ದ್ವಿಧ್ರುವಿ ಅಸ್ವಸ್ಥತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ
ಲೇಖನ ವಿಸ್ತರಣೆಯ ಹಂತದಲ್ಲಿದೆ
೧ ನೇ ಸಾಲು:
'''ದ್ವಿಧ್ರುವಿ ಅಸ್ವಸ್ಥತೆ''', (ಬೈಪೋಲಾರ್ ಡಿಸಾರ್ಡರ್ ಅಥವಾ ಮ್ಯಾನಿಕ್ ಡಿಪ್ರೆಶನ್ ಎಂದು ಕೂಡ ಹೇಳಲಾಗುತ್ತದೆ) ಎನ್ನುವುದು ಅಸ್ವಾಭಾವಿಕವಾದ ಮತ್ತು ತೀವ್ರ ಸ್ವರೂಪದ ಚಿತ್ತ ಚಾಂಚಲ್ಯವನ್ನುಂಟುಮಾಡುವ ಗಂಭೀರ ಮಾನಸಿಕ ಅಸ್ವಸ್ಥತೆ. ವ್ಯಕ್ತಿಯು ‘ಗರಿಷ್ಠ’ (ವೈದ್ಯಕೀಯ ಭಾಷೆಯಲ್ಲಿ ಉನ್ಮಾದ ಎನ್ನುತ್ತಾರೆ) ಮತ್ತು ‘ಕನಿಷ್ಠ’ (ಖಿನ್ನತೆ ಎಂದು ತಿಳಿಯಲಾಗುತ್ತದೆ) ಎಂಬ ಎರಡು ಪ್ರಮಾಣದಲ್ಲಿ ಈ ತೊಂದರೆಯನ್ನು ಅನುಭವಿಸಬಹುದು. ಇದು ಹೃದಯ ತೊಂದರೆ ಅಥವಾ ಮಧುಮೇಹದಂತೆಯೇ ದೀರ್ಘ ಸಮಯ ಕಾಡುವ ಮಾನಸಿಕ ಅಸ್ವಸ್ಥತೆ. ಜೀವನಪೂರ್ತಿ ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕಾದ ಅವಶ್ಯಕತೆಯಿರುತ್ತದೆ.
 
== ಅಸ್ವಸ್ಥತೆಯ ವಿಧಗಳು ==
ಮೂಲಭೂತವಾಗಿ ಬೈಪೋಲಾರ್ ಡಿಸಾರ್ಡರಿನಲ್ಲಿ ನಾಲ್ಕು ವಿಧಗಳಿವೆ:
 
# ದ್ವಿಧ್ರುವಿ ಅಸ್ವಸ್ಥತೆ I : ಕನಿಷ್ಠ ಏಳು ದಿನಗಳ ಕಾಲ ಮುಂದುವರೆಯಬಹುದಾದ ಉನ್ಮಾದ ಅಥವಾ ಖಿನ್ನತೆಗಳ ಸಮ್ಮಿಶ್ರ ಸರಣಿಗಳು. ಉನ್ಮಾದದ ಲಕ್ಷಣಗಳು ತೀವ್ರಗೊಂಡರೆ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಬೇಕಾಗುತ್ತದೆ. ಅದೇ ರೀತಿ ಸರಣಿಯಲ್ಲಿ ಸಂಭವಿಸುವ ಖಿನ್ನತೆಯ ಲಕ್ಷಣಗಳು ಕೂಡ ಕನಿಷ್ಠ ಎರಡು ವಾರಗಳ ಕಾಲ ಮುಂದುವರೆಯಬಹುದು.
# ದ್ವಿಧ್ರುವಿ ಅಸ್ವಸ್ಥತೆ II : ಈ ಹಂತದಲ್ಲಿ ಖಿನ್ನತೆ ಮತ್ತು ಲಘು ಉನ್ಮಾದಗಳು ಒಟ್ಟಾಗಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಆದರೆ ಪ್ರಬಲ ಉನ್ಮಾದದ ಲಕ್ಷಣ ಅಥವಾ ಖಿನ್ನತೆ ಇವೆರಡೂ ಜಂಟಿಯಾಗಿ ಸರಣಿರೂಪದಲ್ಲಿ ಕಂಡು ಬರುವುದಿಲ್ಲ.
