ಸದಸ್ಯ:Dr Mallikarjun B Manpade/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Sillekyata_.jpg ಹೆಸರಿನ ಫೈಲು Fitindiaರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
೧೫ ನೇ ಸಾಲು:
=== ಆರ್ಥಿಕ ಜೀವನ ===
ಅಲೆಮಾರಿಗಳಾಗಿರುವ ಇವರ ಜೀವನ ಮಟ್ಟ ಬಡತನ ರೇಖೆಗಿಂತ ಕೇಳಗಿದೆ. ಕಲೆಗಾಗಿ ಕಲೆ ಎಂದು ಬದುಕಿದ ಯಾವ ಕಲಾವಿದರ ಆರ್ಥಿಕ ಬದುಕು ಉತ್ತಮವಾಗಿರುವುದಿಲ್ಲ. ಪರೋಪ ಜೀವಿಗಳಾದ ಗೊಂಬೆರಾಮರು ತಮ್ಮ ಆಹಾರದ ಬಹುಭಾಗವನ್ನು ಅನ್ಯರಿಂದಲೆ ಪಡೆಯುವದು ರೂಡಿs. ಹೀಗಾಗಿ ಗೊಂಬೆಯಾಡಿಸುವದೊAದನ್ನು ಬಿಟ್ಟರೆ ಅವರು ತಮ್ಮ ಹೊಟ್ಟೆ ಪಾಡಿಗಾಗಿ ಇಂಥದ್ದೇ ಕಸಬನ್ನು ಆಶ್ರಯಿಸಿದ್ದು ಕಡಿಮೆ. ತೊಗಲುಗೊಂಬೆಯಾಟ, ಮೀನುಗಾರಿಕೆ, ಕರಿಕಟ್ಟುವುದು ಹಲವು ಶಿಳ್ಳೇಕ್ಯಾತರ ಆದಾಯದ ಮೂಲ ಸೆಲೆಯಾಗಿರುವಂತಹದ್ದು, ಕೆಲವರು ಬಿಡುವಿನ ವೇಳೆಯಲ್ಲಿ ಬಲೆ ಹೆಣೆದು ಮಾರಿ, ಸಂಗೀತ ವಾದ್ಯಗಳನ್ನು ರಿಪೇರಿ ಮಾಡಿ, ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಿ ಮಾರಿ, ಬಾಂಡೆ ಸಾಮಾನು ಮಾರಿ, ಇಚಲು ಚಾಪೆ ಹೆಣೆದು, ಕವದಿ ಹೊಲಿದು, ಹಚ್ಚೆ ಹಾಕಿ ಜೀವನ ನಿರ್ವಹಿಸುವರು. ಇತ್ತೀಚೆಗೆ ಕೆಲವರು ನಾಟಕ ಕಲಿಸುವ ಮಾಸ್ತರರಾಗಿ ಮತ್ತು ಕೀರ್ತನಾಕಾರರಾಗಿ, ನೆಲೆ ನಿಂತ ಕೆಲವರಲ್ಲಿ ಬೆರಳೆಣಿಕೆಯಷ್ಟು ಜನ ಪೋಲಿಸ್‌ರಾಗಿ. ಶಿಕ್ಷಕರಾಗಿ, ಕೆಲವರು ದನ, ಕುರಿ ಕೋಳಿಯನ್ನು ಸಾಕಿ ಹೊಟ್ಟೆ ಹೊರಿದುಕೊಳ್ಳುವರು.  
[[ಚಿತ್ರ:Sillekyata .jpgಚಿತ್|alt=ಶಿಳ್ಳೇಕ್ಯಾತರು|thumb|ಪರಿಸಥಿತಿಯ ಕೈಗೊಂಬೆಯಾಗಿ ಅತಂತ್ರರಾದ ಗೊಂಬೆಯಾಡಿಸುವ ಶೀಳ್ಳೇಕ್ಯಾತರು]]
ಶಿಳ್ಳೇಕ್ಯಾತರಲ್ಲಿಯ 'ಕಟಬು' ಕಟಬರ್, ಮತ್ತು 'ಕಿಲ್ಲಿಕ್ಯಾತ' ಪದಗಳನ್ನು ಕರ್ನಾಟಕ ರಾಜ್ಯದ ಪ್ರಸ್ತುತ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿಯ ಪ್ರವರ್ಗ ೧ರಲ್ಲಿ ದಾಖಲಾಗಿರುವುದರಿಂದ ಶಿಳ್ಳೇಕ್ಯಾತಾಸ್ ಸಮುದಾಯವು ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದರೂ ಸಹ ಅಧಿಕಾರಿಗಳ ತಪ್ಪು ತಿಳುವಳಿಕೆಯಿಂದಾಗಿ ಅವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲಾಗುತ್ತಿಲ್ಲ. ಇದರಿಂದಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲಾಗುತ್ತಿಲ್ಲ.  ಕಿಳ್ಳೇಕ್ಯಾತ, ಕಟಬು ಮತ್ತು ಶಿಳ್ಳೇಕ್ಯಾತ ಬೇರೆಬೇರೆಯಾಗಿರದೇ ಅವು ಒಂದೇ ಸಮುದಾಯವನ್ನು ಪ್ರತಿನಿದಿsಸುವ ಪದಗಳಾಗಿವೆ. ಅಲೆಮಾರಿಗಳಾಗಿರುವ ಇವರು ಸಂವಿಧಾನ ಬದ್ಧವಾದ ಪರಿಶಿಷ್ಟರ ಮೀಸಲಾತಿಯ ಹಕ್ಕು ಪಡೆಯಲು ಅರ್ಹರಾಗಿರುವರು.
 
"https://kn.wikipedia.org/wiki/ಸದಸ್ಯ:Dr_Mallikarjun_B_Manpade/sandbox" ಇಂದ ಪಡೆಯಲ್ಪಟ್ಟಿದೆ