ದ್ವಿಧ್ರುವಿ ಅಸ್ವಸ್ಥತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನ ವಿಸ್ತರಣೆಯ ಹಂತದಲ್ಲಿದೆ
No edit summary
೨ ನೇ ಸಾಲು:
 
== ಅಸ್ವಸ್ಥತೆಯ ವಿಧಗಳು ==
ಮೂಲಭೂತವಾಗಿ ದ್ವಿಧ್ರುವಿ ಅಸ್ವಸ್ಥತೆಯಲ್ಲಿ ನಾಲ್ಕು ವಿಧಗಳಿವೆ<ref name=":0">https://kannada.whiteswanfoundation.org/disorders/bipolar-disorder</ref>:
 
# ದ್ವಿಧ್ರುವಿ ಅಸ್ವಸ್ಥತೆ I : ಕನಿಷ್ಠ ಏಳು ದಿನಗಳ ಕಾಲ ಮುಂದುವರೆಯಬಹುದಾದ ಉನ್ಮಾದ ಅಥವಾ ಖಿನ್ನತೆಗಳ ಸಮ್ಮಿಶ್ರ ಸರಣಿಗಳು. ಉನ್ಮಾದದ ಲಕ್ಷಣಗಳು ತೀವ್ರಗೊಂಡರೆ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಬೇಕಾಗುತ್ತದೆ. ಅದೇ ರೀತಿ ಸರಣಿಯಲ್ಲಿ ಸಂಭವಿಸುವ ಖಿನ್ನತೆಯ ಲಕ್ಷಣಗಳು ಕೂಡ ಕನಿಷ್ಠ ಎರಡು ವಾರಗಳ ಕಾಲ ಮುಂದುವರೆಯಬಹುದು.<ref name="Christie88">{{cite journal |vauthors=Christie KA, Burke JD, Regier DA, Rae DS, Boyd JH, Locke BZ | title = Epidemiologic evidence for early onset of mental disorders and higher risk of drug abuse in young adults | journal = The American Journal of Psychiatry | volume = 145 | issue = 8 | pages = 971–975 | year = 1988 | pmid = 3394882 | doi=10.1176/ajp.145.8.971}}</ref>{{sfn|Goodwin|Jamison|2007|p=1945}}
# ದ್ವಿಧ್ರುವಿ ಅಸ್ವಸ್ಥತೆ II : ಈ ಹಂತದಲ್ಲಿ ಖಿನ್ನತೆ ಮತ್ತು ಲಘು ಉನ್ಮಾದಗಳು ಒಟ್ಟಾಗಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಆದರೆ ಪ್ರಬಲ ಉನ್ಮಾದದ ಲಕ್ಷಣ ಅಥವಾ ಖಿನ್ನತೆ ಇವೆರಡೂ ಜಂಟಿಯಾಗಿ ಸರಣಿರೂಪದಲ್ಲಿ ಕಂಡು ಬರುವುದಿಲ್ಲ.
# ಉಳಿದಂತೆ ನಿರ್ದಿಷ್ಟಪಡಿಸಿರದ ದ್ವಿಧ್ರುವಿ ಅಸ್ವಸ್ಥತೆ :  ರೋಗದ ಲಕ್ಷಣಗಳು ಇದ್ದಾಗ ರೋಗವನ್ನು ಪತ್ತೆ ಮಾಡಲಾಗುತ್ತದೆ. ಆದರೆ ಈ ಲಕ್ಷಣಗಳು ದ್ವಿಧ್ರುವಿ ಅಸ್ವಸ್ಥತೆ I ಅಥವಾ ದ್ವಿಧ್ರುವಿ ಅಸ್ವಸ್ಥತೆ II ರ ಗುಣಲಕ್ಷಣಗಳಿಗೆ ಸರಿಹೊಂದಿರುವುದಿಲ್ಲ. ಆದಾಗ್ಯೂ, ಈ ಲಕ್ಷಣಗಳು ವ್ಯಕ್ತಿಗಳ ಸಾಮಾನ್ಯ ವರ್ತನೆಗಿಂತಲೂ ಹೊರತಾಗಿರುತ್ತವೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತವೆ.
೧೧ ನೇ ಸಾಲು:
== ಲಕ್ಷಣಗಳು ==
ಈ ಅಸ್ವಸ್ಥತೆಯು ಕೆಲವು ದಿನ ಅಥವಾ ಬಹಳ ವಾರಗಳ ಕಾಲ ಕಾಣಿಸಿಕೊಳ್ಳಬಹುದು. ವ್ಯಕ್ತಿಯು ವಿಭಿನ್ನ ರೀತಿಗಳಲ್ಲಿ ಮತ್ತು ಸರಣಿ ರೂಪದಲ್ಲಿ ಕಾಣಿಸಿಕೊಳ್ಳಬಹುದಾದ ಉನ್ಮಾದ ಮತ್ತು ಖಿನ್ನತೆಯನ್ನು ಅನುಭವಿಸಬಹುದು ಹಾಗೂ ಒಂದು ಬಗೆಯ ತೊಂದರೆ ಹೀಗೆಯೇ ಬಾಧಿಸುತ್ತದೆ ಎಂದು ನಿಖರವಾಗಿ ಹೇಳಲಾಗದು. ವಾರದವೊಂದರಲ್ಲಿ ಅನೇಕ ಬಾರಿಯೂ ಈ ತೊಂದರೆಯು ಪುನರಾವರ್ತಿಸಬಹುದು<ref>Post RM, Kalivas P (March 2013). "Bipolar disorder and substance misuse: pathological and therapeutic implications of their comorbidity and cross-sensitisation". ''Br J Psychiatry''. '''202''' (3): 172–176. doi:10.1192/bjp.bp.112.116855. PMC 4340700. <nowiki>PMID 23457180</nowiki>.</ref>.ತೀವ್ರ ಸ್ವರೂಪದ ದ್ವಿಧ್ರುವಿ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳಲ್ಲಿ ಭ್ರಮೆ ಅಥವಾ ಭ್ರಾಂತಿ ಮತ್ತು ತನಗೇ ತಾನೇ ಹಾನಿ ಮಾಡಿಕೊಳ್ಳುವ ಅಥವಾ ಆತ್ಮಹತ್ಯೆಯ ಆಲೋಚನೆಗಳಂತಹ ಮನೋವಿಕೃತ ಲಕ್ಷಣಗಳು ಕಂಡುಬರಬಹುದು. ಈ ಅಸ್ವಸ್ಥತೆಯಿಂದಾಗಿ ವ್ಯಕ್ತಿಗಳಲ್ಲಿ ದೈನಂದಿನ ಕೆಲಸಗಳನ್ನು ನಿರ್ವಹಿಸುವ ಸ್ವಾಭಾವಿಕ ಸಾಮರ್ಥ್ಯ ಕುಂಠಿತಗೊಳ್ಳಬಹುದು. ಅಲ್ಲದೇ, ವೃತ್ತಿಪರ ಹಾಗೂ ವೈಯಕ್ತಿಕ ಸಂಬಂಧಗಳ ಮೇಲೆ ಕೂಡ ದುಷ್ಪರಿಣಾಮ ಬೀರಬಹುದು.
ದ್ವಿಧ್ರುವಿ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಎರಡು ರೀತಿಯ ಗುಣ ಲಕ್ಷಣಗಳನ್ನು ಉನ್ಮಾದ ಮತ್ತು ಖಿನ್ನತೆಯ ಹಂತಗಳಲ್ಲಿ ತೋರ್ಪಡಿಸುತ್ತಾರೆ<ref name="Christie88">{{cite journal |vauthors=Christie KA, Burke JD, Regier DA, Rae DS, Boyd JH, Locke BZ | title = Epidemiologic evidence for early onset of mental disorders and higher risk of drug abuse in young adults | journal = The American Journal of Psychiatry | volume = 145 | issue = 8 | pages = 971–975 | year = 1988 | pmid = 3394882 | doi=10.1176/ajp.145.8.971}}</ref>{{sfn|Goodwin|Jamison|2007|p=1945}}.
 
