ಸದಸ್ಯ:Maheshmmhshm/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್: Manual revert
No edit summary
೧೮ ನೇ ಸಾಲು:
ರಿಯಲ್ ಎಸ್ಟೇಟ್(ನಿಯಂತ್ರಣ ಹಾಗು ಅಭಿವೃದ್ಧಿ) ಕಾಯ್ದೆ ೨೦೧೬
 
ಭಾರತದಲ್ಲಿ ಸ್ಥಿರಾಸ್ತಿಗಳ ಮೇಲೆ ಹಣ ಹೂಡುವವರ ಹಾಗು ಕೊಳ್ಳುವವರ ಹಿತಾಸಕ್ತಿ ಕಾಪಾಡುವುದಕ್ಕೋಸಕಾರವೇಕಾಪಾಡುವುದಕ್ಕೋಸ್ಕರ ಸಂವಿಧಾನದ ಚೌಕಟ್ಟಿನಲ್ಲಿ ರಚನೆಯಾದ ಕಾಯ್ದೆಯೇ ಈ ರಿಯಲ್ ಎಸ್ಟೇಟ್ ರೇಗುಲೇಷನ್ ಕಾಯ್ದೆ. ಈ ಕಾಯಿದೆಯು ಪ್ರತೀ ರಾಜ್ಯದಲ್ಲೂ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನು ಹೊಂದಿ ಆ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನಡೆಯುವ ವಹಿವಾಟುಗಳ ಮೇಲೆ ನಿಗಾ ಇಡುವುದು ಮಾತ್ರವಲ್ಲದೆ ಆ ಕ್ಷೇತ್ರಕ್ಕೆ ಸಂಬಂಧಪಟ್ಟ ವ್ಯಾಜ್ಯಗಳನ್ನು ಶೀಘ್ರವಾಗಿ ಪರಿಹರಿಸುವ ನ್ಯಾಯಿಕ ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ. ಮಾರ್ಚ್ ೧೦, ೨೦೧೬ ರಲ್ಲಿ ಈ ಕಾಯ್ದೆ ರಾಜ್ಯ ಸಭೆಯಲ್ಲಿ ಅನುಮೋದನೆ ಪಡೆದರೆ ಅದೇ ವರ್ಷದ ಮಾರ್ಚ್ ೧೫ ರಂದು ಲೋಕಸಭೆಯಲ್ಲಿ ಅನುಮೋದನೆ ಪಡೆಯಿತು. ಮುಂದೆ ಮೇ ೧,೨೦೧೬ ರಿಂದ ಜಮ್ಮು ಕಾಶ್ಮೀರ ಹೊರತು ಪಡಿಸಿ ಈ ಕಾಯ್ದೆ ಜಾರಿಯಾಯಿತು. ಈ ಕಾಯ್ದೆಯಡಿಯಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ನಿಯಮಗಳನ್ನು ರೂಪಿಸಲು ಅವಕಾಶವಿದ್ದು ಆರು ತಿಂಗಳ ಕಾಲಾವಧಿಯೊಳಗೆ ಅವುಗಳನ್ನು ಜಾರಿಗೊಳಿಸಬೇಕಾಗಿದೆ.
 
==ಇತಿಹಾಸ==
ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಮಸೂದೆಯನ್ನ ಯುಪಿಎ-೨ರ ಸರ್ಕಾರ ೨೦೧೩ರಲ್ಲಿ ಸಂಸತ್ತಿಗೆ ಪರಿಚಯಿಸಿತ್ತು. ಮುಂದೆ ಡಿಸೆಂಬರ್ ೨೦೧೫ ರಲ್ಲಿ ಭಾರತದ ಕೇಂದ್ರ ಸಚಿವ ಸಂಪುಟ ಆ ಮಸೂದೆಗೆ ೨೦ ತಿದ್ದುಪಡಿಗಳನ್ನು ರಾಜ್ಯಸಭಾ ಸಮಿತಿಯ ಸಲಹೆಯ ಮೇರೆಗೆ ಮಾಡಿತು. ಅದಕ್ಕೂ ಮುನ್ನ ಇದೇ ಮಸೂದೆಯನ್ನು ಆಯ್ಕೆ ಸಮಿತಿಯು ಅವಲೋಕಿಸಿ ತಮ್ಮ ನಿಲುವುಗಳ ಕುರಿತು ವಿಸ್ಮೃತ ವರದಿಯೊಂದನ್ನ ೨೦೧೫ ರ ಜುಲೈನಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು. ಆದಾಗ್ಯೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಎಡರಂಗ ಹಾಗು ಎಐಡಿಎಂಕೆ ಪಕ್ಷಗಳು ಅಂತಿಮ ಮಸೂದೆಯ ಕುರಿತು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದವು. ಆದರೂ ಲೋಕಸಭೆ ಹಾಗು ರಾಜ್ಯಸಭೆಗಳಲ್ಲಿ ಮಸೂದೆ ಯಶಸ್ವಿಯಾಗಿ ಅಂಗೀಕಾರವಾಯಿತು.