# ಉಳಿದಂತೆ ನಿರ್ದಿಷ್ಟಪಡಿಸಿರದ ದ್ವಿಧ್ರುವಿ ಅಸ್ವಸ್ಥತೆ :  ರೋಗದ ಲಕ್ಷಣಗಳು ಇದ್ದಾಗ ರೋಗವನ್ನು ಪತ್ತೆ ಮಾಡಲಾಗುತ್ತದೆ. ಆದರೆ ಈ ಲಕ್ಷಣಗಳು ದ್ವಿಧ್ರುವಿ ಅಸ್ವಸ್ಥತೆ I ಅಥವಾ ದ್ವಿಧ್ರುವಿ ಅಸ್ವಸ್ಥತೆ II ರ ಗುಣಲಕ್ಷಣಗಳಿಗೆ ಸರಿಹೊಂದಿರುವುದಿಲ್ಲ. ಆದಾಗ್ಯೂ, ಈ ಲಕ್ಷಣಗಳು ವ್ಯಕ್ತಿಗಳ ಸಾಮಾನ್ಯ ವರ್ತನೆಗಿಂತಲೂ ಹೊರತಾಗಿರುತ್ತವೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತವೆ.
# ಸೈಕ್ಲೋಥಿಮಿಕ್ ಮನೋರೋಗ ಅಥವಾ ಸೈಕ್ಲೋಥಿಮಿಯಾ: ಕನಿಷ್ಟ ಎರಡು ವರ್ಷಗಳಿಂದ ವ್ಯಕ್ತಿಯಲ್ಲಿ ಇದ್ದಿರಬಹುದಾದ ಲಘು ಉನ್ಮಾದ ಮತ್ತು ಸ್ವಲ್ಪ ಮಟ್ಟಿನ ಖಿನ್ನತೆಗಳಿಂದ ಕೂಡಿದ ದ್ವಿಧ್ರುವಿ ಅಸ್ವಸ್ಥತೆಯ ಲಘುಸ್ವರೂಪವೇ ಸೈಕ್ಲೋಥಿಮಿಕ್ ಡಿಸಾರ್ಡರ್ ಅಥವಾ ಸೈಕ್ಲೋಥಿಮಿಯಾ ಖಾಯಿಲೆ.
 
== ಲಕ್ಷಣಗಳು ==
ಈ ಅಸ್ವಸ್ಥತೆಯು ಕೆಲವು ದಿನ ಅಥವಾ ಬಹಳ ವಾರಗಳ ಕಾಲ ಕಾಣಿಸಿಕೊಳ್ಳಬಹುದು. ವ್ಯಕ್ತಿಯು ವಿಭಿನ್ನ ರೀತಿಗಳಲ್ಲಿ ಮತ್ತು ಸರಣಿ ರೂಪದಲ್ಲಿ ಕಾಣಿಸಿಕೊಳ್ಳಬಹುದಾದ ಉನ್ಮಾದ ಮತ್ತು ಖಿನ್ನತೆಯನ್ನು ಅನುಭವಿಸಬಹುದು ಹಾಗೂ ಒಂದು ಬಗೆಯ ತೊಂದರೆ ಹೀಗೆಯೇ ಬಾಧಿಸುತ್ತದೆ ಎಂದು ನಿಖರವಾಗಿ ಹೇಳಲಾಗದು. ವಾರದವೊಂದರಲ್ಲಿ ಅನೇಕ ಬಾರಿಯೂ ಈ ತೊಂದರೆಯು ಪುನರಾವರ್ತಿಸಬಹುದು.ತೀವ್ರ ಸ್ವರೂಪದ ದ್ವಿಧ್ರುವಿ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳಲ್ಲಿ ಭ್ರಮೆ ಅಥವಾ ಭ್ರಾಂತಿ ಮತ್ತು ತನಗೇ ತಾನೇ ಹಾನಿ ಮಾಡಿಕೊಳ್ಳುವ ಅಥವಾ ಆತ್ಮಹತ್ಯೆಯ ಆಲೋಚನೆಗಳಂತಹ ಮನೋವಿಕೃತ ಲಕ್ಷಣಗಳು ಕಂಡುಬರಬಹುದು. ಈ ಅಸ್ವಸ್ಥತೆಯಿಂದಾಗಿ ವ್ಯಕ್ತಿಗಳಲ್ಲಿ ದೈನಂದಿನ ಕೆಲಸಗಳನ್ನು ನಿರ್ವಹಿಸುವ ಸ್ವಾಭಾವಿಕ ಸಾಮರ್ಥ್ಯ ಕುಂಠಿತಗೊಳ್ಳಬಹುದು. ಅಲ್ಲದೇ, ವೃತ್ತಿಪರ ಹಾಗೂ ವೈಯಕ್ತಿಕ ಸಂಬಂಧಗಳ ಮೇಲೆ ಕೂಡ ದುಷ್ಪರಿಣಾಮ ಬೀರಬಹುದು.
