ಹಂಪೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬೫ ನೇ ಸಾಲು:
 
== ವಿರೂಪಾಕ್ಷ ದೇವಾಲಯ ==
ವಿರೂಪಾಕ್ಷ ದೇವಾಲಯವು ಶಿವ ಹಾಗು ಅವನ ಸಂಗಾತಿ ದೇವತೆಯಾದ ಪಂಪಾಳಿಗೆ ಸಮರ್ಪಿತವಾಗಿದ್ದು, ಹಂಪಿಗೆ ಬರುವ ಪ್ರವಾಸಿಗರು ಇದಕ್ಕೆ ಭೇಟಿ ನೀಡಬಹುದು. ೫೦ ಮೀ. ಎತ್ತರದ ಗೋಪುರವನ್ನು ಹೊಂದಿರುವ ಈ ದೇವಾಲಯವು ತುಂಗಭದ್ರ ನದಿಯ ದಕ್ಷಿಣ ದಡದಲ್ಲಿರುವ ಹೇಮಕೂಟ ಬೆಟ್ಟದ ಕೆಳಭಾಗದಲ್ಲಿದೆ. ದಕ್ಷಿಣ ಭಾರತದ ದ್ರಾವಿಡಿಯನ್ ಮಾದರಿಯ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯವು ಇಟ್ಟಿಗೆ ಹಾಗು ಮೊರ್ಟಾರ್ ಗಳಿಂದ ರಚಿಸಲ್ಪಟ್ಟಿದೆ. ಪಂಪಾಪತಿ ದೇವಾಲಯವೆಂದೂ, ಕರೆಯಲ್ಪಡುವ ಈ ದೇವಾಲಯವು ಮುಖ ಮಂಟಪ(ರಂಗ ಮಂಟಪ), ಮುರು ಭಾಗಗಳು ಮತ್ತು ಕಂಬಗಳುಳ್ಳ ವಿಶಾಲವಾದ ಕೊಠಡಿಯನ್ನು ಹೊಂದಿದೆ. ವಿರೂಪಾಕ್ಷ ದೇವಾಲಯವು 7ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಕೆತ್ತನೆಯ ಕೆಲಸವು ಸುಮಾರು ೯ ಹಾಗು ೧೧ ನೇ ಶತಮಾನಗಳ ಮಧ್ಯದಲ್ಲಿ ಮಾಡಲ್ಪಟ್ಟಿವೆ ಎಂಬುದನ್ನು ಅಲ್ಲಿ ಭೇಟಿ ನೀಡಿದಾಗ ತಿಳಿಯಬಹುದು. ಪ್ರಾರಂಭದಲ್ಲಿ, ಈ ದೇವಾಲಯವು ಕೆಲವೆ ವಿಗ್ರಹಗಳನ್ನು ಹೊಂದಿದ್ದು ಕಾಲಾಕ್ರಮೇಣ ಬೃಹದಾಕಾರವನ್ನು ಪಡೆಯಿತು. ಕ್ರಿ.ಶ.೧೫೧೦ ರಲ್ಲಿ, ಕೃಷ್ಣದೇವರಾಯರಿಂದ, ರಂಗಮಂಟಪವು ನಿರ್ಮಿಸಲ್ಪಟ್ಟಿದ್ದು ವಿಜಯನಗರದ ಶೈಲಿಯ ವಾಸ್ತುಶಿಲ್ಪವನ್ನು ಸೂಚಿಸುತ್ತದೆ. ತದನಂತರ ಕಂಬಗಳು, ದೀಪಸ್ಥಂಬಗಳು, ಸ್ತೂಪಗಳನ್ನು ನಿರ್ಮಿಸಲಾಯಿತು. ಹಿಂದು ಸಂಸ್ಕೃತಿಯನ್ನು ಬಿಂಬಿಸುವಂತಹ ಪ್ರಾಣಿ ಪಕ್ಷಿಗಳ ಕೆತ್ತನೆಗಳು ವಿರೂಪಾಕ್ಷ ದೇವಾಲಯದ ಪ್ರಮುಖ ಆಕರ್ಷಣೆ.
 
== ಜೆನಾನಾ ಎನ್ಕ್ಲೊಸರ್ ==
"https://kn.wikipedia.org/wiki/ಹಂಪೆ" ಇಂದ ಪಡೆಯಲ್ಪಟ್ಟಿದೆ