ಜಯ. ಸಿ. ಸುವರ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
'ಜಯ ಸುವರ್ಣ'ಉಡುಪಿ ಜಿಲ್ಲೆಯ ಪಡುಬಿದ್ರಿ ಹತ್ತಿರದ ಅಡ್ವೆ ಮೂಲದ ಚಂದು ಪೂಜಾರಿ, ಮತ್ತು ಅಚ್ಚು ಪೂಜಾರಿ ದಂಪತಿಗಳ ಪ್ರೀತಿಯ ಮಗನಾಗಿ ೧೯೪೬, ಮೇ. ೧೫ ರಂದು ಜನಿಸಿದರು. ಪ್ರಾಥಮಿಕ ೭ ನೆಯ ತರಗತಿಯವರೆಗೆ ತಮ್ಮ ಊರಿನಲ್ಲಿಯೇ  ಕಲಿತರು. ೮ ನೆಯ ತರಗತಿಗೆ ಕಲಿಯಲು ದೂರದ ಅದಮಾರು ಮತ್ತು ಹೆಜಮಾಡಿ ಶಾಲೆಗಳಿಗೆ ಹೋಗಬೇಕಿತ್ತು. ಆದರೆ ಸುವರ್ಣ ಆರಿಸಿಕೊಂಡಿದ್ದು ಮುಂಬಯಿನಗರವನ್ನು.
===ಮುಂಬಯಿನಗರಕ್ಕೆ ಪಾದಾರ್ಪಣೆ===
ಜಯಸುವರ್ಣರು ತಮ್ಮ ಸೋದರಮಾವನಿದ್ದ ಮುಂಬಯಿಗೆ ೧೯೫೯ ರಲ್ಲಿ ಬಂದರು. ಮುಂಬಯಿನಗರದ ಉಪನಗರವೊಂದಾದ 'ವಡಾಲಕನ್ನಡ ಶಾಲೆ'ಯಲ್ಲಿ ೧೦ ಇಯತ್ತೆಯವರೆಗೆ ಅಭ್ಯಾಸಮಾಡಿದರು. ಹೋಟೆಲ್ ಕೆಲಸ, ಮತ್ತು ವಿದ್ಯಾಭ್ಯಾಸ ಜೊತೆ ಜೊತೆಯಾಗಿ ಸಾಗುತ್ತಿತ್ತು. ಮುಂದೆ ಅಂಧೇರಿಯ 'ಚಿನೈ ಕಾಲೇಜಿ'ಗೆ ಸೇರಿ ೧೯೭೪ ರಲ್ಲಿ ಪದವಿ ಗಳಿಸಿದರು. ಆದರೆ ಅವರಿಗೆ ಹೋಟೆಲ್ ಉದ್ಯಮದಲ್ಲಿ ಹೆಚ್ಚು ಆಸಕ್ತಿಕಾಣಿಸತೊಡಗಿತು. ಮುಂಬಯಿ (ಪ)ಗೋರೆಗಾವ್ ನಲ್ಲಿ ಹೋಟೆಲ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು.'ಶೇಟ್ ರುಕ್ಕಾರಾಮ ಸಾಲ್ಯಾನ್' ಎಂಬ ಕನ್ನಡಿಗರ ಪರಿಚಯದಿಂದಾಗಿ ಹಲವಾರು ಕನ್ನಡದ ಉದ್ಯಮಿಗಳ ನೆರವುದೊರೆಯಿತು. ಮುಂಬಯಿ ನಗರದ ಕೋಟೆಯ ವಲಯದಲ್ಲಿ 'ಮೋಹನ್ ಟೆರೇಸ್' ನಲ್ಲಿದ್ದ 'ಬಿಲ್ಲವರ ಅಸೋಸಿಯೇಷನ್ ಕಚೇರಿ'ಯನ್ನು ಒಂದು ಸುಸಜ್ಜಿತ ಕಟ್ಟಡ ನಿರ್ಮಿಸಿ ಸ್ಥಳಾಂತರ ಗೊಳಿಸುವ ಕೆಲಸದಲ್ಲಿ ಸಾಲ್ಯಾನ್ ಗೆ ಸಹಾಯ ಮಾಡಿದರು. ತರುವಾಯ ಮೂಲ್ಕಿ ನಾರಾಯಣ ಗುರು ಶಾಲೆಯ ಪ್ರಗತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜನಾರ್ಧನ ಪೂಜಾರಿಯವರ ನೇತೃತ್ವದಲ್ಲಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ನವೀಕರಣ ನಡೆದಾಗ, ಮುಂಬಯಿನ ಉದ್ಯಮಿ ಗೆಳೆಯರ ಮತ್ತು ಇತರರ ಸಹಾಯ-ಸಹಕಾರಗಳಿಂದ ೪೫ ಲಕ್ಷ ರೂಪಾಯಿ ದೇಣಿಗೆಯನ್ನು ಸಂಗ್ರಹಿಸಿದರು. ಬಿಲ್ಲವರ ಸಂಘದ ಒಕ್ಕೂಟದಲ್ಲಿ ಸುಮಾರು ೨೭೦ ಶಾಖೆಗಳಿವೆ. ಬಿಲ್ಲವರ ಮಹಾಮಂಡಲದ ಸ್ಥಾಪಕ ಅಧ್ಯಕ್ಷರಾಗಿ ಕೆಲಸಮಾಡಿದರು. ತಮ್ಮ ಆಡಳಿತದ ಅವಧಿಯಲ್ಲಿ 'ಬ್ರಹ್ಮ ಶ್ರೀ ನಾರಾಯಣ ಗುರು ಎಜುಕೇಷನ್ ಟ್ರಸ್ಟ್',ಪಡುಬೆಳ್ಳೆ ಶಿಕ್ಷಣ ಸಂಸ್ಥೆ'ಯನ್ನು 'ಬಿಲ್ಲವರ ಅಸೋಸಿಯೇಷನ್']<ref> [https://www.bantwaltimes.com/news/mumbai-news/1413-s-3 Bantwal times .com, 1st, Nov,2018] /ref> ಆಡಳಿತದ ಅಡಿಯಲ್ಲಿ ತಂದರು. ಬಿಲ್ಲವರ ಅಸೋಸಿಯೇಷನ್ ನ ಮುಖಪತ್ರಿಕೆ 'ಅಕ್ಷಯ' ಬೆಳವಣಿಗೆಗೆ ಕಾರಣರಾದರು. ಸರಳತೆ, ಸ್ನೇಹಪರ ಮನೋಭಾವ, ಪ್ರಾಮಾಣಿಕತೆ, ಸಂಘಟನಾ ಕೌಶಲ್ಯ, ಔದಾರ್ಯಗುಣ, ಬಂದ ಸವಾಲುಗಳನ್ನು ಎದುರಿಸಿ ಜಯಶಾಲಿಯಾಗುವ ಆತ್ಮ ಸ್ಥೈರ್ಯಗಳು ಜಯ ಸುವರ್ಣರ ಯಶಸ್ಸಿಗೆ ಕಾರಣವಾಗಿವೆ.
 
==ಪರಿವಾರ==
ಪತ್ನಿ, ಲೀಲಾವತಿ ಜಯ.ಸಿ.ಸುವರ್ಣ, ಹಾಗೂ ಮಕ್ಕಳು :  ೧. ಸೂರ್ಯಕಾಂತ್ ಜಯ.ಸಿ.ಸುವರ್ಣ. ೨ ಸುಭಾಷ್, ಜಯ. ಸಿ. ಸುವರ್ಣ. ೩. ದಿನೇಶ್ ಜಯ. ಸಿ . ಸುವರ್ಣ. ೪. ಯೋಗೇಶ್ ಜಯ. ಸಿ .ಸುವರ್ಣ 
Line ೧೨ ⟶ ೧೧:
# 'ಮುಂಬಯಿ ಬಿಲ್ಲವರ ಅಸೋಸಿಯೇಷನ್ ಗೌರವ ಅಧ್ಯಕ್ಪ' 
# 'ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ಕಾರ್ಯಾಧ್ಯಕ್ಷರು'.
# 'ರಾಷ್ಟೀಯ ಬಿಲ್ಲವರ ಮಹಾಮಂಡಳ ಸಂಸ್ಥಾಪಕ ಅಧ್ಯಕ್ಷ' 
 
==ಪ್ರಶಸ್ತಿ ಪುರಸ್ಕಾರಗಳು==
# 'ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ'
"https://kn.wikipedia.org/wiki/ಜಯ._ಸಿ._ಸುವರ್ಣ" ಇಂದ ಪಡೆಯಲ್ಪಟ್ಟಿದೆ