ದ್ವಿಧ್ರುವಿ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಎರಡು ರೀತಿಯ ಗುಣ ಲಕ್ಷಣಗಳನ್ನು ಉನ್ಮಾದ ಮತ್ತು ಖಿನ್ನತೆಯ ಹಂತಗಳಲ್ಲಿ ತೋರ್ಪಡಿಸುತ್ತಾರೆ.
 
'''ಉನ್ಮಾದದ ಹಂತ:''' ಉನ್ಮಾದದ ಅವಧಿಯಲ್ಲಿ ವ್ಯಕ್ತಿಗಳು ಆವೇಶದಿಂದ ವರ್ತಿಸುತ್ತಾರೆ ಮತ್ತು ಪರಿಸ್ಥಿತಿಯನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳದೆ ಥಟ್ಟನೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಹಾಗೂ ಅನಗತ್ಯ ಅಪಾಯಕ್ಕೆ ಗುರಿಯಾಗುತ್ತಾರೆ. ಅಲ್ಲದೇ ಈ ಸಂದರ್ಭಗಳಲ್ಲಿ, ವ್ಯಕ್ತಿಗಳು ತಮ್ಮ ಅನಿರೀಕ್ಷಿತ ವರ್ತನೆಯಿಂದಾಗುವ ಋಣಾತ್ಮಕ ಪರಿಣಾಮಗಳನ್ನು ಅಲಕ್ಷಿಸಬಹುದು ಅಥವಾ ಅವುಗಳ ಕುರಿತು ತಿಳಿಯದೇ ಇರಬಹುದು.
 
* ಕೆಟ್ಟ ಸುದ್ದಿ ಅಥವಾ ದುಃಖದ ವಿಷಯ ಇತ್ಯಾದಿಯಾಗಿ ಯಾವದೂ ಕೂಡ ಪರಿಣಾಮ ಬೀರದಷ್ಟು ಮಟ್ಟಿಗಿನ ಆನಂದೋದ್ರೇಕದ ಭಾವನೆ.
ತೀವ್ರ ಸ್ವರೂಪದ ಬೈಪೋಲಾರ್ ಡಿಸಾರ್ಡರ್ ಹೊಂದಿರುವ ವ್ಯಕ್ತಿಗಳಲ್ಲಿ ಭ್ರಮೆ ಅಥವಾ ಭ್ರಾಂತಿ ಮತ್ತು ತನಗೇ ತಾನೇ ಹಾನಿ ಮಾಡಿಕೊಳ್ಳುವ ಅಥವಾ ಆತ್ಮಹತ್ಯೆಯ ಆಲೋಚನೆಗಳಂತಹ ಮನೋವಿಕೃತ ಲಕ್ಷಣಗಳು ಕಂಡುಬರಬಹುದು. ಬೈಪೋಲಾರ್ ಡಿಸಾರ್ಡರ್ ನಿಂದಾಗಿ ವ್ಯಕ್ತಿಗಳಲ್ಲಿ ದೈನಂದಿನ ಕೆಲಸಗಳನ್ನು ನಿರ್ವಹಿಸುವ ಸ್ವಾಭಾವಿಕ ಸಾಮರ್ಥ್ಯ ಕುಂಠಿತಗೊಳ್ಳಬಹುದು. ಅಲ್ಲದೇ, ವೃತ್ತಿಪರ ಹಾಗೂ ವೈಯಕ್ತಿಕ ಸಂಬಂಧಗಳ ಮೇಲೆ ಕೂಡ ದುಷ್ಪರಿಣಾಮ ಬೀರಬಹುದು.
* ಕ್ಷಣಮಾತ್ರದಲ್ಲಿ ಕ್ರೋಧಗೊಳ್ಳುವುದು ಅಥವಾ ಅತೀವ ಕಿರಿಕಿರಿಗೊಳಗಾವುದು.
