ಹಲ್ವಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
#WLF
೫೦ ನೇ ಸಾಲು:
[[File:Bangladeshi Halwa.jpg|thumb|270px|ಬಾಂಗ್ಲಾದೇಶದ ಹಲ್ವಾ ವಿಂಗಡಣೆ.(ಎಡದಿಂದ): ಪಪ್ಪಾಯಿ, ಗಜ್ಜರಿ, ಮತ್ತು ತರಿ(ರವೆ). (ಕೆಳಗೆ): ಚಿಕ್‌ಪೀ.]]
[[ಬಾಂಗ್ಲಾದೇಶ]] ಮತ್ತು ನೆರೆಯ [[ಕೊಲ್ಕತ್ತ|ಕೊಲ್ಕತ್ತಾ]]ದ [[ಬಂಗಾಳಿ|ಬಂಗಾಳಿ ಮಾತನಾಡುವ]] ಪ್ರದೇಶಗಳಲ್ಲಿ ವಿವಿಧ ಬಗೆಯ ''ಹಲುವಾ'' {{lang-bn|হালুয়া}}ವನ್ನು ತಯಾರಿಸಲಾಗುತ್ತದೆ. ಹೆಚ್ಚಾಗಿ ಕಂಡುಬರುವ ಹಲ್ವಾ ತರಿ(ರವೆ)ಯಿಂದ ಮಾಡಿದ್ದು (সুজির হালুয়া ''ಶುಜಿರ್ ಹಲುವಾ'' ), ಕ್ಯಾರೆಟ್ (গাজরের হালুয়া ''ಗಾಜರ್ ಹಲುವಾ'' ), ಚಿಕ್‌ಪಿ (বুটের হালুয়া ಬಟರ್ ಹಲುವಾ), ಹಿಟ್ಟು (নেশেস্তার হালুয়া ''ನೆಶೆಸ್ಟಾರ್ ಹಲುವಾ'') ಬಾದಾಮಿ (বাদামের হালুয়া ಬಾದಾಮರ್ ಹಲುವಾ),ಮತ್ತು ಪಪಾಯ (পেঁপের হালুয়া ಪೆಪೆರ್ ಹಲುವಾ). ಹಲುವಾವನ್ನು ತುಂಬಾ ಸಮೃದ್ಧವಾದ ಸಿಹಿಯಾಗಿ ಬಳಸುತ್ತಾರೆ, ಆದರೆ ಬಾಂಗ್ಲಾದೇಶಿಯರು ಉಪಹಾರದ ಸಾಂಪ್ರದಾಯಿಕ ಬ್ರೆಡ್ ಪುರಿಸ್ (পুরি ''ಪೂರಿ'' )ಅಥವಾ ಪರಾಠಾಗಳು (পরোটা ''ಪರೋಟಾ'').ಜೊತೆ ಸೇವಿಸುವುದು ಅಪರೂಪವೇನಲ್ಲ.
[[File:Punjab sujii halwaa (Sweet food).jpg|thumb|ಪಂಜಾಬ್ ಸುಜಿ ಹಲ್ವಾ (ಸಿಹಿ ಆಹಾರ)]]
=== ಬಲ್ಗೇರಿಯಾ ===
[[ಬಲ್ಗೇರಿಯ|ಬಲ್ಗೇರಿಯಾ]]ದಲ್ಲಿ ಹಲ್ವಾ(халва) ಎಂಬ ಪದವನ್ನು ಹಲವಾರು ಸಿಹಿ ತಿಂಡಿಗಳಿಗೆ ಬಳಸಲಾಗುತ್ತದೆ. ತಾಹಿನಿ ಹಲ್ವಾ (тахан халва) ಇದು ಬಹು ಪ್ರಖ್ಯಾತವಾಗಿದ್ದು, ತಿಂಡಿ ತಿನಿಸು ಮಾರಾಟ ಮಳಿಗೆಗಳಲ್ಲಿ ಕಾಣಬಹುದಾಗಿದೆ. ಎರಡು ಬಗೆಯಲ್ಲಿ ತಾಹಿನಿ ಹಲ್ವಾವನ್ನು ಮಾಡಲಾಗುತ್ತದೆ.ಅದರಲ್ಲಿ ಒಂದು ಸೂರ್ಯಕಾಂತಿ ಬೀಜವನ್ನು ಬಳಸಿ ಮಾಡಲಾಗುತ್ತದೆ ಮತ್ತು ಇನ್ನೊಂದು ಬಗೆಯೆಂದರೆ ಎಳ್ಳಿನ ಬೀಜವನ್ನು ಬಳಸಿ ಮಾಡಲಾಗುತ್ತದೆ. ಸಾಂಪ್ರದಾಯಿಕವಾಗಿ ಯಲ್ಬಾನಿಷ್ಟಾ ಮತ್ತು ಹಾಸ್ಕೋವೊಗಳು ಹಲ್ವಾಗಳಿಗೆ ಪ್ರಸಿದ್ಧ ಸ್ಥಳಗಳಾಗಿವೆ. ಸೆಮೊಲಿನಾ ಹಲ್ವಾ (грис халва)ಗಳನ್ನು ಮನೆಗಳಲ್ಲಿ ಮಾಡಲಾಗುತ್ತದೆ ಮತ್ತು ಇವುಗಳನ್ನು ಹಿಟ್ಟಿನಿಂದ ಮಾಡಿದ ತಿಂಡಿಗಳನ್ನು ಮಾರುವ ಅಂಗಡಿಗಳಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ. ಮೂರನೇ ವಿಧವಾದ ಬಿಳಿಯ ಹಲ್ವಾ(бяла халва)ವನ್ನು ಸಕ್ಕರೆಯಿಂದ ಮಾಡಲಾಗುತ್ತದೆ. ಲೆಂಟ್‌ ಕಾಲ(Sirni Zagovezni; Сирни заговезни)ದಲ್ಲಿನ ಕೊನೆಯ ರವಿವಾರದಂದು ಎಲ್ಲ ಹುಡುಗರು ಸುತ್ತಾಗಿ ನಿಂತು ಕೊಳ್ಳುತ್ತಾರೆ. ಮತ್ತು ಸುತ್ತುತ್ತಿರುವ ಹಲ್ವಾವನ್ನು ತಮ್ಮ ಬಾಯಿಯಿಂದ ಅವರು ಹಿಡಿಯಬೇಕು ಇದು ಈ ಆಡದ ನಿಯಮವಾಗಿದ್ದು,ಈ ಆಟದಿಂದ ಬಿಳಿಯ ಹಲ್ವಾವು ತುಂಬ ಪ್ರಸಿದ್ಧವಾಗಿದೆ.
"https://kn.wikipedia.org/wiki/ಹಲ್ವಾ" ಇಂದ ಪಡೆಯಲ್ಪಟ್ಟಿದೆ