಲೇಖಕ. ಅವರ ‘ಶ್ರೀರಾಮಾಯಣ ದರ್ಶನಂ’ ಆಧುನಿಕ ಭಾರತೀಯ ಸಾಹಿತ್ಯದ ಶ್ರೇಷ್ಠಕೃತಿ.ಇಲ್ಲಿ ಬರುವ ರಾಮ, ಸೀತೆ ಯೊಂದಿಗೆ ಅಗ್ನಿ ಪ್ರವೇಶ ಮಾಡುತ್ತಾನೆ. ಎಲ್ಲೆಡೆ ಮಹಿಳೆಯ ಮೇಲೆ ದೌರ್ಜನ್ಯ, ಹಿಂಸೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ಕಟ್ಟಿಕೊಟ್ಟ ಈ ಚಿತ್ರಣ ಪ್ರಸ್ತುತ ಮತ್ತು ಆದರ್ಶ. ಅವರ ಶೂದ್ರ ತಪಸ್ವಿ ನಾಟಕ, ಇಂಂ?ಂuಇ ಮತ್ತು ತಾರತಮ್ಯದ ವರ್ಣ ನೀತಿಗೆ ಮುಖಾಮುಖಿಯಾದ ನಾಟಕ. ಸಾರ್ವಕಾಲಿಕ ಕಾವ್ಯ ಮೀಮಾಂಸೆಯ ಅಧ್ವರ್ಯುಗಳಲ್ಲಿ ಕುವೆಂಪು ಒಬ್ಬರು. ತಾವು ನಂಬಿದ ಕಾವ್ಯ ತತ್ವವನ್ನು ತಮ್ಮ ’ರಸೋ ವೈ ಸಃ’ದಲ್ಲಿ ಹೇಳಿದ್ದಾರೆ. ಕನ್ನಡಕ್ಕೆ ಹೊಸ ನುಡಿಗಟ್ಟು ಮತ್ತು ಹೊಸ ಕಲ್ಪನೆಗಳನ್ನು ನೀಡಿದವರು. ಕಲ್ಪನಾಶಕ್ತಿಯೊಂದಿಗೆ, ಬೌದ್ಧಿಕ ಸಾಮರ್ಥ್ಯವನ್ನು ಮೇಳೈಸಿ, ನೈತಿಕ ಮತ್ತು ಸೌಂದರ್ಯ ಮೀಮಾಂಸೆಯನ್ನು ಉನ್ನತ ಸ್ಥಾನಕ್ಕೆ ಒಯ್ದವರು.
'''- ಕೆ. ಸಚ್ಚಿದಾನಂದನ್'''
ಮಲೆಯಾಳಿ ಕವಿ
 
ಇಪ್ಪತ್ತನೆಯ ಶತಮಾನದ ಜಟಿಲ ಮತ್ತು ಸಂಕೀರ್ಣ ಅನುಭವಗಳನ್ನು ಅಭಿವ್ಯಕ್ತಿಯ ಸಂಭವನೀಯ ಆಯಾಮಗಳಿಗೆ ಅಳವಡಿಸಿ, ಅದಕ್ಕನುಗುಣವಾದ ಬೃಹತ್ ಪರಿಧಿಗಳನ್ನು ಸೃಷ್ಟಿಸಿ ರೂಪಗೊಂಡ ಶ್ರೀ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಸಹಜ ಸಂವೇದನೆಯ ಒಂದು ಮಹೋನ್ನತ ಕೃತಿ. ಜಾಳು ಜಾಳಾದ, ಲಘು ಈಡಿಪಸ್ ಕಾಂಪ್ಲೆಕ್ಸ್ ಅನುಭವಗಳನ್ನೇ ತಮ್ಮ ಕಾವ್ಯಕ್ಕೆ ವಸ್ತುವನ್ನಾಗಿ ಪರಿಭಾವಿಸಿ, ಹಸಿಬಿಸಿ ಅಪಕ್ವ ಭಾಷೆ ಭಾವನೆಗಳನ್ನು ಕಾವ್ಯಾನುಭವವೆಂದು ಬಗೆದ, ಕೆಲವು ಸಲ ಆಳವಿದ್ದು ವ್ಯಾಪ್ತಿಯಿಲ್ಲದ, ವ್ಯಾಪ್ತಿಯಿದ್ದು ಸಮಗ್ರತೆಯನ್ನು ಸ್ಪರ್ಶಿಸದ, ತಾವು ಬರೆದುದೇ ಕಾವ್ಯವೆಂದು ಬೆನ್ನು ತಟ್ಟಿ, ತಟ್ಟಿಸಿಕೊಳ್ಳುವ ಕೆಲವರಿಗೆ ‘ಶ್ರೀರಾಮಾಯಣ ದರ್ಶನಂ’ ಕಾವ್ಯದ ಮಹತಿ ಎಟುಕದೆ ಹೋದರೆ ಅಚ್ಚರಿಯಿಲ್ಲ.... ಚಿರಂತನ ಮೌಲ್ಯಗಳ ಅಖಂಡ ಜೀವನ ದರ್ಶನದ ವಿರಳ ಸಾಹಿತ್ಯ ಸಾಧನೆಗಳಲ್ಲಿ ಉಜ್ವಲವಾಗಿ ಹೊಳೆಯುವ, ಕನ್ನಡ ಸಾರಸ್ವತ ಪ್ರಪಂಚದ ಶಾಶ್ವತ ಕೃತಿ ‘ಶ್ರೀರಾಮಾಯಣ ದರ್ಶನಂ’.
'''- ದೇವೇಂದ್ರ ಕುಮಾರ ಹಕಾರಿ'''
 