* ಅತಿ ಮಹತ್ವಾಕಾಂಕ್ಷೆಯ ಭ್ರಮೆಗೊಳಗಾಗಬಹುದು ಅಥವಾ ತರ್ಕಕ್ಕೆ ನಿಲುಕದ ವಿಷಯಗಳಲ್ಲಿ ಅತಿಯಾದ ನಂಬಿಕೆಯನ್ನು ಇರಿಸಿಕೊಳ್ಳಬಹುದು. ದೇವರೊಂದಿಗೆ, ಗಣ್ಯ ವ್ಯಕ್ತಿಗಳೊಂದಿಗೆ ಅಥವಾ ಐತಿಹಾಸಿಕ ವ್ಯಕ್ತಿಗಳೊಂದಿಗೆ ತನಗೆ ವಿಶೇಷ ಸಂಪರ್ಕವಿದೆ ಎಂದು ವ್ಯಕ್ತಿ ಹೇಳಿಕೊಳ್ಳಬಹುದು..
* ತಮ್ಮ ಸಾಮರ್ಥ್ಯದ ಕುರಿತಾಗಿ ಅಸಹಜ ನಂಬಿಕೆಗಳನ್ನು ಹೊಂದಿರುವುದು. ಉದಾಹರಣೆಗೆ, ತಮ್ಮಿಂದ ಅಸಾಧ್ಯದ ಕಾರ್ಯ ಯಾವುದೂ ಇಲ್ಲ. ಯಾವುದೇ ರೀತಿಯ, ಅತ್ಯಂತ ಕಠಿಣವಾದ ಕೆಲಸಗಳನ್ನು ಕೂಡ ಪೂರೈಸುವಲ್ಲಿ ತಮ್ಮನ್ನು ಯಾವುದೂ ತಡೆಯಲಾರದು ಎಂಬ ವಿಚಾರವನ್ನು ಇಂತಹ ವ್ಯಕ್ತಿಗಳು ಮಾಡಬಹುದು.
* ಭಾವಾವೇಶಗಳನ್ನು ನಿಯಂತ್ರಿಸಲು ಆಗದೇ ಇರುವುದು ಮತ್ತು ಅನವಶ್ಯಕ ವಿಷಯಗಳ ಕುರಿತು ದುಂದುಗಾರಿಕೆ ಅಥವಾ ಆಡಂಬರವನ್ನು ಪ್ರದರ್ಶಿಸುವುದು, ಮೂರ್ಖತನದಿಂದ ವ್ಯಾಪಾರದ ಮೇಲೆ ಹೂಡಿಕೆ ಮಾಡುವುದು, ಅಜಾಗರೂಕತೆಯ ವಾಹನ ಚಾಲನೆ ಅಥವಾ ಅಸ್ವಾಭಾವಿಕ ಲೈಂಗಿಕ ವರ್ತನೆಗಳನ್ನು ತೋರ್ಪಡಿಸುವುದು ಮುಂತಾದ ಅಪಾಯಕರ ನಡುವಳಿಕೆಗಳನ್ನು ಪ್ರದರ್ಶಿಸಬಹುದು
* ನಿಯಂತ್ರಿಸಲಾಗದ ಯೋಚನೆಗಳು ನಿರಂತರವಾಗಿ ಮನಸ್ಸಿನಲ್ಲಿ ಹರಿದಾಡುತ್ತಿರುವುದು.
* ಚಡಪಡಿಕೆ ಮತ್ತು ಅತಿಯಾದ ಚಟುವಟಿಕೆಯನ್ನು ಉಂಟುಮಾಡಬಹುದಾದ ನಿದ್ರಾಹೀನತೆ.
* ಏಕಾಗ್ರತೆಯ ಕೊರತೆಯಿಂದಾಗಿ ಸಾಮಾನ್ಯ ಚಟುವಟಿಕೆಗಳನ್ನು ಕೂಡ ಮಾಡಲಾಗದಿರುವುದು.
* ದಿನದ ಹೆಚ್ಚಿನ ಅವಧಿಯಲ್ಲಿ ಹತಾಶೆ ಹಾಗೂ ಕಿರಿಕಿರಿಯ ಭಾವನೆ ಹೊಂದಿರುವುದು.
* ಅತಿ ವೇಗವಾಗಿ ಮಾತನಾಡುವುದು, ಒಂದು ವಿಚಾರದಿಂದ ಇನ್ನೊಂದಕ್ಕೆ ಥಟ್ಟನೆ ನೆಗೆಯುವುದು, ಆಲೋಚನೆಗಳಲ್ಲಿ ಸಮನ್ವಯತೆಯ ಕೊರತೆ.
