ಸುರೇಶ್ ಅಂಗಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ನಿಧನ ಮಾಹಿತಿ ಸೇರ್ಪಡೆ
ಚುNo edit summary
೨ ನೇ ಸಾಲು:
'''ಸುರೇಶ್ ಚನ್ನಬಸಪ್ಪ ಅಂಗಡಿ''' ಒಬ್ಬ [[ಭಾರತೀಯ]] ರಾಜಕಾರಣಿ. [[ಕರ್ನಾಟಕ|ಕರ್ನಾಟಕದ]] ಬೆಳಗಾವಿ ಕ್ಷೇತ್ರದಿಂದ ಸಂಸದರಾಗಿ [[ಭಾರತೀಯ ಜನತಾ ಪಕ್ಷ|ಭಾರತೀಯ ಜನತಾ ಪಕ್ಷದಿಂದ]]<ref>https://www.livemint.com/politics/news/suresh-angadi-part-of-modi-2-0-1559229895744.html</ref> ನಾಲ್ಕು ಬಾರಿ ಆಯ್ಕೆಯಾಗಿದ್ದವರು. ಭಾರತದ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದರು.
 
==ಆರಂಭಿಕ ಜೀವನ==
ಸುರೇಶ್ ಅವರು ಬೆಳಗಾವಿ ಜಿಲ್ಲೆಯ [[ಬೆಳಗಾವಿ]] ತಾಲ್ಲೂಕಿನ ಕೆ.ಕೆ. ಕೊಪ್ಪಾ ಗ್ರಾಮದವರು. ಸೋಮವ್ವ ಮತ್ತು ಚೆನ್ನಬಸಪ್ಪ ಅಂಗಡಿ ದಂಪತಿಗೆಗ ಜನಿಸಿದರು. ಬೆಳಗಾವಿಯ ಎಸ್.ಎಸ್.ಎಸ್.ಸಮಿತಿ ಕಾಲೇಜ್ ಆಫ್ [[ವಾಣಿಜ್ಯ(ವ್ಯಾಪಾರ)|ಕಾಮರ್ಸ್]] ನಿಂದ ಪದವಿಯನ್ನು ಪಡೆದರು. ನಂತರ ಬೆಳಗಾವಿಯ ಪ್ರತಿಷ್ಠಿತ ರಾಜ ಲಖಮ್ ಗೌಡ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು. ಸಾರ್ವಜನಿಕ ಜೀವನಕ್ಕೆ ಪ್ರವೇಶಿಸುವ ಮೊದಲು ಅವರು ತಮ್ಮದೇ ಆದ ಖಾಸಗಿ ವ್ಯವಹಾರವನ್ನು ನಡೆಸುತ್ತಿದ್ದರು. ವಾಸವದತ್ತ [[ಸಿಮೆಂಟ್]] [ಪ್ರಸ್ತುತ ಬಿರ್ಲಾ ಶಕ್ತಿ ಸಿಮೆಂಟ್] ಅನ್ನು ಯಶಸ್ವಿಯಾಗಿ ಚಾಲನೆಗೆ ತಂದು ಬೆಳಗಾವಿಯಲ್ಲೇ ಪ್ರಥಮ ಸ್ಥಾನಕ್ಕೆ ಇವರು ತಂದರು.<ref>https://www.indiatoday.in/fyi/story/suresh-angadi-lok-sabha-mp-from-belgaum-lok-sabha-1538985-2019-05-30</ref> ಅವರಿಗೆ ಮದುವೆಯಾಗಿ ೨ ಹೆಣ್ಣು ಮಕ್ಕಳಿದ್ದಾರೆ.
 
==ರಾಜಕೀಯ ಜೀವನ==
[[ಭಾರತೀಯ ಜನತಾ ಪಕ್ಷ|ಭಾರತೀಯ ಜನತಾ ಪಕ್ಷದ]] ಸದಸ್ಯರಾಗಿರುವ ಅವರು ೧೯೯೬ರಲ್ಲಿ ಪಕ್ಷದ [[ಬೆಳಗಾವಿ]] ಜಿಲ್ಲಾ ಘಟಕದ ಉಪಾಧ್ಯಕ್ಷರಾದರು. ಅವರು ೧೯೯೯ರವರೆಗೆ ಆ ಕಚೇರಿಯಲ್ಲಿ ಮುಂದುವರೆದರು. ೨೦೦೧ರಲ್ಲಿ ಅವರನ್ನು ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಯಿತು ಮತ್ತು ಅವರು ಆ ಹುದ್ದೆಯಲ್ಲಿ ಮುಂದುವರೆದರು. ೨೦೦೪ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡರು. ಅವರು [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಎದುರಾಳಿಯನ್ನು ದೊಡ್ಡ ಅಂತರದಿಂದ ಸೋಲಿಸಿ ೧೪ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾದರು. ೨೦೦೯ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಎರಡನೇ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಅವರು ೨೦೧೪ರಲ್ಲಿ ಸತತ ಮೂರನೇ ಬಾರಿಗೆ ಆಯ್ಕೆಯಾದ ಇವರು, ೨೦೧೯ರಲ್ಲಿ ೪ನೇ ಬಾರಿಗೆ ಸಂಸತ್ ಪ್ರವೇಶಿಸಿದರು.<ref>https://www.deccanherald.com/national/suresh-angadi-bjps-four-time-mp-from-belagavi-737329.html</ref> ಮೇ ೨೦೧೯ರಲ್ಲಿ ಅಂಗಡಿಯವರು ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.<ref>https://www.thenewsminute.com/article/karnataka-mp-suresh-angadi-appointed-junior-minister-railways-102743</ref>
 
"https://kn.wikipedia.org/wiki/ಸುರೇಶ್_ಅಂಗಡಿ" ಇಂದ ಪಡೆಯಲ್ಪಟ್ಟಿದೆ