ನೇಪಾಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು new emblem
#WLF
೫೪ ನೇ ಸಾಲು:
 
'''ನೇಪಾಳ'''ವು [[ದಕ್ಷಿಣ ಏಷ್ಯಾ|ದಕ್ಷಿಣ ಏಷ್ಯಾದ]] ಒಂದು ರಾಷ್ಟ್ರ. [[ಹಿಮಾಲಯ|ಹಿಮಾಲಯದ]] ತಪ್ಪಲಲ್ಲಿ ಇರುವ ನೇಪಾಳವು ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿದೆ. ನೇಪಾಳದ ಉತ್ತರಕ್ಕೆ [[ಟಿಬೆಟ್]] ಮತ್ತು ಇತರ ಎಲ್ಲಾ ದಿಕ್ಕುಗಳಲ್ಲಿಯೂ [[ಭಾರತ|ಭಾರತವಿದೆ]]. [[ಎವರೆಸ್ಟ್]] ಸೇರಿದಂತೆ ವಿಶ್ವದ ಅತಿ ಉನ್ನತ ೧೦ ಪರ್ವತ ಶಿಖರಗಳ ಪೈಕಿ ೮ ನೇಪಾಳದಲ್ಲಿಯೇ ಇವೆ. ನೇಪಾಳದ ವಿಸ್ತೀರ್ಣ ೧೪೧,೭೦೦ ಚ.ಕಿ.ಮೀ. ಜನಸಂಖ್ಯೆ ಸುಮಾರು ೨.೭ ಕೋಟಿ. ರಾಷ್ಟ್ರದ ರಾಜಧಾನಿ [[ಕಾಠ್ಮಂಡು]].
[[File:ChanguNarayan Temple.jpg|thumb|ಚಾಂಗುನಾರಾಯಣ್ ದೇವಸ್ಥಾನ]]
 
== ಇತಿಹಾಸ ==
ಕ್ರಿ.ಪೂ.೬ ಮತ್ತು ೫ನಯೆ ಶತಮಾನದಲ್ಲಿ ಈ ಪ್ರದೇಶವು [[ಶಾಕ್ಯ]] ಆಡಳಿತಕ್ಕೊಳಪಟ್ಟಿತ್ಥು. ಶಾಕ್ಯ ರಾಜಕುಮಾರರಲ್ಲೊಬ್ಬನಾದ [[ಸಿದ್ಧಾರ್ಥ ಗೌತಮ|ಸಿದ್ಧಾರ್ಥ ಗೌತಮನು]] ಐಹಿಕ ಪ್ರಾಪಂಚಿಕ ವ್ಯಾಮೋಹಗಳನ್ನು ತೊರೆದು ದಿವ್ಯ ಜ್ಞಾನವನ್ನು ಹೊಂದಿ ಮುಂದೆ [[ಬುದ್ಧ|ಬುದ್ಧನೆನಿಸಿಕೊಂಡನು]]. ಸುಮಾರು ಕ್ರಿ.