ಪ್ಯಾಲೆಸ್ಟೈನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
#WLF
೭ ನೇ ಸಾಲು:
 
ಆಗಸ್ಟ್ 2005ರಲ್ಲಿ ಗಾಜಸ್ಟ್ರಿಪ್‍ನಲ್ಲಿದ್ದ ಇಸ್ರೇಲಿಗಳನ್ನು ಇಸ್ರೇಲ್ ಸರ್ಕಾರವೇ ತೆರವುಗೊಳಿಸಲು ಕೇಳಿದ್ದು ಅದಕ್ಕೆ ಸೂಕ್ತ ಕ್ರಮ ಕೈಗೊಂಡಿದೆ. ಅರಬ್, ಇಸ್ರೇಲ್, ಪ್ಯಾಲಸ್ತೀನ್ ಇವುಗಳ ಮಧ್ಯೆಯ ಶಾಂತಿ ಸಹಬಾಳ್ವೆಗೆ ಇದೊಂದು ಕ್ರಮವೆಂದು ಶಾಂತಿಪ್ರಿಯ ದೇಶಗಳು ಭಾವಿಸಿವೆ. ಈ ಪ್ರದೇಶ ಉ.ಅ. 310-330 ಮತ್ತು ಪೂ.ರೇ. 340-370 ನಡುವೆ ಪ್ರಸರಿಸಿದೆ. ಏಷ್ಯ, ಯೂರೊಪ್ ಮತ್ತು ಆಫ್ರಿಕ ಖಂಡಗಳು ಸಂಧಿಸುವ ಆಯಕಟ್ಟಿನ ಸ್ಥಳ ಪ್ಯಾಲಸ್ತೀನ್. ಇದು [[ನೈಲ್ ನದಿ]] ಕಣಿವೆಯನ್ನು ಯಮಳ ನದಿಗಳ ಕಣಿವೆಯಿಂದ ಬೇರ್ಪಡಿಸುತ್ತದೆ. ಇದರ ವಾಯುಗುಣ ಹಿತಕರವಾಗಿದೆ. ಪುಟ್ಟ ದೇಶವಾದರೂ ಪ್ಯಾಲಸ್ತೀನ್‍ನಲ್ಲಿ ವಿವಿಧ ರೀತಿಯ ಭೂಪ್ರದೇಶಗಳೂ ವಾಯುಗುಣಗಳೂ ಇವೆ. ಪರ್ವತಗಳು, ಮೈದಾನ, ಮರುಭೂಮಿ, ಫಲವತ್ತಾದ ಮತ್ತು ಮನೋಹರವಾದ ಕಣಿವೆಗಳು, ಸರೋವರಗಳು, ಸಮುದ್ರ ತೀರ ಇವೆ. ಪಶ್ಚಿಮದಿಂದ ಪೂರ್ವಕ್ಕೆ ಹೋದಂತೆ ಪ್ಯಾಲಸ್ತೀನ್‍ನಲ್ಲಿ ನಾಲ್ಕು ವಿಭಾಗಗಳಿವೆ. 1. ಫಲವತ್ತಾದ ಮತ್ತು ಜನಸಾಂದ್ರತೆ ಅಧಿಕವಾಗಿರುವ ಮೆಡಿಟರೇನಿಯನ್ ತೀರ ಪ್ರದೇಶ ಇಲ್ಲಿ ಟೆಲ್ ಅವೀವ್, ಹೈಫ, ಮತ್ತು ಜಾಫ ರೇವು ಪಟ್ಟಣಗಳಿವೆ. 2. ಗೆಲಿಲಿ ಮತ್ತು ಜುಡಿಯಾಗಳನ್ನೊಳಗೊಂಡ ಪ್ರಸ್ಥ ಭೂಮಿಯಲ್ಲಿ ಪುರಾತನ ಪ್ರಸಿದ್ಧವಾದ ಜೆರೂಸಲೆಮ್ ನಗರವಿದೆ. ಪ್ರಸಿದ್ಧವಾದ ಜಾಫ ಕಿತ್ತಲೆಹಣ್ಣು ದ್ರಾಕ್ಷಿ ಮತ್ತು ಬನಾನ ಇವು ತೀರಪ್ರದೇಶದ ಬೆಳೆಗಳು. ಮೀನು ಹಿಡಿಯುವುದು ಒಂದು ಮುಖ್ಯ ಕಸುಬು. ರೈಲು ಮಾರ್ಗಗಳು ಅಭಿವೃದ್ಧಿ ಹೊಂದಿರುವ ಪ್ಯಾಲಸ್ತೀನ್, ಉತ್ತರ ಆಫ್ರಿಕದೊಡನೆಯೂ ಪಶ್ಚಿಮ ಏಷ್ಯದೊಡನೆಯೂ ಸಂಪರ್ಕ ಹೊಂದಿದೆ. ಲಿಡ್ಡ ನಾಗರಿಕ ವಿಮಾನ ನೆಲೆ, ಹಲವಾರು ಸೈನಿಕ ವಿಮಾನ ನಿಲ್ದಾಣಗಳೂ ಇವೆ. ಇವುಗಳನ್ನು 2 ನೆಯ ಮಹಾಯುದ್ಧದ ಕಾಲದಲ್ಲಿ ಬ್ರಿಟಿಷ್ ವಿಮಾನ ದಳಗಳಿಗಾಗಿ ನಿರ್ಮಿಸಲಾಗಿತ್ತು.
[[File:Alaqsa mosque2.jpg|thumb|
 
ಅಲಕ್ಸ ಮಸೀದಿ]]
== ಇತಿಹಾಸ ==
[[File:Map of Israel, neighbours and occupied territories.svg|thumb|480 px|ಇಸ್ರೇಲ್‍ನ ನಕ್ಷೆ, ನೆರೆಯವರು ಮತ್ತು ಆಕ್ರಮಿತ ಪ್ರದೇಶಗಳು|alt=PALESTINE]]
"https://kn.wikipedia.org/wiki/ಪ್ಯಾಲೆಸ್ಟೈನ್" ಇಂದ ಪಡೆಯಲ್ಪಟ್ಟಿದೆ