'''ಉನ್ಮಾದದ ಹಂತ:''' ಉನ್ಮಾದದ ಅವಧಿಯಲ್ಲಿ ವ್ಯಕ್ತಿಗಳು ಆವೇಶದಿಂದ ವರ್ತಿಸುತ್ತಾರೆ ಮತ್ತು ಪರಿಸ್ಥಿತಿಯನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳದೆ ಥಟ್ಟನೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಹಾಗೂ ಅನಗತ್ಯ ಅಪಾಯಕ್ಕೆ ಗುರಿಯಾಗುತ್ತಾರೆ. ಅಲ್ಲದೇ ಈ ಸಂದರ್ಭಗಳಲ್ಲಿ, ವ್ಯಕ್ತಿಗಳು ತಮ್ಮ ಅನಿರೀಕ್ಷಿತ ವರ್ತನೆಯಿಂದಾಗುವ ಋಣಾತ್ಮಕ ಪರಿಣಾಮಗಳನ್ನು ಅಲಕ್ಷಿಸಬಹುದು ಅಥವಾ ಅವುಗಳ ಕುರಿತು ತಿಳಿಯದೇ ಇರಬಹುದು.
೪೧ ನೇ ಸಾಲು:
 
== ಕಾರಣಗಳು ==
ದ್ವಿಧ್ರುವಿ ಅಸ್ವಸ್ಥತೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಸಾಮಾನ್ಯವಾಗಿ ಈ ಖಾಯಿಲೆ ಹದಿಹರೆಯದಲ್ಲಿ ಅಥವಾ ಪ್ರೌಢಾವಸ್ಥೆಯಲ್ಲಿ ಆರಂಭವಾಗುತ್ತದೆ ಎಂದು ಗುರುತಿಸಲಾಗಿದೆ. ಈ ಖಾಯಿಲೆಯ ಕುರಿತಾಗಿ ಹೆಚ್ಚಿನ ಜನರಿಗೆ ಸರಿಯಾದ ತಿಳುವಳಿಕೆ ಇಲ್ಲದ ಕಾರಣದಿಂದ ತಜ್ಞರ ಸಹಾಯವನ್ನು ಪಡೆಯುವದಕ್ಕೂ ಮುನ್ನ ದೀರ್ಘಕಾಲ ದ್ವಿಧ್ರುವಿ ಅಸ್ವಸ್ಥತೆಯಿಂದಾಗಿ ಯಾತನೆ ಅನುಭವಿಸುತ್ತಾರೆ.ಸಾಮಾನ್ಯವಾಗಿ ಹಾರ್ಮೋನುಗಳ ಅಸಮತೋಲನ, ವಂಶವಾಹಿ ತೊಂದರೆಗಳು, ದುಃಖಕಾರಕ ಸಂಗತಿಗಳಿಂದ ಉಂಟಾಗುವ ತೀವ್ರ ಆಘಾತ, ಡ್ರಗ್ಸ ಅಥವಾ ಮಾದಕದ್ರವ್ಯ ವ್ಯಸನಕ್ಕೆ ಒಳಗಾಗುವುದು, ಮುಂತಾದ ಅಂಶಗಳು ದ್ವಿಧ್ರುವಿ ಅಸ್ವಸ್ಥತೆಗೆ ಕಾರಣವಾಗಬಹುದು. ತೀವ್ರವಾದ ಬುದ್ಧಿವಿಕಲ್ಪ ಅಥವಾ ಸ್ಕಿಜ಼ೋಫ್ರೇನಿಯ ಮುಂತಾದ ಮನೋವ್ಯಾಧಿಗಳೊಂದಿಗೆ ಕೂಡ ಈ ಅಸ್ವಸ್ಥತೆ‌ ಕಾಣಿಸಿಕೊಳ್ಳಬಹುದು.<ref>https://www.sciencedirect.com/science/article/abs/pii/S0165032712007306?via%3Dihub</ref>
 