ಶ್ರೀ ಕುವೆಂಪು ಜಯಘೋಷ
ದೆಹಲಿ, ಕವಿಗಿತ್ತಿರುವ ಅಕೆಡೆಮಿಯ ಬಹುಮಾನ
ಮಿಗಿಲೇನು ನಮ್ಮೀ ಮಹಾಕವಿ ಕುವೆಂಪುವಿಗೆ?
ತನ್ನ ಹಿರಿಮೆಯ ನೆಲದ ಜನಮನದ ಜಂiಂಂWಇಂಂ?ಂ--
ದೌನ್ನತ್ಯಕ್ಕೆರಿಪುದೇ ಈವೊಂದು ಹಿರಿ ಕೊಡುಗೆ?
ಅಜ್ಞಾತ ಮಿತ್ರನಿಂದಕುಟಿಲ ಮನಸ್ಕನಿಂ
ದರ್ಪಿಸುವ ಸಂಸ್ತುತಿಯ ರೂಪದಿಂ ಬಂಗಾಳ,
ಭಕ್ತಿ ಪ್ರಣಾಮಮಂ ಸಂತಸದಿ ಸಲಿಸುತಿದೆ
ಶ್ರೀ ರಾಮಾಯಣ ದರ್ಶನಂ ಮೇರುಕೃತಿಗೆ!
'''-ನರೇಂದ್ರ ದೇವ್, ಕೋಲ್ಕತ್ತ'''
 
