ಬುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 2409:4071:2007:9079:4873:FAD1:4F86:9DAA (talk) to last revision by Yakshitha
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೬ ನೇ ಸಾಲು:
}}
{{Buddhism}}
'''ಗೌತಮ ಬುದ್ಧ''' ವಿಷ್ಣುವಿನ ಅವತಾರಗಳಲೊಂದು (ಕ್ರಿ.ಪೂ ೫೫೭-೪೪೭) [[ಬೌದ್ಧಧರ್ಮ |ಬೌದ್ಧಧರ್ಮದ]] ಸಂಸ್ಥಾಪಕ. ಮಾತ್ರವಲ್ಲ, [[ಚತುರಾರ್ಯ ಸತ್ಯ |ಚತುರಾರ್ಯ ಸತ್ಯಗಳಾದ]] [[ದುಃಖ]], ದುಃಖದ [[ಹುಟ್ಟು]], ದುಃಖದ [[ಅಡಗು |ಅಡಗುವಿಕೆ]], ಮತ್ತು ದುಃಖ [[ನಿವಾರಣೆ |ನಿವಾರಣೆಗೆ]] ಒಯ್ಯುವ [[ಅಷ್ಟಾಂಗ ಮಾರ್ಗ |ಅಷ್ಟಾಂಗಿಕ ಮಾರ್ಗವನ್ನು]] ಕಂಡು ಹಿಡಿದ [[ದಾರ್ಶನಿಕ]]. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ '''ವಿಪಶ್ಶನ'''<ref>http://www.dhamma.org</ref> [[ಧ್ಯಾನ]] ಮಾರ್ಗವು ದುಃಖ ಮತ್ತು [[ಪಾಪಕರ್ಮ|ಪಾಪಕರ್ಮಗಳಿಂದ]] ಮುಕ್ತವಾಗಲು ಸಹಾಯ ಮಾಡುತ್ತದೆ.
 
ಗೌತಮ ಬುದ್ಧನ ಹುಟ್ಟು ಸ್ಥಳ ಲುಂಬಿನಿ ಗ್ರಾಮ. ತಂದೆ ಶುದ್ಧೋಧನ ತಾಯಿ ಮಾಯದೇವಿ. ಮೊದಲ ಹೆಸರು ಸಿದ್ದಾರ್ಥ. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಬುದ್ಧನನ್ನು ಗೌತಮಿ ಎಂಬ ಸ್ತ್ರೀಯೊಬ್ಬಳು ಸಾಕುತ್ತಾಳೆ. ಆದುದರಿಂದ ಸಿದ್ದಾರ್ಥ 'ಗೌತಮ'ನೆಂದು ಕರೆಯಲ್ಪಡುತ್ತಾನೆ. ತಂದೆ ಶುದ್ಧೋಧನ ಮಗ ಚಕ್ರವರ್ತಿಯಾಗಬೇಕೆಂಬ ಆಶಯದಿಂದ ಅವನಿಗೆ ದುಃಖದ ಸನ್ನಿವೇಶಗಳೇ ಕಾಣದಂತಹ ಕೃತಕ ವಾತಾವರಣವನ್ನು ಸೃಷ್ಟಿಸಿ, ಅವನನ್ನು ಬೆಳೆಸುತ್ತಾನೆ. ಯಶೋಧರೆ ಎಂಬ ಸುಂದರ ಕನ್ಯೆಯೊಂದಿಗೆ ಅವನ ವಿವಾಹವನ್ನು ಮಾಡುತ್ತಾನೆ. ಗೌತಮನಿಗೆ 'ರಾಹುಲ' ಎಂಬ ಮಗನು ಹುಟ್ಟುತ್ತಾನೆ. ಮಗುವಿಗೆ ವರ್ಷ ತುಂಬುವುದರೊಳಗೆ ಸಿದ್ದಾರ್ಥನಿಗೆ ದುಃಖದ 'ದಿವ್ಯದರ್ಶನ'ವಾಗುತ್ತದೆ. ಇಡೀ ಜಗತ್ತಿನ ಘೋರ ದುಃಖವನ್ನು ಕಂಡು ಬೆಚ್ಚಿಬಿದ್ದ ಸಿದ್ದಾರ್ಥ, ಸೇವಕ ಚೆನ್ನನೊಡನೆ ಜಗವೆಲ್ಲಾ ಮಲಗಿರುವಾಗ ಬುದ್ದನಾಗಲೂ ಹೊರಟು, ದುಃಖಕ್ಕೆ ಶಾಶ್ವತ ಪರಿಹಾರವನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಾನೆ.
"https://kn.wikipedia.org/wiki/ಬುದ್ಧ" ಇಂದ ಪಡೆಯಲ್ಪಟ್ಟಿದೆ