== ಚಿಕಿತ್ಸಾ ವಿಧಾನ ==
ದ್ವಿಧ್ರುವಿ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯದ ಸಾಧ್ಯತೆ ಹೆಚ್ಚು. ಆದ್ದರಿಂದ ಪ್ರಾರಂಭದ ಹಂತದಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವುದು ಅತಿ ಅವಶ್ಯಕ.ಹೃದಯ ತೊಂದರೆ ಅಥವಾ ಮಧುಮೇಹದ ತೊಂದರೆಗಳಂತೆ ಈ ಅಸ್ವಸ್ಥತೆ‌ ಕೂಡ ಒಂದು ದೀರ್ಘಕಾಲೀನ ಖಾಯಿಲೆಯಾಗಿದ್ದು ಜೀವನ ಪರ್ಯಂತ ಇದನ್ನು ನಿರ್ವಹಿಸಿ ನಿಯಂತ್ರಣಕ್ಕೊಳಪಡಿಸುವ ಅವಶ್ಯಕತೆಯಿದೆ. ಸೂಕ್ತ ರೋಗ ನಿರ್ಣಯ ಮತ್ತು ಚಿಕಿತ್ಸೆಯಿಂದ ವ್ಯಕ್ತಿಗಳು ಉತ್ತಮವಾದ ಮತ್ತು ಆರೋಗ್ಯಯುತ ಜೀವನ ನಡೆಸಬಹುದು. ಚಿಕಿತ್ಸೆಯು ರೋಗ ಲಕ್ಷಣಗಳ ತೀವ್ರತೆ ಮತ್ತು ಮರುಕಳಿಸುವಿಕೆಯನ್ನು ಕಡಿಮೆ ಮಾಡುತ್ತದೆ<ref>Titmarsh S (May–June 2013). "Characteristics and duration of mania: implications for continuation treatment". ''Progress in Neurology and Psychiatry''. '''17''' (3): 26–27. doi:10.1002/pnp.283.</ref>.
 
ಔಷಧ, ಥೆರಪಿ (ಕಾಗ್ನಿಟಿವ್ ಬಿಹೇವಿಯರ್ ಥೆರಪಿ) ಮತ್ತು ಸಲಹೆಗಳ ಸಂಯೋಜನೆಯ ಚಿಕಿತ್ಸಾವಿಧಾನವು ದ್ವಿಧ್ರುವಿ ಅಸ್ವಸ್ಥತೆಗೆ ಪರಿಣಾಮಕಾರಿಯಾದ ನಿಯಂತ್ರಣ ವಿಧಾನವಾಗಿದೆ. ವ್ಯಕ್ತಿಗಳ ವಯಸ್ಸು, ವೈದ್ಯಕೀಯ ವರದಿ, ಅಸ್ವಸ್ಥತೆಯ ತೀವ್ರತೆ ಅಥವಾ ವ್ಯಕ್ತಿಗಳು ಔಷಧಗಳನ್ನು ಸಹಿಸಿಕೊಳ್ಳುವ ಅಂಶಗಳ ಆಧಾರದ ಮೇಲೆ ವಿವಿಧ ರೀತಿಯ ಚಿಕಿತ್ಸಾ ವಿಧಾನಗಳನ್ನು ನಿರ್ದಿಷ್ಟ ಪಡಿಸಲಾಗುತ್ತದೆ.ಚಿಕಿತ್ಸೆಯನ್ನು ಪಡೆಯದೇ ಇರುವುದು ಅಥವಾ ಪಡೆಯುತ್ತಿರುವ ಚಿಕಿತ್ಸೆ ಹಾಗೂ ಔಷಧವನ್ನು ಅರ್ಧಕ್ಕೆ ನಿಲ್ಲಿಸಿದರೆ, ಖಾಯಿಲೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಜೊತೆಗೆ ರೋಗ ಮರುಕಳಿಸುವ ಸಾಧ್ಯತೆಯು ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಅನಿರೀಕ್ಷಿತವಾಗಿ ರೋಗ ಲಕ್ಷಣಗಳು ಮತ್ತೆ ಕಾಣಿಸಿಕೊಳ್ಳಬಹುದು. ಇದು ವ್ಯಕ್ತಿಗಳಿಗೆ ತಿಳಿಯದೆ ಇರಬಹುದು ಅಥವಾ ನಿಯಂತ್ರಣ ಸಾಧ್ಯವಾಗದೇ ಇರಬಹುದು<ref>https://pubmed.ncbi.nlm.nih.gov/18606036/</ref>.
 