ಪೂ. ೨೫೦ರ ಸಮಯಕ್ಕೆ ಈ ಪ್ರದೇಶವು ಉತ್ತರಭಾರತದ [[ಮೌರ್ಯ ಸಾಮ್ರಾಜ್ಯ|ಮೌರ್ಯ ಸಾಮ್ರಾಜ್ಯದ]] ಅಂಗವಾಗಿತ್ತು. ತರುವಾಯ [[ಗುಪ್ತ ಸಾಮ್ರಾಟ|ಗುಪ್ತ ಸಾಮ್ರಾಟರು]] , [[ಲಿಚ್ಛವಿ]] ಸಾಮ್ರಾಟರು ಹಾಗೂ [[ಚಾಲುಕ್ಯ|ಚಾಲುಕ್ಯರು]] ಈ ಪ್ರದೇಶದ ಮೇಲೆ ಹತೋಟಿ ಸಾಧಿಸಿದ್ದರು. ನಂತರ ಈ ಪ್ರದೇಶವು ಹಲವು ಸಣ್ಣ ಅರಸೊತ್ತಿಗೆಗಳಾಗಿ ಹಂಚಿಹೋಯಿತು. ೧೭೬೫ರಲ್ಲಿ ಪೃಥ್ವಿನಾರಾಯಣ ಶಹ ಎಂಬ [[ಗೂರ್ಖಾ]] ಅರಸನು ನೇಪಾಳವನ್ನು ಒಂದುಗೂಡಿಸಿದನು. ಭಾರತವು ಬ್ರಿಟಿಷ್ ಆಡಳಿತಕ್ಕೆ ಒಳಗಾದಾಗ ನೇಪಾಳವು ತನ್ನ [[ಸ್ವಾಯತ್ತತೆ|ಸ್ವಾಯತ್ತತೆಯನ್ನು]] ಉಳಿಸಿಕೊಂಡಿತ್ತು. ಆಂಗ್ಲರೊಡನೆ ನಡೆದ ಒಂದು ಯುದ್ಧದಲ್ಲಿ ನೇಪಾಳವು ಸೋಲನುಭವಿಸಿತಾದರೂ, ತನ್ನ [[ಸ್ವಾತಂತ್ರ್ಯ|ಸ್ವಾತಂತ್ರ್ಯವನ್ನು]] ಉಳಿಸಿಕೊಳ್ಳಲು ಬ್ರಿಟಿಷರೊಂದಿಗೆ ಸಂಧಿ ಮಾಡಿಕೊಂಡಿತು. ಇದರ ಪ್ರಕಾರ ನೇಪಾಳವು ಅಂದು ತನ್ನ ಪ್ರದೇಶಗಳಾಗಿದ್ದ [[ಉತ್ತರಾಖಂಡ]] , [[ಹಿಮಾಚಲ ಪ್ರದೇಶ]] ಮತ್ತು [[ಸಿಕ್ಕಿಂ]] ಭಾಗಗಳನ್ನು ಆಂಗ್ಲರಿಗೆ ಬಿಟ್ಟುಕೊಟ್ಟಿತು. ಅಲ್ಲಿಂದ ಮುಂದೆ ಇತ್ತೀಚಿನವರೆವಿಗೂ ನೇಪಾಳವು [[ಅರಸೊತ್ತಿಗೆ|ಅರಸೊತ್ತಿಗೆಯಾಗಿಯೇ]] ಉಳಿದಿತ್ತು. ಈಚಿನ ದಿನಗಳಲ್ಲಿ [[ಪ್ರಜಾಸತ್ತೆ|ಪ್ರಜಾಸತ್ತೆಗಾಗಿ]] ಹೋರಾಟವು ತೀವ್ರಗೊಂಡು [[ಬಹುಪಕ್ಷೀಯ ಸಾಂಸದೀಯ ವ್ಯವಸ್ಥೆ|ಬಹುಪಕ್ಷೀಯ ಸಾಂಸದೀಯ ವ್ಯವಸ್ಥೆಯನ್ನು]] ಸ್ಥಾಪಿಸಲಾಯಿತು. ಅರಸರ ಅಧಿಕಾರಗಳನ್ನು ಬಹುಮಟ್ಟಿಗೆ ಮೊಟಕುಗೊಳಿಸಲಾಯಿತು. ೧೯೯೧ರಲ್ಲಿ ಪ್ರಪ್ರಥಮ ಬಹುಪಕ್ಷೀಯ ಹಾಗೂ ಮುಕ್ತ [[ಚುನಾವಣೆ|ಚುನಾವಣೆಗಳು]] ನಡೆದವು.
"https://kn.wikipedia.org/wiki/ನೇಪಾಳ" ಇಂದ ಪಡೆಯಲ್ಪಟ್ಟಿದೆ