ಬಾಂಗ್ಲಾದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ದೋಷ ತಿದ್ದುಪಡಿ
#WLF
೮೩ ನೇ ಸಾಲು:
*ಗಂಗಾನದಿ ಬಂಗಾಲದ ನದೀಮುಖಜ ಭೂಪ್ರದೇಶದ ಶಿಖೆಯಂತಿದೆ. ಇದು ಬ್ರಹ್ಮಪುತ್ರ ನದಿಯ ಕವಲೊಂದಿಗೆ ಸೇರಿ ಪದ್ಮಾ ಎನಿಸಿದೆ. ಈ ನದಿಯೂ ಇದರ ಉಪನದಿಗಳೂ ಪಶ್ಚಿಮ ಬಂಗಾಲದ ಕುಷ್ಟಿಯಾ, ಜೆಸ್ಸೂರ್, ಖುಲ್ನಾ, ಫರೀದ್‍ಪುರ, ಪಟುವಾಖಾಲಿ ಮತ್ತು ಬೇಕರ್‍ಗಂಜ್ ಜಿಲ್ಲೆಗಳಲ್ಲಿ ಹರಿಯುತ್ತವೆ. ಈ ನದಿ ರಾಜಶಾಹಿ ಜಿಲ್ಲೆಯ ಪಶ್ಚಿಮದ ತುದಿಯಲ್ಲಿ ಬಾಂಗ್ಲಾದೇಶವನ್ನು ಪ್ರವೇಶಿಸಿ ಸುಮಾರು 150ಕಿ.ಮೀ ದೂರ ಭಾರತ-ಬಾಂಗ್ಲಾ ದೇಶಗಳ ನಡುವಣ ಗಡಿಯಾಗಿ ಹರಿಯುತ್ತದೆ. ಸಿಲ್ಹೆಟ್-ಸುರ್ಮಾ ಮತ್ತು ಕುಸಿಯಾರ ನದಿಗಳು ಕೂಡಿ ಮೇಘ್ನಾ ಆಗಿದೆ. ಇವೆರಡೂ ನದಿಗಳು ಬರಾಕ್ ನದಿಯ ಕವಲುಗಳು. ಇವು ಭಾರತದ ಮಣಿಪುರ ಪ್ರದೇಶದಲ್ಲಿ ಹುಟ್ಟುತ್ತವೆ. ಇದರ ಮುಖ್ಯ ಕವಲಾದ ಸುರ್ಮಾ ನದಿಯನ್ನು ಸಿಲ್ಹೆಟ್ ಜಿಲ್ಲೆಯಲ್ಲಿ ಕಾಳಿನಿ ನದಿ ಕೂಡುತ್ತದೆ. ಇನ್ನೂ ಕೆಳಗೆ ಕುಸಿಯಾರ ಸಂಗಮಿಸುತ್ತದೆ. ಜಮುನಾ ನದಿಯ ಒಂದು ಶಾಖೆಯಾದ ಧವಳೇಶ್ವರಿ ನದಿಯನ್ನು ಕೂಡಿಕೊಂಡ ಮೇಲೆ ಮೇಘ್ನಾ ನದಿ ಗಂಗೆಯೊಂದಿಗೆ ಸೇರಿ ಮುಂದುವರಿದು, ಬುರ್ಹಿ ಗಂಗಾ ಮುಂತಾದ ಅನೇಕ ನದಿಗಳನ್ನು ಕೂಡಿ ವಿಶಾಲವಾಗಿ ಪ್ರವಹಿಸುತ್ತದೆ.