ದ್ವಿಧ್ರುವಿ ಅಸ್ವಸ್ಥತೆ ಜೀವನದ ಎಲ್ಲ ಅಂಶಗಳ ಮೇಲೆಯೂ ಪರಿಣಾಮ ಬೀರಬಹುದು. ಆದ್ದರಿಂದ ಈ ಅಸ್ವಸ್ಥತೆ ಇದೆ ಎನ್ನುವ ವಾಸ್ತವ ಅಂಶವನ್ನು ಒಪ್ಪಿಕೊಂಡು, ಇದರ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳುವುದರಿಂದ ಸಮಸ್ಯೆಯನ್ನು ಸುಲಭವಾಗಿ ನಿರ್ವಹಣೆ ಮಾಡಲು ಸಹಾಯವಾಗುತ್ತದೆ.
 
== ಆರೈಕೆದಾರರ ಮೇಲೆ ಪರಿಣಾಮ ==
ಆರೈಕೆದಾರರು ಕೂಡ ಹೆಚ್ಚಿನ ಒತ್ತಡ ಹಾಗೂ ಭಾವನಾತ್ಮಕ ತೊಂದರೆಗಳಿಗೆ ಒಳಗಾಗುತ್ತಾರೆ. ಬಹುತೇಕವಾಗಿ ಮಹಿಳಾ ಆರೈಕೆದಾರರು ಪುರುಷರಿಗಿಂತಲೂ ಹೆಚ್ಚು ಒತ್ತಡ, ದಣಿವು ಮತ್ತು ತಲ್ಲಣಗಳನ್ನು ಅನುಭವಿಸುತ್ತಾರೆ. ಈ ಕಾರಣಗಳಿಗಾಗಿ ಅವರಲ್ಲಿ ಖಿನ್ನತೆಯುಂಟಾಗುವ ಅಪಾಯವಿದೆ. ಆರೈಕೆದಾರರು ಅವರ ಪ್ರೀತಿಪಾತ್ರರ ಆರೈಕೆಗೆ ಎಷ್ಟು ಕಾಳಜಿ ವಹಿಸುತ್ತಾರೆಂದರೆ ಅವರ ಸ್ವಂತ ಜೀವನದ ಬಗ್ಗೆ ಲಕ್ಷ್ಯ ವಹಿಸುವುದನ್ನೂ ಮರೆತುಬಿಡುತ್ತಾರೆ. ಆದ್ದರಿಂದ ಆರೈಕೆದಾರರು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕುರಿತಾಗಿ ಕಾಳಜಿ ತೆಗೆದುಕೊಳ್ಳುವುದು ಅತಿ ಅವಶ್ಯ<ref name=":0" />.
 
== ಉಲ್ಲೇಖಗಳು ==