ವೈಯಕ್ತಿಕವಾಗಿ ಹೇಳುವುದಾದರೆ ನಾನು ಹಲವು ಭಾಷೆಗಳ ರಾಮಾಯಣಗಳನ್ನು ಓದಿದ್ದೇನೆ. ಅದು ಮೈಥಿಲಿ ಶರಣಗುಪ್ತರ ʻಸಾಕೇತʼ ಇರಬಹುದು; ತೆಲುಗಿನ ವಿಶ್ವನಾಥ ಸತ್ಯನಾರಾಯಣರ ಪ್ರಸಿದ್ಧವಾದಂತಹ ಪ್ರೌಢ ಚಂಪೂ ಕಾವ್ಯ ರಾಮಾಯಣ ಕಲ್ಪವೃಕ್ಷ ಇರಬಹುದು; ಹಾಗೆಯೇ ಬೇರೆ ಭಾಷೆಗಳ ರಾಮಾಯಣಗಳಿರಬಹುದು, ಕೃತ್ತಿವಾಸನ ರಾಮಾಯಣ ಇರಬಹುದು; ಮರಾಠಿಯಲ್ಲಿ ಮೋರೇಪಂಥರೇ ಬರೆದ ಅನೇಕ ಬಗೆಯ ರಾಮಾಯಣಗಳಿರಬಹುದು. ತೆಲುಗಿನ ಇಂದಿನ ರಾಮಾಯಣಗಳಿರಬಹುದು, ತಮಿಳಿನ ಕಂಬರಾಮಾಯಣ ಇರಬಹುದು, ಹಿಂದಿಯ ತುಳಸೀದಾಸರ ರಾಮಾಯಾಣ ಇರಬಹುದು… ಹೀಗೆ ಜೊತೆಗೆ ಸಂಸ್ಕೃತ ಮೂಲದಲ್ಲಿಯೇ ಇರತಕ್ಕಂತಹ ಅನೇಕ ರಾಮಾಯಣಗಳು… ಬೋಜ ಇರಬಹುದು, ಅಭಿನಂದ ಇರಬಹುದು, ಶ್ರವ್ಯಕಾವ್ಯಗಳಂತೆ ಭವಭೂತಿ ಮೊದಲಾದವರು ಬರೆದ ದೃಶ್ಯಕಾವ್ಯಗಳನ್ನೂ ಸಹ ಅವುಗಳ ಮೂಲದಲ್ಲಿಯೇ ಓದಿಕೊಂಡಿದ್ದೇನೆ. ಆದರೆ ಅಲ್ಲೆಲ್ಲಿಯೂ ಕಾಣಸಿಗದಂತಹ ವಿಶಿಷ್ಟ ಮನೋಹರವಾದ ಪ್ರತಿಭೆ, ಕಲ್ಪನಾಶಕ್ತಿ, ಮತ್ತು ಸಂದರ್ಭ ನಿರ್ಮಾಣ ನಾವೀನ್ಯತೆಯನ್ನು ನಾವು ಕುವೆಂಪು ಅವರಲ್ಲಿ ತುಂಬಾ ವಿಶೇಷವಾಗಿ ಕಾಣುತ್ತೇವೆ. ಇದು ಕನ್ನಡದ ಹೆಮ್ಮೆ ಎಂದು ನಾವು ಹೇಳಬೇಕು ಹಾಗೂ ರಾಮಾಯಣಕ್ಕೇ ಸಿಕ್ಕಿರತಕ್ಕಂತಹ ಒಂದು ವಿನೂತನವಾದ ಶೋಭೆ, ತಿರುವು, ಅಲಂಕಾರ ಎಂಬುದನ್ನು ಗಮನಿಸಬೇಕು.
'''ಶತಾವಧಾನಿ ಡಾ. ಆರ್. ಗಣೇಶ'''
 
It is single integral ecstatic symphony in 22284 lines, running in to 877 pages in print. The poet was thirty two when he began and forty one when he put down his pen. The achievement is so grand and so disproportionate to the poet’s age that one can only be amazed by his consummate artistry and perfection. Every line is chiseled to attain an incremental harmony, hardly to be met with his lyrics. It converts every situation in to a wonderful sonal structure which perfectly echoes the germ motif. It is not a series of contexts but a single orchestral piece. Every line is a variation of the relevant thematic rhythm. No one could have imagined that Kannada language is capable of this complex musical quality. For the first time in this century Kannada was made a language worthy of Gods.
'''- Shankar Mokashi Punekar'''
 
It is possible to identify three main reasons for the importance that Shri Ramayana Darshanam has acquired in the context of Indian literature: Kuvempu’s contribution to the continuation of the Ramayana kavya in Indian literature; the embodiment of a great vision of life based on an awareness of contemporary thought; and the presentation of the traditional mode of the Kannada Mahakavya and its enlargement through incorporation of elements borrowed from world epics.
'''- GS Amur'''
 
... The theme is well known story of Rama, transfigured in poet’s vision. The cardinal element of this vision, which the poet calls Darshanam is poet’s (Kuvempu’s) realization that all creation is caused, pervaded, sustained and governed by the cosmic mind. Abounding in metaphors
and Homeric similes introduced by the poet himself for the first time in Kannada, the epic brings home the truth that all beings, even the most wicked and sinful are destined to evolve and ultimately attain perfections.
'''- Courtesy: Encyclopedia of Indian Literature
Sasay to Zorgot by Madanlal (p4159)'''
 
 
=='ರಾಮಾಯಣದರ್ಶನಂ' ಕಾವ್ಯದ ಶೈಲಿಯ ಪರಿಚಯ==
*ಉದಾಹರಣೆಗೆ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಕೆಲವು ಸಾಲುಗಳನ್ನು [[ಶಂಕರ ಮೊಕಾಶಿ ಪುಣೇಕರ|ಶಂಕರ ಮೊಕಾಶಿ ಪುಣೇಕರರ ಆಂಗ್ಲ ಅನುವಾದದ ಸಾಲುಗಳ ಜತೆ, ಅರ್ಥಸಹಿತ ಕೆಳಗೆ ಉಲ್ಲೇಖಿಸಿದೆ. ಕಾವ್ಯದ ಮೂಲ ಮತ್ತು ಅನುವಾದದ ಸೊಬಗನ್ನು ನೋಡಬಹುದು:-