* ವಾಸ್ತವಿಕ ಪ್ರಜ್ಞೆಯನ್ನು ಕಳೆದುಕೊಳ್ಳುವುದು. ಇದು ಮನೋವಿಕೃತಿಗೆ ಕಾರಣವಾಗಬಹುದು (ಭ್ರಮೆಗಳು – ವಸ್ತುಗಳು ಅಲ್ಲಿರದಿದ್ದರೂ ನೋಡಿದಂತೆ ಭಾಸವಾಗುವುದು, ಯಾವುದೋ ಶಬ್ದ ಕೇಳಿಸಿದಂತೆ ಭ್ರಮೆಗೆ ಒಳಗಾಗುವುದು.)
* ಅತಿಯಾದ ಸ್ವಾಭಿಮಾನ ಮತ್ತು ತಮ್ಮ ಸಾಮರ್ಥ್ಯದ ಕುರಿತಾಗಿ ಅಸಹಜ ನಂಬಿಕೆಗಳನ್ನು ಇರಿಸಿಕೊಳ್ಳುವುದು.
* ವಸ್ತುಗಳನ್ನು ಮತ್ತೆ ಮತ್ತೆ ಸ್ವಚ್ಛಗೊಳಿಸುವುದು ಅಥವಾ ಜೋಡಿಸುವುದು, ಕೇಳಿದ ಸಂಗೀತವನ್ನೇ ಅನೇಕ ದಿನಗಳ ಕಾಲ ಮತ್ತೆ ಮತ್ತೆ ಆಲಿಸುವುದು, ಇತರರ ಮೇಲೆ ಅಧಿಕಾರ ಚಲಾಯಿಸುವುದು ಅಥವಾ ಅವರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗುವುದು.
 
'''ಖಿನ್ನತೆಯ ಹಂತ:''' ಖಿನ್ನತೆಯ ಹಂತದಲ್ಲಿ ವ್ಯಕ್ತಿಗಳು ಈ ಕೆಳಗಿನ ಲಕ್ಷಣಗಳನ್ನು ಅನುಭವಿಸಬಹುದು:
 
* ತೀವ್ರ ದುಃಖ ಅಥವಾ ಹತಾಶೆಯ ಭಾವನೆ
ಗಮನಿಸಿ: ಹೃದಯ ತೊಂದರೆ ಅಥವಾ ಮಧುಮೇಹದಂತೆಯೇ ಬೈಪೋಲಾರ್ ಡಿಸಾರ್ಡರ್ ಕೂಡ ದೀರ್ಘ ಸಮಯ ಕಾಡುವ ಮಾನಸಿಕ ಅಸ್ವಸ್ಥತೆ. ಜೀವನಪೂರ್ತಿ ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕಾದ ಅವಶ್ಯಕತೆಯಿದೆ.
* ನಿರಾಶಾವಾದದ ಭಾವನೆ
* ಈ ಮೊದಲು ಇಷ್ಟಪಡುತ್ತಿದ್ದ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು
* ಅಶಕ್ತತೆ, ಬೇಗನೇ ಆಯಾಸಗೊಳ್ಳುವುದು ಮತ್ತು ಆಲಸ್ಯಭಾವನೆ
* ನಿದ್ರೆಯ ತೊಂದರೆಗಳು; ಅತಿಯಾಗಿ ನಿದ್ರಿಸುವುದು ಅಥವಾ ನಿದ್ರೆಯನ್ನೇ ಮಾಡದಿರುವುದು
* ಬದಲಾದ ಬಾಯಿರುಚಿ, ಸರಿಯಾಗಿ ತಿನ್ನಲು ಸಾಧ್ಯವಾಗದಿರುವುದು, ಪಥ್ಯ ಮಾಡದಿದ್ದರೂ ಗಣನೀಯವಾಗಿ ತೂಕ ಕಡಿಮೆಯಾಗುವುದು
* ಏಕಾಗ್ರತೆಯ ಭಂಗ, ಯಾವುದಾದರೊಂದು ಸಂಗತಿಯನ್ನು ನೆನಪಿಸಿಕೊಳ್ಳಲು ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗುವುದು.
* ತಮಗೇ ತಾವೇ ತೊಂದರೆ ಮಾಡಿಕೊಳ್ಳುವ, ಸಾವು ಅಥವಾ ಆತ್ಮಹತ್ಯೆಯ ಕುರಿತಾದ ಆಲೋಚನೆಗಳು