ದ್ವಿಧ್ರುವಿ ಅಸ್ವಸ್ಥತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
ಹೊಸ ಪುಟ
೧ ನೇ ಸಾಲು:
'''ದ್ವಿಧ್ರುವಿ ಅಸ್ವಸ್ಥತೆ''', (ಬೈಪೋಲಾರ್ ಡಿಸಾರ್ಡರ್ ಅಥವಾ ಮ್ಯಾನಿಕ್ ಡಿಪ್ರೆಶನ್ ಎಂದು ಕೂಡ ಹೇಳಲಾಗುತ್ತದೆ) ಎನ್ನುವುದು ಅಸ್ವಾಭಾವಿಕವಾದ ಮತ್ತು ತೀವ್ರ ಸ್ವರೂಪದ ಚಿತ್ತ ಚಾಂಚಲ್ಯವನ್ನುಂಟುಮಾಡುವ ಗಂಭೀರ ಮಾನಸಿಕ ಅಸ್ವಸ್ಥತೆ. ವ್ಯಕ್ತಿಯು ‘ಗರಿಷ್ಠ’ (ವೈದ್ಯಕೀಯ ಭಾಷೆಯಲ್ಲಿ ಉನ್ಮಾದ ಎನ್ನುತ್ತಾರೆ) ಮತ್ತು ‘ಕನಿಷ್ಠ’ (ಖಿನ್ನತೆ ಎಂದು ತಿಳಿಯಲಾಗುತ್ತದೆ) ಎಂಬ ಎರಡು ಪ್ರಮಾಣದಲ್ಲಿ ಈ ತೊಂದರೆಯನ್ನು ಅನುಭವಿಸಬಹುದು.
 
== ಲಕ್ಷಣಗಳು ==
ಈ ಅಸ್ವಸ್ಥತೆಯು ಕೆಲವು ದಿನ ಅಥವಾ ಬಹಳ ವಾರಗಳ ಕಾಲ ಕಾಣಿಸಿಕೊಳ್ಳಬಹುದು. ವ್ಯಕ್ತಿಯು ವಿಭಿನ್ನ ರೀತಿಗಳಲ್ಲಿ ಮತ್ತು ಸರಣಿ ರೂಪದಲ್ಲಿ ಕಾಣಿಸಿಕೊಳ್ಳಬಹುದಾದ ಉನ್ಮಾದ ಮತ್ತು ಖಿನ್ನತೆಯನ್ನು ಅನುಭವಿಸಬಹುದು ಹಾಗೂ ಒಂದು ಬಗೆಯ ತೊಂದರೆ ಹೀಗೆಯೇ ಬಾಧಿಸುತ್ತದೆ ಎಂದು ನಿಖರವಾಗಿ ಹೇಳಲಾಗದು. ವಾರದವೊಂದರಲ್ಲಿ ಅನೇಕ ಬಾರಿಯೂ ಈ ತೊಂದರೆಯು ಪುನರಾವರ್ತಿಸಬಹುದು.
 
 
ತೀವ್ರ ಸ್ವರೂಪದ ಬೈಪೋಲಾರ್ ಡಿಸಾರ್ಡರ್ ಹೊಂದಿರುವ ವ್ಯಕ್ತಿಗಳಲ್ಲಿ ಭ್ರಮೆ ಅಥವಾ ಭ್ರಾಂತಿ ಮತ್ತು ತನಗೇ ತಾನೇ ಹಾನಿ ಮಾಡಿಕೊಳ್ಳುವ ಅಥವಾ ಆತ್ಮಹತ್ಯೆಯ ಆಲೋಚನೆಗಳಂತಹ ಮನೋವಿಕೃತ ಲಕ್ಷಣಗಳು ಕಂಡುಬರಬಹುದು. ಬೈಪೋಲಾರ್ ಡಿಸಾರ್ಡರ್ ನಿಂದಾಗಿ ವ್ಯಕ್ತಿಗಳಲ್ಲಿ ದೈನಂದಿನ ಕೆಲಸಗಳನ್ನು ನಿರ್ವಹಿಸುವ ಸ್ವಾಭಾವಿಕ ಸಾಮರ್ಥ್ಯ ಕುಂಠಿತಗೊಳ್ಳಬಹುದು. ಅಲ್ಲದೇ, ವೃತ್ತಿಪರ ಹಾಗೂ ವೈಯಕ್ತಿಕ ಸಂಬಂಧಗಳ ಮೇಲೆ ಕೂಡ ದುಷ್ಪರಿಣಾಮ ಬೀರಬಹುದು.
 
 
ಗಮನಿಸಿ: ಹೃದಯ ತೊಂದರೆ ಅಥವಾ ಮಧುಮೇಹದಂತೆಯೇ ಬೈಪೋಲಾರ್ ಡಿಸಾರ್ಡರ್ ಕೂಡ ದೀರ್ಘ ಸಮಯ ಕಾಡುವ ಮಾನಸಿಕ ಅಸ್ವಸ್ಥತೆ. ಜೀವನಪೂರ್ತಿ ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕಾದ ಅವಶ್ಯಕತೆಯಿದೆ.