*ಬ್ರಹ್ಮಪುತ್ರ ಮತ್ತು ಅದರ ಹಲವು ಕವಲುಗಳು ಉತ್ತರ ಬಂಗಾಲದ ಜಿಲ್ಲೆಗಳ ಪೂರ್ವಭಾಗಗಳಿಂದ ಹಿಡಿದು ಆಗ್ನೇಯದ ಮೇಘ್ನಾ ನದಿಯವರೆಗೆ ವಿಶಾಲವಾದ ಪ್ರದೇಶವನ್ನು ಆವರಿಸಿಕೊಂಡಿವೆ. ಬ್ರಹ್ಮಪುತ್ರದ ದಕ್ಷಿಣದ ಭಾಗಕ್ಕೆ ಜಮುನಾ ಎಂಬ ಹೆಸರಿದೆ. ಪೂರ್ವ ಭಾಗದಿಂದ ಹಲವಾರು ನದಿಗಳು ಇದನ್ನು ಸೇರಿಕೊಳ್ಳುತ್ತವೆ. ಪದೇ ಪದೇ ದಡಮೀರಿ ಹರಿದು ಪಾತ್ರವನ್ನು ಬದಲಿಸುವ ಬ್ರಹ್ಮಪುತ್ರದಿಂದ ಬಾಂಗ್ಲಾದೇಶದ ಉತ್ತರ-ದಕ್ಷಿಣ ಭಾಗಗಳ ನಡುವಣ ಸಂಪರ್ಕಕ್ಕೆ ತೊಡಕು ಉಂಟಾಗುತ್ತಿರುತ್ತದೆ. ಬಾಂಗ್ಲಾದೇಶದ ಉತ್ತರ ಜಿಲ್ಲೆಗಳಿಗೆ ನೀರುಣಿಸುವ ಪ್ರಮುಖ ನದಿ ತಿಸ್ತ. ಭಾರತದ ಡಾರ್ಜಿಲಿಂಗ್ ಬಳಿ ಹಿಮಾಲಯದಲ್ಲಿ ಉಗಮಿಸುವ ಈ ನದಿ ದಕ್ಷಿಣಾಭಿಮುಖವಾಗಿ ಪ್ರವಹಿಸುತ್ತದೆ. 1787ರಲ್ಲಿ ಇದು ಪಾತ್ರ ಬದಲಿಸಿದ್ದರಿಂದ ಉತ್ತರ ಬಂಗಾಲದ ಹಲವು ನದಿಗಳಿಗೆ ನೀರಿನ ಆಕರಗಳು ಕಡಿದುಹೋದವು. ಇದರ ಫಲವಾಗಿ ಆ ಪ್ರದೇಶದ ಜಲೋತ್ಸಾರಣ ವ್ಯವಸ್ಥೆ ಹದಗೆಟ್ಟಿತು. ಈ ನದಿಗಳ ಪಾತ್ರಗಳಲ್ಲಿ ಮರಳು ತುಂಬಿಕೊಳ್ಳುತ್ತಿದೆ. ನೈಋತ್ಯ ಭಾಗದ ಅನೇಕ ಸಣ್ಣ ಹಾಗೂ ಮಧ್ಯಮ ಗಾತ್ರದ ನದಿಗಳ ಪಾತ್ರಗಳೂ ಮುಚ್ಚಿಹೋಗುತ್ತಿವೆ. ಚಿತ್ತಗಾಂಗ್ ಗುಡ್ಡಗಾಡು ಮತ್ತು ನೆರೆಯ ಬಯಲುಸೀಮೆಯ ನದೀ ವ್ಯವಸ್ಥೆಯ ಪ್ರಮುಖ ನದಿಗಳು ನಾಲ್ಕು : ಫೇನಿ, ಕರ್ಣಫುಲಿ, ಸಾಂಗು ಮತ್ತು ಮಾತಾ ಮುಹರಿ. ಇವು ಪಶ್ಚಿಮ ಹಾಗೂ ನೈಋತ್ಯಾಭಿಮುಖವಾಗಿ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತವೆ.
[[File:Front sight view of the National Parliament House of Bangladesh.jpg|thumb|ಬಾಂಗ್ಲಾದೇಶದ ರಾಷ್ಟ್ರೀಯ ಸಂಸತ್ ಭವನದ ಮುಂಭಾಗದ ನೋಟ]]
 
{| class="infobox borderless"
|+ National symbols of Bangla-Desh (Official)
"https://kn.wikipedia.org/wiki/ಬಾಂಗ್ಲಾದೇಶ" ಇಂದ ಪಡೆಯಲ್ಪಟ್ಟಿದೆ